ವಯಸ್ಸು 58 ಆದರೂ ನಟಿ ಮಾಧುರಿಯ ಚಾರ್ಮ್ ಇನ್ನೂ ಮಾಸಿಲ್ಲ. ಅದರಲ್ಲಿ ಮುಖ್ಯವಾದದ್ದು ಅವರ ಹೊಳೆಯುವ ಕೂದಲು. ಅವರು ಮನೆಯಲ್ಲಿಯೇ ತಾವು ತಯಾರಿಸುವ ಹೇರ್ಆಯಿಲ್, ಹೇರ್ ಮಾಸ್ಕ್ ಬಗ್ಗೆ ತಿಳಿಸಿದ್ದಾರೆ ನೋಡಿ...
ಚಿತ್ರನಟಿಯರು ಎಂದಾಕ್ಷಣ ಅವರು ಎಲ್ಲ ಬ್ಯೂಟಿ ಪ್ರಾಡಕ್ಟ್ಗಳನ್ನು ಮಾರುಕಟ್ಟೆಯಿಂದಲೇ ಖರೀದಿ ಮಾಡುತ್ತಾರೆ ಎಂದುಕೊಳ್ಳುವುದು ಸುಲಭ. ದುಡ್ಡೊಂದಿದ್ದರೆ ಏನು ಬೇಕಾದರೂ, ಎಷ್ಟು ದುಬಾರಿಯ ಸಾಮಗ್ರಿ ಬೇಕಾದರೂ ಖರೀದಿಸಬಹುದು ಎನ್ನುವುದು ಇದಕ್ಕೆ ಕಾರಣ. ಆದರೆ ಆರೋಗ್ಯದ ವಿಷಯ ಬಂದಾಗ , ಒಮ್ಮೆ ಆರೋಗ್ಯ ಹದಗೆಟ್ಟರೆ ಕೋಟಿ ಕೋಟಿ ದುಡ್ಡು ಸುರಿದರೂ ಅದನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದೂ ಅಷ್ಟೇ ಸತ್ಯ. ಬ್ಯೂಟಿ ಪ್ರಾಡಕ್ಟ್ಗಳಿಗಾಗಿ ಜಾಹೀರಾತು ಕಂಪೆನಿಗಳು ಕೋಟಿ ಕೋಟಿ ಕೊಟ್ಟು ನಟಿಯರನ್ನು ಪಡೆದುಕೊಳ್ಳಬಹುದು. ಆದರೆ ಅದನ್ನು ನೋಡಿ ಜನರು ಮರುಳಾಗಬೇಕೇ ವಿನಾ ತಮ್ಮ ನಿಜ ಜೀವನದಲ್ಲಿ ನಟ-ನಟಿಯರು ಅದನ್ನು ಮುಟ್ಟಿಯೂ ನೋಡಿರುವುದಿಲ್ಲ. ಅದಕ್ಕೆ ಕಾರಣ ಅದರಲ್ಲಿ ಇರುವ ರಾಸಾಯನಿಕಗಳು. ಇದು ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಅವರಿಗೂ ಅನ್ವಯ ಆಗುತ್ತದೆ.
ತಮ್ಮ ನಟನೆ ಮತ್ತು ಅಮೋಘ ಸೌಂದರ್ಯದ ಮೂಲಕ ಭಾರತೀಯ ಸಿನಿ ರಸಿಕರ ಹೃದಯದಲ್ಲಿ ನೆಲೆಯೂರಿದ ಅಪರೂಪದ ಸುಂದರಿ ಈಕೆ. 55ನೇ ವಯಸ್ಸಿನಲ್ಲಿಯೂ ಯುವತಿಯಂತೆ ಕಂಗೊಳಿಸುವ ಚೆಲುವೆ ಮಾಧುರಿ, ಆಗಾಗ್ಗೆ ತಮ್ಮ ಸೌಂದರ್ಯ ಮತ್ತು ಆರೋಗ್ಯ ಸಲಹೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ತ್ವಚೆಯಾಗಿರಬಹುದು ಇಲ್ಲವೇ ಕೂದಲಿನ ಕಾಳಜಿಯ ಕುರಿತು ನಟಿ ಟಿಪ್ಸ್ ಕೊಡುತ್ತಲೇ ಇರುತ್ತಾರೆ. ಈಚೆಗಷ್ಟೇ ಅವರು ತಾವು ನಿತ್ಯ ಸೇವಿಸುವ ಪಾನೀಯಗಳ ಬಗ್ಗೆ ಒಂದರ ಹಿಂದೆ ಒಂದರಂತೆ ಮಾಹಿತಿ ಹಂಚಿಕೊಂಡಿದ್ದು, ಯುವತಿಯರನ್ನೂ ನಾಚಿಸುವಷ್ಟು ಅವರ ಸೌಂದರ್ಯಕ್ಕೆ ಕಾರಣವಾದ ಕೆಲವು ಅಂಶಗಳನ್ನು ತಿಳಿಸಿದ್ದರು. ರಾಸಾಯನಿಕವಾದ ಕ್ರೀಂ, ಫೇಷಿಯಲ್ಗಳನ್ನು ಹಚ್ಚಿಕೊಂಡು ತ್ವಚೆಯನ್ನು ಹಾಳು ಮಾಡಿಕೊಳ್ಳುವ ಬದಲು, ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂಗಳನ್ನು (Shampoo) ಕೂದಲಿಗೆ ಪ್ರಯೋಗ ಮಾಡಿ ಅವುಗಳನ್ನು ಹಾಳು ಮಾಡಿಕೊಳ್ಳುವ ಬದಲು ನೈಸರ್ಗಿಕವಾಗಿಯೇ ಹೇಗೆ ಸೌಂದರ್ಯವನ್ನು ಕಾಪಿಡಬಹುದು ಎನ್ನುವ ಬಗ್ಗೆ ನಟಿ ಮಾಧುರಿ ವರ್ಣಿಸಿದ್ದಾರೆ.
ನಟಿ ತಮ್ಮ ಯುಟ್ಯೂಬ್ ಚಾಲೆನ್ನಲ್ಲಿ ಕೂದಲಿನ ಪೋಷಣೆಯ (Hair Care) ಬಗ್ಗೆ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಸ್ಥಿರವಾದ ಆರೋಗ್ಯಕರ ಜೀವನಶೈಲಿ (Healthy LIfetyle) ಮತ್ತು ಸಾಕಷ್ಟು ನೀರಿನ ಸೇವನೆಯು ಹೇಗೆ ಕೂದಲಿಗೆ ಪ್ರಯೋಜನಕಾರಿಯಾಗುತ್ತದೆ ಎನ್ನುವುದನ್ನು ಅವರು ತಿಳಿಸಿದ್ದಾರೆ. 'ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ (Drink Enough Water) ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರಿ, ಇದು ಆರೋಗ್ಯಕರ ಕೂದಲಿಗೆ ಬಹಳಷ್ಟು ಕೊಡುಗೆ ನೀಡುತ್ತದೆ' ಎಂದು ಮಾಧುರಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕೂದಲಿನ ರಕ್ಷಣೆಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ನೈಸರ್ಗಿಕ ಟಿಪ್ಸ್ಗಳನ್ನೂ ಅವರು ನೀಡಿದ್ದಾರೆ.
ಮಾಧುರಿ ದೀಕ್ಷಿತ್ ಅವರು ಕೂದಲಿಗೆ ಎಣ್ಣೆ ಮತ್ತು ಹೇರ್ ಮಾಸ್ಕ್ ಕುರಿತು ಟಿಪ್ಸ್ ನೀಡಿದ್ದಾರೆ
ಎಣ್ಣೆ ಮಾಡುವ ವಿಧಾನ (Hair Oil method)
ಎಣ್ಣೆ ತಯಾರಿಸಲು ಬೇಕಿರುವ ಸಾಮಗ್ರಿಗಳು: ಅರ್ಧ ಕಪ್ ತೆಂಗಿನ ಎಣ್ಣೆ (Coconut Oil), 15-20 ಕರಿಬೇವಿನ ಎಲೆಗಳು, 1 ಟೀ ಚಮಚ ಮೆಂತ್ಯದ ಬೀಜಗಳು ಹಾಗೂ 1 ಸಣ್ಣ ತುರಿದ ಈರುಳ್ಳಿ ಇವುಗಳನ್ನು ಎಲ್ಲವನ್ನೂ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಕುದಿ ಬಂದ ನಂತರ ಅದನ್ನು ತಣ್ಣಗೆ ಮಾಡಲು ಇಡಬೇಕು. ಸಂಪೂರ್ಣವಾಗಿ ಆರಿದ ಮೇಲೆ ಒಂದು ಬಾಟಲಿಯಲ್ಲಿ ಇದನ್ನು ಶೋಧಿಸಿ ಇಟ್ಟುಕೊಳ್ಳಬೇಕು. 2 ದಿನಗಳವರೆಗೆ ಹಾಗೆಯೇ ಬಿಡಬೇಕು. ಎರಡು ದಿನಗಳ ನಂತರ ಅದನ್ನು ಉಪಯೋಗಿಸಬಹುದು. ಮೂರು ದಿನಕ್ಕೊಮ್ಮೆ ಇಲ್ಲವೇ ಕೊನೆಯ ಪಕ್ಷ ವಾರಕ್ಕೆ ಒಮ್ಮೆಯಾದರೂ ರಾತ್ರಿ ಇದನ್ನು ಚೆನ್ನಾಗಿ ತಲೆಗೆ ಮಸಾಜ್ ಮಾಡಿಕೊಂಡು ಮರುದಿನ ಬೆಳಗ್ಗೆ ತಲೆ ಸ್ನಾನ ಮಾಡಬೇಕು.
ಹೇರ್ ಮಾಸ್ಕ್ (Hair Mask) ಮಾಡುವ ವಿಧಾನ
ಮಾಸ್ಕ್ (Face Mask) ತಯಾರಿಸಲು ಬೇಕಿರುವ ಸಾಮಗ್ರಿಗಳು: 1 ಕತ್ತರಿಸಿದ ಬಾಳೆಹಣ್ಣು, 2 ಚಮಚ ಕಪ್ ಮೊಸರು, 2 ಚಮಚ ಸ್ವಲ್ಪ ಜೇನುತುಪ್ಪ. ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ತಲೆಸ್ನಾನ ಮಾಡುವ 30-40 ನಿಮಿಷಗಳ ಮೊದಲು ತಲೆಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು. ಅಪ್ಲೈ ಮಾಡಿದ ಸಾಮಗ್ರಿ ತಲೆಯ ಎಲ್ಲಾ ಕಡೆಗಳಲ್ಲಿ ಸರಿಯಾಗಿ ಇರುವಂತೆ ನೋಡಿಕೊಳ್ಳಲು ಬೇಕಿದ್ದರೆ ಹೇರ್ ಷವರ್ ಕ್ಯಾಪ್ (Hair shower cap) ಹಾಕಿಕೊಳ್ಳಬಹುದು. 30-40 ನಿಮಿಷಗಳ ಬಳಿಕ ನೀವು ಬಳಸುವ ಶ್ಯಾಂಪೂವನ್ನು ಹಾಕಿ ತಲೆಗೂದಲನ್ನು ತೊಳೆದುಕೊಳ್ಳಬೇಕು. ಇದಾದ ಮೇಲೆ ಕಂಡೀಷನರ್ ಹಾಕದೇ ಇದ್ದರೆ ಒಳ್ಳೆಯದು. ಈ ಹೇರ್ ಮಾಸ್ಕ್ ಉಪಯೋಗಿಸುತ್ತಿದ್ದರೆ ಕೂದಲು ಸಾಫ್ಟ್ ಆಗಿ ಹೊಳೆಯುತ್ತಲಿರುತ್ತದೆ.

