ಪಾಕಿಸ್ತಾನದ ಶ್ರೀಮಂತ ಹಿಂದೂ ಮಹಿಳೆ ಯಾರು? ವಾರ್ಷಿಕ ಆದಾಯ ಎಷ್ಟು?
ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಮಹಿಳೆ ಎಂದು ಸಂಗೀತಾ ಅವರನ್ನು ಗುರುತಿಸಲ್ಪಡುತ್ತಾರೆ. 45 ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ ನಟಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿಯೂ ಕೆಲಸ ಮಾಡಿದ್ದಾರೆ.

ಸಂಗೀತಾ
ನೆರೆಯ ಪಾಕಿಸ್ತಾನದಲ್ಲಿ ಸುಮಾರು 38 ಲಕ್ಷ ಹಿಂದೂಗಳು ವಾಸವಾಗಿದ್ದಾರೆ. ಅಲ್ಪಸಂಖ್ಯಾತ ಹಿಂದೂಗಳ ಸಾಮಾಜಿಕ ಸ್ಥಿತಿಗತಿ ಕೆಳ ಹಂತದಲ್ಲಿದೆ. ಈ ವ್ಯವಸ್ಥೆಯಲ್ಲಿಯೂ ಬೆರಳಣಿಕೆ ಹಿಂದೂಗಳು ಆರ್ಥಿಕವಾಗಿ ಉತ್ತಮವಾಗಿದೆ. ಸಂಗೀತಾ ಎಂಬವರನ್ನು ಪಾಕಿಸ್ತಾನದ ಶ್ರೀಮಂತ ಹಿಂದು ಮಹಿಳೆ ಎಂದು ಗುರುತಿಸಲಾಗುತ್ತದೆ.
39 ಕೋಟಿ ರೂಪಾಯಿ ಆದಾಯ
ಮಾಧ್ಯಮಗಳ ವರದಿ ಪ್ರಕಾರ, ಪಾಕಿಸ್ತಾನದಲ್ಲಿರುವ ಸಂಗೀತಾ ಅವರ ವಾರ್ಷಿಕ ಆದಾಯ 39 ಕೋಟಿ ರೂಪಾಯಿ ಆಗಿದೆ. ಸಂಗೀತಾ ಅವರು ಕಲಾವಿದೆಯಾಗಿದ್ದು, ಇವರನ್ನು ಪರವೀನ್ ರಿಜ್ವಿ ಎಂದೇ ಗುರುತಿಸಲಾಗುತ್ತದೆ. 1969ರಲ್ಲಿ ಬಿಡುಗಡೆಯಾದ ಕೋಹ್-ಎ-ನೂರ್ ಸಿನಿಮಾದಲ್ಲಿ ಪರವೀನ್ ರಿಜ್ವಿಯಾಗಿ ಸಂಗೀತಾ ನಟಿಸಿದ್ದರು. ಅಂದಿನಿಂದ ಬಹುತೇಕರು ಪಾತ್ರದ ಹೆಸರಿನಿಂದಲೇ ಸಂಗೀತಾ ಗುರುತಿಸಿಕೊಳ್ಳುತ್ತಾರೆ.
45 ವರ್ಷದ ಬಣ್ಣದ ಬದುಕು
14ನೇ ಜೂನ್ 1958ರಲ್ಲಿ ಜನಿಸಿದ ಸಂಗೀತಾ, ಸುಮಾರು 45 ವರ್ಷಗಳಿಂದ ಬಣ್ಣದ ಬದುಕಿನ ಇತಿಹಾಸ ಹೊಂದಿದ್ದಾರೆ. 1971ರ ರಿಯಾಜ್ ಶಾಹಿದ್ ಅವರ ಸಿನಿಮಾದಲ್ಲಿ ನಾಯಕಿಯಾಗಿ ಸಂಗೀತಾ ಮುನ್ನಲೆಗೆ ಬಂದರು. ನಟನೆ ಜೊತೆ ನಿರ್ದೇಶನ ಮತ್ತು ನಿರ್ಮಾಣದಲ್ಲಿಯೂ ಸಂಗೀತಾ ಗುರುತಿಸಿಕೊಂಡಿದ್ದಾರೆ. ಸುಮಾರು 120 ಸಿನಿಮಾಗಳಲ್ಲಿ ಸಂಗೀತಾ ಕೆಲಸ ಮಾಡಿದ್ದಾರೆ.
ಪಾಕಿಸ್ತಾನ ಸರ್ಕಾರದಿಂದ ಗೌರವ ಪ್ರಶಸ್ತಿ
ನಿಕ್ಹಾ, ಮುಟ್ಟಿ ಭರ್ ಚಾವಲ್, ಯೇ ಅಮನ್ ಮತ್ತು ನಾಮ್ ಮೇರಾ ಬದ್ನಾಮ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಪಾಕಿಸ್ತಾನ ಸಿನಿಲೋಕಕ್ಕೆ ಸಂಗೀತಾ ನೀಡಿದ್ದಾರೆ. ಸಂಗೀತಾ ಕಲಾಸೇವೆಯನ್ನು ಗಮನಿಸಿದ ಪಾಕಿಸ್ತಾನ ಸರ್ಕಾರ 2022ರಲ್ಲಿ 'ಪ್ರೈಡ್ ಆಫ್ ಫರ್‌ಪಾಮೆನ್ಸ್' ಪ್ರಶಸ್ತಿ ನೀಡಿ ಗೌರವಿಸಿದೆ.
ಸಿನಿಮಾ ಹಿನ್ನೆಲೆಯುಳ್ಳ ಕುಟುಂಬ
ಸಂಗೀತಾ ಕುಟುಂಬಸ್ಥರು ಸಿನಿಮಾ ಅಂಗಳದಲ್ಲಿಯೇ ಗುರುತಿಸಿಕೊಂಡಿದ್ದರು. ಸಂಗೀತಾ ಅವರ ತಾಯಿ ಮೆಹ್ತಾಬ್ ರಿಜ್ವಿ ಕಾರ್ಯಕ್ರಮದ ಬ್ಯುಸಿನೆಸ್‌ನಲ್ಲಿ ಸಕ್ರಿಯರಾಗಿದ್ದರು. ಸೋದರಿ ನಸ್ರೀನ್ ರಿಜ್ವಿ ಸಿನಿಮಾಗಳು ಹಾಡುಗಳನ್ನು ಬರೆಯುತ್ತಿದ್ದರು. ಸಂಗೀತಾ ಅವರು 2013 ರಲ್ಲಿ ಮುಂಬೈನಲ್ಲಿ ನಿಧನರಾದ ಬ್ರಿಟಿಷ್-ಅಮೇರಿಕನ್ ಬಾಲಿವುಡ್ ನಟಿ ಜಿಯಾ ಖಾನ್ ಅವರ ಚಿಕ್ಕಮ್ಮ ಕೂಡ ಆಗಿದ್ದರು.
ಇದನ್ನೂ ಓದಿ: Islamic NATO: ಈ ಒಂದು ಕಾರಣಕ್ಕೆ ಮುಸ್ಲಿಂ ರಾಷ್ಟ್ರಗಳಿಂದ 'ಇಸ್ಲಾಮಿಕ್ ನ್ಯಾಟೋ ರಚನೆ ಸಾಧ್ಯತೆ!
ಐಷಾರಾಮಿ ಜೀವನಶೈಲಿ
ಸುದೀರ್ಘ ಮತ್ತು ಯಶಸ್ವಿ ವೃತ್ತಿಜೀವನದ ಮೂಲಕ ಸಂಗೀತಾ ಪಾಕಿಸ್ತಾನದ ಜನಪ್ರಿಯ ಕಲಾವಿದೆಯಾಗಿದ್ದಾರೆ. ಇದೆಲ್ಲದರ ಜೊತೆ ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಮಹಿಳೆ ಎಂದು ಸಂಗೀತಾ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಸಂಗೀತಾ ಅವರ ಐಷಾರಾಮಿ ಜೀವನಶೈಲಿ ಮತ್ತು ಸಾಮಾಜಿಕ ಪ್ರಭಾವವು ಅವರನ್ನು ಪಾಕಿಸ್ತಾನದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ.
ಇದನ್ನೂ ಓದಿ: ಪಾಕಿಸ್ತಾನದ ಈ 6 ಮಹಿಳಾ ಕ್ರಿಕೆಟರ್ಸ್ ಮುಂದೆ ನಟಿಯರೂ ಫೇಲ್, ಅಷ್ಟೊಂದು ಬ್ಯೂಟಿ ಕ್ವೀನ್ಸ್!