ತಾಜಾ ಗೋಮೂತ್ರದಲ್ಲಿದೆ ಬ್ಯಾಕ್ಟೀರಿಯಾ, ಮಾನವ ಬಳಕೆಗೆ ಯೋಗ್ಯವಲ್ಲ; ಅಧ್ಯಯನದಲ್ಲಿ ಬಹಿರಂಗ

ಹಲವಾರು ವರ್ಷಗಳಿಂದ ಪರಿಣಾಮಕಾರಿ ಔಷಧವೆಂದು ಪರಿಗಣಿಸಲಾಗಿರುವ ಗೋಮೂತ್ರವು ಅಪಾಯಕಾರಿ ಎಂದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. ತಾಜಾ ಗೋಮೂತ್ರ ನೇರ ಮಾನವ ಬಳಕೆಗೆ ಸೂಕ್ತವಲ್ಲ ಏಕೆಂದರೆ ಇದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

Cow Urine Unfit for Humans, Contains Harmful Bacteria, Says Veterinary Research Body Vin

ನವದೆಹಲಿ: ಗೋಮೂತ್ರ ಸೇವನೆಯ ಪರಿಣಾಮ, ಅಡ್ಡಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ತಾಜಾ ಗೋಮೂತ್ರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಇವೆ. ಹೀಗಾಗಿ ಗೋಮೂತ್ರವು ಮಾನವ ಸೇವನೆಗೆ ಅಪಾಯಕಾರಿ ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆ (ಐವಿಆರ್‌ಐ) ಅಧ್ಯಯನವೊಂದು ಹೇಳಿದೆ. ‘ಹಸುಗಳು ಹಾಗೂ ಹೋರಿಗಳ ಮೂತ್ರದ ಮಾದರಿಗಳನ್ನು ಬಳಸಿ ಅಧ್ಯಯನ (Study) ನಡೆಸಲಾಗಿದ್ದು, ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಂಡುಹಿಯಲಾಗಿದೆ. ಇದರಲ್ಲಿ ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಂನ ಉಪಸ್ಥಿತಿಯೂ ಸೇರಿದೆ. ಇದು ಸಾಮಾನ್ಯವಾಗಿ ಮಾನವರಲ್ಲಿ ಹೊಟ್ಟೆಯಲ್ಲಿ (Stomach) ಸೋಂಕು ಸೃಷ್ಟಿಸಬಹುದು’ ಎಂದು ಅದು ಹೇಳಿದೆ.

2022ರ ಜೂನ್‌ನಿಂದ 2022ರ ನವೆಂಬರ್‌ ವರೆಗೆ 3 ರೀತಿಯ ಹಸುಗಳಾದ ಸಾಹಿವಾಲ್‌, ಥಾಪರ್‌ಕರ್‌ ಹಾಗೂ ವಿಂದವಾನಿ (ಮಿಶ್ರ ತಳಿ) ಹಸುಗಳ ಮಾದರಿಯನ್ನು ಪಡೆದು, 3 ಪಿಎಚ್‌ಡಿ ವಿದ್ಯಾರ್ಥಿಗಳ (Students) ಜತೆಗೂಡಿ ಡಾ.ಭೋಜರಾಜ ಸಿಂಗ್‌ ಅವರು ಅಧ್ಯಯನ ನಡೆಸಿದ್ದಾರೆ.

Success Story : ಕೊರೋನಾದಲ್ಲಿ ಕೆಲಸ ಕಳ್ಕೊಂಡ ನಾರಿಗೆ ಕೈ ಹಿಡಿದಿದ್ದು ಗೋವು

ಇನ್ನು ಹಸುಗಳು, ಎಮ್ಮೆಗಳು ಮತ್ತು ಮಾನವರ 73 ಮೂತ್ರದ ಮಾದರಿಗಳ ಅಂಕಿಅಂಶಗಳ ವಿಶ್ಲೇಷಣೆಯನ್ನೂ ಪ್ರತ್ಯೇಕವಾಗಿ ನಡೆಸಲಾಗಿದ್ದು, ಎಮ್ಮೆ ಮೂತ್ರದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಚಟುವಟಿಕೆಯು ಹಸುಗಳಿಗಿಂತ ಹೆಚ್ಚು ಉತ್ತಮವಾಗಿದೆ ಎಂಬ ಫಲಿತಾಂಶವೂ ಲಭಿಸಿದೆ. ಎಮ್ಮೆಯ ಮೂತ್ರವು ಎಸ್‌ ಎಪೊದೆರ್ಮಿಡಿಸ್‌ ಹಾಗೂ ಎ ರಾಪೊಂಟಿಸಿ ಎಂಬ ಬ್ಯಾಕ್ಟೀರಿಯಾಗಳ ಮೇಲೆ ಗಮನಾರ್ಹವಾಗಿ ಹೆಚ್ಚು ಪರಿಣಾಮ ಬೀರಿದೆ’ ಎಂದು ಸಿಂಗ್‌ ತಿಳಿಸಿದ್ದಾರೆ.

ಇನು ತಾಜಾ ಗೋಮೂತ್ರಕ್ಕೆ ಪ್ರತಿಯಾಗಿ ‘ಬಟ್ಟಿಇಳಿಸಿದ’ (ಶುದ್ಧೀಕರಿಸಿದ) ಗೋಮೂತ್ರವು ಸಾಂಕ್ರಾಮಿಕ ಬ್ಯಾಕ್ಟೀರಿಯಾವನ್ನು ಹೊಂದಿಲ್ಲ ಎಂಬ ವ್ಯಾಪಕ ನಂಬಿಕೆ ಇದೆ ಎಂದಿರುವ ಅವರು, ಅದರ ಬಗ್ಗೆ ಸಂಶೋಧನೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದಾರೆ.

Business Ideas: ಹಸುವಿನ ಸಗಣಿ ನೀಡ್ತಿದೆ ಕೈತುಂಬ ಹಣ

ಶುದ್ಧೀಕರಿಸಿದ ಗೋಮೂತ್ರ ಬೆಸ್ಟ್‌:
ಈ ನಡುವೆ, ಐವಿಆರ್‌ಐ ಮಾಜಿ ನಿರ್ದೇಶಕ ಆರ್‌.ಎಸ್‌. ಚೌಹಾಣ್‌ ಅವರು ಈ ಸಂಶೋಧನೆಯನ್ನು ಪ್ರಶ್ನಿಸಿದ್ದಾರೆ. ‘ನಾನು 25 ವರ್ಷಗಳಿಂದ ಗೋಮೂತ್ರದ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇನೆ ಮತ್ತು ಬಟ್ಟಿಇಳಿಸಿದ (ಶುದ್ಧೀಕರಿಸಿದೆ) ಗೋಮೂತ್ರವು ಮಾನವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಕ್ಯಾನ್ಸರ್‌ ಮತ್ತು ಕೋವಿಡ್‌ ವಿರುದ್ಧ ಸಹಾಯ ಮಾಡುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ ಈಗಿನ ನಿರ್ದಿಷ್ಟಸಂಶೋಧನೆಯು ಬಟ್ಟಿಇಳಿಸಿದ ಮೂತ್ರದ ಮಾದರಿಗಳ ಮೇಲೆ ಮಾಡಲಾಗಿಲ್ಲ. ಶುದ್ಧೀಕರಸಿದ ಗೋಮೂತ್ರ ಸೇವಿಸುವಂತೆ ನಾವು ಶಿಫಾರಸು ಮಾಡುತ್ತೇವೆ’ ಎಂದರು.

ಭಾರತದಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಟ್ರೇಡ್‌ಮಾರ್ಕ್ನ ಅಗತ್ಯವಿಲ್ಲದೇ ಹಲವಾರು ಕಾಯಿಲೆಗಳಿಗೆ ಔಷಧಿಯಾಗಿ ಗೋಮೂತ್ರವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ. ಹಿಂದೂ ಸಂಸ್ಕೃತಿಯಲ್ಲಿ ಹಸುಗಳು ಮತ್ತು ಅವುಗಳ ಉತ್ಪನ್ನಗಳಿಗೆ ಧಾರ್ಮಿಕ ಪಾವಿತ್ರ್ಯತೆ ಇರುವುದರಿಂದ ಮಾರಾಟ ಮತ್ತು ಸೇವನೆಯು ಅನಿಯಂತ್ರಿತವಾಗಿದೆ.

ಬೆರಣಿ ತಟ್ಟುವ ಮಹಿಳೆಯ ವಿಡಿಯೋ ವೈರಲ್: ಬಾಸ್ಕೆಟ್‌ಬಾಲ್‌ ಟೀಮಲ್ಲಿರಬೇಕಿತ್ತು ಎಂದ ನೆಟ್ಟಿಗರು

Latest Videos
Follow Us:
Download App:
  • android
  • ios