Asianet Suvarna News Asianet Suvarna News

ಕೊಕಾ ಕೋಲಾ ಕುಡಿಯೋ ಅಭ್ಯಾಸ ಇದ್ಯಾ, ಕ್ಯಾನ್ಸರ್‌ ಬರಬಹುದು ಎಂದ ವಿಶ್ವ ಆರೋಗ್ಯ ಸಂಸ್ಥೆ!

ಕೊಕಾ ಕೋಲಾ ಡಯಟ್‌ ಸೋಡಾದಿಂದ ಮಾರ್ಸ್‌ನ ಎಕ್ಸ್‌ಟ್ರಾ ಚೂಯಿಂಗ್ ಗಮ್‌ವರೆಗೂ ವ್ಯಾಪಕವಾಗಿ ಬಳಸಲಾಗುವ ಆಸ್ಪರ್ಟೇಮ್ ಎನ್ನುವ ಕೃತಕ ಸಿಹಿಕಾರಕ ಸಂಭವನೀಯ ಕಾರ್ಸಿನೋಜೆನ್ ಎಂದು ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ದತೆ ನಡೆಸಿದೆ.

aspartame sweetener a possible carcinogen WHO cancer research agency says san
Author
First Published Jun 29, 2023, 1:48 PM IST

ಲಂಡನ್‌ (ಜೂ.29): ವಿಶ್ವದ ಅತ್ಯಂತ ಪ್ರಸಿದ್ಧ ಹಾಗೂ ಸಾಮಾನ್ಯವಾದ ಕೃತಕ ಸಿಹಿಕಾರಕ ವಸ್ತುವಾಗಿರುವ ಆಸ್ಪರ್ಟೇಮ್ ಅನ್ನು ಸಂಭವನೀಯ ಕಾರ್ಸಿನೋಜೆನ್ ಎಂದು ಘೋಷಿಸಲು ಜಾಗತಿಕ ಆರೋಗ್ಯ ಸಂಸ್ಥೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಸಿದ್ಧತೆ ನಡೆಸಿದೆ. ಈ ಕುರಿತಾಗಿ ಡಬ್ಲ್ಯುಎಚ್‌ಓ ಮೂಲಗಳು ಖಚಿತಪಡಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.  ಆಹಾರ ಉದ್ಯಮ ಮತ್ತು ನಿಯಂತ್ರಕರಿಗೆ ವಿರುದ್ಧವಾಗಿದೆ. ಕಾರ್ಸಿನೋಜೆನ್ ಎನ್ನುವುದು ಜೀವಂತ ಅಂಗಾಂಶಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವಿರುವ ವಸ್ತುವಾಗಿದೆ. ಆಸ್ಪರ್ಟೇಮ್ ಅನ್ನು ಸಂಭವನೀಯ ಕಾರ್ಸಿನೋಜೆನ್ ಎಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧತೆ ನಡೆಸಿದೆ.  ಕೋಕಾ-ಕೋಲಾ ಡಯಟ್ ಸೋಡಾಗಳಿಂದ ಮಾರ್ಸ್‌ನ ಎಕ್ಸ್‌ಟ್ರಾ ಚೂಯಿಂಗ್ ಗಮ್ ಮತ್ತು ಕೆಲವು ಸ್ನ್ಯಾಪಲ್ ಪಾನೀಯಗಳಲ್ಲಿ ಬಳಸಲಾಗುವ ಆಸ್ಪರ್ಟೇಮ್ ಅನ್ನು ಜುಲೈನಲ್ಲಿ "ಮನುಷ್ಯರಿಗೆ ಕ್ಯಾನ್ಸರ್ ಜನಕ" ಎಂದು ಮೊದಲ ಬಾರಿಗೆ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಮಾಡಲಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) ಕ್ಯಾನ್ಸರ್ ಸಂಶೋಧನಾ ವಿಭಾಗ ಎಂದು ಮೂಲಗಳು ತಿಳಿಸಿವೆ. ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಿ ಅನೇಕ ಜನರು ಸಕ್ಕರೆಯನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಆದರೆ ಕೇವಲ ರುಚಿಗೆ, ಇದು ಅಪಾಯವಲ್ಲ ಎಂದು ಭಾವಿಸಿ ಕೃತಕ ಸಿಹಿಯನ್ನು ಬಳಸುತ್ತಾರೆ. WHO (ವಿಶ್ವ ಆರೋಗ್ಯ ಸಂಸ್ಥೆ) ನಡೆಸಿದ ಸಂಶೋಧನೆಯಲ್ಲಿ ಕೃತಕ ಸಿಹಿಕಾರಕಗಳ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಆಸ್ಪರ್ಟೇಮ್ ಹೊಂದಿರುವ ಉತ್ಪನ್ನವನ್ನು ಒಬ್ಬ ವ್ಯಕ್ತಿಯು ಎಷ್ಟು ಸುರಕ್ಷಿತವಾಗಿ ಬಳಸಬಹುದು ಎಂಬುದು ಇನ್ನೂ ತಿಳಿದಿಲ್ಲ. ಒಬ್ಬ ವ್ಯಕ್ತಿಯು ಎಷ್ಟು ಹಾನಿಕಾರಕ ವಸ್ತುವನ್ನು ಸೇವಿಸಬಹುದು ಎಂಬುದರ ಕುರಿತು ಶಿಫಾರಸುಗಳನ್ನು ರಾಷ್ಟ್ರೀಯ ನಿಯಂತ್ರಕರ ನಿರ್ಣಯದ ಜೊತೆಗೆ ಆಹಾರ ಸೇರ್ಪಡೆಗಳ ಮೇಲೆ ಪ್ರತ್ಯೇಕ ಡಬ್ಲ್ಯುಎಚ್‌ಓ ತಜ್ಞರ ಸಮಿತಿಯಿಂದ ಮಾಡಲಾಗುತ್ತದೆ. ಇದನ್ನು JECFA (ಜಂಟಿ WHO ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಆಹಾರ ಸೇರ್ಪಡೆಗಳ ತಜ್ಞರ ಸಮಿತಿ) ನೀಡುತ್ತದೆ.

'ಕೊರೋನಾವೈರಸ್‌ ಚೀನಾದ ಜೈವಿಕಶಸ್ತ್ರಾಸ್ತ್ರ..' ವುಹಾನ್‌ ಲ್ಯಾಬ್‌ ಸಂಶೋಧಕಿಯ ಸ್ಪೋಟಕ ಹೇಳಿಕೆ!
 

ಡಬ್ಲ್ಯುಎಚ್‌ಓನ ಸೇರ್ಪಡೆಗಳ ಸಮಿತಿ JECFA ಈ ವರ್ಷ ಆಸ್ಪರ್ಟೇಮ್ ಬಳಕೆಯನ್ನು ಪರಿಶೀಲಿಸುತ್ತಿದೆ. 1981 ರಲ್ಲಿ JECFA ಆಸ್ಪರ್ಟೇಮ್ ಅನ್ನು ಮಿತಿಯೊಳಗೆ ಪ್ರತಿದಿನ ಸೇವಿಸಿದರೆ ಸುರಕ್ಷಿತವಾಗಿದೆ ಎಂದು ಹೇಳಿದೆ. ಉದಾಹರಣೆಗೆ, 60 ಕೆಜಿ ತೂಕದ ವಯಸ್ಕನು ದಿನಕ್ಕೆ 12-36 ಡಯೆಟ್ ಸೋಡಾವನ್ನು (ಆಸ್ಪರ್ಟೇಮ್ ಪ್ರಮಾಣವನ್ನು ಅವಲಂಬಿಸಿ) ಕುಡಿಯುತ್ತಿದ್ದರೆ ಅಪಾಯವಿದೆ.

ಮಸೀದಿಯ ಹೊರಗಡೆ ಕುರಾನ್‌ ಸುಟ್ಟು ಪ್ರತಿಭಟನೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಸ್ವೀಡನ್‌!

Follow Us:
Download App:
  • android
  • ios