Swimming  

(Search results - 34)
 • Mettur Dam

  Hassan9, Oct 2019, 2:37 PM IST

  ಆಲೂರಿನ ಯಗಚಿ ಡ್ಯಾಂನಲ್ಲಿ ಈಜಲು ಹೋದ ಮೂವರು ನೀರು ಪಾಲು

  ಯಗಚಿ ನದಿಯ ಚೆಕ್‌ಡ್ಯಾಂನಿಂದ ಈಜಲೆಂದು ನೀರಿಗೆ ಜಿಗಿದ ಐವರು ಯುವಕರ ಪೈಕಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಹಾಸನ ಜಿಲ್ಲೆಯ ಆಲೂರಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಕಸಬಾ ಹುಣಸವಳ್ಳಿ ಗ್ರಾಮದ ರತನ್‌ (19), ಮತ್ತು ದೊಡ್ಡಕಣಗಾಲು ಗ್ರಾಮದ ಮನು (18), ಭೀಮರಾಜ್‌ (19) ಎಂಬ ಯುವಕರು ನಾಪತ್ತೆಯಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿರುವವರನ್ನು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. 
   

 • death

  Chikkamagalur8, Oct 2019, 11:13 AM IST

  ಆಯುಧ ಪೂಜೆ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ಸಾವು

  ಆಯುಧ ಪೂಜೆ ಮುಗಿಸಿ ಈಜಲು ಹೋಗಿದ್ದ ಮೂವರು ಬಾಲಕರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬ ಬಾಲಕನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

 • Sports3, Oct 2019, 12:57 PM IST

  ಏಷ್ಯನ್‌ ಈಜು ಚಾಂಪಿಯನ್‌ಶಿಪ್ 2019: ಭಾರತಕ್ಕೆ 64 ಪದಕ

  ಮೊದಲ ಅಂ.ರಾ. ಕೂಟದಲ್ಲಿ ಭಾಗವಹಿಸಿರುವ ಪಾಲಕ್‌ ಶರ್ಮಾ 5 ಮೀ./7.5 ಮೀ. ಗುಂಪು 3 ಬಾಲಕಿಯರ ಪ್ಲಾಟ್‌ ಫಾರಂ ಸ್ಪರ್ಧೆಯಲ್ಲಿ 162.70 ಅಂಕಗಳಿಸುವ ಮೂಲಕ ಚಿನ್ನ ಗೆದ್ದರು.

 • swimming

  SPORTS30, Sep 2019, 11:42 AM IST

  ಏಷ್ಯನ್‌ ಈಜು ಕೂಟ: ಚಿನ್ನಕ್ಕೆ ಮುತ್ತಿಟ್ಟ ರಮಾ​ನಂದ

  ಪುರುಷರ ಮುಕ್ತ ವಿಭಾಗದಲ್ಲಿ 1 ಮೀ. ಸ್ಟ್ರಿಂಗ್‌ ಬೋರ್ಡ್‌ ಸ್ಪರ್ಧೆಯಲ್ಲಿ ರಮಾನಂದ 300.80 ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. ಇದೇ ಸ್ಪರ್ಧೆಯಲ್ಲಿ ರಮಾನಂದಗೆ ತೀವ್ರ ಪೈಪೋಟಿ ನೀಡಿದ ಭಾರತದ ಸಿದ್ಧಾಥ್‌ರ್‍ ಪ್ರದೇಶಿ 272.25 ಅಂಕಗಳಿಸಿ ಕಂಚಿನ ಪದಕ ಗೆದ್ದರು.

 • Srihari Nataraj

  SPORTS28, Sep 2019, 2:25 PM IST

  ಏಷ್ಯನ್ ಈಜು ಕೂಟ: ಶ್ರೀಹರಿ ನಟರಾಜ್ ಗೆ 5ನೇ ಚಿನ್ನ

  ಭಾರತ 15 ಚಿನ್ನ, 19 ಬೆಳ್ಳಿ, 18ಕಂಚಿನೊಂದಿಗೆ 52 ಪದಕ ಗೆದ್ದು ಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು. 47 ಚಿನ್ನದೊಂದಿಗೆ 79 ಪದಕ ಮುಡಿಗೇರಿಸಿಕೊಂಡ ಜಪಾನ್ ಅಗ್ರಸ್ಥಾನದಲ್ಲಿ ಮುಂದುವರೆಯಿತು. ಸೆ. 29ರಿಂದ ಡೈವಿಂಗ್ ಸ್ಪರ್ಧೆ ನಡೆಯಲಿದೆ.

 • Swimming SriHari

  SPORTS27, Sep 2019, 12:28 PM IST

  ಏಷ್ಯನ್‌ ಈಜು ಕೂಟ: ರಾವತ್‌ ಮುಡಿಗೆ 4ನೇ ಚಿನ್ನ

  ರಾಜ್ಯದ ಶ್ರೀಹರಿ ನಟರಾಜ್‌ ಅವರ ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ ಭಾರತದ ಸ್ಪರ್ಧಿಗಳು 4 ಚಿನ್ನ, 4 ಬೆಳ್ಳಿ, 4 ಕಂಚಿನೊಂದಿಗೆ 12 ಪದಕ ಜಯಿಸಿದರು. ಮೊದಲ ದಿನ 18, 2ನೇ ದಿನ 10 ಸೇರಿದಂತೆ ಒಟ್ಟಾರೆ 40 ಪದಕ ಗೆದ್ದಿರುವ ಭಾರತ ಪಟ್ಟಿಯಲ್ಲಿ 4ನೇ ಸ್ಥಾನ ಪಡೆ​ದಿದೆ.

 • madhavan

  SPORTS26, Sep 2019, 5:52 PM IST

  ಅಂತಾರಾಷ್ಟ್ರೀಯ ಸ್ವಿಮ್ಮಿಂಗ್; ನಟ ಮಾಧವನ್ ಪುತ್ರನಿಗೆ ಬೆಳ್ಳಿ ಪದಕ!

  ಅಂತಾರಾಷ್ಟ್ರೀಯ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ನಟ ಮಾಧವನ್ ಪುತ್ರ ಬೆಳ್ಳಿ ಪದಕ ಸಾಧನೆ ಮಾಡಿದ್ದಾರೆ. ಮಾಧವನ್ ಮಗನ ಸಾಧನೆಯನ್ನು ಬಾಲಿವುಡ್ ಸೆಲೆಬ್ರೆಟಿಗಳು ಶ್ಲಾಘಿಸಿದ್ದಾರೆ. 

 • Swimming

  SPORTS26, Sep 2019, 11:32 AM IST

  ಏಷ್ಯನ್‌ ಈಜು ಕೂಟ: 2ನೇ ದಿನ ಭಾರ​ತಕ್ಕೆ 10 ಪದ​ಕ!

  ಪುರುಷರ 50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಭಾರತದ ತಾರಾ ಈಜುಪಟು ವೀರ್‌ಧವಳ್‌ ಖಾಡೆ 22.59 ಸೆ.ಗಳಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 1500 ಮೀ. ಫ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್‌ 15 ನಿಮಿಷ 41.54 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.

 • Swimming India

  SPORTS25, Sep 2019, 11:24 AM IST

  ಏಷ್ಯನ್‌ ಈಜು ಕೂಟ: ಮೊದಲ ದಿನವೇ ಭಾರತ ಭರ್ಜರಿ ಪದಕ ಭೇಟೆ

  ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ನರೇಂದ್ರ ಬಾತ್ರಾ, ಇಲ್ಲಿನ ದ್ರಾವಿಡ್-ಪಡುಕೋಣೆ ಕೇಂದ್ರದಲ್ಲಿ ಚಾಂಪಿಯನ್‌ಶಿಪ್ ಉದ್ಘಾಟಿಸಿದರು. ಮೊದಲ ದಿನ ನಡೆದ ಈಜು ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಭಾರತೀಯರು ಮಿಂಚಿದರು.

 • SPORTS24, Sep 2019, 10:55 AM IST

  ಇಂದಿ​ನಿಂದ ಬೆಂಗಳೂ​ರಲ್ಲಿ ಏಷ್ಯನ್‌ ಈಜು ಕೂಟ

  2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಲು ಅತ್ಯುತ್ತಮ ಅವಕಾಶ ಇದಾ​ಗಿ​ದೆ. ನಗ​ರದ ಪಡುಕೋಣೆ - ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್ ಎಕ್ಸಲೆನ್ಸ್‌, ಭಾರ​ತೀಯ ಕ್ರೀಡಾ ಪ್ರಾಧಿ​ಕಾರ (ಸಾಯ್‌) ಬೆಂಗ​ಳೂರು ಕೇಂದ್ರ, ಹಲ​ಸೂ​ರಿನ ಕೆನ್ಸಿಂಗ್ಟನ್‌ ಈಜು ಕೇಂದ್ರ ಕೂಟದ ಆತಿಥ್ಯ ವಹಿಸುತ್ತಿವೆ. 28 ರಾಷ್ಟ್ರಗಳ 1000ಕ್ಕೂ ಹೆಚ್ಚು ಸ್ಪರ್ಧಿ​ಗಳು ಪಾಲ್ಗೊ​ಳ್ಳು​ತ್ತಿದ್ದು, 18 ವರ್ಷ ಹಾಗೂ ಮೇಲ್ಪಟ್ಟ(ಮುಕ್ತ ವಿಭಾಗ), 15ರಿಂದ 17 ವರ್ಷ, ಅಂಡರ್‌-14 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

 • SPORTS21, Sep 2019, 1:33 PM IST

  ಏಷ್ಯನ್‌ ಈಜು ಚಾಂಪಿಯನ್‌ಶಿಪ್: ಬೆಂಗಳೂರು ಆತಿಥ್ಯ

  9 ದಿನಗಳ ಕಾಲ ಚಾಂಪಿಯನ್‌ಶಿಪ್‌ ನಡೆಯಲಿದ್ದು, 2020ರ ಟೋಕಿಯೋ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಪಂದ್ಯಗಳು ಇಲ್ಲಿ ನಡೆಯಲಿವೆ. ಒಲಿಂಪಿಕ್ಸ್‌ನಂತಹ ಕೂಟಗಳಲ್ಲಿ ಭಾಗವಹಿಸುವ ರಾಷ್ಟ್ರಗಳಾದ ಇರಾನ್‌, ಜೋರ್ಡನ್‌, ಕುವೈತ್‌, ಮಾಲ್ಡೀವ್‌್ಸ, ನೇಪಾಳ, ಓಮನ್‌, ಕತಾರ್‌, ಸೌದಿ ಅರೇಬಿಯಾ, ಯುಎಇ, ಉಜ್ಬೇಕಿಸ್ತಾನ, ವಿಯೆಟ್ನಾಂ, ಥಾಯ್ಲೆಂಡ್‌, ಶ್ರೀಲಂಕಾ, ದ.ಕೊರಿಯಾ ಮತ್ತು ಇಂಡೋನೇಷ್ಯಾ ರಾಷ್ಟ್ರಗಳು ಕೂಟದಲ್ಲಿ ಭಾಗವಹಿಸುತ್ತಿವೆ.

 • Surajit ganguly

  SPORTS5, Sep 2019, 9:10 PM IST

  ಈಜುಪಟು ಮೇಲೆ ಅತ್ಯಾಚಾರ; ಕೋಚ್ ಸುರಜಿತ್ ಗಂಗೂಲಿ ಆರೆಸ್ಟ್!

  ಅಪ್ರಾಪ್ತೆ ಈಜುಪಟು ಮೇಲೆ ಅತ್ಯಾಚಾರವೆಸಗಿದೆ ಆರೋಪದಡಿ ಸ್ವಿಮ್ಮಿಂಗ್ ಕೋಚ್ ಬಂಧನವಾಗಿದೆ. ರಾಷ್ಟ್ರೀಯ ಸ್ವಿಮ್ಮರ್  ಮೇಲಿನ ಅತ್ಯಾಚಾರ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ತನಿಖೆ ಮೇಲೆ ಸಂಪೂರ್ಣ ನಿಗಾವಹಿಸಿದ್ದಾರೆ. 

 • winners

  SPORTS5, Sep 2019, 12:42 PM IST

  ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿ​ಯನ್‌

  ಒಟ್ಟಾರೆ 14 ಚಿನ್ನ, 12 ಬೆಳ್ಳಿ, 10 ಕಂಚಿನೊಂದಿಗೆ 36 ಪದಕ ಗೆದ್ದ ರಾಜ್ಯ ತಂಡ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 27ನೇ ಬಾರಿ ಕರ್ನಾಟಕ ತಂಡ ಸಮಗ್ರ ಪ್ರಶಸ್ತಿ ಬಾಚಿಕೊಂಡು ದಾಖಲೆ ಬರೆ​ಯಿ​ತು.

 • KRISHNA river COMPITATION
  Video Icon

  Karnataka Districts6, Aug 2019, 1:51 PM IST

  ಉಕ್ಕಿಹರಿಯುವ ಕೃಷ್ಣಾದಲ್ಲಿ ಯುವಕರಿಂದ ಈಜು ಸ್ಪರ್ಧೆ!

  ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ 76 ವರ್ಷ ಪ್ರಾಯದ ವೃದ್ಧರೊಬ್ಬರು ಈಜುವ ಸ್ಟೋರಿ ನಿನ್ನೆ ನೋಡಿದ್ವಿ. ಅತ್ತ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣೆಗೆ ಹಾರುವ ಯುವಕರ ದುಸ್ಸಾಹಸವನ್ನೂ ನೋಡಿದ್ವಿ. ಇತ್ತ ರಾಯಚೂರಿನಲ್ಲಿ ಯುವಕರು ಕೃಷ್ಣಾನದಿಯಲ್ಲೇ ಈಜುವ ಸ್ಪರ್ಧೆಯನ್ನು ನಡೆಸಿದ್ದಾರೆ. ಮೈಜುಮ್ಮೆನಿಸುವ ಈ ವಿಡಿಯೋ ನೋಡಿ. 
   

 • RIVER OLD MAN
  Video Icon

  Karnataka Districts5, Aug 2019, 11:56 AM IST

  ವಾಹ್‌ರೇ ವ್ಹಾ ಅಜ್ಜ! ಉಕ್ಕಿಹರಿಯುವ ಮಲಪ್ರಭಾದಲ್ಲಿ ಈಜಿ ದಡಸೇರಿದ 75ರ ‘ತರುಣ’!

  ಮಹಾರಾಷ್ಟ ಹಾಗೂ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು ಬೆಳಗಾವಿಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ 75 ವಯಸ್ಸಿನ ವೃದ್ಧರೊಬ್ಬರು ಮಲಪ್ರಭಾ ನದಿಯಲ್ಲಿ ಈಜಿ ನೋಡುಗರನ್ನು ಅಚ್ಚರಿಗೊಳಪಡಿಸಿದ್ದಾರೆ.