ಈ ಎರಡು ರೂಲ್ಸ್ ಪಾಲಿಸಿದ್ರೆ ಫಿಟ್ & ಫೈನ್ ಆಗಿರ್ಬಹುದು: ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಫಿಟ್ನೆಸ್ ನೋಡಿ ಹೊಟ್ಟೆ ಉರಿದುಕೊಳ್ಳುವವರು ಅನೇಕರಿದ್ದಾರೆ. ಅವರಂತೆ ನೀವೂ ಆಗ್ಬಹುದು. ಅದಕ್ಕೆ ಸಣ್ಣ ಸಣ್ಣ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ಅಕ್ಷಯ್ ಕುಮಾರ್ ಹೇಳಿರೋ ಎರಡೇ ಎರಡು ನಿಯಮ ರೂಢಿಸಿಕೊಂಡ್ರೂ ಸಾಕು.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೇವಲ ನಟನೆ ಹಾಗೂ ಅತ್ಯಧಿಕ ಸಂಭಾವನೆ ಪಡೆಯುವ ನಟ ಮಾತ್ರ ಅಲ್ಲ. ಫಿಟ್ನೆಸ್ ಸೇರಿದಂತೆ ಸುಖಕರ ದಾಂಪತ್ಯ, ಆರೋಗ್ಯಕರ ಜೀವನ ಶೈಲಿ ಸೇರಿದಂತೆ ಅನೇಕ ವಿಷ್ಯಕ್ಕೆ ಅಕ್ಷಯ್ ಕುಮಾರ್, ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ವಯಸ್ಸು 55 ಆದ್ರೂ ಫಿಟ್ನೆಸ್ (Fitness ) ವಿಷ್ಯದಲ್ಲಿ ಅಕ್ಷಯ್ ಯುವ ಕಲಾವಿದರನ್ನು ಹಿಂದಿಕ್ಕಿದ್ದಾರೆ. ಸ್ಟಂಟ್ ಮಾಡೋದ್ರಲ್ಲಿ ಎತ್ತಿದ ಕೈ ಎನ್ನಿಸಿಕೊಂಡಿರುವ ಅಕ್ಷಯ್ ಕುಮಾರ್ ತನ್ನ ಆರೋಗ್ಯ (Health) ಕರ ಜೀವನಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಬೊಜ್ಜು, ಅನಾರೋಗ್ಯದಿಂದ ದೂರವಿರಲು ಜನರು ಏನು ಮಾಡ್ಬೇಕು ಎಂಬುದನ್ನು ಕೂಡ ಅಕ್ಷಯ್ ಹೇಳಿದ್ದಾರೆ.
ಈಗಿನ ದಿನಗಳಲ್ಲಿ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ರಾತ್ರಿ 12 ಗಂಟೆಯಾದ್ರೂ ನಿದ್ರೆ ಮಾಡದ ಜನರು ಇದನ್ನು ಫ್ಯಾಷನ್ ಎಂದುಕೊಂಡಿದ್ದಾರೆ. ದಿನದ ಅವರ ಈ ಅಭ್ಯಾಸ ಅವರ ಅರಿವಿಗೆ ಬರದಂತೆ ಅವರ ಆರೋಗ್ಯ ಹಾಳು ಮಾಡಿ, ಆಯಸ್ಸು ಕಡಿಮೆ ಮಾಡ್ತಿದೆ. ವೀಕೆಂಡ್ ಬಂತೆಂದ್ರೆ ಪಾರ್ಟಿ, ಹಬ್ಬ ಬಂದ್ರೆ ಪಾರ್ಟಿ, ಹುಟ್ಟುಹಬ್ಬ ಬಂದ್ರೆ ಪಾರ್ಟಿ ಎನ್ನುವ ಜನರು ಅಕ್ಷಯ್ ಕುಮಾರ್ ನೋಡಿ ಕಲಿಯೋದು ಸಾಕಷ್ಟಿದೆ.
HEALTH TIPS: ಒಮೆಗಾ 3 ಫ್ಯಾಟಿ ಆಸಿಡ್ ಹೆಚ್ಚಾದ್ರೆ ಅಡ್ಡ ಪರಿಣಾಮ ಇರೋದೆ
ಲೇಟ್ ನೈಟ್ ಪಾರ್ಟಿಗೆ ಹೋಗಲ್ಲ ಅಕ್ಷಯ್ : ಕಲಾವಿದರು ಅದ್ರಲ್ಲೂ ಬಾಲಿವುಡ್ ಸ್ಟಾರ್ಸ್, ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡೋರು ಲೇಟ್ ನೈಟ್ ಪಾರ್ಟಿ ಮಾಡೋದು ಕಾಮನ್ ಅಂತಾ ನಾವಂದುಕೊಂಡಿದ್ದೇವೆ. ಆದ್ರೆ ಅದಕ್ಕೆ ಅಪವಾದವೆನ್ನುವಂತೆ ಕೆಲ ಕಲಾವಿದರಿದ್ದಾರೆ. ಅದ್ರಲ್ಲಿ ಅಕ್ಷಯ್ ಕುಮಾರ್ ಕೂಡ ಸೇರುತ್ತಾರೆ. ಅಕ್ಷಯ್ ಕುಮಾರ್ ಲೇಟ್ ನೈಟ್ ಪಾರ್ಟಿಗೆ ಹೋಗೋದಿಲ್ಲ. ಪಾರ್ಟಿ ಆರೋಗ್ಯಕ್ಕೆ ಒಳ್ಳೆಯದಲ್ಲ,ಅದಕ್ಕೆ ಹೋಗ್ಬೇಡಿ ಅಂತಾ ನಾನು ಹೇಳೋದಿಲ್ಲ. ಆದರೆ ಅದರ ಅಗತ್ಯ ನನಗಿಲ್ಲ. ನಾನು ಪ್ರತಿ ದಿನ ರಾತ್ರಿ ಒಂಭತ್ತು ಗಂಟೆಯಿಂದ ಒಂಭತ್ತುವರೆಯೊಳಗೆ ನಿದ್ರೆ ಮಾಡ್ತೇನೆ ಎನ್ನುತ್ತಾರೆ ಅಕ್ಷಯ್.
Personality Tips: ಹಿಡಿದ ಕೆಲಸವನ್ನ ಬಿಡೋಲ್ಲ ಅಂತೀರಾ? ಕೆಲವೊಮ್ಮೆ ಬಿಟ್ನೋಡಿ, ಅದ್ರಿಂದ ಲಾಭವೇ ಹೆಚ್ಚು
ಸೂರ್ಯೋದಯ ನೋಡದ ದಿನವೇ ಇಲ್ಲ : ರಾತ್ರಿ ತಡವಾಗಿ ಮಲಗಿದ ಮೇಲೆ ಬೆಳಿಗ್ಗೆ ಬೇಗ ಏಳೋದು ಕಷ್ಟ. ಹಾಗಾಗೇ ನಮ್ಮ ಯುವಜನತೆ ಸೂರ್ಯೋದಯ ನೋಡೋದೇ ಬಹಳ ಅಪರೂಪ. ಸೂರ್ಯ ನೆತ್ತಿಗೆ ಬಂದ್ಮೇಲೆ ಏಳೋರು ಅನೇಕರಿದ್ದಾರೆ. ಆದ್ರೆ ಅಕ್ಷಯ್ ಇದ್ರಲ್ಲೂ ನಿಯಮ ಪಾಲನೆ ಮಾಡ್ತಾರೆ. ನಿಮಗೆ ಅಚ್ಚರಿ ಆಗ್ಬಹುದು, ಇಲ್ಲಿಯವರೆಗೆ ಅಕ್ಷಯ್ ಸೂರ್ಯೋದಯ ನೋಡಿರದ ದಿನವೇ ಇಲ್ವಂತೆ. ಪ್ರತಿ ದಿನ ನಾಲ್ಕು ಗಂಟೆಗೆ ಏಳ್ತಾರೆ ಅಕ್ಷಯ್.
ನಿಮ್ಮ ಆರೋಗ್ಯ ನಿಮ್ಮ ಕೈನಲ್ಲಿದೆ : ಬೊಜ್ಜು ಬಂದಿದೆ, ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ, ಆ ರೋಗ ಬಂದಿದೆ, ಈ ರೋಗ ಬಂದಿದೆ, ಅದಕ್ಕೆಲ್ಲ ಈಗಿನ ಆಹಾರ ಕಾರಣ, ವಾತಾವರಣ ಕಾರಣ ಎಂದು ದೂರುವ ಬದಲು ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬೇಕು ಎನ್ನುವುದು ಅಕ್ಷಯ್ ಸಲಹೆ. ದಿನದಲ್ಲಿ ಒಂದು ಗಂಟೆ ನಿಮ್ಮ ದೇಹಕ್ಕಾಗಿ ನೀವು ಮೀಸಲಿಡೋದು ಸಾಧ್ಯವಿಲ್ಲವೇ ಅಂತಾ ಪ್ರಶ್ನೆ ಮಾಡುವ ಅಕ್ಷಯ್, ರಾತ್ರಿ ಊಟ ಹೇಗಿರಬೇಕು ಎಂಬುದನ್ನು ಕೂಡ ಹೇಳಿದ್ದಾರೆ.
ಕೆಲಸದ ಕಾರಣಕ್ಕೆ ಬಹುತೇಕರಿಗೆ ರಾತ್ರಿ 9 ಗಂಟೆಯಾದ್ರೂ ಊಟ ಮಾಡಲು ಸಾಧ್ಯವಾಗೋದಿಲ್ಲ. ಇನ್ನು ಕೆಲವರು ರಾತ್ರಿ 11 ಗಂಟೆ ಮೇಲೆ ಊಟ ಮಾಡಿ ಮಲಗುವವರಿದ್ದಾರೆ. ಅಕ್ಷಯ್ ಪ್ರಕಾರ, ಸಂಜೆ ಆರುವರೆ ನಂತ್ರ ನಮ್ಮ ದೇಹಕ್ಕೆ ಆರೋಗ್ಯದ ಅಗತ್ಯವಿರೋದಿಲ್ಲ. ನಮ್ಮ ದೇಹ ಇಷ್ಟೊಂದು ಆಹಾರವನ್ನು ಕೇಳೋದೇ ಇಲ್ಲ ಎನ್ನುತ್ತಾರೆ ಅಕ್ಷಯ್. ದಿನಕ್ಕೆ ಒಂದು ಗಂಟೆ ವ್ಯಾಯಾಮ, ಸಂಜೆ ಆರುವರೆ ಒಳಗೆ ಆಹಾರ ಸೇವನೆ ಈ ಎರಡು ರೂಲ್ಸ್ ಫಾಲೋ ಮಾಡಿ, ನಿಮ್ಮ ಆರೋಗ್ಯ ಹೇಗೆ ಸುಧಾರಿಸುತ್ತೆ ನೋಡಿ ಎನ್ನುತ್ತಾರೆ ಅಕ್ಷಯ್ ಕುಮಾರ್.