20ರ ಆಸುಪಾಸಿನಲ್ಲಿ ಮದುವೆಯಾಗಿದೆ. ವಯಸ್ಸು 30 ದಾಟುವುದರೊಳಗೆ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಈಗ ವಯಸ್ಸು 40 ದಾಟಿದೆ. ಆದರೆ ಈ ದಂಪತಿ ಯುವ ಸಮೂಹವನ್ನೇ ನಾಚಿಸಿದ್ದಾರೆ. ಪೋಷಕರ ರೀತಿ ಇದ್ದ ಈ ಜೋಡಿ ಇದೀಗ ಮಾಡೆಲ್ ರೀತಿ ಬದಲಾಗಿದ್ದಾರೆ.
ಲಂಡನ್(ಮೇ.13) ಮದುವೆ, ಮಕ್ಕಳಾದ ಬಳಿಕ ಬಹುತೇಕರ ಬ್ಯೂಟಿ ಕಾನ್ಸೆಪ್ಟ್ ಮುಗಿದು ಬಿಡುತ್ತೆ. ಮಕ್ಕಳ ಆರೈಕೆ,ಪಾಲನೆ, ಜವಾಬ್ದಾರಿ ನಡುವೆ ತಮ್ಮ ಬ್ಯೂಟಿ ಬಗ್ಗೆ ಫಿಟ್ನೆಸ್ ಬಗ್ಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಇನ್ನು ಈಗಿನ ಲೈಫ್ ಸ್ಟೈಲ್, ಆಹಾರ, ಆರೋಗ್ಯಗಿಂದ 30 ದಾಟಿದಾಗಲೇ 50ರ ದಾಟಿದವರಂತೆ ಆಗುತ್ತಾರೆ. ಆದರೆ ಇಲ್ಲೊಂದು ಜೋಡಿ ನಿಮಗೆ ರೋಲ್ ಮಾಡೆಲ್ ಆಗಬಹದು. ಕಾರಣ ಈ ಜೋಡಿ ಮದುವೆಯಾದ ವಯಸ್ಸು 20ರ ಆಸುಪಾಸು. ಇನ್ನು 30 ದಾಟುವುದರೊಳಗೆ ಒಂದಲ್ಲ, ಇಬ್ಬರು ಮಕ್ಕಳ ಪೋಷಕರಾಗಿದ್ದರು. ಯಾವಾಗ ವಯಸ್ಸು 40 ದಾಟಿತೋ ಈ ದಂಪತಿ ಸಂಪೂರ್ಣ ಬದಲಾಗಿದ್ದಾರೆ. ಮಾಡೆಲ್ ರೀತಿ ಬದಲಾಗಿದ್ದಾರೆ. ಫಿಟ್ನೆಸ್ ಕಾಪಾಡಿಕೊಂಡು ಸಂಪೂರ್ಣವಾಗಿ ಬದಲಾಗಿದ್ದರೆ. ಮದುವೆಯಾದಾಗ ತೆಗೆದ ಫೋಟೋಗೋ, ಈಗಿನ ಫೋಟೋಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿದೆ.
ರಜನಿ ಸಿಂಗ್ ಜೋಡಿಯ ಮಹತ್ತರ ಬದಲಾವಣೆ
ಭಾರತೀಯ ಮೂಲದ ರಜನಿ ಸಿಂಗ್ ಲಂಡನ್‌ನಲ್ಲಿ ನೆಲೆಸಿದ್ದಾರೆ. ರಜನಿ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ. ಎಲ್ಲರ ಗಮನಸೆಳೆದಿದೆ. ರಜನಿ ಸಿಂಗ್ ತಮ್ಮ ಮದುವೆಯಿಂದ ಹಿಡಿದು ಇಲ್ಲೀವರೆಗಿನ ಪ್ರಮುಖ ಘಟ್ಟಗಳ ಫೋಟೋವನ್ನು ಒಟ್ಟೂಗೂಡಿಸಿ ವಿಡಿಯೋ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಇವರ ಬದಲಾವಣೆ ಹಲವರ ಮೆಚ್ಚುಗೆಗೆ ಕಾರಣವಾಗಿದೆ.
ಹೆಣ್ಮಕ್ಕಳೇ ಎಚ್ಚರ..ಲೋಷನ್, ಶಾಂಪೂ, ಸೋಪಿನಲ್ಲೂ ಕ್ಯಾನ್ಸರ್ ಕಾರಕ ಅಂಶ ಪತ್ತೆ!
40 ದಾಟಿದ ಬಳಿಕ ಮಾಡೆಲ್ ರೀತಿ ಬದಲಾದ ಜೋಡಿ
2003ರಲ್ಲಿ ರಜನಿ ಸಿಂಗ್ ಮದುವೆಯಾಗಿದ್ದಾರೆ. ಭಾರತೀಯ ಮೂಲದ ವ್ಯಕ್ತಿ ಜೊತೆ ಭಾರತದಲ್ಲಿ ಮದುವೆಯಾಗಿದ್ದಾರೆ. ಬಳಿಕ ಲಂಡನ್‌ಗೆ ತೆರಳಿದ್ದಾರೆ. ಮದುವೆಯಾಗುವಾಗ ಅಂದು ರಜನಿ ಸಿಂಗ್ ವಯಸ್ಸು 23. ರಜನಿ ಸಿಂಗ್ ಗಂಡನ ಜೊತೆಯಲ್ಲಿ ಲಂಡನ್‌ಗೆ ಶಿಫ್ಟ್ ಆಗಿದ್ದಾರೆ. ಮದುವೆಯಾಗುವ ವೇಳೆ ಇಬ್ಬರು ಕೂಡ ಯಾವುದೇ ಫಿಟ್ನೆಸ್ ಫಾಲೋ ಮಾಡಿಲ್ಲ. ಈ ಕುರಿತು ಯೋಚನೆ ಕೂಡ ಮಾಡಿಲ್ಲ. ವಯಸ್ಸು 30 ದಾಟುವುದರೊಳಗೆ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಪೋಷಕರ ಜವಾಬ್ದಾರಿ, ಮಕ್ಕಳ ಶಾಲೆ ಸೇರಿದಂತೆ ಹಲವು ಕಾರಣಗಳಿಂದ ಹೆಚ್ಚಿನವರು ತಮ್ಮ ಬಗ್ಗೆ ಕಾಳಜಿ, ಆರೈಕೆ ಕಡಿಮೆಯಾಗುತ್ತದೆ. ಆದರೆ ಈ ಜೋಡಿ ಮಕ್ಕಳ ಆರೈಕೆ, ಪಾಲನೆ ಜೊತೆಗೆ ತಮ್ಮ ಫಿಟ್ನೆಸ್ ಕುರಿತು, ಬ್ಯೂಟಿ ಕುರಿತು ಗಮನ ಹರಿಸಿದ್ದು 40 ದಾಟಿದ ಬಳಿಕ.
ವಯಸ್ಸು 40 ದಾಟಿದ ಬಳಿಕ ರಜನಿ ಸಿಂಗ್ ಹಾಗೂ ಪತ್ನಿ ಇಬ್ಬರು ಜಿಮ್ ವರ್ಕೌಟ್ ಆರಂಭಿಸಿದ್ದಾರೆ. ಇಬ್ಬರು ಫಿಟ್ ಆಗಿದ್ದಾರೆ. ಎಲ್ಲರಂತೆ ಪೋಷಕರಾಗಿದ್ದ ಇವರು ಮಾಡೆಲ್ ರೀತಿಯಲ್ಲಿ ಬದಲಾಗಿದ್ದಾರೆ. ಇತ್ತ ಬ್ಯೂಟಿ ಹೆಚ್ಚಾಗಿದೆ. ಇದೀಗ ಯುವ ಸಮೂಹವನ್ನೇ ನಾಚಿಸುವಂತೆ ಇವರು ಬದಲಾಗಿದ್ದಾರೆ. ಇವರ ಅಂದು ಹಾಗೂ ಇಂದು ಫೋಟೋಗಳ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಹಲವರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ವಯಸ್ಸು ರಿವರ್ಸ್ ಗೇರ್‌ನಲ್ಲಿ ಓಡುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಮಕ್ಕಳಾದ ಮೇಲೆ ಪರಿಸ್ಥಿತಿ ಬದಲಾಗುತ್ತದೆ. ಆದರೆ ಈ ಜೋಡಿ ಎಲ್ಲವನ್ನು ನಿಭಾಯಿಸಿದ್ದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದು ಹೇಗೆ ಸಾಧ್ಯ? ನಾವು ಜಿಮ್ ವರ್ಕೌಟ್ ಮಾಡುತ್ತಿದ್ದೇವೆ, ಆದರೆ ಈ ರೀತಿಯ ಬದಲಾವಣೆ ಸಾಧ್ಯವಾಗಿಲ್ಲ ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


