ಕೆಲವು ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ, ಗ್ಯಾಸ್, ಹೊಟ್ಟೆಯುಬ್ಬರದಂತಹ ಸಮಸ್ಯೆಗಳುಂಟಾಗಬಹುದು. ಹಾಗಾದರೆ ಯಾವ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು, ಯಾಕೆ ಎಂದು ಇಲ್ಲಿ ನೋಡೋಣ.
ಬಹಳಷ್ಟು ಸಾರಿ ಹಣ್ಣುಗಳನ್ನು ನಾವ ಜೋರಾಗಿ ಹಸಿವಾದಾಗ ತಿಂದುಬಿಡುತ್ತೇವೆ. ಮನೆಯಲ್ಲಿ, ಹೊರಗಿದ್ದಾಗ, ಕಚೇರಿಯಲ್ಲಿ ಹೀಗೆ ಹಲವಾರು ಸಂದರ್ಭಗಳಲ್ಲಿ ಹಸಿವಾದಾಗ ಬೇರೇನೂ ಉಪಾಯ ಕಾಣದೆ, ಆಯ್ಕೆಗಳಿಲ್ಲದೆ, ಹಣ್ಣು ತಿನ್ನುತ್ತೇವೆ. ಆದರೆ, ಖಾಲಿ ಹೊಟ್ಟೆಯಲ್ಲಿ, ತೀವ್ರ ಹಸಿವಿನ ಸಂದರ್ಭಗಳಲ್ಲಿ ಕೆಲವು ಹಣ್ಣುಗಳು ವ್ಯತಿರಿಕ್ತವಾಗಿ ವರ್ತಿಸುತ್ತವೆ. ಹಣ್ಣು ಒಳ್ಳೆಯದು, ಅದನ್ನು ತಿಂದಿದ್ದು ಬಿಟ್ಟರೆ ಬೇರೇನೂ ತಿಂದಿಲ್ಲ, ಆದರೂ ಹೊಟ್ಟೆಯ ಸಮಸ್ಯೆಯೇಕೆ, ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆ ಯಾಕೆ ಎಂಬುದಕ್ಕೆ ನಮಗೆ ಉತ್ತರವೇ ತಿಳಿದಿರುವುದಿಲ್ಲ. ಆದರೆ, ಅಂತಹ ಸಮಸ್ಯೆಗಳ ಮೂಲ ಕಾರಣ ಕೆಲವೊಮ್ಮೆ ಇಂತಹುಗಳಲ್ಲೂ ಅಡಿಗಿರುತ್ತವೆ. ಹಣ್ಣುಗಳು ಆರೋಗ್ಯಕ್ಕೇನೋ ಒಳ್ಳೆಯದು ನಿಜವೇ ಆದರೂ, ಅತೀವ ಹಸಿವಾದಾಗ, ಖಾಲಿ ಹೊಟ್ಟೆಯಲ್ಲಿದ್ದಾಗ ಕೆಲವು ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ. ಬನ್ನಿ, ಯಾವೆಲ್ಲ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು ಎಂಬುದನ್ನು ನೋಡೋಣ.
1) ಪಪ್ಪಾಯಿ ಹಣ್ಣಿನಲ್ಲಿ ಪಪೈನ್ ಇರುವುದರಿಂದ ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಎಂಬುದು ನಿಜವಾದರೂ, ಪಪ್ಪಾಯಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮುಖ್ಯವಾಗಿ ಹೊಟ್ಟೆಯಲ್ಲಿ ಕಿರಿಕಿರಿಯನ್ನುಂಟು ಮಾಡುವ ಜೊತೆಗೆ ಗ್ಯಾಸ್, ಹೊಟ್ಟೆಯುಬ್ಬರದಂತಹ ಸಮಸ್ಯೆಯನ್ನೂ ಹುಟ್ಟು ಹಾಕಬಹುದು.
2) ಪೇರಳೆ ಅಥವಾ ಸೀಬೆ ಹಣ್ಣಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನಾರಿನಂಶವಿದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ತಿಂದರೆ ಇದರಿಂದ ಅಜೀರ್ಣವಾಗಬಹುದು. ಹೊಟ್ಟೆಯ ಸಮಸ್ಯೆಗಳೂ ಉಂಟಾಗಬಹುದು. ಹಾಗಾಗಿ, ಖಾಲಿ ಹೊಟ್ಟೆಯಲ್ಲಿ ಪೇರಳೆ ತಿನ್ನುವ ಬದಲು ಒಳ್ಳೆಯ ಊಟದ ನಂತರ ಪೇರಳೆಯನ್ನು ತಿನ್ನುವುದು ಉತ್ತಮ.
3) ಅನನಾಸಿನಲ್ಲಿ ಬ್ರೊಮಾಲೈನ್ ಎಂಬ ಕಿಣ್ವ ಇದ್ದು, ಇದು ಹೆಚ್ಚು ಅಸಿಡಿಕ್ ಸ್ವರೂಪದ್ದಾಗಿದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಜಠರದ ಒಳಮೇಲ್ಮೈಯ ತೆಳುವಾದ ಪೊರೆಯ ಮೇಲೆ ಕೆಟ್ಟ ಪರಿಣಾಮ ಬೀರಿ ಅದನ್ನೇ ತೆಗೆದು ಹಾಕಿ ಬಿಡುವ ಸಂಭವವೂ ಇರುವುದರಿಂದ ಅನನಾಸನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ.
4) ಪೀರ್ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದ್ದು, ಇದನ್ನು ಖಾಲಿ ಹೊಟ್ಟೆಯ್ಲಿ ತಿನ್ನುವುದರಿಂದ ಅಜೀರ್ಣದಂತಹ ಸಮಸ್ಯೆ ಬರಬಹುದು. ಹೊಟ್ಟೆಯಲ್ಲಿ ಆಹಾರವಿದ್ದಾಗ ಇಂತಹ ಹಣ್ಣುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ.
5) ಜೀರ್ಣಶಕ್ತಿ ದುರ್ಬಲವಾಗಿರುವ ಮಂದಿ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣನ್ನು ತಿನ್ನುವುದು ಒಳ್ಳೆಯದಲ್ಲ. ಆಪಲ್‌ನಲ್ಲಿ ನೈಸರ್ಗಿಕವಾದ ಆಸಿಡ್ ಹಾಗೂ ಹೆಚ್ಚು ನಾರಿನಂಶ ಇರುವುದರಿಂದ ಇವು ಹೊಟ್ಟೆಯ ಆಸಿಡ್ ಮಟ್ಟವನ್ನು ಇನ್ನಷ್ಟು ಪ್ರಚೋದಿಸಿ ಕಿರಿಕಿರಿಯನ್ನು ಉಂಟು ಮಾಡಬಹುದು. ಹಾಗಾಗಿ, ಆಪಲ್ ಕೂಡಾ ಖಾಲಿ ಹೊಟ್ಟೆಯಲ್ಲಿ ಎಲ್ಲರಿಗೂ ಒಳ್ಳೆಯದಲ್ಲ ಎಂಬುದನ್ನು ನೆನಪಿಡಿ.
6) ಮೆಗ್ನೀಶಿಯಂ ಹಾಗೂ ಪೊಟಾಶಿಯಂ ಹೇರಳವಾಗಿರುವ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ, ರಕ್ತದಲ್ಲಿ ದಿಢೀರ್ ಮೆಗ್ನೀಶಿಯಂ ಮಟ್ಟ ಏರುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.
7) ಟೊಮೆಟೋದಲ್ಲಿ ಹೆಚ್ಚು ಪ್ರಮಾಣದಲ್ಲಿ ಟ್ಯಾನಿಕ್ ಆಸಿಡ್ ಇರುವುದರಿಂದ, ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಇದು ಹೊಟ್ಟೆಯಲ್ಲಿರುವ ಆಸಿಡ್ ಮಟ್ಟವನ್ನು ದಿಢೀರ್ ಏರಿಸುವ ಸಂಭವವಿದ್ದು, ಹೊಟ್ಟೆಯುಬ್ಬರ, ಗ್ಯಾಸ್‌ನಂತಹ ಸಮಸ್ಯೆ ಬರಬಹುದು.
ಹಸುವಿನ ತುಪ್ಪ vs ಎಮ್ಮೆ ತುಪ್ಪ: ಈ ಎರಡರಲ್ಲಿ ಹೃದಯದ ಆರೋಗ್ಯಕ್ಕೆ ಯಾವುದು ಒಳ್ಳೆಯದು..?
8) ಮಾವಿನಹಣ್ಣೂ ಕೂಡಾ ಗ್ಯಾಸ್, ಹೊಟ್ಟೆಯುಬ್ಬರಕ್ಕೆ ದಾರಿ. ಇದನ್ನೂ ಕೂಡಾ ಊಟದ ನಂತರ ತಿಂದರೆ ಒಳ್ಳೆಯದು. ಇಲ್ಲವಾದರೆ, ಗ್ಯಾಸ್, ಹೊಟ್ಟೆನೋವು, ಮಲಬದ್ಧತೆಯಂತ ಸಮಸ್ಯೆಗಳೂ ಬರಬಹುದು.
9) ದ್ರಾಕ್ಷಿ ಹಣ್ಣನ್ನು ಹಸಿ ಹೊಟ್ಟೆಯಲ್ಲಿ ತಿಂದರೆ ರಕ್ತದ ಸಕ್ಕರೆಯ ಮಟ್ಟದಲ್ಲಿ ದಿಢೀರ್ ಏರಿಕೆ ಕಾಣಬಹುದು. ದ್ರಾಕ್ಷಿಯಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸಕ್ಕರೆಯಿದ್ದು, ಇದು ಖಾಲಿ ಹೊಟ್ಟೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
10) ಕಿತ್ತಳೆ ಹಣಿನಲ್ಲಿ ಆಮ್ಲೀಯ ಗುಣ ಅತ್ಯಂತ ಹೆಚ್ಚಿದೆ. ಇದರಿಂದ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು, ಗ್ಯಾಸ್, ಹುಳಿ ತೇಗು, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಗಳು ಬರಬಹುದು. ಹೀಗಾಗಿ ಕಿತ್ತಳೆ ಹಣ್ಣೂ ಕೂಡಾ ಖಾಲಿ ಹೊಟ್ಟೆಯಲ್ಲಿ, ಹೆಚ್ಚು ಹಸಿವಾದಾಗ ತಿನ್ನುವುದು ಒಳ್ಳೆಯದಲ್ಲ.
Anemia Solutions: ಕಡಿಮೆ ರಕ್ತದೊತ್ತಡ ಇದೆಯೇ? ಒಂದು ವಾರ ಇವುಗಳನ್ನ ತಿನ್ನಿರಿ
