ದಿನನಿತ್ಯದ ಜೀವನದಲ್ಲಿ ಸರಳ ಬದಲಾವಣೆಗಳಿಂದ ಆರೋಗ್ಯ ವೃದ್ಧಿಸಬಹುದು. ಶುಂಠಿ ನೀರು ದೇಹದಿಂದ ವಿಷ ತೆಗೆದು ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಪ್ರಯೋಜನಗಳು ಹಲವಾರು.
ಈಗಿನ ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದು ಕಡಿಮೆಯಾಗುತ್ತಿದೆ. ನಮ್ಮಲ್ಲಿ ಕೆಲವು ಚಿಕ್ಕ ಪುಟ್ಟ ಅಭ್ಯಾಸಗಳನ್ನ ರೂಡಿಸಿಕೊಳ್ಳುವುದರಿಂದ ಆರೋಗ್ಯವನ್ನ ಉತ್ತಮವಾಗಿ ಇಟ್ಟುಕೊಳ್ಳಬಹುದು. ಕೆಲವು ಚಿಕ್ಕಪುಟ್ಟ ಬದಲಾವಣೆಗಳನ್ನ ಮಾಡಿಕೊಳ್ಳುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗುತ್ತವೆ.ನಾವು ಚಿಕ್ಕವರಿರುವಾಗ ನಮಗೆ ಚಿಕ್ಕ ಕಾಯಿಯೆಗಳು ಬಂದರೂ ಮನೆಯಲ್ಲೇ ಇರುವಂತಹ ಕೆಲವು ವಸ್ತುಗಳನ್ನ ಬಳಸಿ ಆ ಖಾಯಿಲೆಗಳನ್ನ ದೂರಮಾಡಿಕೊಳ್ಳುತ್ತಿದ್ದೇವು.ಆದರೆ ಈಗಿನ ದಿನಗಳಲ್ಲಿ ಚಿಕ್ಕ ಕಾಯಿಲೆಗಳಿಗೂ ಡಾಕ್ಟ್‌ರ್‌ನ್ನ ಸಂಪರ್ಕಿಸುತ್ತೇವೆ.
ಬೆಳಗ್ಗೆ ಉತ್ತಮ ರೀತಿಯಲ್ಲಿ ದಿನವನ್ನು ಪ್ರಾರಂಭಿಸುವುದರಿಂದ ದಿನವಿಡೀ ನಾವು ಉತ್ಸಾಹದಿಂದ ಕೂಡಿರಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇಹವನ್ನು ಆರೋಗ್ಯವಾಗಿಸಲು ಮತ್ತು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸಲು ಸಹಾಯ ಮಾಡುವ ಆಹಾರಗಳ (Food) ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಅದರಲ್ಲೂ ದೇಹದಿಂದ ವಿಷ(Poison)ವನ್ನು ತೆಗೆದು ಹಾಕಲು ಸಹಾಯ ಮಾಡುವ ಪ್ರಮುಖ ಆಹಾರಗಳಲ್ಲಿ ಶುಂಠಿ (Ginger) ಕೂಡ ಒಂದಾಗಿದೆ.ಈ ಸರಳ ಮನೆಮದ್ದು ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಈ ಎಲ್ಲಾ ಗೊಂದಲಗಳಿಗೆ ಉತ್ತರ ಈ ಕೆಳಗಿನಂತಿದೆ.
ಶುಂಠಿ ಆರೋಗ್ಯಕ್ಕೆ ಬಹಳ ಒಳ್ಳೆಯದು.ಬೆಚ್ಚಗಿನ ನೀರಿನೊಂದಿಗೆ ಶುಂಠಿ ರಸವನ್ನು ಬೆರೆಸಿ ಕುಡಿಯುವುದರಿಂದ ಇದು ವಿಷವನ್ನು ತೆಗೆದು ಹಾಕುತ್ತದೆ. ಅಷ್ಟಕ್ಕೂ ಈ ನೀರು ಕುಡಿಯುವುದರಿಂದ ಯಾರಿಗೆ ಹೆಚ್ಚಾಗಿ ಲಾಭ ಸಿಗುತ್ತದೆ? ಅದರಲ್ಲೂ ದೇಹದಿಂದ ವಿಷವನ್ನು ತೆಗೆದು ಹಾಕಲು ಸಹಾಯ ಮಾಡುವ ಪ್ರಮುಖ ಆಹಾರಗಳಲ್ಲಿ ಶುಂಠಿ (Ginger) ಕೂಡ ಒಂದಾಗಿದೆ. ಬೆಚ್ಚಗಿನ ನೀರಿನೊಂದಿಗೆ ಶುಂಠಿ ರಸವನ್ನು ಬೆರೆಸಿ ಕುಡಿಯುವುದರಿಂದ ಇದು ವಿಷವನ್ನು ತೆಗೆದು ಹಾಕುತ್ತದೆ.ಒಂದು ವರದಿ ಪ್ರಕಾರ, ಶುಂಠಿಯಲ್ಲಿ ಉರಿಯೂತ ನಿವಾರಕ ಗುಣಗಳು ಸಮೃದ್ಧವಾಗಿವೆ. ಇದು ದೇಹದಿಂದ ಉರಿಯೂತವನ್ನು ಕಡಿಮೆ ಮಾಡುವ ಕಿಣ್ವಗಳನ್ನು ಹೊಂದಿರುತ್ತದೆ. ಜೊತೆಗೆ ಇದು ಬ್ಯಾಕ್ಟೀರಿಯಾ (Bacteria)ವಿರೋಧಿ ಗುಣಗಳನ್ನು ಹೊಂದಿದೆ, ನಿಮಗೆ ಶೀತ ಮತ್ತು ಕೆಮ್ಮು ಸಮಸ್ಯೆಗಳದ್ದರೆ ಇದನ್ನು ಕುಡಿಯಬಹುದು. ನಿಮಗೆ ಎದೆಯುರಿ ಸಮಸ್ಯೆ ಇದ್ದರೆ, ಈ ಶುಂಠಿ ನೀರು ಅದನ್ನು ತಡೆಗಟ್ಟುತ್ತದೆ.
ಶುಂಠಿಯ ಆರೋಗ್ಯ ಪ್ರಯೋಜನಗಳು! ಸಾಮಾನ್ಯವಾಗಿ ಶುಂಠಿಯನ್ನ ಅಡುಗೆ ಪದಾರ್ಥಳನ್ನ ಮಾಡುವಾಗ ಉಪಯೋಗಿಸುತ್ತೇವೆ. ಶುಂಠಿ ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಶುಂಠಿಯನ್ನು ಮಸಾಲೆ ಪದಾರ್ಥವಾಗಿಯೂ ಬಳಸಲಾಗುತ್ತದೆ. ಇದನ್ನು ಔಷಧವೆಂದು ಸಹ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ನಾವು ಪ್ರತಿದಿನ ನಮ್ಮ ಮನೆಗಳಲ್ಲಿ ಚಹಾ ಮತ್ತು ಇತರ ಭಕ್ಷ್ಯಗಳಿಗೆ ಶುಂಠಿಯನ್ನು ಸೇರಿಸುತ್ತೇವೆ. ಶುಂಠಿಯಿಂದ ಹೆಚ್ಚಿನ ಲಾಭವನ್ನು ಪಡೆಯಲು, ನೀವು ಇದನ್ನು ನೀರಿನೊಂದಿಗೆ ಬೆರೆಸಿ, ಕುದಿಸಿ ಖಾಲಿ ಹೊಟ್ಟೆಯಲ್ಲಿ ಸಹ ಕುಡಿಯಬಹುದು.
ಶುಂಠಿ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳು(Benefits of drinking ginger water) ಗಂಟಲು ನೋವು ನಿವಾರಣೆಗೆ: ಗಂಟಲು ನೋವಿದ್ದರೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಬಹುದು. ಕೆಮ್ಮು ಇದ್ದರೆ ಶುಂಠಿ ನೀರನ್ನು ಸಹ ಕುಡಿಯಬಹುದು. ಇದಲ್ಲದೇ, ನೀವು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ತೂಕ ಇಳಿಸಿಕೊಳ್ಳಲು ಶುಂಠಿ ನೀರನ್ನು ಕುಡಿಯಬಹುದು. ಕ
ರೋಗ ನಿರೋಧಕಗಳು: ಶುಂಠಿಯು ರೋಗ ನಿರೋಧಕ ಶಕ್ತಿಯನ್ನ ಹೊಂದಿದೆ. ಇದರ ನೀರು ದೇಹದಲ್ಲಿನ ಒತ್ತಡದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಪ್ರಮಾಣವೂ ಹೆಚ್ಚಾಗುತ್ತದೆ.
ವಾಕರಿಕೆ ಮತ್ತು ಜೀರ್ಣಕ್ರಿಯೆ: ಬೆಚ್ಚಗಿನ ನೀರು ಮತ್ತು ಶುಂಠಿಯನ್ನು ಒಟ್ಟಿಗೆ ಕುಡಿಯುವುದರಿಂದ ವಾಂತಿ ಮತ್ತು ವಾಕರಿಕೆ ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸರಿಯಾಗಿ ಜೀರ್ಣಕ್ರಿಯೆಯ ಆಗದೇ ಇದ್ದು ಸಮಸ್ ಆಗುತ್ತಿದ್ದರೆ ಅದನ್ನ ನಿಯಂತ್ರಿಸಲು ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಗಂಟಲು ನೋವು ನಿವಾರಣೆಗೆ: ಗಂಟಲು ನೋವಿದ್ದರೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಬಹುದು. ಕೆಮ್ಮು ಇದ್ದರೆ ಶುಂಠಿ ನೀರನ್ನು ಸಹ ಕುಡಿಯಬಹುದು. ಇದಲ್ಲದೇ, ನೀವು ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ತೂಕ ಇಳಿಸಿಕೊಳ್ಳಲು ಶುಂಠಿ ನೀರನ್ನು ಕುಡಿಯಬಹುದು. ದೇಹದಲ್ಲಿನ ಜಲಸಂಚಯನ ಮಟ್ಟವನ್ನು ಹೆಚ್ಚಿಸಲು ನೀವು ಈ ನೀರನ್ನು ಸಹ ಕುಡಿಯಬೇಕು.
ಉರಿಯೂತ ನಿವಾರಕ ಗುಣಗಳು: ಶುಂಠಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಉರಿಯೂತ ಕಡಿಮೆಯಾಗುತ್ತದೆ. ಈ ನೀರನ್ನು ಕುಡಿಯುವುದರಿಂದ ಸ್ನಾಯುಗಳ ಒತ್ತಡ ಮತ್ತು ನೋವು ಕೂಡ ನಿವಾರಣೆಯಾಗುತ್ತದೆ.ಈ ನೀರನ್ನು ಕುಡಿಯುವುದರಿಂದ ಸ್ನಾಯುಗಳ ಒತ್ತಡ ಮತ್ತು ನೋವು ಕೂಡ ನಿವಾರಣೆಯಾಗುತ್ತದೆ.
ಶುಂಠಿ ನೀರು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಇದು ಹೆಚ್ಚು ಉಷ್ಣಾಂಶವನ್ನ ಹೊಂದಿದ್ದು ಹೆಚ್ಚಾಗಿ ಸೇವಿಸಿದರೆ ದೇಹದ ಉಷ್ಣಾಂಶ ಹೆಚ್ಚಾಗುತ್ತದೆ. ಇದು ಎಲ್ಲರಿಗೂ ಸೂಕ್ತವಲ್ಲ.ಅತಿಯಾದ ಗ್ಯಾಸ್ಟ್ರಿಕ್(Gastric) ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿ ನೀರನ್ನು ಕುಡಿಯಬಾರದು.
