MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಲಿವರ್ ಕ್ಯಾನ್ಸರ್ ತಡೆಗಟ್ಟಲು ಆಹಾರದಲ್ಲಿ ನೀವು ಮಾಡುತ್ತಿರುವ ಈ ತಪ್ಪು ತಿದ್ದಿಕೊಳ್ಳಿ!

ಲಿವರ್ ಕ್ಯಾನ್ಸರ್ ತಡೆಗಟ್ಟಲು ಆಹಾರದಲ್ಲಿ ನೀವು ಮಾಡುತ್ತಿರುವ ಈ ತಪ್ಪು ತಿದ್ದಿಕೊಳ್ಳಿ!

Liver Cancer Causes: ಇತ್ತೀಚಿನ ದಿನಗಳಲ್ಲಿ ಲಿವರ್ ಸಮಸ್ಯೆಗಳು ಜಾಗತಿಕವಾಗಿ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಕೇವಲ ಸ್ಥೂಲಕಾಯವಷ್ಟೇ ಅಲ್ಲದೆ, ನಾವು ಸೇವಿಸುವ ಆಹಾರದಲ್ಲಿನ ಕೊಬ್ಬಿನ ವಿಧವು ಯಕೃತ್ತಿನ ಕ್ಯಾನ್ಸರ್ ಅಪಾಯ ಹೇಗೆ ನಿರ್ಧರಿಸುತ್ತದೆ ಎಂಬುದರ ಕುರಿತು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

1 Min read
Author : Ashwini HR
Published : Mar 03 2026, 02:33 PM IST
Share this Photo Gallery
  • FB
  • TW
  • Linkdin
  • Whatsapp
16
ಸರಿಯಾದ ಸಮಯಕ್ಕೆ ಗಮನಿಸದಿದ್ದರೆ..
Image Credit : Getty

ಸರಿಯಾದ ಸಮಯಕ್ಕೆ ಗಮನಿಸದಿದ್ದರೆ..

ಲಿವರ್ ಅಥವಾ ಯಕೃತ್ತು ಕ್ಯಾನ್ಸರ್ (Liver Cancer) ಇಂದು ವಿಶ್ವದಾದ್ಯಂತ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ನಾಲ್ಕನೇ ಪ್ರಮುಖ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ವಿಶ್ವದ ಜನಸಂಖ್ಯೆಯ ಸುಮಾರು 25 ಪ್ರತಿಶತದಷ್ಟು ಜನರು 'ಫ್ಯಾಟಿ ಲಿವರ್' (Fatty Liver) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಇದನ್ನು ಗಮನಿಸದಿದ್ದರೆ, ಇದು ಕ್ಯಾನ್ಸರ್‌ನಂತಹ ಗಂಭೀರ ಸ್ಥಿತಿಗೆ ತಲುಪಬಹುದು.

26
ವೈದ್ಯರು ಹೇಳಿದ್ದೇನು?
Image Credit : Getty

ವೈದ್ಯರು ಹೇಳಿದ್ದೇನು?

ಅಂದಹಾಗೆ ಗ್ಯಾಸ್ಟ್ರೋ ಇಂಟೆಸ್ಟಿನಲ್ ಸರ್ಜನ್ ಡಾ. ಸೌರಭ್ ಬನ್ಸಾಲ್ ಅವರು ಯಕೃತ್ತಿನ ಕಾಯಿಲೆಗಳಿಗೂ ನಾವು ಸೇವಿಸುವ ಕೊಬ್ಬಿನಂಶಕ್ಕೂ ಇರುವ ನೇರ ಸಂಬಂಧವನ್ನು ವಿವರಿಸಿದ್ದಾರೆ.

Related Articles

Related image1
ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಹಿಳೆಯ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿವು
Related image2
ಹುದುಗಿಸಿದ 'ಸೌತೆಕಾಯಿ ಕಾಂಜಿ' ಕರುಳಿನ ಆರೋಗ್ಯಕ್ಕೆ ವರದಾನ, ಮಾಡೋಕೆ ಹೆಚ್ಚು ಟೈಂ ಬೇಕಿಲ್ಲ
36
ಆಹಾರದಲ್ಲಿ ನಾವು ಮಾಡುತ್ತಿರುವ ಆ ದೊಡ್ಡ ತಪ್ಪು ಯಾವುದು?
Image Credit : Getty

ಆಹಾರದಲ್ಲಿ ನಾವು ಮಾಡುತ್ತಿರುವ ಆ ದೊಡ್ಡ ತಪ್ಪು ಯಾವುದು?

ಸಾಮಾನ್ಯವಾಗಿ ಸ್ಥೂಲಕಾಯ (Obesity) ಕೇವಲ ಮಧುಮೇಹ ಅಥವಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣ ಎಂದು ಭಾವಿಸಲಾಗುತ್ತದೆ. ಆದರೆ ಸ್ಥೂಲಕಾಯದವರಲ್ಲಿ ಲಿವರ್ ಕ್ಯಾನ್ಸರ್ ಅಪಾಯವು ಅವರು ಎಷ್ಟು ತೂಕ ಹೊಂದಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ, ಅವರು ಯಾವ ರೀತಿಯ ಕೊಬ್ಬನ್ನು (Fats) ಸೇವಿಸುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಡಾ. ಬನ್ಸಾಲ್ ಅವರ ಪ್ರಕಾರ, ಪ್ರಾಣಿಜನ್ಯ ಕೊಬ್ಬಿನ (Animal-derived fats) ಅತಿಯಾದ ಸೇವನೆಯೇ ಈ ಕಾಯಿಲೆಗೆ ಪ್ರಮುಖ ಪ್ರಚೋದಕ.

46
ಸಂಶೋಧನೆಯ ಮುಖ್ಯಾಂಶಗಳು
Image Credit : Getty

ಸಂಶೋಧನೆಯ ಮುಖ್ಯಾಂಶಗಳು

ಒಂದು ದಶಕದ ಅವಧಿಯ ಸಂಶೋಧನೆಯು ಈ ಕೆಳಗಿನ ಸತ್ಯಗಳನ್ನು ಹೊರಹಾಕಿದೆ
ಅಪಾಯಕಾರಿ ಕೊಬ್ಬುಗಳು: ಬೆಣ್ಣೆ (Butter) ಮತ್ತು ದನದ ಕೊಬ್ಬಿನಂತಹ ಪ್ರಾಣಿಜನ್ಯ ಕೊಬ್ಬುಗಳು ಸ್ಥೂಲಕಾಯದವರಲ್ಲಿ ಯಕೃತ್ತಿನ ಗೆಡ್ಡೆಗಳು (Tumours) ವೇಗವಾಗಿ ಬೆಳೆಯಲು ಸಹಾಯ ಮಾಡುತ್ತವೆ.
ಸುರಕ್ಷಿತ ಕೊಬ್ಬುಗಳು: ಆಲಿವ್ ಎಣ್ಣೆ (Olive oil), ತೆಂಗಿನ ಎಣ್ಣೆ (Coconut oil) ಮತ್ತು ಪಾಮ್ ಆಯಿಲ್‌ನಂತಹ ಸಸ್ಯಜನ್ಯ ಕೊಬ್ಬುಗಳು ಸ್ಥೂಲಕಾಯವಿದ್ದರೂ ಸಹ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಯನ್ನು ಉತ್ತೇಜಿಸುವುದಿಲ್ಲ.

56
ಸ್ಥೂಲಕಾಯ ಮತ್ತು ಕ್ಯಾನ್ಸರ್ ಸಂಬಂಧ
Image Credit : Getty

ಸ್ಥೂಲಕಾಯ ಮತ್ತು ಕ್ಯಾನ್ಸರ್ ಸಂಬಂಧ

ಹೆಪಟೊಸೆಲ್ಯುಲರ್ ಕಾರ್ಸಿನೋಮ (HCC) ಎಂಬ ಲಿವರ್ ಕ್ಯಾನ್ಸರ್ ವಿಧವು ಸ್ಥೂಲಕಾಯ ಮತ್ತು ಮೆಟಾಬಾಲಿಕ್ ಡಿಸಾರ್ಡರ್ ಫ್ಯಾಟಿ ಲಿವರ್ (MAFLD) ಸಮಸ್ಯೆಯೊಂದಿಗೆ ನೇರ ಸಂಬಂಧ ಹೊಂದಿದೆ.

66
ಪರಿಹಾರ ಮಾರ್ಗಗಳು
Image Credit : Getty

ಪರಿಹಾರ ಮಾರ್ಗಗಳು

ಸಸ್ಯಜನ್ಯ ಕೊಬ್ಬಿಗೆ ಆದ್ಯತೆ ನೀಡಿ
ಅಡುಗೆಯಲ್ಲಿ ಬೆಣ್ಣೆ ಅಥವಾ ಪ್ರಾಣಿಜನ್ಯ ಕೊಬ್ಬಿನ ಬದಲು ಸಸ್ಯಜನ್ಯ ಎಣ್ಣೆಗಳನ್ನು ಬಳಸುವುದು ಸೂಕ್ತ.
ತೂಕ ಇಳಿಕೆ
ನಿರಂತರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಫ್ಯಾಟಿ ಲಿವರ್ ಸಮಸ್ಯೆಯನ್ನು ಹಿಮ್ಮೆಟ್ಟಿಸಬಹುದು ಮತ್ತು ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು.  

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಆರೋಗ್ಯ ಸಮಸ್ಯೆಗಳು
ಆರೋಗ್ಯಕರ ಆಹಾರಗಳು
ಜೀವನಶೈಲಿ
ಆಹಾರ
ಲಿವರ್ ಆರೋಗ್ಯ

Latest Videos
Recommended Stories
Recommended image1
AI Therapist: ಆರೋಗ್ಯ ಸಮಸ್ಯೆಗೆ ವೈದ್ಯರ ಬಳಿ ಹೋಗದೇ AI ಚಾಟ್‌ಬಾಟ್‌ಗೆ ಕೇಳ್ತೀರಾ? ಇದು ತುಂಬಾ ಡೇಂಜರ್! ತಜ್ಞರು ಹೇಳಿದ್ದೇನು?
Recommended image2
ಮದುವೆಗೂ ಮುನ್ನ ಹೆಚ್ಚು ವ್ಯಾಯಾಮ ಇಲ್ಲದೇ ಫಟ್ ಅಂತ ಕೆಜಿಗಟ್ಟಲೇ ತೂಕ ಇಳಿಸಬೇಕಾ? ಇಲ್ಲಿವೆ ಟಿಪ್ಸ್
Recommended image3
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Related Stories
Recommended image1
ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಮಹಿಳೆಯ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳಿವು
Recommended image2
ಹುದುಗಿಸಿದ 'ಸೌತೆಕಾಯಿ ಕಾಂಜಿ' ಕರುಳಿನ ಆರೋಗ್ಯಕ್ಕೆ ವರದಾನ, ಮಾಡೋಕೆ ಹೆಚ್ಚು ಟೈಂ ಬೇಕಿಲ್ಲ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved