ಜೈ ಡಿ ಬಾಸ್ ಕೂಗಲು ಪ್ರಥಮ್​ಗೆ ದರ್ಶನ್ ಫ್ಯಾನ್ಸ್ ಬಲವಂತ: ಹಲ್ಲೆಗೂ ಯತ್ನ!

ಕೊಲೆ ಕೇಸ್​​​ ದರ್ಶನ್ ಜೀವ ಹಿಂಡುತ್ತಿದೆ. ಬೆನ್ನು ನೋವಿನ ಹುಣ್ಣು ಹೆಚ್ಚಾಗಿ ಬಾಸ್​​​​ ಆಸ್ಪತ್ರೆ ಬೆಡ್​​ ಮೇಲೆ ಬಿದ್ದಿದ್ದಾರೆ. ಆದ್ರೆ ದರ್ಶನ್ ಹಿಂಬಾಲಕರ ಕೇಕೆ ಮಾತ್ರ ನಿಂತಿಲ್ಲ. ದರ್ಶನ್ ಬಗ್ಗೆ ಯಾರೇ ಮಾತಾಡಿದ್ರು ಅವರನ್ನ ಅಡ್ಡಗಟ್ಟಿ ಹೆದರಿಸಿ ಬೆದರಿಸಿ ಡಿ ಬಾಸ್​ ಅಂತ ಜೈಕಾರಾ ಹಾಕು ಅಂತ ನಿಗರಾಡುತ್ತಿದ್ದಾರೆ. 

First Published Nov 17, 2024, 4:26 PM IST | Last Updated Nov 17, 2024, 4:26 PM IST

ಕೊಲೆ ಕೇಸ್​​​ ದರ್ಶನ್ ಜೀವ ಹಿಂಡುತ್ತಿದೆ. ಬೆನ್ನು ನೋವಿನ ಹುಣ್ಣು ಹೆಚ್ಚಾಗಿ ಬಾಸ್​​​​ ಆಸ್ಪತ್ರೆ ಬೆಡ್​​ ಮೇಲೆ ಬಿದ್ದಿದ್ದಾರೆ. ಆದ್ರೆ ದರ್ಶನ್ ಹಿಂಬಾಲಕರ ಕೇಕೆ ಮಾತ್ರ ನಿಂತಿಲ್ಲ. ದರ್ಶನ್ ಬಗ್ಗೆ ಯಾರೇ ಮಾತಾಡಿದ್ರು ಅವರನ್ನ ಅಡ್ಡಗಟ್ಟಿ ಹೆದರಿಸಿ ಬೆದರಿಸಿ ಡಿ ಬಾಸ್​ ಅಂತ ಜೈಕಾರಾ ಹಾಕು ಅಂತ ನಿಗರಾಡುತ್ತಿದ್ದಾರೆ. ಒಳ್ಳೆ ಹುಡುಗ ಪ್ರಥಮ್​ಗೂ ಈ ಮಿನಿ ಗೂಂಡಾಗಳ ಬಿಸಿ ತಟ್ಟಿದೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. ನಟ ದರ್ಶನ್ ಬೆನ್ನೆ ಬೇನೆ ಮುಗಿದಿಲ್ಲ. ಆಸ್ಪತ್ರೆ ಬೆಡ್ ಮೇಲೆ ಬಿದ್ದಿರೋ ದರ್ಶನ್​ ಎಲ್ಲಿ ಬೇಲ್ ಕ್ಯಾನ್ಸಲ್ ಆಗುತ್ತೋ..? ಮತ್ತೆ ಜೈಲು ಊಟ ಮಾಡಬೇಕಾಗುತ್ತೋ ಅನ್ನೋ ಟೆನ್ಷನ್​​ಲ್ಲಿದ್ದಾರೆ. ಆದ್ರೆ ದರ್ಶನ್​ ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ಳದ ಫ್ಯಾನ್ಸ್ ಅತಿರೇಕದ ವರ್ತನೆ ಆಕಾಶಕ್ಕೆ ಮುಟ್ಟುತ್ತಿದೆ. ಈಗ ಒಳ್ಳೆ ಹುಡುಗ ಪ್ರಥಮ್​ ಜತೆ ದರ್ಶನ್​​​ ಫ್ಯಾನ್ಸ್ ಮತ್ತೆ​ ಕಿರಿಕ್ ತೆಗೆದಿದ್ದಾರೆ. 

ಆದ್ರೆ ಪ್ರಥಮ್​ ಏನು ಸುಮ್ಮನೆ ಬಿಟ್ಟಿಲ್ಲ ಕಿರಿಕ್ ಮಾಡಿದ ಕಿರಾತರಕಿಗೆ ಖಡಕ್​ ಆಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಟ ಭಯಂಕರ ಪ್ರಥಮ್ ಫ್ರೆಂಡ್ಸ್​ ಜೊತೆ ಹೋಟೆಲ್ ಒಂದಕ್ಕೆ ಊಟಕ್ಕೆ ಹೋಗಿದ್ರು. ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ದರ್ಶನ್ ಫ್ಯಾನ್ಸ್ ಪ್ರಥಮ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆ ಮಿನಿ ಗೂಂಡಾ ಹುಡುಗರು ಜೈ ಡಿ ಬಾಸ್ ಎಂದು ಜೈಕಾರ ಹಾಕಿ ಅಂತ ಪ್ರಥಮ್​​ಗೆ ಆವಾಜ್ ಹಾಕಿದ್ದಾರಂತೆ. ಅಷ್ಟೆ ಅಲ್ಲ ಪ್ರಥಮ್ ಮೇಲೆ ಹಲ್ಲೆಗೂ ಯತ್ನಿಸಿದ್ದಾರಂತೆ. ಈ ಬಗ್ಗೆ ದೇವ್ರಂತಾ ಮನುಷ್ಯ ಖ್ಯಾತಿಯ ಪ್ರಥಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸಂಜೆ ಗ್ರಾಮಾಂತರದ ಪ್ರತಿಷ್ಠಿತ ಹೋಟೆಲ್ ನಲ್ಲಿ ಆಪ್ತರೊಟ್ಟಿಗೆ ಊಟಕ್ಕೆ ಕೂತಿದ್ವಿ, ಕೆಲವರು ಫೋಟೋ ತಗೊಂಡ್ರು, ಜೈ ಡಿ ಬಾಸ್ ಅಂತ ಬಲವಂತವಾಗಿ ಕೂಗೋಕೆ ಹೇಳಿ ಗಲಾಟೆ ಕೂಗಿದ್ರು, ಒಳ್ಳೇದಾಗ್ಲಪ್ಪ ಅಂದೆ, ಅಶ್ಲೀಲ ಪದ ಬಳಸಿ ಕೈಮಿಲಾಯಿಸೋಕೆ ಬಂದ್ರು.! 

ಅಲ್ಲಿದ್ದ 8ಜನ ಬೌನ್ಸರ್ ಆ ಗೂಂಡಗಳನ್ನ ಎಳೆದು ಹೊರಗೆ ತಳ್ಳಿದ್ರು, ಕ್ಷಮೆ ಕೇಳಿದ್ರು, ಬಿಟ್ಟಿದ್ದೀನಿ. ಹೋಟೆಲ್ ನ ಎಲ್ಲಾ ಸಿಬ್ಬಂದಿ ಹಾಗೂ ಮ್ಯಾನೇಜರ್ ಮನವಿ ಮೇರೆಗೆ ನಾನು ಕಂಪ್ಲೇಂಟ್ ಕೊಡಬಾರ್ದು ಅಂತ ನಿರ್ಧರಿಸಿದೆ, ನಮ್ಮ ಪಾಡಿಗೆ ನಾವಿದ್ದೇವೆ. ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವ್ರ ಪಾಡಿಗೆ ಇದ್ದಾರೆ. but ಈ ಮಿನಿ ಗೂಂಡಾಗಳ ನಿಗರಾಟ ನೋಡೋಕಾಗ್ತಿಲ್ಲ, ಹೇಗಿದ್ರೂ ಹೋಟೆಲ್ ನಲ್ಲಿ CCtv ಇದೆ. ಇದು ಹೀಗೆ ಮುಂದುವರೆದರೆ ನಾನಂತು ಸುಮ್ಮನೆ ಕೂರಲ್ಲ. ದರ್ಶನ್ ಸರ್ ಅವ್ರ ಪಾಡಿಗೆ ಅವರಿದ್ರೂ ಈ ಮಿನಿ ಗೂಂಡಗಳು ನೆಮ್ಮದಿಯಾಗಿರೋಕೆ ಬಿಡಲ್ಲ ಅನ್ಸುತ್ತೆ, ಎಲ್ಲವೂ CCtvಲಿ record ಆಗಿದೆ ಒತ್ತಾಯದಿಂದ ಜೈ ಡಿ ಬಾಸ್ ಅನ್ನಿಸೋದು, ಅಶ್ಲೀಲ ಪದ ಬಳಸೋದು ನೋಡ್ತಾ ಇರೋಕಾಗಲ್ಲ, ನಾನು ಒಂದು ಕಂಪ್ಲೇಟ್ ಕೊಟ್ರೆ ಕಂಬಿ ಎಣಿಸಬೇಕಾಗುತ್ತದೆ. ಮುಚ್ಕೊಂಡು ಮೈಬಗ್ಗಿಸಿ ದುಡಿದು ಚೆನ್ನಾಗಿ ಬದುಕಿ. 

ಕೊಲೆ ಕೇಸ್​ ಹಾಕಿಸ್ಕೊಂಡು ಜೈಲು ಸೇರಿದ ದರ್ಶನ್ ಬಗ್ಗೆ ಪ್ರಥಮ್ ನೋವು ಹಂಚಿಕೊಂಡಿದ್ರು. ದರ್ಶನ್ ಗೆ ಅಭಿಮಾನಿಗಳಿದ್ದಾರೆ. ಅದರ ಜೊತೆ ಅಂಧಾಭಿಮಾನವೂ ಇದೆ. ಅಂದಾಭಿಮಾನಿಗಳು ಮಾಡೋ ಕೆಲಸದಿಂದ ದರ್ಶನ್​ ಸರ್ ಸಮಸ್ಯೆಗೆ ಸಿಕ್ಕಿಕೊಳ್ತಾರೆ ಅಂತ ಪ್ರಥಮ್ ಹೇಳಿದ್ರು. ಇದು ದರ್ಶನ್​​ ಫ್ಯಾನ್ಸ್​​ನ ರೊಚ್ಚಿಗೇಳಿದ್ದು ಪ್ರಥಮ್ ಜೊತೆ ಕಾಲ್ಕೆರೆದು ಜಗಳಕ್ಕೆ ನಿಂತಿದ್ದಾರೆ ಮಿನಿ ಗೂಂಡಾಗಳು. ಇವರ ವಿರುದ್ಧ ಪ್ರಥಮ್​ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ರು.  ನಟ ದರ್ಶನ್​​ ಮೇಲೆ ಕೊಲೆ ಆರೋಪ ಇದೆ. ದರ್ಶನ್​​​​ ಮತ್ತವರ ಬಳಗಕ್ಕೆ ಇದೇ ದೊಡ್ಡ ಕಪ್ಪು ಚುಕ್ಕೆ.. ಒಬ್ಬ ನಟ ಹೇಗಿರುತ್ತಾನೋ ಅವರ ಫ್ಯಾನ್ಸ್ ಕೂಡ ಹಾಗೆ ಇರುತ್ತಾರೆ ಅನ್ನೋದು ಸತ್ಯ. ಅದರಲ್ಲೂ ದರ್ಶನ್​ ಫ್ಯಾನ್ಸ್ ಬಗ್ಗೆ ಅನಾದಿ ಕಾಲದಿಂದಲೂ ಇವರು ಗೂಂಡಾಗಳ ಹಾಗೆ ವರ್ತಿಸುತ್ತಾರೆ ಅನ್ನೋ ಆರೋಪ ಇದೆ. ಈಗ ಮತ್ತೆ ಮತ್ತೆ ಅದನ್ನೇ ಪ್ರ್ಯೂ ಮಾಡುತ್ತಿದ್ದಾರೆ.