ಚಳಿಗೆ ಖುಷಿ ನೀಡುವ ಟೇಸ್ಟಿ ಶುಂಠಿ ಟೀ ಮಾಡೋದು ಹೇಗೆ?
ಶುಂಠಿ ಚಹಾ : ಶುಂಠಿ ಚಹಾ ಕುಡಿಯೋದ್ರಿಂದ ಗಂಟಲಿನ ಕಿಚಿಕಿಚಿ ನಿವಾರಣೆಯಾಗುತ್ತದೆ. ಆದರೆ ಅನೇಕರಿಗೆ ನಾಲಿಗೆಗೂ ರುಚಿ ನೀಡುವ ಆರೋಗ್ಯಕ್ಕೂ ಕೊಡುಗೆ ನೀಡುವ ಶುಂಠಿ ಟೀ ಟೇಸ್ಟಿಯಾಗಿ ಮಾಡೋದು ಹೇಗೆ ಅಂತ ಗೊತ್ತಿಲ್ಲ ಅದಕ್ಕಾಗಿ ಇಲ್ಲಿದೆ ಶುಂಠಿ ಟೀ ರೆಸಿಪಿ.
ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿದು ದಿನ ಶುರು ಮಾಡೋರು ತುಂಬಾ ಜನ ಇದ್ದಾರೆ. ಚಹಾ ಕುಡಿದ್ರೆ ಫ್ರೆಶ್ ಆಗಿರುತ್ತೆ ಅಂತ ನಂಬ್ತಾರೆ. ದಿನಕ್ಕೆ ಎರಡ್ ಮೂರ್ ಕಪ್ ಚಹಾ ಕುಡಿಯೋರು ಇದ್ದಾರೆ.
ಏಲಕ್ಕಿ ಚಹಾ, ಶುಂಠಿ ಚಹಾ, ಮಸಾಲ ಚಹಾ ಹೀಗೆ ತರತರದ ಚಹಾ ಇದೆ. ಶುಂಠಿ ಚಹಾ ಕುಡಿಯೋದ್ರಿಂದ ತುಂಬಾ ಲಾಭ ಇದೆ. ಚಳಿಗಾಲದಲ್ಲಿ ಶುಂಠಿ ಚಹಾ ಕುಡಿದ್ರೆ ಕೆಮ್ಮು, ನೆಗಡಿ, ಗಂಟಲು ನೋವಿಗೆ ಒಳ್ಳೆಯದು.
ಶುಂಠಿ ಚಹಾ
ಚಳಿಗಾಲದಲ್ಲಿ ಶುಂಠಿ ಚಹಾ ಕುಡಿಯೋದು ತುಂಬಾ ಒಳ್ಳೆಯದು. ಶುಂಠಿ ದೇಹವನ್ನು ಬಿಸಿ ಮಾಡೋ ಗುಣ ಹೊಂದಿರೋದ್ರಿಂದ ಚಳಿಗಾಲದಲ್ಲಿ ಶುಂಠಿ ಚಹಾ ಕುಡಿಯೋದು ಒಳ್ಳೆಯದು. ಆದರೆ ತುಂಬಾ ಜನ ಈ ಶುಂಠಿ ಚಹಾವನ್ನು ತಪ್ಪಾಗಿ ಮಾಡ್ತಾರೆ. ಕೆಲವರು ಹಾಲು, ಸಕ್ಕರೆ, ಟೀ ಪೌಡರ್, ಶುಂಠಿ, ನೀರು ಎಲ್ಲವನ್ನೂ ಒಟ್ಟಿಗೆ ಹಾಕಿ ಚಹಾ ಮಾಡ್ತಾರೆ. ಹೀಗೆ ಮಾಡಿದ್ರೆ ಚಹಾ ರುಚಿಯಾಗಿರಲ್ಲ. ಕೆಲವರು ಶುಂಠಿ ಜಾಸ್ತಿ ಹಾಕ್ತಾರೆ. ಅದ್ರಿಂದ ಚಹಾದ ರುಚಿ ಹಾಳಾಗುತ್ತೆ. ಹಾಗಾದ್ರೆ ರುಚಿಯಾದ ಶುಂಠಿ ಚಹಾ ಹೇಗೆ ಮಾಡೋದು ಅಂತ ನೋಡೋಣ.
ಶುಂಠಿ ಚಹಾ
ರುಚಿಯಾದ ಶುಂಠಿ ಚಹಾ ಹೇಗೆ ಮಾಡೋದು?
ಮೊದಲು ಒಂದು ಪಾತ್ರೆಗೆ ನೀರು, ಹಾಲು, ಸಕ್ಕರೆ ಹಾಕಿ ಕುದಿಸಿ. ಶುಂಠಿಯನ್ನ ಸಣ್ಣಗೆ ಹೆಚ್ಚಿ ಇಟ್ಕೊಳ್ಳಿ. ಹಾಲು ಕುದಿ ಬಂದಾಗ ಶುಂಠಿ ಹಾಕಿ ಒಂದು ನಿಮಿಷ ಕುದಿಸಿ. ಶುಂಠಿಯನ್ನ ತುರಿದು ಹಾಕಬಹುದು. ಈಗ ಟೀ ಪೌಡರ್ ಹಾಕಿ ಎರಡು ನಿಮಿಷ ಕುದಿಸಿ. ಇಷ್ಟೇ ರುಚಿಯಾದ ಶುಂಠಿ ಚಹಾ ರೆಡಿ.
ಶುಂಠಿ ಚಹಾ ಕುಡಿಯೋದ್ರಿಂದ ಏನು ಲಾಭ?
ಶುಂಠಿ ಬಿಸಿ ಮಾಡೋ ಗುಣ ಹೊಂದಿರೋದ್ರಿಂದ ಚಳಿಗಾಲದಲ್ಲಿ ಶುಂಠಿ ಚಹಾ ಕುಡಿಯೋದು ತುಂಬಾ ಒಳ್ಳೆಯದು. ಶುಂಠಿ ಚಹಾ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ. ಚಳಿಗಾಲದಲ್ಲಿ ಬರೋ ಹಲವು ಸೋಂಕುಗಳಿಂದ ನಿಮ್ಮನ್ನ ರಕ್ಷಿಸುತ್ತೆ. ಕೆಮ್ಮು, ನೆಗಡಿ, ಗಂಟಲು ನೋವಿಗೆ ಶುಂಠಿ ಚಹಾ ಒಳ್ಳೆಯದು. ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ, ನೋವು ಮತ್ತು ಊತ ಕಡಿಮೆ ಮಾಡುತ್ತೆ, ವಾಂತಿ, ವಾಕರಿಕೆ ನಿವಾರಣೆ ಮಾಡುತ್ತೆ.