Asianet Suvarna News Asianet Suvarna News

ಮಸೀದಿಯ ಹೊರಗಡೆ ಕುರಾನ್‌ ಸುಟ್ಟು ಪ್ರತಿಭಟನೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಸ್ವೀಡನ್‌!

ಸ್ವೀಡನ್‌ನ ಬಕ್ರೀದ್‌ ಪ್ರತಿಭಟನೆಯ ವೇಳೆ ಮಸೀದಿಯ ಹೊರಗಡೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ವ್ಯಕ್ತಿಯೊಬ್ಬ ಕುರಾನ್‌ಅನ್ನು ಸುಟ್ಟು ಹಾಕಿದ್ದಾನೆ. ಸರ್ಕಾರ ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಸರ್ಕಾರ ಕೂಡ ಈ ಪ್ರತಿಭಟನೆಗೆ ಅನುಮತಿ ನೀಡಿತ್ತು. ಇನ್ನೊಂದೆಡೆ ಟರ್ಕಿ ಇದು ಅಪರಾಧ ಎಂದು ಹೇಳಿದೆ.
 

Sweden Bakrid 2023 Protest Quran burnt outside mosque government allowed under freedom of expression san
Author
First Published Jun 29, 2023, 12:46 PM IST

ಸ್ಟಾಕ್‌ಹೋಮ್‌ (ಜೂ.29): ವಿಶ್ವದಾದ್ಯಂತ ಇಂದು ಮುಸ್ಲಿಮರು ಬಕ್ರೀದ್‌ ಆಚರಣೆ ಮಾಡಿದ್ದಾರೆ. ಇದರ ನಡುವೆ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಒಬ್ಬ ವ್ಯಕ್ತಿ ಮಸೀದಿಯ ಹೊರಗಡೆ ಕುರಾನ್‌ಅನ್ನು ಸುಟ್ಟು ಪ್ರತಿಭಟನೆ ಮಾಡಿದ್ದಾನೆ. ಬುಧವಾರ ಈ ಘಟನೆ ನಡೆದಿದ್ದು, ಮಸೀದಿಯ ಹೊರಗಡೆ ಕುರಾನ್‌ ಸುಟ್ಟು ಪ್ರತಿಭಟನೆ ಮಾಡೋದಕ್ಕೆ ಸ್ವೀಡನ್‌ ಸರ್ಕಾರ ಕೂಡ ಆತನಿಗೆ ಅನುಮತಿ ನೀಡಿತ್ತು.  ಸಿಎನ್ಎನ್ ಪ್ರಕಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಒಂದು ದಿನದ ಹಾಗೂ ಏಕವ್ಯಕ್ತಿಯ ಪ್ರತಿಭಟನೆಗೆ ಈ ಅನುಮತಿಯನ್ನು ನೀಡಲಾಗಿದೆ. ಒಬ್ಬ ವ್ಯಕ್ತಿ ಮಾತ್ರ ತನ್ನ ಭಾಷಾಂತರಕಾರರೊಂದಿಗೆ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ, ಪ್ರತಿಭಟನೆ ಮಾಡಿದ ವ್ಯಕ್ತಿ ಕುರಾನ್‌ನ ಕೆಲವು ಪೇಜ್‌ಗಳನ್ನು ಹರಿದಿದ್ದು ಮಾತ್ರವಲ್ಲದೆ, ಅದೇ ಹಾಳೆಗಳಿಂದ ತನ್ನ ಶೂಗಳನ್ನು ಒರೆಸಿಕೊಂಡಿದ್ದಾರೆ. ಆ ಬಳಿಕ ಮಾಂಸದ ತುಂಡನ್ನು ಕುರಾನ್‌ನ ಮೇಲೆ ಇಟ್ಟ ವ್ಯಕ್ತಿ ಬಳಿಕ ಬೆಂಕಿ ಹಚ್ಚಿದ್ದಾನೆ. ಅದಾದ ಬಳಿಕ ಸ್ವೀಡನ್‌ನ ಧ್ವಜವನ್ನೂ ಆತ ಹಾರಿಸಿದ್ದಾನೆ. ಪ್ರತಿಭಟನೆ ಮಾಡಿದ ವ್ಯಕ್ತಿಯನ್ನು ಸಲ್ವಾನ್‌ ಮೊಮಿಕಾ ಎಂದು ಗುರುತಿಸಲಾಗಿದೆ. ಇರಾಕ್‌ನಿಂದ ನಿರಾಶ್ರಿತರಾಗಿ ಸ್ವೀಡನ್‌ಗೆ ಬಂದು  ನೆಲೆ ಕಂಡುಕೊಂಡಿದ್ದ. 'ಮಾನವೀಯತೆಗೆ ಅತ್ಯಂತ ಅಪಾಯಕಾರಿ ಪುಸ್ತಕ ಯಾವುದಾದರೂ ಇದ್ದರೆ ಅದು ಕುರಾನ್ ಎಂದು ಹೇಳಿದ್ದಲ್ಲದೆ, ಜಗತ್ತು ಅದನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.

ಈತ ಮಾಡಿದ್ದ ಏಕಾಂಗಿ ಪ್ರತಿಭಟನೆಯನ್ನು 200ಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಕೆಲವರು ಈತನ ಪರವಾಗಿ ಘೋಷಣೆಗಳನ್ನು ಕೂಗಿದರೆ, ಕೆಲವರು ಈತನ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಪ್ರತಿಭಟನಾಕಾರನತ್ತ ಕಲ್ಲನ್ನೂ ತೂರಿದ್ದಲ್ಲದೆ, 'ಅಲ್ಲಾ ಈಸ್‌ ಗ್ರೇಟ್‌' ಎಂದು ಅರೇಬಿಕ್‌ನಲ್ಲಿ ಹೇಳಿದ್ದಾರೆ. ಅದಾದ ಬಳಿಕ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದು ಮಹಾಅಪರಾಧ ಎಂದ ಟರ್ಕಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಸ್ಲಾಮೋಫೋಬಿಯಾವನ್ನು ಹರಡುತ್ತಿರುವ ಸ್ವೀಡನ್‌ನಲ್ಲಿ ಕುರಾನ್ ಅನ್ನು ಸುಡುವುದರ ವಿರುದ್ಧ ಟರ್ಕಿ ಪ್ರತಿಭಟಿಸಿದೆ. ಟರ್ಕಿಯ ವಿದೇಶಾಂಗ ಸಚಿವಾಲಯ ಇದನ್ನು ಘೋರ ಅಪರಾಧ ಎಂದು ಕರೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೂ ಇಸ್ಲಾಂ ವಿರೋಧಿ ಪ್ರದರ್ಶನಗಳನ್ನು ನಡೆಸುವಂತಿಲ್ಲ ಎಂದು ವಿದೇಶಾಂಗ ಸಚಿವ ಹಕನ್ ಫಿದಾನ್ ಟ್ವೀಟ್ ಮಾಡಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಯಾವುದೇ ದೇಶವು ನ್ಯಾಟೋಗೆ ಸೇರುವ ಮೂಲಕ ನಮ್ಮ ಪಾಲುದಾರರಾಗಲು ಬಯಸಿದರೆ, ಅದು ಇಸ್ಲಾಮೋಫೋಬಿಯಾವನ್ನು ಹರಡುವ ಭಯೋತ್ಪಾದಕರನ್ನು ನಿಯಂತ್ರಿಸಬೇಕಾಗುತ್ತದೆ.

ಸ್ವೀಡನ್‌ನ ಪ್ರಧಾನ ಮಂತ್ರಿ ಉಲ್ಫ್ ಕ್ರಿಸ್ಟರ್ಸನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಪ್ರತಿಭಟನೆಯು ನಮ್ಮ ಸಂಭವನೀಯ ನ್ಯಾಟೋ ಸದಸ್ಯತ್ವದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದರ ಕುರಿತು ನಾನು ಮಾತನಾಡೋದಿಲ್ಲ. ಈ ರೀತಿಯ ಪ್ರತಿಭಟನೆ ಕಾನೂನು ವ್ಯಾಪ್ತಿಗೆ ಬಂದರೂ ಅದು ಸರಿಯಲ್ಲ. ಈ ಪ್ರಕರಣದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪೊಲೀಸರು ಮಾತ್ರ ನಿರ್ಧರಿಸಲಿದ್ದಾರೆ. ದಯವಿಟ್ಟು ಪ್ರತಿಭಟನೆಯ ನಂತರ, ಪೊಲೀಸರು ಆ ವ್ಯಕ್ತಿಯ ವಿರುದ್ಧ ಧರ್ಮವನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಿದ ಕೇಸ್‌ ಅನ್ನು ದಾಖಲು ಮಾಡಿದ್ದಾರೆ ಎಂದಿದ್ದಾರೆ.

 

ಕಾಂಗ್ರೆಸ್‌ ಕಚೇರಿಯಲ್ಲಿ ಬಕ್ರೀದ್‌ ಪ್ರಾರ್ಥನೆಗೆ ಅವಕಾಶ ನೀಡಿ, ಎಐಎಂಐಎಂ ನಾಯಕನ ಪತ್ರ!

ವರ್ಷದ ಆರಂಭದಲ್ಲಿ, ಕೆಲವು ಜನರು ಸ್ವೀಡನ್‌ನಲ್ಲಿರುವ ಟರ್ಕಿಯ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಕುರಾನ್ ಅನ್ನು ಸುಟ್ಟು ಹಾಕಿದ್ದರು. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸ್ವೀಡಿಷ್ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ ಜನರು ಸ್ವೀಡನ್‌ನ ಧ್ವಜವನ್ನು ಸುಟ್ಟುಹಾಕಿದರು. ಸಿಎನ್ಎನ್ ಪ್ರಕಾರ, ಟರ್ಕಿ ಇದಕ್ಕೆ ಸ್ವೀಡಿಷ್ ಸರ್ಕಾರವನ್ನು ದೂಷಣೆ ಮಾಡಿತ್ತು. ಫೆಬ್ರವರಿಯಲ್ಲಿ, ಕುರಾನ್ ಅನ್ನು ಸುಡುವ ಮೂಲಕ ಇರಾಕಿನ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಸ್ವೀಡಿಷ್ ಪೊಲೀಸರು ಅನುಮತಿ ನೀಡಿರಲಿಲ್ಲ. ಇದರಿಂದ ಸಾಮಾಜಿಕ ಸಾಮರಸ್ಯ ಕದಡಬಹುದು ಎಂದು ಪೊಲೀಸರು ತಿಳಿಸಿದ್ದರು. 

ಬಜರಂಗದಳ ಬ್ಯಾನ್‌ ಮಾಡ್ತೇವೆ ಎಂದು ಕುಣಿತ್ತಿದ್ದ ಕಾಂಗ್ರೆಸ್ ವರಸೆ ಬದಲಿಸಿದೆ: ಓವೈಸಿ ಗರಂ

Follow Us:
Download App:
  • android
  • ios