Asianet Suvarna News Asianet Suvarna News

'ಕೊರೋನಾವೈರಸ್‌ ಚೀನಾದ ಜೈವಿಕಶಸ್ತ್ರಾಸ್ತ್ರ..' ವುಹಾನ್‌ ಲ್ಯಾಬ್‌ ಸಂಶೋಧಕಿಯ ಸ್ಪೋಟಕ ಹೇಳಿಕೆ!

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೋನಾ ಸೋಂಕುಅನ್ನು ಚೀನಾ ಉದ್ದೇಶಪೂರ್ವಕವಾಗಿ ಹರಡಿಸಿತ್ತು. ಇದು ಚೀನಾದ ಬಯೋವೆಪನ್‌ ಆಗಿತ್ತು ಎಂದು ವುಹಾನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿಯ ಸಂಶೋಧಕಿ ಚಾವೋ ಶಾನ್‌ ಬಹಿರಂಗಪಡಿಸಿದ್ದಾರೆ.
 

Coronavirus Chinas Bioweapon Deliberately Engineered says Wuhan Researcher Chao Shan san
Author
First Published Jun 29, 2023, 1:26 PM IST

ನವದೆಹಲಿ (ಜೂ.29): ಕೊರೋನಾವೈರಸ್‌ಅನ್ನು ಸ್ವತಃ ಚೀನಾ ದೇಶವೇ ವಿನ್ಯಾಸ ಮಾಡಿತ್ತು. ಇದು ಚೀನಾದ ಪಾಲಿನ ಬಯೋವೆಪನ್‌ ಅಂದರೆ ಜೈವಿಕ ಶಸ್ತ್ರಾಸ್ತ್ರವಾಗಿತ್ತಲ್ಲದೆ, ಉದ್ದೇಶಪೂರ್ವಕವಾಗಿ ಇಡೀ ಜಗತ್ತಿಗೆ ಹಡುವಂತೆ ಮಾಡಿತು ಎಂದು ವುಹಾನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವೈರಾಲಜಿಯ ಸಂಶೋಧಕಿ ಚಾವೋ ಶಾನ್‌ ಬಹಿರಂಗಪಡಿಸಿದ್ದಾರೆ. ಇದೇ ವುಹಾನ್‌ ಲ್ಯಾಬ್‌ನಿಂದಲೇ ಕೊರೋನಾವೈರಸ್‌ ಜಗತ್ತಿಗೆಹರಡಿತ್ತು. ಚೀನಾ  ಮತ್ತು ಚೀನೀ ಕಮ್ಯುನಿಸ್ಟ್ ಪಾರ್ಟಿ (CCP) ಕುರಿತಾಗಿ ಪ್ರಮುಖ ಮಾಹಿತಿಯನ್ನು ಜಗತ್ತಿಗೆ ಒದಗಿಸುವ ಇಂಟರ್ನ್ಯಾಷನಲ್ ಪ್ರೆಸ್ ಅಸೋಸಿಯೇಷನ್‌ನ ಸದಸ್ಯರಾದ ಜೆನ್ನಿಫರ್ ಝೆಂಗ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಚಾವೊ ಶಾನ್ ಅವರು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಮಾನವರು ಸೇರಿದಂತೆ ವಿವಿಧ ಜಾತಿಗಳಿಗೆ ಅತ್ಯಂತ ವೇಗವಾಗಿ ಹರಡುವ ವೈರಸ್‌ಗಳಿದ್ದರೆ ಅದನ್ನು ಕಂಡುಹಿಡಿಯುವ ಪ್ರಮುಖವಾದ ಕೆಲಸವನ್ನು ತಮಗೆ ಹಾಗೂ ತನ್ನ ಸಹೋದ್ಯೋಗಿಗಳಿಗೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಇದರ ಪೂರ್ಣ ಸಂದರ್ಶನವನ್ನು ಜೆನ್ನಿಫರ್‌ ಅವರು ತಮ್ಮ ಬ್ಲಾಗ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅದರೊಂದಿಗೆ ತನ್ನ ಟ್ವಿಟರ್‌ ಹ್ಯಾಂಡಲ್‌ನಲ್ಲಿಯೂ ಜೆನ್ನಿಫರ್‌ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಮಾನವ ಹಕ್ಕುಗಳನ ಹೋರಾಟಗಾರ್ತಿಯೂ ಆಗಿರುವ ಜೆನ್ನಿಫರ್‌, ವುಹಾನ್‌ ಲ್ಯಾಬ್‌ನ ಸಂಶೋಧಕಿಯಾಗಿರುವ ಚಾವೋ ಅವರ ಮಾತುಗಳನ್ನು ಪೋಸ್ಟ್‌ ಮಾಡಿದ್ದಾರೆ.

ಈ ಸಂದರ್ಶನವನ್ನು 2021ರ ಸೆಪ್ಟೆಂಬರ್‌ನಲ್ಲಿ ನಡೆಸಲಾಗಿತ್ತು ರಂದು ಜೆನ್ನಿಫರ್‌ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. 2019 ರಲ್ಲಿ ನಾನ್‌ಜಿಂಗ್ ಸಿಟಿಯಲ್ಲಿ ಅವರ ಮೇಲಧಿಕಾರಿಯಿಂದ ಚಾವೋ ಅವರಿಗೆ ನಾಲ್ಕು ರೀತಿಯ ವೈರಸ್‌ಅನ್ನು ನೀಡಲಾಗಿತ್ತು. ಅವುಗಳಲ್ಲಿ ಯಾವುದು ಹೆಚ್ಚು ಪರಿಣಾಮಕಾರಿಯಾದ ವೈರಸ್‌ ಹಾಗೂ ಅತ್ಯಂತ ವೇಗವಾಗಿ ಹರಡಬಲ್ಲ ವೈರಸ್‌ ಎನ್ನುವುದನ್ನು ಗುರುತಿಸುವಂತೆ ತಿಳಿಸಲಾಗಿತ್ತು. ಈ ವೈರಸ್‌ಗಳನ್ನು ಚಾವೋ ಹ್ಯೂಮನ್‌ ಎಸಿಇ2 ರಿಸೆಪ್ಟರ್‌, ಬಾವಲಿಗಳು ಮತ್ತು ಕೋತಿಗಳ ಮೇಲೆ ಪರೀಕ್ಷೆ ಮಾಡಿದ್ದರು. ಇದೇ ವೇಳೆ ಕೊರೋನಾವೈರಸ್‌ ಎನ್ನುವುದು ಕೇವಲ ವೈರಸ್‌ ಅಲ್ಲ, ಇದು ಚೀನಾದ ಬಯೋವೆಪನ್‌ ಎಂದು ತಿಳಿಸಿದ್ದಾರೆ.

ಮಸೀದಿಯ ಹೊರಗಡೆ ಕುರಾನ್‌ ಸುಟ್ಟು ಪ್ರತಿಭಟನೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಸ್ವೀಡನ್‌!

ತಮ್ಮ 26  ನಿಮಿಷಗಳ ಸ್ಪೋಟಕ ಸಂದರ್ಶನದಲ್ಲಿ ಸಾಕಷ್ಟು ಮಾಹಿತಿ ನೀಡಿರುವು ಚಾವೋ, 2019ರಲ್ಲಿ ನಡೆದ ಮಿಲಿಟರಿ ವರ್ಲ್ಡ್‌ ಗೇಮ್ಸ್‌ನಲ್ಲಿ ತನ್ನ ಹಲವಾರು ಸಹೋದ್ಯೋಗಿಗಳು ನಾಪತ್ತೆಯಾಗಿದ್ದರು. ಆ ಬಳಿಕ, ಅವರಲ್ಲಿ ಒಬ್ಬರು ವಿವಿಧ ದೇಶಗಳ ಕ್ರೀಡಾಪಟುಗಳು ತಂಗಿರುವ ಹೋಟೆಲ್‌ಗಳಿಗೆ "ಆರೋಗ್ಯ ಅಥವಾ ನೈರ್ಮಲ್ಯ ಪರಿಸ್ಥಿತಿಗಳನ್ನು ಪರಿಶೀಲಿಸಲು" ಕಳುಹಿಸಲಾಗಿದೆ ಎಂದು ಬಹಿರಂಗಪಡಿಸಿದರು. ನೈರ್ಮಲ್ಯವನ್ನು ಪರೀಕ್ಷಿಸಲು ವೈರಾಲಜಿಸ್ಟ್‌ಗಳ ಅಗತ್ಯವಿರಲಿಲ್ಲ. ವೈರಸ್ ಹರಡಲು ಅವರನ್ನು ಅಲ್ಲಿಗೆ ಕಳುಹಿಸಲಾಗಿತ್ತು ಎಂದು ಚಾವೊ ಶಾನ್ ಶಂಕೆ ವ್ಯಕ್ತಪಡಿಸಿದ್ದಾರೆ.

Federal Watchdog Report: ಕೋವಿಡ್‌ ರಿಲೀಫ್‌ನಲ್ಲಿ 16.41 ಲಕ್ಷ ಕೋಟಿ ಹಗರಣ!

ಇನ್ನು ಚಾವೋ ಅವರ ಸಂದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆನ್ನಿಫರ್‌, ಇದು ಸಂಪೂರ್ಣ ಪಜಲ್‌ನ ಸಣ್ಣ ಪಾಲು ಮಾತ್ರ ಎಂದಿದ್ದಾರೆ.  ಇಲ್ಲಿಯವರೆಗೆ, ಪ್ರಪಂಚದಾದ್ಯಂತ ಸುಮಾರು 7 ಮಿಲಿಯನ್ ಹಾಗೂ ಅದಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾದ ಸಾಂಕ್ರಾಮಿಕ ರೋಗದ ನಿಜವಾದ ಮೂಲ ಎಲ್ಲಿಯದು ಎನ್ನುವುದು ಇನ್ನೂ ಶೋಧ ಕಾರ್ಯದಲ್ಲಿದೆ.

Follow Us:
Download App:
  • android
  • ios