Asianet Suvarna News Asianet Suvarna News

Success Story : ಕೊರೋನಾದಲ್ಲಿ ಕೆಲಸ ಕಳ್ಕೊಂಡ ನಾರಿಗೆ ಕೈ ಹಿಡಿದಿದ್ದು ಗೋವು

ಮಹಿಳೆ ಸ್ವಾವಲಂಭಿಯಾಗೋದು ಬಹಳ ಮುಖ್ಯ. ಒಂದಾಗಿ ಕೆಲಸ ಮಾಡಿದ್ರೆ ಯಶಸ್ಸು ಬೇಗ ಸಿಗುತ್ತದೆ. ಇದಕ್ಕೆ ಅನೇಕ ಮಹಿಳಾ ಸಂಘಟನೆಗಳನ್ನು ನಾವು ಉದಾಹರಣೆಯಾಗಿ ನೀಡ್ಬಹುದು. ಈಗ ಮತ್ತೊಂದು ಮಹಿಳಾ ಸಂಘ ಗಮನ ಸೆಳೆದಿದೆ.
 

Success Story Working Women Got Unemployed In Corona Started Own Work And Earning Rupees
Author
First Published Mar 14, 2023, 5:27 PM IST

ಕೊರೊನಾ ಅನೇಕರ ಬದುಕನ್ನು ನರಕ ಮಾಡಿದ್ರೆ ಮತ್ತೆ ಕೆಲವರ ಬದುಕನ್ನು ಹಸನು ಮಾಡಿದೆ. ಕೊರೊನಾ ಸಂದರ್ಭದಲ್ಲಿ ಖಾಲಿ ಕುಳಿತುಕೊಂಡ ಕೆಲವರು ಹೊಸ ಉದ್ಯೋಗ ಶುರು ಮಾಡಿ ಯಶಸ್ವಿಯಾಗಿದ್ದಾರೆ. ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಮಹಿಳೆಯರು ಒಂದಾಗಿ ದುಡಿಮೆಯ ಹಾದಿ ಕಂಡುಕೊಂಡಿದ್ದಾರೆ. ಅದಕ್ಕೆ ಈ ಮಹಿಳಾ ಸಂಘಟನೆ ಕೂಡ ಉತ್ತಮ ನಿದರ್ಶನ. 

ಮನೆ (House) ಕೆಲಸ (Work)  ಮಾಡ್ತಿದ್ದ ಮಹಿಳೆಯರಿಗೆ ಕೊರೊನಾ ಸಂದರ್ಭದಲ್ಲಿ ಕೆಲಸವಿಲ್ಲದಂತಾಗಿತ್ತು. ಕೊರೊನಾ (Corona) ಭಯದಿಂದ ಯಾರೂ ಮನೆಗೆ ಕರೆಯುತ್ತಿರಲಿಲ್ಲವಂತೆ. ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಮಹಿಳೆಯರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಕಾಲಹರಣ ಮಾಡದೆ ಏನಾದ್ರೂ ಮಾಡ್ಬೇಕೆಂಬ ಛಲದೊಂದಿಗೆ ಒಂದಾದ ಮಹಿಳೆಯರು ಕೆಲಸ ಶುರು ಮಾಡಿ ಈಗ ಯಶಸ್ಸಿನ ಹಾದಿಯಲ್ಲಿದ್ದಾರೆ. ಅನೇಕ ಮಹಿಳೆ (Woman)ಯರಿಗೆ ಸ್ಫೂರ್ತಿಯಾಗಿದ್ದಾರೆ. ಅಷ್ಟಕ್ಕೂ ಆ ಮಹಿಳೆಯರು ಯಾರು ಮತ್ತೆ ಅವರು ಯಾವ ಕೆಲಸದಿಂದ ಗಳಿಕೆ ಶುರು ಮಾಡಿದ್ದಾರೆ ಎಂಬುದರ ವಿವರ ಇಲ್ಲಿದೆ.

BENGALURU: ಸಮೋಸಾ ಮಾರಿ ದಿನಕ್ಕೆ 12ಲಕ್ಷ ರೂ. ಗಳಿಸುತ್ತಿದ್ದಾರೆ ಈ ಮಹಿಳಾ ಉದ್ಯಮಿ!

ಸ್ವಾವಲಂಭಿ ಮಹಿಳೆಯರು : ಮಧ್ಯಪ್ರದೇಶದ ಸಾಗರ್ ನ ಖುರೈ ಬ್ಲಾಕ್‌ನ ವ್ಯಾಪ್ತಿಯಲ್ಲಿ ವಾಸಿಸುವ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಅಲ್ಲೊಂದು ಮಹಿಳಾ ಸಂಘವಿದೆ. ಅದಕ್ಕೆ ಮಹಿಳೆಯರು ರಾಧ ಸ್ವಯಂ ಸಂಜೋತಾ ಸಂಘಟನೆ ಎಂದು ಹೆಸರಿಟ್ಟಿದ್ದಾರೆ. ಜಮುನಾಭಾಯಿ ಪಾಲ್ ಈ ಗೋಶಾಲೆಯ ಮುಖ್ಯಸ್ಥೆಯಾಗಿದ್ದಾರೆ.

ಮಹಿಳೆಯರ ನೆರವಿಗೆ ಬಂದ ಗೋಶಾಲೆ : ಮಹಿಳೆಯರು ಒಂದಾಗಿ  ಗೋಶಾಲೆಯ ಮೂಲಕ ಗಳಿಕೆ ಶುರು ಮಾಡಿದ್ದಾರೆ. ಗೋಶಾಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಹಸುಗಳಿವೆ. 

ಗೋ ಶಾಲೆ ಮೂಲಕ ಮಹಿಳೆಯರು ಗಳಿಸ್ತಿರೋದೆಷ್ಟು? : ಬೇರೆಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಆರಂಭದಲ್ಲಿ ಗೋವಿನ ಸಗಣಿಯನ್ನು ಮಾರಾಟ ಮಾಡುತ್ತಿದ್ದರಂತೆ. ನಂತ್ರ ಅಲ್ಲಿಯೇ ತರಕಾರಿ ಬೆಳೆಯಲು ಶುರು ಮಾಡಿದರಂತೆ. ಅದಾದ್ಮೇಲೆ ಗೋಕಾಷ್ಟವನ್ನು ಅವರು ತಯಾರಿಸ್ತಾರೆ. ಇಷ್ಟೇ ಅಲ್ಲ ಅವರು ಸಗಣಿಯಿಂದ ಗಣೇಶ ಹಾಗೂ ದೀಪವನ್ನು ತಯಾರಿಸುತ್ತಾರೆ. ಆರಂಭದಲ್ಲಿ ಇವರೇ ಇದನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರಂತೆ. ಈಗ ಮಹಿಳೆಯರು ಸಗಣಿಯಿಂದ ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಅನೇಕ ಆರ್ಡರ್ ಗಳು ಬರ್ತಿದೆ.

ಯಾರೀಕೆ ಮಾಯಾ ಟಾಟಾ? ರತನ್ ಟಾಟಾ ಉತ್ತರಾಧಿಕಾರಿ ಇವರೇನಾ?

ಗೋಶಾಲೆಯಲ್ಲಿ ಬರುವ ಹಾಲನ್ನು ಮಹಿಳೆಯರು ಪರಸ್ಪರ ಹಂಚಿಕೊಳ್ಳುತ್ತಾರೆ. ಗೋಶಾಲೆಯಲ್ಲಿಯೇ ನರ್ಸರಿ ಶುರು ಮಾಡಿರುವ ಈ ಮಹಿಳೆಯರು ಈಗ ಸ್ವಾವಲಂಭಿಯಾಗಿದ್ದಾರೆ. ಪ್ರತಿ ತಿಂಗಳು ಈ ಮಹಿಳೆಯರು 5 ಸಾವಿರ ರೂಪಾಯಿಯಿಂದ 7 ಸಾವಿರ ರೂಪಾಯಿವರೆಗೆ ಗಳಿಸ್ತಾರೆ. ಈ ಗಳಿಕೆ ಅವರಿಗೆ ಖುಷಿ ನೀಡಿದೆ. ಇದು ಅವರ ಹಾಗೂ ಅವರ ಮಕ್ಕಳ ಖರ್ಚಿಗೆ ಸಾಕಾಗ್ತಿದೆ. ಮಕ್ಕಳ ಶಿಕ್ಷಣಕ್ಕೆ ಈ ಹಣ ನೆರವಾಗ್ತಿದೆ ಎನ್ನುತ್ತಾರೆ ಮಹಿಳೆಯರು.

ಅನೇಕ ಮಹಿಳೆಯರಿಗೆ ಈ ಸಂಘಟನೆ ಸ್ಫೂರ್ತಿ : ಈ ಮಹಿಳೆಯರ ದೃಢ ಸಂಕಲ್ಪ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಇವರಿಂದ ಸುತ್ತಮುತ್ತಲಿನ ಅನೇಕ ಮಹಿಳೆಯರು ಸ್ಪೂರ್ತಿಗೊಂಡಿದ್ದಾರೆ. ಕೆಲವರು ಈ ಸಂಘಟನೆ ಜೊತೆ ಕೈಜೋಡಿಸಿದ್ದಾರೆ. ಮಹಿಳೆಯರು ಸರ್ಕಾರದ ಗಮನವನ್ನು ಸೆಳೆದಿದ್ದಾರೆ.  ಗೋಶಾಲೆ ನಡೆಸುತ್ತಿರುವ ಮಹಿಳೆಯರು ಸ್ವಾವಲಂಬಿಯಾಗಲು ವಿವಿಧ ಆಯಾಮಗಳಲ್ಲಿ ತರಬೇತಿ ನೀಡಲಾಗ್ತಿದೆ. ಮೆಹಂದಿ ಕೋನ್, ದೀಪಗಳು, ವಿಗ್ರಹಗಳು, ಗೋಷ್ಟಕ ಉತ್ಪನ್ನಗಳನ್ನು ತಯಾರಿಸೋದು ಹೇಗೆ ಎಂಬ ಬಗ್ಗೆ ಮಹಿಳೆಯರಿಗೆ ಸಾಕಷ್ಟು ತರಬೇತಿ ನೀಡಲಾಗಿದೆ. ಅವರು ಈ ಎಲ್ಲ ವಸ್ತುಗಳನ್ನು ತಯಾರಿಸಿ, ಮಾರಾಟ ಮಾಡ್ತಿದ್ದಾರೆ ಎಂದು ಖುರೈ ಪಂಚಾಯತ್ ಸಿಇಒ ಮೀನಾ ಕಶ್ಯಪ್ ಹೇಳಿದ್ದಾರೆ. ಈ ಎಲ್ಲ ಉತ್ಪನ್ನಗಳಿಂದ ಮಹಿಳೆಯರ ಆದಾಯ ಹೆಚ್ಚುತ್ತಿದೆ. ಅವರಿಂದ ಪ್ರೋತ್ಸಾಹಗೊಂಡ ಕೆಲ ಮಹಿಳಾ ಗುಂಪುಗಳು ಕೂಡ ದಿನಬಳಕೆಯ ವಸ್ತುಗಳನ್ನು ತಯಾರಿಸಲು ಆಸಕ್ತಿ ತೋರಿವೆ ಎಂದು ಮೀನಾ ಹೇಳಿದ್ದಾರೆ. 
 

Follow Us:
Download App:
  • android
  • ios