ಮೆಂತ್ಯ ಬೀಜಗಳನ್ನು ಶತಮಾನಗಳಿಂದಲೂ ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತಿದೆ ಅವುಗಳ ಮಿತ ಸೇವನೆ ಒಳ್ಳೆಯದು ಆದರೆ ಅತಿಯಾದ ಸೇವನೆಯಿಂದ ಆರೋಗ್ಯದ ಮೇಲೆ ಹೇಗೆ ಅಡ್ಡಪರಿಣಾಮಗಳಾಗುತ್ತವೆಂಬುದು ಇಲ್ಲಿ ತಿಳಿಯೋಣ.
Kannada
ಮೆಂತ್ಯ ಅಥವಾ ಫೆನುಗ್ರೀಕ್ ಬೀಜಗಳು
ಫೈಬರ್, ಪ್ರೋಟೀನ್, ಕಬ್ಬಿಣ, ಮೆಗ್ನೀಸಿಯಮ್ ಇರುವ ಮೆಂತ್ಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದರ ಅಡ್ಡಪರಿಣಾಮಗಳು ಬಹಳ ಕಡಿಮೆ ಜನರಿಗೆ ತಿಳಿದಿದೆ.
Kannada
ಗರ್ಭಪಾತಕ್ಕೆ ಕಾರಣ ಮೆಂತ್ಯ?
ಗರ್ಭಾವಸ್ಥೆಯಲ್ಲಿ ಮೆಂತ್ಯ ನೀರು ಕುಡಿದರೆ ಗರ್ಭಪಾತವಾಗುವ ಅಪಾಯವಿದೆ ಎಂದು ಒಂದು ವರದಿ ಹೇಳುತ್ತದೆ. ಗರ್ಭಿಣಿಯರು ಮೆಂತ್ಯವನ್ನು ಹೆಚ್ಚು ತಿನ್ನಬಾರದು.
Kannada
ಅಲರ್ಜಿ ಇದ್ದರೆ ಮೆಂತ್ಯ ಹೇರ್ ಪ್ಯಾಕ್ ಬೇಡ
ಕೆಲವರಿಗೆ ಮೆಂತ್ಯದಿಂದ ಅಲರ್ಜಿ ಇರುತ್ತದೆ. ಅಂತಹವರು ಹೇರ್ ಪ್ಯಾಕ್‌ನಲ್ಲಿ ಮೆಂತ್ಯವನ್ನು ಬಳಸಿದರೆ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.
Kannada
ಆಸ್ತಮಾ ರೋಗಿಗಳು ಮೆಂತ್ಯ ತಿನ್ನಬಾರದು
ಆಸ್ತಮಾ ಇರುವವರು ಮೆಂತ್ಯ ತಿನ್ನಬಾರದು. ಇಲ್ಲದಿದ್ದರೆ ಆಸ್ತಮಾ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆಯಿದೆ.
Kannada
ಕಡಿಮೆ ಬಿಪಿ ಇರುವವರು ಮೆಂತ್ಯ ಬೇಡ
ಹೆಚ್ಚಿನ ಬಿಪಿ ಇರುವವರಿಗೆ ಮೆಂತ್ಯ ಒಳ್ಳೆಯದು. ಕಡಿಮೆ ಬಿಪಿ ಇರುವವರು ಮೆಂತ್ಯದಿಂದ ದೂರವಿರಬೇಕು.
Kannada
ಮೆಂತ್ಯ ನೀರು ಕುಡಿದರೆ ಗ್ಯಾಸ್ ಸಮಸ್ಯೆ
ಗ್ಯಾಸ್ ಸಮಸ್ಯೆ ಇರುವವರು ಮೆಂತ್ಯ ನೀರು ಕುಡಿಯಬಾರದು. ಹೆಚ್ಚು ಕುಡಿದರೆ ಗ್ಯಾಸ್ ಹೆಚ್ಚಾಗಿ ಹೊಟ್ಟೆ ಉಬ್ಬರವಾಗುತ್ತದೆ.