Asianet Suvarna News Asianet Suvarna News

Business Ideas: ಹಸುವಿನ ಸಗಣಿ ನೀಡ್ತಿದೆ ಕೈತುಂಬ ಹಣ

ಭಿನ್ನವಾದ ವ್ಯವಹಾರಕ್ಕೆ ಆರಂಭದಲ್ಲಿ ಬೇಡಿಕೆ ಕಡಿಮೆಯಿರುತ್ತದೆ. ಆದ್ರೆ ಅದು ಪರಿಸರ ಸ್ನೇಹಿ ಹಾಗೂ ಸಾಮಾನ್ಯ ಜನರಿಗೆ ಕೈಗೆಟುಕುವಂತಿದ್ದರೆ ನಿಧಾನಕ್ಕೆ ವ್ಯವಹಾರದಲ್ಲಿ ನೀವು ಲಾಭ ಕಾಣಬಹುದು. ಇದಕ್ಕೆ ಅನಿಲ್ ಪರಿಹಾರ್ ಉತ್ತಮ ನಿದರ್ಶನ,
 

Anil Parihar Making Different Product Form Cow Dung Cake
Author
First Published Jan 16, 2023, 2:08 PM IST

ಏನಾದ್ರೂ ಹೊಸದನ್ನು ಮಾಡ್ಬೇಕೆಂದು ಪ್ರತಿಯೊಬ್ಬ ಮನುಷ್ಯ ಆಲೋಚನೆ ಮಾಡ್ತಾನೆ. ಕೆಲವರು ತಮ್ಮ ಕನಸಿಗೆ ನೀರೆರೆದು ಅದನ್ನು ಚಿಗುರಿಸ್ತಾರೆ. ಅದ್ರಲ್ಲಿ ಅನಿಲ್ ಪರಿವಾರ್ ಎಂಬ ವ್ಯಕ್ತಿ ಕೂಡ ಒಬ್ಬರು. ಹೊಸತನ್ನು ಮಾಡಬೇಕೆಂಬ ಅವರ ಬಯಕೆ ಈಡೇರಿದೆ. ಇಂಜಿನಿಯರಿಂಗ್ ಮುಗಿಸಿದ್ರು ಸಂಬಳದ ಕೆಲಸಕ್ಕೆ ಹೋಗ ಅನಿಲ್, ಸ್ಥಳೀಯ ವಸ್ತು ಹಾಗೂ ಯಂತ್ರಗಳ ಸಹಾಯದಿಂದ ಸಾಧನೆ ಮಾಡಿದ್ದಾರೆ. ಇಂದು ಅನಿಲ್ ಪರಿವಾರ್ ತಯಾರಿಸುವ ವಿನೂತನ ವಸ್ತುಗಳ ಬಗ್ಗೆ ಮಾಹಿತಿ ನೀಡ್ತೇವೆ.

ಅನಿಲ್ ಪರಿಹಾರ್, ಮೂಲತಃ ಮಧ್ಯಪ್ರದೇಶ (Madhya Pradesh) ದ ಉಜ್ಜಯಿನಿಯ ನಿವಾಸಿ. ಉಜ್ಜಯಿನಿಯಲ್ಲಿ ಅನಿಲ್ ಮೆಕ್ಯಾನಿಕಲ್ (Mechanical ) ಇಂಜಿನಿಯರಿಂಗ್ ಓದಿದ್ದರು. ಅಧ್ಯಯನ ಮುಗಿದ ನಂತರ ಕೆಲಸವು ಯಂತ್ರ (Machine) ಮತ್ತು ಸಲಕರಣೆ ವಿನ್ಯಾಸದ ಹುದ್ದೆಯಲ್ಲಿ ಕೆಲಸ ಪ್ರಾರಂಭಿಸಿದ್ರು. ಆಫ್ರಿಕಾ, ಯೆಮೆನ್, ಉಗಾಂಡಾ ಸೇರಿದಂತೆ ಹಲವು ದೇಶಗಳ ದೊಡ್ಡ ಕಂಪನಿ (Company) ಗಳಲ್ಲಿ ಕೆಲಸ ಮಾಡಿದರು. ಎಲ್ಲವೂ ಸರಿಯಿದ್ರೂ ವಿಭಿನ್ನವಾಗಿ ಏನನ್ನಾದ್ರೂ ಮಾಡಬೇಕೆಂಬ ಆಸೆಯಿಂದ ಕೆಲಸ ಬಿಟ್ಟು ವಿದೇಶದಿಂದ ಭಾರತಕ್ಕೆ ಮರಳಿದರು ಅನಿಲ್.

ಹೀಗೆ ಶುರುವಾಯ್ತು ಪ್ರಯಾಣ : 2004 ರಲ್ಲಿ ಅನಿಲ್ ಪರಿಹಾರ್ ಉತ್ತರಾಖಂಡ್‌ನ ಪೌರಿ ಗರ್ವಾಲ್ ಜಿಲ್ಲೆಯ ಕೋಟ್‌ದ್ವಾರಕ್ಕೆ ಬಂದು  ವಾಸಿಸಿದ್ರಂತೆ. ನಾಲ್ಕೈದು ವರ್ಷಗಳ ಹಿಂದೆ ಬಡ ರೈತನೊಬ್ಬ ಅನಿಲ್ ಬಳಿ ಬಂದು ಹಸುವಿನ ಸಗಣಿ ಸಹಾಯದಿಂದ ದಿಮ್ಮಿ ತಯಾರಿಸುವ ಯಂತ್ರ ಬೇಕೆಂದು ಕೇಳಿದನಂತೆ. ಅನಿಲ್ ಪಂಜಾಬ್ ನ ಕಂಪನಿಯೊಂದರ ಕ್ಯಾಟಲಾಗ್ ನೋಡಿದಾಗ ಅದ್ರ ಬೆಲೆ 65 ಸಾವಿರ ತೋರಿಸಿತ್ತಂತೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದ ಅನಿಲ್, ಈ ಯಂತ್ರವನ್ನು ಗರಿಷ್ಠ 20-25 ಸಾವಿರದಲ್ಲಿ ತಯಾರಿಸಬಹುದು ಎಂದು ಅಂದಾಜಿಸಿದರಂತೆ. ಅಲ್ಲದೆ ತಾವೇ ತಯಾರಿಸುವ ನಿರ್ಧಾರಕ್ಕೆ ಬಂದರಂತೆ. ಅಲ್ಲಿಂದ ಯಂತ್ರ ತಯಾರಿಕೆ ವ್ಯವಹಾರ ಶುರುವಾಯ್ತು ಎನ್ನುತ್ತಾರೆ ಅನಿಲ್.  

Women Finance: ಮಹಿಳೆಗೂ ಇರಲಿ ಬ್ಯಾಂಕಿಂಗ್ ಜ್ಞಾನ

ದನದ ಸಗಣಿಯಿಂದ ಆರಂಭವಾದ ಸ್ವಯಂ ಉದ್ಯೋಗ : ಇಷ್ಟೇ ಅಲ್ಲ, ಬೆಂಕಿಗಾಗಿ, ಕಾಡುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಯಲಾಗುತ್ತಿದೆ ಎಂಬುದನ್ನು ಗಮನಿಸಿದ ಅನಿಲ್ ಹಸುವಿನ ಸಗಣಿಯಿಂದ ದಿಮ್ಮೆ ಮಾಡಲು ಮುಂದಾದರು. ಅವರು ಗ್ರಾಮದ ಸ್ಮಶಾನದಲ್ಲಿ ಯಂತ್ರವನ್ನು ಸ್ಥಾಪಿಸಿದರು. ಅಲ್ಲಿ ಹಸುವಿನ ಸಗಣಿಯಿಂದ ಮಾಡಿದ ದಿಮ್ಮೆಯನ್ನು ಅಂತ್ಯಕ್ರಿಯೆಗೆ ಬಳಸಲಾಯಿತು. ಇಲ್ಲಿಂದಲೇ ಹಸುವಿನ ಸಗಣಿಯಿಂದ ಉತ್ಪನ್ನಗಳ ಉತ್ಪಾದನೆ ಆರಂಭವಾಗಿತ್ತು.

ಸಣ್ಣ ಉಪಾಯದಿಂದ ಆರಂಭವಾದ ಈ ಪಯಣ ಈಗ ದೊಡ್ಡದಾಗಿದೆ. ಅನಿಲ್ ಕೆಲಸಕ್ಕೆ ಮೆಚ್ಚುಗೆ ಸಿಗ್ತಾ ಹೋಯ್ತು. ಅವರ ಆಸಕ್ತಿ ಹೆಚ್ಚುತ್ತಲೇ ಹೋಯ್ತು. ಇದಾದ ಬಳಿಕ ವಿವಿಧ ಅಚ್ಚುಗಳ ಯಂತ್ರಗಳನ್ನು ತಯಾರಿಸಿದ್ರು ಅನಿಲ್. ಸದ್ಯ ಹಸುವಿನ ಸಗಣಿಯಿಂದ 12 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಇದರಲ್ಲಿ ಡೈಯಾಗಳು, ಧೂಪದ್ರವ್ಯದ ತುಂಡುಗಳು, ಪೆನ್ ಸ್ಟ್ಯಾಂಡ್‌ಗಳು, ಮಡಿಕೆಗಳು, ವಿಗ್ರಹಗಳು, ಸಾಬೂನುಗಳು ಸೇರಿವೆ. 

1 ಕೆಜಿ ಹಸುವಿನ ಸಗಣಿಯಲ್ಲಿ ಸುಮಾರು 110 ದೀಪಗಳನ್ನು ತಯಾರಿಸಲಾಗುತ್ತದೆ. ಹಳ್ಳಿಯಲ್ಲಿನ ಸೀಮಿತ ಉದ್ಯೋಗಾವಕಾಶಗಳಿಂದಾಗಿ ಹೆಚ್ಚಿನ ಯುವಕರು ನಗರಗಳಿಗೆ ವಲಸೆ ಹೋಗುತ್ತಾರೆ. ಕೇವಲ 7 ಸಾವಿರದಿಂದ ಸ್ವಯಂ ಉದ್ಯೋಗ ಆರಂಭಿಸಿದರೆ ತಿಂಗಳಿಗೆ 35 ರಿಂದ 40 ಸಾವಿರ ರೂಪಾಯಿ ಸುಲಭವಾಗಿ ಗಳಿಸಬಹುದು ಎನ್ನುತ್ತಾರೆ ಅನಿಲ್. ಗುಡ್ಡಗಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಗೋವಿನ ಸಗಣಿ ಸುಲಭವಾಗಿ ದೊರೆಯುತ್ತದೆ. ಒಂದು ದೀಪ ತಯಾರಿಸಲು ಗರಿಷ್ಠ 25 ರಿಂದ 30 ಪೈಸೆ ಬೇಕಾಗುತ್ತದೆ. ಆದರೆ ಒಂದು ದೀಪವನ್ನು ಮಾರುಕಟ್ಟೆಯಲ್ಲಿ ಒಂದರಿಂದ ಐದು ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ಒಂದು ಕಿಲೋಗ್ರಾಂ ಹಸುವಿನ ಸಗಣಿಯಿಂದ ನಾಲ್ಕು ಮಡಿಕೆಗಳನ್ನು ಮಾಡಬಹುದು ಎನ್ನುತ್ತಾರೆ ಅನಿಲ್. 

Business Ideas : ಆಧಾರ್ ಕಾರ್ಡ್ ಕೇಂದ್ರ ತೆರೆದು ಗಳಿಕೆ ಶುರು ಮಾಡಿ

ಹೆಚ್ಚಾದ ಬೇಡಿಕೆ : ಆರಂಭದಲ್ಲಿ ಯಂತ್ರ ಹಾಗೂ ಸಗಣಿ ಉತ್ಪನ್ನಕ್ಕೆ ಹೆಚ್ಚು ಬೇಡಿಕೆಯಿರಲಿಲ್ಲ. ಆದ್ರೀಗ ಬೇಡಿಕೆ ಹೆಚ್ಚಾಗ್ತಿದೆ.  ಉತ್ತರಾಖಂಡ ಹೊರತುಪಡಿಸಿ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಗೋವಿನ ಸಗಣಿಯಿಂದ ತಯಾರಿಸಿದ ಉತ್ಪನ್ನಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ಅಲ್ಲದೆ, ಅನೇಕ ಜನರು ಯಂತ್ರಗಳನ್ನು ಖರೀದಿಸಿ ಸ್ವತಃ ಉದ್ಯೋಗ ಶುರು ಮಾಡಿದ್ದಾರೆ.  ಅನಿಲ್ ಅನೇಕರಿಗೆ ನೆರವಾಗಿದ್ದಾರೆ. ತಮಿಳುನಾಡಿನ ಮಹಿಳೆಯೊಬ್ಬಳಿಗೆ ದೀಪ ತಯಾರಿಸುವ ಯಂತ್ರ ಕಳುಹಿಸಿಕೊಟ್ಟಿದ್ದರು. ಆಕೆ ಈಗ ತಿಂಗಳಿಗೆ 30 – 40 ಸಾವಿರ ರೂಪಾಯಿ ಗಳಿಸುತ್ತಾಳೆಂದು ಅನಿಲ್ ಹೇಳಿದ್ದಾರೆ. 

Follow Us:
Download App:
  • android
  • ios