Food

ಚಪಾತಿ

ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಬ್ರೇಕ್‌ಫಾಸ್ಟ್‌ ಅಥವಾ ರಾತ್ರಿಯೂಟಕ್ಕೆ ಚಪಾತಿಯನ್ನು ಮಾಡುತ್ತಾರೆ. ಚಪಾತಿ ದುಂಡಗೆ, ಉಬ್ಬಿದ್ದರೆ ತಿನ್ನಲು ಚೆನ್ನಾಗಿರುತ್ತದೆ.

Image credits: others

ಉಬ್ಬಿದ ಚಪಾತಿ

ಆದರೆ ಯಾವಾಗಲೂ ಚಪಾತಿ ಹೀಗೆ ಉಬ್ಬುವುದಿಲ್ಲ. ಚಪಾತಿ ಹಿಟ್ಟು ಚೆನ್ನಾಗಿಲ್ಲದಿದ್ದರೆ. ಹಿಟ್ಟು ಕಲಸಿದ್ದು ಸರಿಯಾಗಿ ಇರದಿದ್ದರೆ ಚಪಾತಿ ಫ್ಲಾಟ್ ಆಗುತ್ತದೆ.

Image credits: others

ಗ್ಯಾಸ್ ಮೇಲೆ ಬೇಯಿಸುವುದು

ಹೀಗಾಗಿ ಚಪಾತಿ ಸರಿಯಾಗಿ ಉಬ್ಬಲಿ, ಬೇಯಲಿ ಎಂದು ಕೆಲವೊಬ್ಬರು ಗ್ಯಾಸ್ ಮೇಲೆ ನೇರವಾಗಿ ಬೇಯಿಸುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು.

Image credits: others

ಆರೋಗ್ಯಕ್ಕೆ ಹಾನಿ

ಈ ರೀತಿ ನೇರವಾಗಿ ಗ್ಯಾಸ್‌ ಮೇಲೆ ಬೇಯಿಸಿದ ಚಪಾತಿ ತಿಂದರೆ ದೇಹದ ಅಂಗಾಂಗಗಳಿಗೆ ಹಾನಿಯಾಗುವ ಅಪಾಯವಿದೆ. ಜರ್ನಲ್ ಆಫ್ ಎನ್ವಿರಾನ್‌ಮೆಂಟ್ ಸೈನ್ಸ್ ಮತ್ತು ಟೆಕ್ನಾಲಜಿಯಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದೆ.

Image credits: others

ಕಾರ್ಬನ್ ಮನೋಕ್ಸೈಡ್ ಬಿಡುಗಡೆ

ನೈಸರ್ಗಿಕ ಅನಿಲ ಗ್ರಿಲ್‌ಗಳು, ಗ್ಯಾಸ್‌ ಸ್ಟವ್‌ಗಳು ಕಾರ್ಬನ್ ಮನೋಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್ ಮೊದಲಾದ ಕಣಗಳನ್ನು ಹೊರಸೂಸುತ್ತವೆ. ಇವು ದೇಹಕ್ಕೆ ಹಾನಿಕಾರಕವಾಗಿದೆ. 

Image credits: others

ದೇಹಕ್ಕೆ ಒಳ್ಳೆಯದಲ್ಲ

ಮತ್ತೊಂದು ಅಧ್ಯಯನದ ಪ್ರಕಾರ, ಹೆಚ್ಚಿನ ಶಾಖದಲ್ಲಿ ಆಹಾರವನ್ನು ಬೇಯಿಸಿದಾಗ ಕಾರ್ಸಿನೋಜೆನ್‌ಗಳು ರೂಪುಗೊಳ್ಳುತ್ತವೆ. ಇದು ದೇಹಕ್ಕೆ ಒಳ್ಳೆಯದಲ್ಲ.

Image credits: others

ಕ್ಯಾನ್ಸರ್‌ಗೆ ಕಾರಣವಾಗುತ್ತದೆ

ಚಪಾತಿಯನ್ನು ಹೀಗೆ ನೇರವಾಗಿ ಒಲೆಯಲ್ಲಿ ಬೇಯಿಸುವುದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಉಸಿರಾಟಕ್ಕೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಕಾರಣವಾಗುತ್ತದೆ.

Image credits: others

ಮಾವು ಕೆಮಿಕಲ್ ಹಾಕಿ ಹಣ್ಣಾಗಿಸಿದ್ದಾ, ತಿಳಿಯೋದು ಹೇಗೆ?

ಚಪಾತಿ ಹಿಟ್ಟನ್ನು ಫ್ರಿಜ್‌ನಲ್ಲಿಟ್ಟು ಮತ್ತೆ ಬಳಸ್ಬೋದಾ?