ಚೀನಾ ಮತ್ತು ಸಿಂಗಾಪುರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ, ಇದು ಏಷ್ಯಾದಾದ್ಯಂತ ಹೊಸ ಅಲೆಯ ಆತಂಕವನ್ನು ಹುಟ್ಟುಹಾಕಿದೆ. 

2020ರಲ್ಲಿ ಇಡೀ ಜಗತ್ತನೇ ತಲ್ಲಣಗೊಳಿಸಿದ ಕೋವಿಡ್ 19 ಕಾಯಿಲೆ ಈಗ ಮತ್ತೆ ಚೀನಾದಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಕೇವಲ ಚೀನಾ ಮಾತ್ರವಲ್ಲದೇ ದಕ್ಷಿಣ ಏಷ್ಯಾದ ರಾಷ್ಟ್ರವಾದ ಸಿಂಗಾಪುರದಲ್ಲಿಯೂ ಕೋವಿಡ್‌ ಸೋಂಕುಗಳು ಹೆಚ್ಚಾಗಿವೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗಾಪುರದ ಆರೋಗ್ಯ ಅಧಿಕಾರಿಗಳು ಏಷ್ಯಾದಾದ್ಯಂತ ಕೋವಿಡ್‌ನ ಹೊಸ ಅಲೆ ಪಸರಿಸುವ ಸಂಭವ ಇದೆ ಎಂದು ಎಚ್ಚರಿಸಿದ್ದಾರೆ. ಕೋವಿಡ್‌ ಹೆಚ್ಚಳವೂ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದರ ಸೂಚನೆಯಾಗಿರಬಹುದು ಹೀಗಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಅಲ್ಲಿನ ಅಧಿಕಾರಿಗಳು ಜನರನ್ನು ಒತ್ತಾಯಿಸುತ್ತಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಚೀನಾದ ಪ್ರಮುಖ ಆಡಳಿತ ನಗರದವಾಗಿರುವ ಹಾಂಗ್ ಕಾಂಗ್‌ನ ಆರೋಗ್ಯ ರಕ್ಷಣಾ ಕೇಂದ್ರದ ಸಾಂಕ್ರಾಮಿಕ ರೋಗಗಳ ಶಾಖೆಯ ಮುಖ್ಯಸ್ಥ ಆಲ್ಬರ್ಟ್ ಔ ಈ ಬಗ್ಗೆಸ್ಥಳೀಯ ಮಾಧ್ಯಮಗಳಿಗೆ ಮಾತನಾಡಿ, ನಗರದಲ್ಲಿ ಕೋವಿಡ್ -19 ಪ್ರಕರಣಗಳು ಸಾಕಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕೋವಿಡ್ ಪ್ರಕರಣಗಳ ಸಂಖ್ಯೆ ಉತ್ತುಂಗದಲ್ಲಿದೆ. ಮೇ 3 ರವರೆಗೆ ವರದಿಯಾದಂತೆ 31 ಗಂಭೀರ ಸ್ಥಿತಿಯ ಪ್ರಕರಣಗಳು ದಾಖಲಾಗಿವೆ ಹಾಗೂ ಸಾವಿನ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ.

ಈ ಪ್ರಸ್ತುತ ಪ್ರಕರಣಗಳ ಹೆಚ್ಚಳದ ಸಂಖ್ಯೆ ಹಿಂದಿನ ಎರಡು ವರ್ಷಗಳಲ್ಲಿ ಪ್ರಕರಣಗಳಿಗಿಂತ ಹೆಚ್ಚಲ್ಲದಿದ್ದರೂ ಇದು ವೈರಸ್ ತೀವ್ರವಾಗಿಹರಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಹಾಗೆಯೇ ಇತ್ತೀಚೆಗೆ ಇಲ್ಲಿಕೊಳಚೆ ನೀರಿನಲ್ಲೂ ಕೋವಿಡ್-19 ವೈರಸ್ ಪತ್ತೆಯಾಗಿದೆ ಮತ್ತು ಐದು ವರ್ಷಗಳ ಹಿಂದೆ ಜಗತ್ತನ್ನೇ ಸ್ತಬ್ಧಗೊಳಿಸಿದ ಈ ರೋಗದ ಲಕ್ಷಣಗಳೊಂದಿಗೆ ಹೆಚ್ಚಿನ ಜನರು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುತ್ತಿದದಾರೆ ಎಂದು ವರದಿಯಾಗಿದೆ. 

ಸಿಂಗಾಪುರದಲ್ಲಿಯೂ ಕೋವಿಡ್ ಪ್ರಕರಣಗಳ ಹೆಚ್ಚಳ
ಏಷ್ಯಾದ ಮತ್ತೊಂದು ಜನದಟ್ಟಣೆಯ ನಗರವಾದ ಸಿಂಗಾಪುರದಲ್ಲಿಯೂ ಕೋವಿಡ್ -19 ಪ್ರಕರಣಗಳ ಹೆಚ್ಚಳ ವರದಿಯಾಗಿದೆ. ದೇಶದ ಆರೋಗ್ಯ ಸಚಿವಾಲಯವು ಈ ಮೇ ತಿಂಗಳಲ್ಲಿ ಸುಮಾರು ಒಂದು ವರ್ಷದ ನಂತರ ಇದೇ ಮೊದಲ ಬಾರಿಗೆ ಕೋವಿಡ್ ಬಗ್ಗೆ ಮಾಹಿತಿ ನೀಡಿದೆ. ಮೇ 3 ಕ್ಕೆ ಕೊನೆಗೊಂಡ ವಾರದಲ್ಲಿ ಕೋವಿಡ್ -19 ಪ್ರಕರಣಗಳು ಶೇ. 28% ರಷ್ಟು ಹೆಚ್ಚಾಗಿದೆ. ಇದು ಹಿಂದಿನ ವಾರಕ್ಕಿಂತ ಸುಮಾರು 14,200 ಸಂಖ್ಯೆಗೆ ತಲುಪಿದೆ. ಹಾಗೆಯೇ ಕೋವಿಡ್ -19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಶೇಖಡಾ 30% ರಷ್ಟು ಹೆಚ್ಚಾಗಿದೆ.

ನಿರ್ದಿಷ್ಟ ಏರಿಕೆ ಕಂಡುಬಂದಾಗ ಮಾತ್ರ ಸಿಂಗಾಪುರ ಪ್ರಕರಣಗಳ ಸಂಖ್ಯೆಯನ್ನು ವರದಿ ಮಾಡುತ್ತಿದೆ. ಜನಸಂಖ್ಯೆಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರ ಪ್ರತಿಫಲನವಾಗಿರಬಹುದು ಆದರೆ ಹೊಸ ವೈರಸ್ ತಳಿಗಳು ಹೆಚ್ಚು ಸಾಂಕ್ರಾಮಿಕ ಮತ್ತು ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ಸೂಚಿಸಿದೆ.

ಏಷ್ಯಾದಾದ್ಯಂತ, ಕೋವಿಡ್ -19 ಸೋಂಕುಗಳು ತಿಂಗಳುಗಳಿಂದ ಹೆಚ್ಚುತ್ತಿವೆ ಮತ್ತು ಕಾಲಕಾಲಕ್ಕೆ ಸೋಂಕಿನ ಅಲೆಗಳು ಮರುಕಳಿಸುತ್ತಿವೆ. ಹೀಗಾಗಿ ಆರೋಗ್ಯ ಅಧಿಕಾರಿಗಳು ಪ್ರತಿಯೊಬ್ಬರೂ ತಮ್ಮ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ನೆನಪಿಸುತ್ತಿದ್ದಾರೆ, ವಿಶೇಷವಾಗಿ ಹೆಚ್ಚಿನ ಅಪಾಯದಲ್ಲಿರುವವರಿಗೆ ಬೂಸ್ಟರ್ ಚುಚ್ಚುಮದ್ದುಗಳನ್ನು ಪಡೆಯುವಂತೆ ಮನವಿ ಮಾಡಿದ್ದಾರೆ.

ಬೇಸಿಗೆಯಲ್ಲಿ ಕೋವಿಡ್ -19 ಪ್ರಕರಣಗಳಲ್ಲಿನ ಇತ್ತೀಚಿನ ಏರಿಕೆಯು, ಇತರ ವೈರಸ್‌ಗಳು ಸಾಮಾನ್ಯವಾಗಿ ದುರ್ಬಲಗೊಂಡಿರುವುದರಿಂದ, ಬೇಸಿಗೆಯಲ್ಲೂ ಕೋವಿಡ್ ಸಾಂಕ್ರಾಮಿಕವಾಗಿ ಉಳಿಯುತ್ತದೆ ಎಂಬುದನ್ನು ತೋರಿಸುತ್ತದೆ. ಹಾಂಗ್ ಕಾಂಗ್‌ನ ಪಾಪ್ ತಾರೆ ಈಸನ್ ಚಾನ್ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡುಬಂದಿದ್ದು, ಹೀಗಾಗಿ ಅವರು ತೈವಾನ್ ಸಂಗೀತ ಕಚೇರಿಗಳನ್ನು ಮುಂದೂಡಿದ್ದಾರೆ ಎಂದು ಅವರ ಅಧಿಕೃತ ಚೀನಾದ ಸಾಮಾಜಿಕ ಮಾಧ್ಯಮ ಖಾತೆ ವೀಬೊದಲ್ಲಿ ತಿಳಿಸಿದ್ದಾರೆ

ಚೀನಾ ಕೂಡ ಕೋವಿಡ್‌ನ ಹೊಸ ಅಲೆಯನ್ನು ಅನುಭವಿಸುತ್ತಿದೆ ಇದು ಕಳೆದ ಬೇಸಿಗೆಗಿಂತ ಹೆಚ್ಚಾಗುವವ ನಿರೀಕ್ಷೆಯಿದೆ. ಮೇ 4 ರವರೆಗಿನ ಐದು ವಾರಗಳಲ್ಲಿ ಚೀನಾದ ಜನರಲ್ಲಿ ಕೋವಿಡ್ ಪರೀಕ್ಷಾ ಪಾಸಿಟಿವ್ ದರವು ದ್ವಿಗುಣಗೊಂಡಿದೆ. ಹಾಗೆಯೇ ಈ ವರ್ಷ ಥೈಲ್ಯಾಂಡ್‌ನ ರೋಗ ನಿಯಂತ್ರಣ ಇಲಾಖೆಯಿಂದ ಎರಡು ಪ್ರಮುಖ ಕೋವಿಡ್ ಏಕಾಏಕಿ ಪ್ರಕರಣಗಳು ವರದಿಯಾಗಿವೆ.