Health Tips: ಒಮೆಗಾ 3 ಫ್ಯಾಟಿ ಆಸಿಡ್ ಹೆಚ್ಚಾದ್ರೆ ಅಡ್ಡ ಪರಿಣಾಮ ಇರೋದೆ
ಯಾವುದೇ ಪೋಷಕಾಂಶ ದೇಹಕ್ಕೆ ಹೆಚ್ಚಾಗಬಾರದು. ಅದರಿಂದಲೂ ಸಾಕಷ್ಟು ರೀತಿಯಲ್ಲಿ ಹಾನಿಯಾಗುತ್ತದೆ. ದೇಹಕ್ಕೆ ಅತ್ಯಗತ್ಯವಾಗಿರುವ ಒಮೆಗಾ 3 ಫ್ಯಾಟಿ ಆಸಿಡ್ ಕೂಡ ಹೀಗೆಯೇ. ಇದನ್ನು ಒಳಗೊಂಡ ಮಾತ್ರೆಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ ಕೆಲವು ರೀತಿಯ ಅಡ್ಡ ಪರಿಣಾಮಗಳೂ ಉಂಟಾಗಬಹುದು.
ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಪೈಕಿ ಒಮೆಗಾ 3 ಫ್ಯಾಟಿ ಆಸಿಡ್ ಗೆ ಭಾರೀ ಮಹತ್ವದ ಸ್ಥಾನವಿದೆ. ಇದರ ವಿಶೇಷತೆಯೆಂದರೆ, ಆಹಾರ ಪದಾರ್ಥಗಳಲ್ಲಿ ಸುಲಭವಾಗಿ ಲಭ್ಯವಾಗುವುದಿಲ್ಲ. ಮೀನು, ವಾಲ್ ನಟ್, ಕೆಲವು ಬೀಜಗಳು ಮತ್ತು ಸಸ್ಯಮೂಲದ ಎಣ್ಣೆಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಇರುತ್ತದೆ. ಮಾನವ ಕೋಶಗಳ ಮೆಂಬ್ರೇನ್ ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ದೇಹವಿಡೀ ವ್ಯಾಪಿಸಿರುತ್ತದೆ. ಹಾರ್ಮೋನುಗಳ ತಯಾರಿಕೆಯ ಆರಂಭಿಕ ಹಂತವೇ ಇಲ್ಲಿಂದ ಶುರುವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯಿಂದ ಹಿಡಿದು ಹೃದಯದ ಗೋಡೆಗಳಿಗೆ ವಿಶ್ರಾಂತಿ ನೀಡುವ ಕೆಲಸದವರೆಗೆ ಇದರದ್ದೇ ಪಾತ್ರ ಹೆಚ್ಚು. ಆದರೆ, ಆಹಾರದಲ್ಲಿ ಅಧಿಕ ಪ್ರಮಾಣದಲ್ಲಿ ಲಭ್ಯವಾಗದ್ದರಿಂದ ಕೆಲವರು ಇದನ್ನು ಬಾಹ್ಯವಾಗಿ ಮಾತ್ರೆಗಳ ರೂಪದಲ್ಲಿ ಸೇವನೆ ಮಾಡುತ್ತಾರೆ. ಉರಿಯೂತ ಕಡಿಮೆಗೊಳಿಸಿ ಹೃದಯವನ್ನು ಕಾಪಾಡುವ ಒಮೆಗಾ 3 ಫ್ಯಾಟಿ ಆಸಿಡ್ ಅನ್ನು ಸಪ್ಲಿಮೆಂಟ್ ಮಾದರಿಯಲ್ಲಿ ಸೇವಿಸುವವರಿದ್ದಾರೆ. ಆದರೆ, ಇದರಿಂದ ಕೆಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಅತ್ಯಗತ್ಯ ಪೋಷಕಾಂಶವಾಗಿದ್ದರೂ ದೇಹಕ್ಕೆ ಹೆಚ್ಚಾದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
• ರಕ್ತ ತೆಳುವಾಗುವುದು (Blood Thinning)
ಒಮೆಗಾ 3 ಫ್ಯಾಟಿ ಆಸಿಡ್ (Omega 3 Fatty Acids) ನಲ್ಲಿ ನೈಸರ್ಗಿಕವಾಗಿ ರಕ್ತ ತೆಳುವಾಗಿಸುವ ಅಥವಾ ಹೆಪ್ಪುರೋಧಕ ಎಂದು ಕರೆಯುವ ಅಂಶ ಇರುತ್ತದೆ. ಕಾರ್ಡಿಯೋವಾಸ್ಕ್ಯುಲಾರ್ (Cardiovascular) ಸಮಸ್ಯೆಗಳಿಗೆ ಇದು ಪೂರಕವಾಗಿದೆ. ಆದರೆ, ವಿವಿಧ ಸಮಸ್ಯೆಗಳಿಗೆ ಈಗಾಗಲೇ ರಕ್ತ ಹೆಪ್ಪುರೋಧಕ ಮಾತ್ರೆಗಳನ್ನು ಸೇವನೆ ಮಾಡುತ್ತಿದ್ದಾಗ ಮತ್ತು ರಕ್ತಸೋರಿಕೆಯಾಗುವ ಸಮಸ್ಯೆ ಹೊಂದಿದ್ದಾಗ ಒಮೆಗಾ 3 ಫ್ಯಾಟಿ ಆಸಿಡ್ ತೆಗೆದುಕೊಂಡರೆ ಸಮಸ್ಯೆಯಾಗಬಹುದು. ಬ್ಲೀಡಿಂಗ್ (Bleeding) ಹೆಚ್ಚುವ, ಸಣ್ಣಪುಟ್ಟ ಏಟಾದಾಗ ರಕ್ತ ಸೋರಿಕೆಯ ಅಪಾಯ ಹೆಚ್ಚಾಗಬಹುದು.
Health Tips: ಮಕ್ಕಳು ಹಲ್ಲು ಕಡೀತಿದ್ದಾರೆಂದ್ರೆ ಏನೋ ಅನಾರೋಗ್ಯ ಇರುತ್ತೆ, ಏನದು?
• ಜೀರ್ಣಾಂಗದ ಸಮಸ್ಯೆ (Digestion)
ಒಮೆಗಾ 3 ಫ್ಯಾಟಿ ಆಸಿಡ್ ತೆಗೆದುಕೊಂಡಾಗ ಕೆಲವರು ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು (Problems) ಅನುಭವಿಸಿದ್ದಾರೆ. ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ (Gastric) ಹಾಗೂ ಭೇದಿಯಂತಹ ಸಮಸ್ಯೆ ಉಂಟಾಗುವುದೂ ಇದೆ. ಅಡ್ಡ ಪರಿಣಾಮಗಳನ್ನು ತಡೆಯಲು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು.
• ವಿಟಮಿನ್ ಎ ಅಂಶ (Vitamin A)
ಒಮೆಗಾ 3 ಫ್ಯಾಟಿ ಆಸಿಡ್ ಗಳ ಪೈಕಿ ಕೆಲವು ಆಸಿಡ್ ಗಳು ವಿಟಮಿನ್ ಎ ಪ್ರಮಾಣವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ಮೀನಿನ ಎಣ್ಣೆಯಲ್ಲಿ (Cad Live Oil) ಈ ಅಂಶ ಹೆಚ್ಚಿರುವುದು ಸಾಮಾನ್ಯ. ವಿಟಮಿನ್ ಎ ಪ್ರಮಾಣ ದೇಹಕ್ಕೆ ಅಧಿಕವಾದರೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ತಲೆಸುತ್ತುವುದು, ವಾಕರಿಕೆ ಸೇರಿದಂತೆ ಲಿವರ್ ಗೆ ಹಾನಿಯಾಗುವುದೂ ಇದೆ. ಹೀಗಾಗಿ, ತೆಗೆದುಕೊಳ್ಳುವ ಮುನ್ನ ಈ ಬಗ್ಗೆ ಅರಿವು ಹೊಂದುವುದು ಅಗತ್ಯ.
• ಮೀನಿನ ವಾಸನೆಯ ಗಾಳಿ (Burping)
ಸಾಮಾನ್ಯವಾಗಿ ಒಮೆಗಾ 3 ಅಂಶ ಹೊಂದಿರುವ ಮೀನಿನ ಎಣ್ಣೆಯನ್ನು ಔಷಧದ ರೂಪದಲ್ಲಿ ಸೇವನೆ ಮಾಡಿದರೆ, ಬಳಿಕ ಅದೇ ವಾಸನೆಯ ಗಾಳಿ ಅಥವಾ ತೇಗು ಹೊಟ್ಟೆಯಿಂದ ಬರುತ್ತದೆ. ಇದರಿಂದ ಸಾಕಷ್ಟು ಜನ ತೀವ್ರ ಹಿಂಸೆಗೆ ಒಳಗಾಗುತ್ತಾರೆ.
• ಔಷಧದ (Medicines) ಜತೆ ಸ್ಪಂದನೆ
ಕೆಲವು ಔಷಧಗಳ ಜತೆ ಒಮೆಗಾ 3 ಆಸಿಡ್ ವರ್ತಿಸುತ್ತದೆ. ರಕ್ತದೊತ್ತಡದ ಔಷಧಗಳು, ರಕ್ತ ತೆಳುವಾಗಿಸುವಿಕೆಯ ಔಷಧ, ಉರಿಯೂತ ತಡೆ ಔಷಧಗಳೊಂದಿಗೆ ವರ್ತಿಸುತ್ತದೆ. ಹೀಗಾಗಿ, ಒಮೆಗಾ 3 ಆಸಿಡ್ ಅನ್ನು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಇಲ್ಲದೇ ತೆಗೆದುಕೊಳ್ಳಬಾರದು.
ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಅಧಿಕ; ಯಾಕೆ ಹೀಗೆ?
• ಅಲರ್ಜಿ (Allergy)
ಅಪರೂಪದ ಪ್ರಕರಣಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ನಿಂದ ಅಲರ್ಜಿಯೂ ಉಂಟಾಗುತ್ತದೆ. ಕೆಲವರಿಗೆ ಸಮುದ್ರ ಆಹಾರದ (Sea Food) ಅಲರ್ಜಿ ಇರುತ್ತದೆ. ಅಂಥವರಿಗೆ ಸಮಸ್ಯೆಯಾಗುತ್ತದೆ. ಅಂಥವರು ಸಮುದ್ರ ಮೂಲದ ಒಮೆಗಾ 3 ಬಿಟ್ಟು ಪಾಚಿಯಂತಹ ಸಸ್ಯಮೂಲದ (Plant Based) ಅಂಶವನ್ನು ಬಳಸುವುದು ಸೂಕ್ತ.