Fear of ants case: ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ, ಮಲಗುವ ಕೋಣೆ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ ಪತ್ನಿ ಕೋಣೆಯಲ್ಲಿ..
ಇರುವೆಗಳ ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ತಲುಪಿದ ಪೊಲೀಸರು ಶವವನ್ನು ಪರಿಶೀಲಿಸಿದರು. ಮೃತ ದೇಹದ ಪಕ್ಕದಲ್ಲಿ ದೊರೆತ ಆತ್ಮಹ*ತ್ಯಾ ಪತ್ರವನ್ನು ವಶಪಡಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಆತ್ಮಹ*ತ್ಯೆ ಪತ್ರದ ಪ್ರಕಾರ, ಇರುವೆಗಳ ಭೀತಿಯಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸರ ಪ್ರಕಾರ, ಶ್ರೀಕಾಂತ್ ಮತ್ತು ಮನೀಷಾ (25) ಎಂಬ ದಂಪತಿ ತಮ್ಮ ಮಗಳೊಂದಿಗೆ ತೆಲಾಂಗಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಅಮೀನ್‌ಪುರದಲ್ಲಿ ವಾಸಿಸುತ್ತಿದ್ದಾರೆ. ಆದರೆ ಮನೀಷಾ ಕೆಲವು ಸಮಯದಿಂದ ಇರುವೆಗಳ ಬಗ್ಗೆ ತೀವ್ರ ಭಯದಿಂದ (Myrmecophobia) ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಚಿಕಿತ್ಸೆಗಾಗಿ ಮನೀಷಾ ಅವರ ಕುಟುಂಬ ಸದಸ್ಯರು ಅನೇಕ ಆಸ್ಪತ್ರೆಗಳಲ್ಲಿ ತೋರಿಸಿದರು. ಅವರು ಅನೇಕ ಸ್ಥಳಗಳಲ್ಲಿ ಚಿಕಿತ್ಸೆ ಪಡೆದರು. ಕೌನ್ಸೆಲಿಂಗ್ ನೀಡಲಾಯಿತು. ಆದರೆ ಯಾವುದೇ ಫಲಿತಾಂಶ ಬರಲಿಲ್ಲ.
ಇದರಿಂದ ತೀವ್ರ ನೊಂದ ಮನಿಷಾ, ಮಂಗಳವಾರ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಪತಿ, ಮಲಗುವ ಕೋಣೆ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿ ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ಒಳಗೆ ಹೋದಾಗ ಪತ್ನಿ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಇದನ್ನು ನೋಡಿದ ಪತಿ ಕಣ್ಣೀರು ಹಾಕಿದ್ದಾರೆ.
ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಪರಿಶೀಲಿಸಿದರು. ಅವರು ಶವದ ಪಕ್ಕದಲ್ಲಿದ್ದ ಆತ್ಮಹ*ತ್ಯೆ ಪತ್ರವನ್ನು ವಶಪಡಿಸಿಕೊಂಡರು. ಆ ಪತ್ರದಲ್ಲಿ, "ಶ್ರೀ.. ಕ್ಷಮಿಸಿ.. ನಾನು ಈ ಇರುವೆಗಳೊಂದಿಗೆ ಬದುಕಲು ಬಯಸುವುದಿಲ್ಲ. ಅನ್ವಿಯನ್ನು ನೋಡಿಕೊಳ್ಳಿ.. ದಯವಿಟ್ಟು ಅನ್ನಾವರಂ, ತಿರುಪತಿ ಮತ್ತು ಯೆಲ್ಲಮ್ಮನನ್ನು ನೋಡಿಕೊಳ್ಳಿ" ಎಂದು ಬರೆಯಲಾಗಿತ್ತು. ಈ ಪತ್ರ ಓದಿದ ಕುಟುಂಬ ಸದಸ್ಯರು ಕಣ್ಣೀರು ಹಾಕಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಏನಿದು ಮೈರ್ಮೆಕೊಫೋಬಿಯಾ?
ಇರುವೆಗಳ ಬಗ್ಗೆ ವಿವರಿಸಲಾಗದ ಭಯ ಅಥವಾ ದ್ವೇಷ . ಇದು ಒಂದು ರೀತಿಯ ನಿರ್ದಿಷ್ಟ ಭಯ . ಮೈರ್ಮೆಕೊಫೋಬಿಯಾದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಕೀಟಗಳ ಬಗ್ಗೆ ಮತ್ತು ಜೇಡಗಳ ಬಗ್ಗೆ ಹೆಚ್ಚಿನ ಭಯವನ್ನು ಹೊಂದಿರುವುದು ಸಾಮಾನ್ಯವಾಗಿದೆ. ಅಂತಹ ಸಮಸ್ಯೆಯನ್ನ ಎಂಟೊಮೊಫೋಬಿಯಾ (Entomophobia) ಎಂದೂ ಕರೆಯಲಾಗುತ್ತದೆ . ಈ ಭಯವು ಹಲವಾರು ವಿಧಗಳಲ್ಲಿ ಪ್ರಕಟವಾಗಬಹುದು. ಉದಾಹರಣೆಗೆ ಇರುವೆಗಳು ಆ ವ್ಯಕ್ತಿಯ ಆಹಾರವನ್ನ ಕಲುಷಿತಗೊಳಿಸುವ ಭಯ ಅಥವಾ ಹೆಚ್ಚಿನ ಸಂಖ್ಯೆಯ ಇರುವೆಗಳು ಮನೆಯ ಮೇಲೆ ಆಕ್ರಮಣ ಮಾಡುವ ಭಯ. ಹೀಗೆ ಇತ್ಯಾದಿ ಸಮಸ್ಯೆಗಳನ್ನ ಅನುಭವಿಸಬಹುದು.
ಮೈರ್ಮೆಕೊಫೋಬಿಯಾ ಲಕ್ಷಣಗಳು
ಮೈರ್ಮೆಕೊಫೋಬಿಯಾ ಇದ್ದ ಜನರು ಆತಂಕ, ನಿದ್ರಾಹೀನತೆ, ಬೆವರುವುದು, ಹೆಚ್ಚಿದ ಹೃದಯ ಬಡಿತ, ಉಸಿರಾಟದ ತೊಂದರೆ, ಉರುಳುವಿಕೆ, ಗಾಬರಿ, ವಾಕರಿಕೆ, ಒಣ ಬಾಯಿ, ತಲೆತಿರುಗುವಿಕೆ, ತಲೆನೋವು ಮತ್ತು ಮರಗಟ್ಟುವಿಕೆಯಂತಹ ಸಮಸ್ಯೆ ಅನುಭವಿಸಬಹುದು. ಇದಕ್ಕೆ ಚಿಕಿತ್ಸೆ ಸಹ ಇದೆ. ಮೊದಲಿಗೆ ಇರುವೆಗಳ ವಿಡಿಯೋ ತೋರಿಸುವ ಮೂಲಕ ಪ್ರಾರಂಭಿಸಬಹುದು. ನಂತರ ಅಂತಿಮವಾಗಿ ಅವರನ್ನು ನಿಜ ಜೀವನದಲ್ಲಿ ಇರುವೆಗಳ ಬಳಿ ಇರುವಂತೆ ಮಾಡಬಹುದು. ಇರುವೆಗಳು ಮತ್ತು ಕೀಟಗಳ ಭಯವನ್ನು ಕಡಿಮೆ ಮಾಡಲು ಇದು ಹಲವು ಮಾರ್ಗಗಳಲ್ಲಿ ಒಂದಾಗಿರಬಹುದು. ಇದಲ್ಲದೆ, ಇತರ ಚಿಕಿತ್ಸೆಗಳು ಈ ಭಯವನ್ನು ನಿವಾರಿಸುತ್ತದೆ.
