ಕಡಿಮೆ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆ ಹೆಚ್ಚುತ್ತಿದ್ದು, ರಾಸಾಯನಿಕ ಹೇರ್ ಡೈಗಳು ಕ್ಯಾನ್ಸರ್‌ಗೆ ಕಾರಣವಾಗುತ್ತಿವೆ. ಆದರೆ, ನಟಿ ಭಾರತಿ ಸಿಂಗ್, ಮೆಹಂದಿ, ಟೀ ಡಿಕಾಕ್ಷನ್, ಅಲೋವೆರಾ, ಮೊಟ್ಟೆಯ ಬಿಳಿಭಾಗ ಬಳಸಿ ಮನೆಯಲ್ಲಿಯೇ ತಯಾರಿಸುವ ನೈಸರ್ಗಿಕ ಹೇರ್ ಪ್ಯಾಕ್ ಬಳಸುವುದಾಗಿ ತಿಳಿಸಿದ್ದಾರೆ.

ಮೊದಲೆಲ್ಲಾ 50-55 ವಯಸ್ಸು ದಾಟಿದ ಮೇಲೆ ಕೂದಲು ಬಿಳಿಯಾಗುತ್ತಿತ್ತು. ಕೂದಲು ಬಿಳಿಯಾದರೆ ವಯಸ್ಸಾಗುತ್ತಿದೆ ಎನ್ನುವ ಅರ್ಥವೇ ಇದೆ. ಆದರೆ ಈಗ ಹಾಗಲ್ಲ 12-15ನೇ ವಯಸ್ಸಿಗೇ ಬಿಳಿಕೂದಲು ಆಗುವುದು ಇದೆ. ಇನ್ನು 20-25 ದಾಟಿದರೆ ಸಾಕು, ಅದೆಷ್ಟೋ ಮಂದಿ ಮುಜುಗರ ಪಡುವಷ್ಟು ಬಿಳಿಯ ಕೂದಲು ಕಾಣಿಸಿಕೊಳ್ಳುತ್ತಿದೆ. ಕೂದಲು ಬಿಳಿಯಾದರೆ ಅದೇನೋ ಹಿಂಸೆ ಎನ್ನುವ ರೀತಿ ಹಲವರಿಗೆ ಅನ್ನಿಸುವುದು ಉಂಟು. ಇದು ನಮ್ಮ ಜೀನ್ಸ್​, ಆಹಾರ, ವಾತಾವರಣ, ಲೈಫ್​ಸ್ಟೈಲ್​, ಬಳಸುವ ಕಲುಷಿತ ನೀರು ಎಲ್ಲದಕ್ಕೂ ಸೇರಿದ್ದರೂ ಕೂದಲು ಬಿಳಿ ಎನ್ನುವುದು ಹಲವರಿಗೆ ನುಂಗಲಾಗದ ತುತ್ತು. ಇದೇ ಕಾರಣಕ್ಕೆ ಹೇರ್​ಡೈ ಇಂದು ಲಕ್ಷಾಂತರ ಕೋಟಿ ವ್ಯವಹಾರವನ್ನು ಕುದುರಿಸಿಕೊಳ್ಳುತ್ತಿದೆ. ಇದರ ಜಾಹೀರಾತಿಗಾಗಿ ಕೋಟಿ ಕೋಟಿ ಪಡೆದು ಸ್ಟಾರ್​ ನಟರೇ ಬರುತ್ತಾರೆ.

ಆದರೆ ಅಸಲಿಗೆ, ಇದಾಗಲೇ ಸಾಬೀತಾಗಿರುವ ಮಾರುಕಟ್ಟೆಯಲ್ಲಿ ಸಿಗುವ ಹಲವು ಹೇರ್​ಡೈಗಳು ಕ್ಯಾನ್ಸರ್​ಕಾರಕವಾಗಿವೆ. ನ್ಯಾಚುಲರ್​, ಅಲೋವಿರಾ... ಅದೂ ಇದೂ ಎಂದೆಲ್ಲಾ ಲೇಬಲ್​ ಕೊಟ್ಟು ಸ್ಟಾರ್​ ನಟ-ನಟಿಯರನ್ನು ಬಳಸಿಕೊಂಡು ಜನರನ್ನು ಮರುಳು ಮಾಡಲಾಗುತ್ತಿದೆ. ಆದರೆ ಇಂದು ವಿಪರೀತವಾಗಿ ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಈ ಕೆಮಿಕಲ್​ ಹೇರ್​ಡೈ ಕೂಡ ಕಾರಣ ಎನ್ನುವುದು ಆಘಾತಕರಾಗಿ ಅಂಶವನ್ನು ಸಂಶೋಧಕರೇ ಸಾರಿ ಸಾರಿ ಹೇಳಿದ್ದಾರೆ. ಅದರಲ್ಲಿಯೂ ಮಹಿಳೆಯರಿಗೆ ಬ್ರೆಸ್ಟ್​ ಕ್ಯಾನ್ಸರ್​ ಹೆಚ್ಚುವುದಕ್ಕೆ ಇದರ ಪಾಲು ಕೂಡ ಬಹು ದೊಡ್ಡದಿದೆ ಎನ್ನಲಾಗುತ್ತಿದೆ. ಆದರೆ ಹೇರ್​ಡೈ ಅಂತೂ ಬೇಕೇ ಬೇಕು, ಅದು ಇಲ್ಲದಿದ್ದರೂ ಜೀವನ ಅಸಾಧ್ಯ ಎನ್ನುವಂತಾಗಿದೆ. ಈ ಬಗ್ಗೆ ಇದಾಗಲೇ ಕೆಲವು ಆಯುರ್ವೇದ ತಜ್ಞರು ಸುಲಭದ ಮಾರ್ಗಗಳನ್ನು ತಿಳಿಸಿದ್ದಾರೆ. 

ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್​ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ

ಇದೀಗ, ಕಮೀಡಿಯನ್​ ಭಾರತಿ ಸಿಂಗ್​ ಅವರು ತಾವು ಮನೆಯಲ್ಲಿಯೇ ಬಳಸುವ ಅದರಲ್ಲಿಯೂ ಹೆಚ್ಚಾಗಿ ತಮ್ಮ ರಾಜ್ಯ ಪಂಜಾಬಿಗರು ಮನೆಯಲ್ಲಿಯೇ ತಯಾರಿಸುವ ಹೇರ್​ಡೈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಬ್ಲೇ ನೂರ್ ಎನ್ನುವ ಪುಟದಲ್ಲಿ ಇದನ್ನು ಶೇರ್​ ಮಾಡಲಾಗಿದೆ. ತಾವು ಯಾವುದೇ ಕೆಮಿಕಲ್​ ಇರುವ ಹೇರ್​ಡೈ ಬಳಸುವುದಿಲ್ಲ ಎಂದಿರುವ ನಟಿ ಅದೇ ರೀತಿ ಹಲವರು ಮನೆಯಲ್ಲಿಯೇ ತಯಾರಿಸುವ ಹೇರ್​ಡೈ ಬಗ್ಗೆ ವಿವರಣೆ ನೀಡಿದ್ದಾರೆ.

ತಮ್ಮ ಮನೆ ಸೇರಿದಂತೆ ಪಂಜಾಬ್​ನಲ್ಲಿ ಮೊದಲಿನಿಂದಲೂ ಎಲ್ಲರೂ ಹೆನ್ನಾ ಮಿಕ್ಸ್ ಬಳಸುತ್ತಾರೆ. ತಾವೂ ಇದನ್ನೇ ಬಳಸುವುದು. ಇದರಿಂದಾಗಿ ಹೇರ್ ಡೈ ಮಾಡುವ ಅಗತ್ಯವೇ ಬಂದಿಲ್ಲ ಎಂದಿರುವ ನಟಿ, ಇದರ ಹೇರ್ ಪ್ಯಾಕ್ ತಯಾರಿಸುವ ಬಗ್ಗೆ ಹಾಗೂ ಮಿಕ್ಸಿಂಗ್​ ಬಗ್ಗೆ ವಿವರಣೆ ನೀಡಿದ್ದಾರೆ. ಹೆನ್ನಾ ಮಿಕ್ಸ್ ತಯಾರಿಸಲು ರಾತ್ರಿ ಮಲಗುವ ಮೊದಲು ಕಬ್ಬಿಣದ ಬಾಣಲಿಯಲ್ಲಿ ಮೆಹಂದಿ ಪುಡಿ ಹಾಕಿ ಅದನ್ನು ಟೀ ಡಿಕಾಕ್ಷನ್ ಜೊತೆ ಬೆರೆಸಿ ಅಲೋವೇರಾ ಜೆಲ್, ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇಡಬೇಕು. ಮರುದಿನ ಇದನ್ನು ಕೂದಲಿಗೆ ಹಚ್ಚಿ 2 ಗಂಟೆ ಬಳಿಕ ಹೇರ್ ವಾಶ್ ಮಾಡಬೇಕು ಎಂದಿದ್ದಾರೆ. ಇದೇ ತಮ್ಮ ಕಪ್ಪು ಕೂದಲಿನ ರಹಸ್ಯ ಎಂದೂ ಹೇಳಿದ್ದಾರೆ ನಟಿ. ಅಂದಹಾಗೆ ಹೆನ್ನಾ ಪೌಡರ್​ನಲ್ಲಿಯೂ ಈಗ ಕೆಮಿಕಲ್​ ಮಿಕ್ಸ್ ಮಾಡುವುದು ಮಾಮೂಲಾಗಿದೆ. ಆದ್ದರಿಂದ ಗಂಥಿಗೆ ಅಂಗಡಿಯಲ್ಲಿ ಇದನ್ನು ಕೊಂಡು ತಂದರೆ ಒಳಿತು. 

ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಲಿಪ್​ಸ್ಟಿಕ್ಕೂ ಕಾರಣ! 17.49 ಬಿಲಿಯನ್ ಡಾಲರ್​ ಉದ್ಯಮದ ಶಾಕಿಂಗ್​ ಡಿಟೇಲ್ಸ್​ ಇಲ್ಲಿದೆ...