ನವದೆಹಲಿ(ಅ.13): ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಬರೋಬ್ಬರಿ 18,006 ಟನ್‌ನಷ್ಟು ಕೋವಿಡ್‌-19ಗೆ ಸಂಬಂಧಿಸಿದ ತ್ಯಾಜ್ಯ ಉತ್ಪತ್ತಿಯಾಗಿದೆ. ಈ ಪೈಕಿ, ಈವರೆಗೆ ಅತಿ ಹೆಚ್ಚು ಸೋಂಕು ದಾಖಲಾದ ಸೆಪ್ಟೆಂಬರ್‌ ತಿಂಗಳೊಂದರಲ್ಲೇ 5500 ಟನ್‌ನಷ್ಟು ವೈದ್ಯಕೀಯ ತ್ಯಾಜ್ಯ ಸಂಗ್ರಹವಾಗಿದೆ.

ಇದನ್ನು ದೇಶಾದ್ಯಂತ ಇರುವ 198 ವೈದ್ಯಕೀಯ ತ್ಯಾಜ್ಯ ಘಟಕದ ಮೂಲಕ ಸೂಕ್ತ ರೀತಿಯಲ್ಲಿ ನಿರ್ವಹಿಸಲಾಗಿದೆ ಎಂಬ ಮಾಹಿತಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ನೀಡಿದೆ.

ಮಹಾ ನಂ.1: ಕೋವಿಡ್‌ ತ್ಯಾಜ್ಯ ಉತ್ಪತ್ತಿಯಲ್ಲಿ ಮಹಾರಾಷ್ಟ್ರ ನಂ.1 ಸ್ಥಾನದಲ್ಲಿದೆ. ಅತಿ ಹೆಚ್ಚು ಸೋಂಕಿತರು ಮತ್ತು ಸಾವು ದಾಖಲಾದ ಮಹಾರಾಷ್ಟ್ರದಲ್ಲಿ ಈವರೆಗೆ 3587 ಟನ್‌ಗಳಷ್ಟುತ್ಯಾಜ್ಯ ಸಂಗ್ರಹವಾಗಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು (1737 ಟನ್‌), ಗುಜರಾತ್‌ (1638 ಟನ್‌), ಕೇರಳ (1516), ಉತ್ತರಪ್ರದೇಶ (1432 ಟನ್‌), ನವದೆಹಲಿ (1400 ಟನ್‌) ಮತ್ತು ಕರ್ನಾಟಕ (1380 ಟನ್‌) ರಾಜ್ಯಗಳಿವೆ.

ಏನೇನು ತ್ಯಾಜ್ಯ?

ಈ ಬೃಹತ್‌ ಪ್ರಮಾಣದ ಕೋವಿಡ್‌ ನಿರುಪಯುಕ್ತ ವಸ್ತುಗಳಲ್ಲಿ ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಶೂ ಕವರ್‌, ಗ್ಲೌಸ್‌, ಟಿಷ್ಯು, ರಕ್ತದಿಂದ ಕಲುಷಿತವಾದ ಹಾಗೂ ಡ್ರೆಸ್ಸಿಂಗ್ಸ್‌ಗೆ ಸಂಬಂಧಿಸಿದ ವಸ್ತುಗಳಾದ ಪ್ಲಾಸ್ಟರ್‌ ಕಾಸ್ಟ್‌$್ಸ, ಹತ್ತಿ, ಬಾಡಿ ಫä್ಲ್ಯಯಿಡ್‌, ರಕ್ತದ ಚೀಲಗಳು, ಸೂಜಿಗಳು ಮತ್ತು ಸಿರಂಜ್‌್ಸಗಳು ಪ್ರಮುಖವಾದವುಗಳಾಗಿವೆ.