Personality Tips: ಹಿಡಿದ ಕೆಲಸವನ್ನ ಬಿಡೋಲ್ಲ ಅಂತೀರಾ? ಕೆಲವೊಮ್ಮೆ ಬಿಟ್ನೋಡಿ, ಅದ್ರಿಂದ ಲಾಭವೇ ಹೆಚ್ಚು

ಹಿಡಿದ ಕೆಲಸವನ್ನು ಕೈ ಬಿಡದೇ ಮುನ್ನುಗ್ಗಬೇಕು, ಅದು ಧೀರರ ಲಕ್ಷಣ ಎನ್ನುವಂತಹ ಮಾತುಗಳನ್ನು ಬಾಲ್ಯದಿಂದಲೂ ಕೇಳಿಕೊಂಡು ಬೆಳೆದಿದ್ದೇವೆ. ಹೀಗಾಗಿ, ಸೋಲು ಎದುರಾಗುವುದಿದ್ದರೂ ಸಹ ಹಿಡಿದ ಕೆಲಸದಿಂದ ಹಿಂದೆ ಸರಿಯದಿರುವವರನ್ನು ಕಾಣುತ್ತೇವೆ. ಆದರೆ, ಕೆಲವೊಮ್ಮೆ ಆ ಕಾರ್ಯವನ್ನು ಬಿಟ್ಟುಬಿಡುವುದೇ ನಿಮ್ಮ ಜೀವನದ ಮಹತ್ವದ ಕ್ಷಣವಾಗಬಹುದು.
 

Personality Tips Some times quitting is best option in life

ಯಾವುದಾದರೂ ಕೆಲಸಕ್ಕೆ ಮುಂದಾಗಿ, ಅದನ್ನು ಅಷ್ಟಕ್ಕೇ ಕೈ ಬಿಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಎನ್ನುವುದು ಸಾಮಾನ್ಯವಾಗಿ ಎಲ್ಲರ ನಂಬಿಕೆ. ಹೀಗೆ ಮಾಡುವುದರಿಂದ ಘನತೆ ಹಾಳಾಗುತ್ತದೆ ಎನ್ನುವ ಭಾವನೆ ಎಲ್ಲರಲ್ಲಿದೆ. ಬಾಲ್ಯದಿಂದಲೂ ಪಾಲಕರು ಮಕ್ಕಳಿಗೆ ಇದನ್ನೇ ಹೇಳುತ್ತ ಬೆಳೆಸಿರುತ್ತಾರೆ. ಹೀಗಾಗಿ, ಎಂಥದ್ದೇ ಪರಿಸ್ಥಿತಿಯಲ್ಲೂ ಮುಂದಾದ ಕೆಲಸಕ್ಕೆ ಹಿಂದೇಟು ಹಾಕದೇ ಮುನ್ನುಗ್ಗುತ್ತೇವೆ. ಅಲ್ಲಿ ಸೋಲಾದರೂ ಸರಿ! ಆದರೆ, ಹೀಗೆ ಘನತೆಗೆ ಕಟ್ಟುಬಿದ್ದು ಮುಂದಾಗುವ ಮುನ್ನ ಕೆಲವೊಮ್ಮೆ ಆ ಕೆಲಸವನ್ನು ಬಿಟ್ಟುಬಿಡುವುದು ಉತ್ತಮ ಅಭ್ಯಾಸ ಎನ್ನುವುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಮುಂದೆ ಸೋಲು ಅನುಭವಿಸಿ ನೋವು ಉಣ್ಣುವುದಕ್ಕಿಂತ ಕೆಲಸವನ್ನು ಕೈ ಬಿಡುವುದು ಎಷ್ಟೋ ವಾಸಿ. “ಕೆಲಸವನ್ನು ಕೈ ಬಿಟ್ಟವರು’ ಎನ್ನುವ ಲೇಬಲ್ ನಿಂದ ದೂರವಾಗುವುದು ಎಲ್ಲರ ಆಯ್ಕೆ. ಅದು ಸಂಬಂಧವಾಗಿರಬಹುದು, ಉದ್ಯೋಗವಾಗಿರಬಹುದು, ಹವ್ಯಾಸವಾಗಿರಬಹುದು. ನಮ್ಮ ಆಯ್ಕೆಗಳ ಮೇಲೆ ಸ್ವಾತಂತ್ರ್ಯ ಮತ್ತು ನಿಯಂತ್ರಣ ಬರುವುದೇ ಆಗ. ಆದರೆ, ತೀರ ಇದೇ ಒಂದು ಅಭ್ಯಾಸವಾಗಬಾರದು ಅಷ್ಟೆ. ಆಗ ಖಂಡಿತವಾಗಿ ಯಾರೂ ನಿಮ್ಮನ್ನು ನಂಬುವುದಿಲ್ಲ. ಆದರೆ, ಅಗತ್ಯವಿರುವಾಗ ಹಿಡಿದ ಕೆಲಸವನ್ನು ಕೈ ಬಿಡುವುದೇ ಎಷ್ಟೋ ಬಾರಿ ಶ್ರೇಯಸ್ಕರವಾಗಬಹುದು. ಅಂತಹ ಸನ್ನಿವೇಶದಲ್ಲೂ ಹಿಂದೇಟು ಹಾಕಬಾರದು.
•    ದೈಹಿಕ (Physical) ಮತ್ತು ಮಾನಸಿಕ (Mental) ಆರೋಗ್ಯ ಸೂಕ್ಷ್ಮವಾದಾಗ
ಎಷ್ಟೋ ವರ್ಷಗಳಿಂದ ನೀವು ಬಯಸಿರುವ ಉದ್ಯೋಗ (Job) ದೊರೆಯುತ್ತದೆ ಎಂದುಕೊಳ್ಳಿ. ಆದರೆ, ಕೆಲವೇ ದಿನಗಳಲ್ಲಿ ಅಲ್ಲಿರುವ ಸಮಸ್ಯೆಗಳು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ (Health) ಮೇಲೆ ಪರಿಣಾಮ ಬೀರಲು ಆರಂಭಿಸಿದರೆ ಏನು ಮಾಡುತ್ತೀರಿ? ಇಷ್ಟವಾದ ಕೆಲಸವೆಂದು ಮುಂದುವರಿಯುತ್ತೀರಾ ಅಥವಾ ಕಾಂಟ್ರಾಕ್ಟ್ (Contract) ಅನ್ನು ರದ್ದುಪಡಿಸಿಯಾದರೂ ಅಲ್ಲಿಂದ ಆಚೆಗೆ ಬರುತ್ತೀರಾ? ನಿಮ್ಮ ಜೀವನದ ಮೇಲೆಯೇ ಪರಿಣಾಮ ಬೀರುತ್ತಿರುವ ಉದ್ಯೋಗವನ್ನು ಸ್ವಲ್ಪ ರಿಸ್ಕಾದರೂ (Risk) ಬಿಟ್ಟುಬಿಡುವುದು ಜಾಣತನ. ಮನೆಯವರು, ಸ್ನೇಹಿತರು ಯಾರು ಏನೇ ಹೇಳಿದರೂ ಮುಂದುವರಿಯುವುದು ನಿಮಗೆ ಹಾನಿಯನ್ನು (Loss) ತರಬಹುದು.  

Health Tips: ಬೆನ್ನುನೋವಾ? ನಿಮ್ಮ ಥೋರಾಸಿಕ್‌ ಬೆನ್ನುಮೂಳೆ ಹಾನಿಗೆ ಒಳಗಾಗಿರ್ಬೋದು ಎಚ್ಚರ

•    ಗುರಿ (Goal) ಮತ್ತು ಮೌಲ್ಯಗಳೊಂದಿಗೆ ಹೊಂದಾಣಿಕೆ ಇಲ್ಲ
ನಿಮ್ಮದಲ್ಲದ ಮೌಲ್ಯ (Values) ಮತ್ತು ಗುರಿಗಳನ್ನು ಒಳಗೊಂಡಿರುವ ಕಾರ್ಯದಿಂದ ವಿಮುಖವಾಗುವುದು ಸರಿಯಾದ ವಿಧಾನ. ಮೊದಲು ಅರಿಯದೇ ಯಾವುದೋ ಕಾರ್ಯವನ್ನು ಒಪ್ಪಿಕೊಂಡು, ಬಳಿಕ ಅದು ನಿಮಗೆ ಹೊಂದಾಣಿಕೆಯಾಗುವುದಿಲ್ಲವೆಂದು ತಿಳಿದಾಗಲೂ ಯಾರು ಏನನ್ನುತ್ತಾರೋ ಎಂದು ಅಂಜುವುದರಲ್ಲಿ ಅರ್ಥವಿಲ್ಲ. ನಿಮ್ಮದಲ್ಲದ ಜೀವನವನ್ನು (Life) ನೀವು ಬದುಕಲು ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ಆ ಕಾರ್ಯವನ್ನು ಬಿಟ್ಟುಬಿಡುವುದು ಉತ್ತಮ.

•    ಉತ್ತಮ ಅವಕಾಶಗಳು (Better Opportunity)
ಜೀವನದಲ್ಲಿ ಉತ್ತಮ ಅವಕಾಶಗಳು ಬರುತ್ತಲೇ ಇರುತ್ತವೆ. ಅವುಗಳನ್ನು ಹೊಂದುವುದಕ್ಕಾಗಿ ಪ್ರಯತ್ನಿಸುತ್ತ ಸಾಗಿದರೆ ಅದಕ್ಕೆ ಅಂತ್ಯವೇ ಇರುವುದಿಲ್ಲ, ಯಶಸ್ಸೂ ನಿಮ್ಮದಾಗುವುದಿಲ್ಲ. ಆದರೆ, ಕೆಲವು ಸಮಯದಲ್ಲಿ ಉತ್ತಮ ಅವಕಾಶಕ್ಕಾಗಿ ದೃಢ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಸಂಬಂಧ (Relationship) ಹಳಸಿದ್ದರೂ  ಅದನ್ನು ತೊರೆಯದಿರುವುದು ಸರಿಯಲ್ಲ. ನೀವು ಸಂಬಂಧವನ್ನು  ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದಾದರೆ, ಅದರಲ್ಲಿ ನಿಮಗೆ ನೆಮ್ಮದಿ ದೊರೆಯುತ್ತಿಲ್ಲ ಎಂದಾದರೆ, ಅದರಿಂದ ನಿಮಗೆ ಬರೀ ನೋವೇ ಎಂದಾದರೆ ಆ ಸಂಬಂಧವನ್ನು ಬಿಟ್ಟುಬಿಡುವುದರಲ್ಲಿ ತಪ್ಪಿಲ್ಲ. ಕೆಟ್ಟ ಸಂಬಂಧದಲ್ಲೇ ಇದ್ದುಕೊಂಡು ನೋವನ್ನು ಅನುಭವಿಸುವ ಬದಲು ಧನಾತ್ಮಕ (Positive) ಸಂಬಂಧದ ಹೊಸ ಅವಕಾಶವನ್ನು ಪಡೆದುಕೊಳ್ಳುವುದು ಉತ್ತಮ.

ಸಂಭೋಗಕ್ಕಿಲ್ಲ ವಯಸ್ಸಿನ ಹಂಗು, 60ರ ಹರೆಯದಲ್ಲೂ ಚೆನ್ನಾಗಿಟ್ಟು ಕೊಳ್ಳಿ ಲೈಂಗಿಕ ಜೀವನ

•    ಬೆಳವಣಿಗೆಗೆ ಅಗತ್ಯ (Growth) 
ವ್ಯಕ್ತಿಗತ ಬೆಳವಣಿಗೆಗೆ ಅವಕಾಶವಿಲ್ಲದ ಯಾವುದನ್ನಾದರೂ ಬಿಡುವುದು ಉತ್ತಮ. ನಿಮ್ಮ ಹವ್ಯಾಸವೊಂದು (Habit) ನಿಮ್ಮದೇ ಬೆಳವಣಿಗೆಗೆ ತಡೆ ಒಡ್ಡುತ್ತಿದ್ದರೆ ಅದನ್ನು ಬಿಟ್ಟುಬಿಡುವುದು ಅಗತ್ಯ. ಹಾಗೆಯೇ, ಕೆಟ್ಟ ಪರಿಸರದಿಂದ ದೂರವಾಗುವುದು ಸಹ ಮುಖ್ಯ. ಅದು ಸಂಬಂಧವಾಗಿರಲಿ, ಉದ್ಯೋಗದ ಸ್ಥಳವಾಗಿರಲಿ. 
 

Latest Videos
Follow Us:
Download App:
  • android
  • ios