Health Tips : ಈಜೋದು ಒಳ್ಳೇ ವ್ಯಾಯಾಮ ಹೌದು, ಹಾಗಂಥ ಇವೆಲ್ಲ ಗೊತ್ತಿರಲಿ
ಸ್ವಿಮ್ಮಿಂಗ್ ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳಿಂದ ಹಿಡುದ ವೃದ್ಧರವರೆಗೆ ಎಲ್ಲರಿಗೂ ಇದು ಒಳ್ಳೆ ವ್ಯಾಯಾಮ ನೀಡುತ್ತದೆ. ಮನಸ್ಸು ಹಾಗೂ ದೇಹ ಎರಡನ್ನೂ ಫಿಟ್ ಆಗಿಡುವ ಸ್ವಿಮ್ಮಿಂಗ್ ನಿಂದ ಅನಾನುಕೂಲವೂ ಸಾಕಷ್ಟಿದೆ.
ಸ್ವಿಮ್ಮಿಂಗನ್ನು ಅನೇಕರು ಇಷ್ಟಪಡ್ತಾರೆ. ಬೇಸಿಗೆ ಸಮಯದಲ್ಲಿ ಸ್ವಿಮ್ಮಿಂಗ್ ಅನಿವಾರ್ಯ. ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಬಹುತೇಕ ಎಲ್ಲರೂ ನೀರಿಗಿಳಿಯುತ್ತಾರೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಈಜುಕೊಳದ ಸೌಲಭ್ಯವಿರುವ ಹೊಟೇಲ್, ಸ್ಟೇ ಹೋಮ್ ಗಳನ್ನೇ ಪ್ರವಾಸದ ವೇಳೆ ಆಯ್ಕೆ ಮಾಡಿಕೊಳ್ತಾರೆ. ಪ್ರತಿ ದಿನ ಸ್ವಿಮ್ಮಿಂಗ್ ಮಾಡೋದ್ರಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಎಲ್ಲರ ಮನೆಯಲ್ಲೂ ಸ್ವಿಮ್ಮಿಂಗ್ ಫೂಲ್ ಇರಲು ಸಾಧ್ಯವಿಲ್ಲ. ಹಾಗಾಗಿ ಸಾರ್ವಜನಿಕ ಸ್ವಿಮ್ಮಿಂಗ್ ಫೂಲ್ ನಲ್ಲಿ ಸ್ವಿಮ್ ಮಾಡಲು ಜನರು ಮುಂದಾಗ್ತಾರೆ. ದೇಹ ಮತ್ತು ಮನಸ್ಸನ್ನು ಫಿಟ್ ಆಗಿಡಲು ಸ್ವಿಮ್ಮಿಂಗ್ ಉತ್ತಮ ಚಟುವಟಿಕೆಯಾಗಿದೆ. ಸ್ವಿಮ್ಮಿಂಗ್ ನಿಂದ ಸಾಕಷ್ಟು ಲಾಭವಿದೆ. ಆದ್ರೆ ಸಾರ್ವಜನಿಕ ಸ್ವಿಮ್ಮಿಂಗ್ ಫೂಲ್ ನಲ್ಲಿ ನೀವು ಈಜಲು ಮುಂದಾಗಿದ್ರೆ ಕೆಲವೊಂದು ನಿಯಮಗಳನ್ನು ಪಾಲನೆ ಮಾಡ್ಬೇಕು. ಅದನ್ನು ಮುರಿದ್ರೆ ನಷ್ಟ ನಿಶ್ಚಿತ. ನಾವಿಂದು ಸ್ವಿಮ್ಮಿಂಗ್ ಮಾಡುವ ವೇಳೆ ಯಾವ ತಪ್ಪು ಮಾಡಿದ್ರೆ ಯಾವ ತೊಂದರೆ ಅನುಭವಿಸಬೇಕಾಗುತ್ತೆ ಎಂಬುದನ್ನು ನಿಮಗೆ ಹೇಳ್ತೇವೆ.
ಸಾರ್ವಜನಿಕ (Public) ಸ್ವಿಮ್ಮಿಂಗ್ ಫೂಲ್ ನಿಂದ ಈ ಎಲ್ಲ ನಷ್ಟ :
ಕ್ಲೋರಿನ್ (Chlorine) ಅಡ್ಡಪರಿಣಾಮ : ನದಿ, ಹೊಳೆಯಲ್ಲಿ ಸ್ನಾನ ಮಾಡುವುದು ಈಜುಕೊಳದಲ್ಲಿ ಸ್ನಾನ ಮಾಡಿದ್ದಕ್ಕಿಂತ ಹೆಚ್ಚು ಪ್ರಯೋಜನಕಾರಿ. ಅಪಾಯವಿಲ್ಲದ ನದಿ ಅಥವಾ ಹೊಳೆಯ ನೀರು ಹರಿಯುವ ಕಾರಣ ಶುದ್ಧವಾಗಿರುತ್ತದೆ. ಅದೇ ಸ್ವಿಮ್ಮಿಂಗ್ ಫೂಲ್ (Dwimming fool) ನೀರು ಸ್ವಚ್ಛವಾಗಿರೋದಿಲ್ಲ. ಆ ನೀರನ್ನು ಕ್ಲೀನ್ ಮಾಡಲು ಕ್ಲೋರಿನ್ ಬಳಕೆ ಮಾಡ್ತಾರೆ. ಕ್ಲೋರಿನ್ ನಿಂದ ನೀರು ಶುದ್ಧವಾಗುತ್ತದೆ ನಿಜ. ಆದ್ರೆ ಅದನ್ನು ಎಷ್ಟು ಪ್ರಮಾಣದಲ್ಲಿ ಹಾಕ್ಬೇಕು ಎಂಬುದು ನಿಮಗೆ ತಿಳಿದಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಕ್ಲೋರಿನ್ ಬಳಕೆ ಮಾಡಿದ್ರೆ ತ್ವಚೆಗೆ ಹಾನಿಯಾಗುತ್ತದೆ. ಇದು ಚರ್ಮದ ಸೋಂಕು ಟ್ಯಾನಿಂಗ್ ಮತ್ತು ಸನ್ ಬರ್ನ್ ನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಎಷ್ಟು ಪ್ರಮಾಣದಲ್ಲಿ ಕ್ಲೋರಿನ್ ಬಳಕೆ ಮಾಡಲಾಗಿದೆ ಎಂಬುದನ್ನು ನೀವು ತಿಳಿದಿದ್ರೆ ಒಳ್ಳೆಯದು. ನೀವು ಈಜುಕೊಳಕ್ಕೆ ಇಳಿಯುವ ಮುನ್ನ ಕೂದಲಿನ ಬಗ್ಗೆಯೂ ಕಾಳಜಿ ವಹಿಸಬೇಕು. ಹೆಚ್ಚು ಕ್ಲೋರಿನ್ ಇರುವ ನೀರನ್ನು ಬಳಸಿದ್ರೆ ಕೂದಲು ಉದುರುತ್ತದೆ. ಈಜುಕೊಳ ಕಂಡ ತಕ್ಷಣ ಸ್ವಿಮ್ಮಿಂಗ್ ಮಾಡಲು ಇಳಿಯಬೇಡಿ. ಮೊದಲು ಕ್ಲೋರಿನ್ ಪರೀಕ್ಷೆ ಮಾಡಿ. ನೀರಿನ pH ಮಟ್ಟ 7. 2, 7.6 ಅಥವಾ 7.8 ಇರಬೇಕು. ಇದು ದೇಹಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
HEALTH TIPS: ನಿಮಗೆ ಫುಡ್ ಅಲರ್ಜಿ ಇದೆ ಅನ್ನೋದನ್ನು ತಿಳಿಯೋದು ಹೇಗೆ?
ಸೋಂಕಿನ ಅಪಾಯ : ಬಿಸಿಲು ಹೆಚ್ಚಿರುವ ಸಮಯದಲ್ಲಿ ನೀವು ಸ್ವಿಮ್ಮಿಂಗ್ ಫೂಲ್ ನಲ್ಲಿ ಸ್ನಾನ ಮಾಡಿದ್ರೆ ಶಿಲೀಂಧ್ರಗಳ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಬಹುತೇಕರು ಸ್ವಿಮ್ ಮಾಡುವುದು ಬಿಸಿಲಿನ ಸಮಯದಲ್ಲಾದ ಕಾರಣ ಸೋಂಕಿನ ಅಪಾಯಕ್ಕೆ ಒಳಗಾಗ್ತಾರೆ. ಈ ಸಮಯದಲ್ಲಿ ದೇಹದಲ್ಲಿ ತೇವಾಂಶ ಕಡಿಮೆ ಇರುತ್ತದೆ. ಇದ್ರಿಂದ ಸೋಂಕು ಹೆಚ್ಚಾಗಿ ಕಾಡುತ್ತದೆ. ಅಂಡರ್ ಆರ್ಮ್ಸ್, ತೊಡೆಗಳು, ಸ್ತನದ ಕೆಳಗೆ, ಕಾಲ್ಬೆರಳುಗಳಲ್ಲಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತದೆ.
ಕೆಲವೊಮ್ಮೆ ಸೋಂಕು, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಸ್ನಾನ ಮಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಗ್ಯಾಸ್ ಮೇಲೆ ನೇರವಾಗಿ ಚಪಾತಿ ಬೇಯಿಸಿದ್ರೆ ಆರೋಗ್ಯಕ್ಕೆ ಹಾನಿ
ಲೂಸ್ ಮೋಷನ್ : ಲೂಸ್ ಮೋಷನ್ ಆರೋಗ್ಯವನ್ನು ಹಾಳುಮಾಡುತ್ತದೆ. ಕರುಳು ಮತ್ತು ಉಸಿರಾಟದ ವ್ಯವಸ್ಥೆಯ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಇದು ದೀರ್ಘಕಾಲದ ಅತಿಸಾರಕ್ಕೂ ಕಾರಣವಾಗಬಹುದು. ಈಜು ಕೊಳದ ನೀರು ಬಾಯಿಗೆ ಹೋದಾಗ ಅತಿಸಾರದ ಸಾಧ್ಯತೆ ಹೆಚ್ಚಾಗುತ್ತದೆ. ಇದಲ್ಲದೆ ಈಜುಕೊಳದ ಕೊಳಕು ನೀರಿನಿಂದ ಇ-ಕೋಲಿ ಮತ್ತು ಹೆಪಟೈಟಿಸ್ ಎ ಸಮಸ್ಯೆಯೂ ಉಂಟಾಗುತ್ತದೆ.