ಮೆಂತ್ಯೆ ಕಾಳು ಆರೋಗ್ಯಕ್ಕೆ ತುಂಬಾ ಉಪಯುಕ್ತ. ತೂಕ ಇಳಿಕೆ, ಮಧುಮೇಹ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ, ಹಾಗೂ ಬಾಣಂತಿಯರಿಗೆ ಹಾಲುಣಿಸುವಿಕೆಗೆ ಸಹಾಯಕ. ದಿನನಿತ್ಯ ಮೆಂತ್ಯೆ ನೀರು ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ.
ಕೆಲವು ಕಾಯಿಲೆಗಳಿಗೆ ನಮ್ಮ ಹತ್ತಿರದಲ್ಲೇ ಇರುವಂತಹ ವಸ್ತುಗಳಿಂದ ಪ್ರತಿನಿತ್ಯ ಸೇವಿಸುವುದರಿಂದ ಖಾಯಿಲೆಗಳನ್ನ ಗುಣಪಡಿಸಿಕೊಳ್ಳಬಹುದು.ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗುವಂತಹ ಅವಶ್ಯಕತೆ ಇರುವುದಿಲ್ಲ. ಅಡುಗೆ ಮನೆಯಲ್ಲಿರುವ ಕೆಲವೇ ವಸ್ತುಗಳಿಂದ ದೊಡ್ಡ ದೊಡ್ಡ ರೋಗಗಳನ್ನ ಗುಣಪಡಿಸಿಕೊಳ್ಳಬಹುದು.
ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆಗಳು ಮತ್ತು ನಮ್ಮ ಅಡುಗೆಗೆ ಬಳಸುವ ಸಾಂಬಾರ ಪದಾರ್ಥಗಳಿಂದ ಆಯುರ್ವೇದವು ಅನೇಕ ಪರಿಣಾಮಕಾರಿ ಔಷಧಿಗಳನ್ನು ತಯಾರಿಸುತ್ತದೆ. ಇವು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದ್ದು, ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಆಯುರ್ವೇದದಲ್ಲಿ ಸೂಚಿಸಿರುವ ಕೆಲವು ಸರಳ ಕ್ರಮಗಳನ್ನು ನಾವು ದೈನಂದಿನ ಜೀವನದಲ್ಲಿ ಅನುಸರಿಸಿದರೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಅದರಿಂದ ಅಪಾರ ಸಹಾಯವಾಗುತ್ತದೆ.
ಉದಾಹರಣೆಗೆ, ಕೊತ್ತಂಬರಿ ಬೀಜಗಳನ್ನು ಮತ್ತು ಜೀರಿಗೆ ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದರ ನೀರನ್ನು ಕುಡಿಯುವುದರಿಂದ ಎಷ್ಟು ಪ್ರಯೋಜನ ಸಿಗುತ್ತದೆ ಎಂಬುದು ನಮಗೆ ತಿಳಿದಿದೆ. ಅದೇ ರೀತಿ, ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸೇವಿಸಿದರೂ ಹಲವು ಅದ್ಭುತ ಲಾಭಗಳನ್ನು ಪಡೆಯಬಹುದು. ಕೇವಲ ನೆನಸಿಟ್ಟ ನೀರನ್ನ ಮಾತ್ರವಲ್ಲದೇ, ಕಾಳುಗಳನ್ನ ತಿನ್ನುವುದರಿಂದಲೂ ಆರೋಗ್ಯಕ್ಕೆ ಒಳ್ಳೆಯದು.
ಮೆಂತೆಕಾಳು(Fenugreek Seeds) ಸ್ವಲ್ಪ ಕಹಿಯಾದರೂ ಅದು ಆರೋಗ್ಯಕ್ಕೆ ಅತ್ಯಂತ ಹಿತಕರ. ಇದರಲ್ಲಿ ಅಗತ್ಯವಾದ ಖನಿಜಾಂಶಗಳು ಸಮೃದ್ಧವಾಗಿದ್ದು, ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಜೊತೆಗೆ, ಹಲವಾರು ಕಾಯಿಲೆಗಳು ಉಂಟಾಗುವುದನ್ನು ತಡೆಯುವ ಗುಣವೂ ಮೆಂತೆಕಾಳಿನಲ್ಲಿ ಇದೆ.
ತೂಕ ಇಳಿಸಲು, ಯಕೃತ್, ಕಿಡ್ನಿ ಮತ್ತು ಚಯಾಪಚಯಕ್ಕೆ ಇದು ತುಂಬಾ ಒಳ್ಳೆಯದು. ಮೆಂತ್ಯೆಕಾಳಿನ(Fenugreek Seeds )ನೀರಿನಿಂದ ಅದ್ಭುತ ಲಾಭಗಳು ಇವೆ. ಇದನ್ನು ನೀವು ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ನಿಮ್ಮ ಆಹಾರ ಕ್ರಮದಲ್ಲಿ ಮೊದಲಿಗೆ ಮೆಂತ್ಯೆ ನೀರನ್ನು ಕುಡಿದರೆ ಅದರಿಂದ ಯಾವ ಲಾಭಗಳು ಆಗಲಿದೆ.
ತೂಕ ಇಳಿಕೆಗೆ, ಯಕೃತ್ ಮತ್ತು ಕಿಡ್ನಿಯ ಆರೋಗ್ಯಕ್ಕೆ ಹಾಗೂ ಚಯಾಪಚಯವನ್ನು ಸಮತೋಲನಗೊಳಿಸಲು ಮೆಂತ್ಯೆಕಾಳು ತುಂಬಾ ಸಹಕಾರಿ. ಮೆಂತ್ಯೆಕಾಳನ್ನು ನೆನೆಸಿ ತಯಾರಿಸಿದ ನೀರು ಅನೇಕ ಅದ್ಭುತ ಲಾಭಗಳನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹವನ್ನು ಉತ್ತಮ ವಾಗಿಟ್ಟುಕೊಳ್ಳಬಹುದು. ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಬೆಳಗ್ಗೆ ಮೊದಲು ಮೆಂತ್ಯೆ ನೀರನ್ನು ಕುಡಿದರೆ ಅದರ ಫಲಿತಾಂಶಗಳು ಇನ್ನೂ ಉತ್ತಮವಾಗಿರುತ್ತವೆ.
ಬಾಣಂತಿಯರಿಗೆ ಸಹಕಾರಿ((Helpful for Breastfeeding Mothers))
ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಮೆಂತ್ಯೆ ಕಾಳು ಬಹಳ ಲಾಭಕಾರಿ. ಅದಕ್ಕಾಗಿ ಬಾಣಂತಿಯರಿಗೆ ಮೆಂತ್ಯೆ (Fenugreek Seeds) ಕಾಳಿನಿಂದ ತಯಾರಿಸಿದ ಲಾಡುಗಳನ್ನು ನೀಡುವ ಪದ್ಧತಿ ಇದೆ.ಏಕೆಂದರೆ ಇದು ಹಾಲಿನ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಮೆಂತ್ಯೆ ಕಾಳನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ ಅನೇಕ ಕಾಯಿಲೆಗಳ ವಿರುದ್ಧ ಸಹಜ ಚಿಕಿತ್ಸೆ ದೊರಕುತ್ತದೆ.ಮೆಂತ್ಯೆಯಲ್ಲಿ ಇರುವ ಕೆಲವು ವಿಶೇಷ ಅಂಶಗಳು ಗರ್ಭಕೋಶವನ್ನು ಮೊದಲಿನ ಸ್ಥಿತಿಗೆ ಮರಳಿಸಲು ಸಹಾಯ ಮಾಡುತ್ತವೆ. ಈ ಕಾರಣದಿಂದ ಮೆಂತ್ಯೆ ನೀರನ್ನು ಬಳಸುವುದು ಬಾಣಂತಿ ಮಹಿಳೆಯರಿಗೆ ಆರೋಗ್ಯಕ್ಕೆ ಹಿತಕರ.
ಸಕ್ಕರೆ ಮಟ್ಟ ನಿಯಂತ್ರಣ(Sugar level control)
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಲು ಮೆಂತ್ಯೆ ಕಾಳು ಬಹಳ ಪರಿಣಾಮಕಾರಿ ಎಂದು ತಿಳಿಯಲಾಗಿದೆ. ಆದ್ದರಿಂದ ಮಧುಮೇಹದಿಂದ ಬಳಲುತ್ತಿರುವವರು ಮೆಂತ್ಯೆ ಕಾಳನ್ನು ಬಳಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಜೀರ್ಣಕ್ರಿಯೆಗೆ ಸಹಕಾರಿ(Helpful for Digestion)
ಮೆಂತ್ಯೆ ಕಾಳು ಸ್ವಾಭಾವಿಕವಾಗಿ ಆಮ್ಲ ವಿರೋಧಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಜೀರ್ಣಕ್ರಿಯೆಗೆ ಉತ್ತಮವಾಗುತ್ತದೆ. ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ವಿಶೇಷವಾಗಿ ಮಳೆ ಮತ್ತು ಚಳಿಗಾಲದಲ್ಲಿ ಮೆಂತ್ಯೆ ಕಾಳು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ.
