ಪಾಕಿಸ್ತಾನದಲ್ಲಿ ಬಹುತೇಕ ಹಿಂದೂ ದೇವಾಲಯಗಳು ಧ್ವಂಸಗೊಂಡಿವೆ. ಆದರೆ ಹಿಂಗ್ಲಾಜ್ ಮಾತಾ ದೇವಾಲಯ ಮಾತ್ರ ಇಂದಿಗೂ ಭಯ ಹಾಗೂ ಭಕ್ತಿಯಿಂದ ಸುರಕ್ಷಿತವಾಗಿದೆ. ಈ ದೇವಾಲಯದ ಬಳಿ ನಡೆಯುವ ವಿಚಿತ್ರ ಘಟನೆಗಳಿಂದ ಪಾಕಿಸ್ತಾನ ಸೇನೆಯೇ ಭಯಭೀತವಾಗಿದೆ.
ಪಾಕಿಸ್ತಾನ ತನ್ನ ದೇಶದಲ್ಲಿರುವ ಬಹುತೇಕ ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದೆ. ಭಾರತ ಪಾಕಿಸ್ತಾನ ವಿಭಜನೆಗೂ ಮೊದಲು ಅಲ್ಲಿ 428 ದೇಗುಲಗಳಿದ್ದವು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ ಅಲ್ಲಿರುವ ದೇವಾಲಯಗಳ ಸಂಖ್ಯೆ ಬರೀ 31 ಎಂಬ ಮಾಹಿತಿ ಇದೆ. ಅಲ್ಲಿನ ಹಿಂದೂ ದೇವಾಲಯಗಳ ಸಂಖ್ಯೆ ಹೇಗೆ ಕಡಿಮೆಯಾಗಿದೆಯೋ ಅದೇ ರೀತಿ ಅಲ್ಲಿನ ಹಿಂದೂ ಜನಸಂಖ್ಯೆಯೂ ಕೂಡ ಅಷ್ಟೇ ಕಡಿಮೆ ಆಗಿದೆ. ಬಹುತೇಕ ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು, ದ್ವಿತೀಯ ದರ್ಜೆಯ ನಾಗರಿಕರಂತೆ ಬದುಕುತ್ತಿದ್ದಾರೆ. ಆದರೆ ಅಲ್ಲಿರುವ ಒಂದು ಹಿಂದೂ ದೇವಸ್ಥಾನ ಎಂದರೆ ಪಾಕಿಸ್ತಾನ ಸೇನೆ ಕೂಡ ಅದರ ಸಮೀಪ ಸುಳಿಯಲು ಭಯಪಡುತ್ತದೆ. ಅಲ್ಲಿಗೆ ಪ್ರತಿವರ್ಷ ಭಾರತ ಸೇರಿದಂತೆ ವಿಶ್ವದ ಮೂಲೆ ಮೂಲೆಯಿಂದ ಬರುವ ಹಿಂದೂ ಭಕ್ತರಿಗೆ ಅದು ಸುರಕ್ಷತೆಯನ್ನು ಕೂಡ ಒದಗಿಸುತ್ತದೆ. ಹಾಗಿದ್ದರೆ ಆ ದೇವಾಲಯ ಯಾವುದು ಅದರ ವಿಶೇಷತೆ ಏನು ಎಂಬುದನ್ನು ನಾವು ಈಗ ನೋಡೋಣ.
ಹಿಂಗ್ಲಾಜಾ ಮಾತಾ(Hinglaj Mata) ಇದು ಪಾಕಿಸ್ತಾನದ ಸಿಂಧ್ ಹಾಗೂ ಬಲೂಚಿಸ್ತಾನದಲ್ಲಿರುವ ಒಂದು ಪ್ರಸಿದ್ಧ ಹಿಂದೂ ದೇಗುಲ. ಬಲೂಚಿಸ್ತಾನದ ಬಹಳ ನಿರ್ಜನ ಪ್ರದೇಶದಲ್ಲಿರುವ ಈ ದೇಗುಲವೂ ಭಾರತ ಉಪಖಂಡದಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಹಳೆಯ ಶಕ್ತಿಪೀಠಗಳಲ್ಲಿ ಈ ದೇಗುಲ ಒಂದೆನಿಸಿದೆ. ಈ ದೇವಾಲಯದಲ್ಲಿ ಸಿಂಧ್‌ಗಳು ಹಾಗೂ ಬಲೂಚಿಸ್ತಾನದ ಜನ ಪೂಜೆ ಮಾಡುತ್ತಾರೆ. ಹಾಗೂ ಪಾಕಿಸ್ತಾನದಲ್ಲಿ ಭಯ ಹಾಗೂ ಭಕ್ತಿಯ ಕಾರಣಕ್ಕೆ ಹಾನಿಗೊಳಗಾಗದೇ ಉಳಿದ ಹಿಂದೂ ದೇವಾಲಯ ಇದಾಗಿದೆ.
ಹಿಂಗ್ಲಾಜ ಮಠ ಇರುವ ಈ ನಿಗೂಢವಾದ ಪ್ರದೇಶವನ್ನು ಪಾಕಿಸ್ತಾನ ಸೇನೆಯೂ ಝೋನ್ 51 ಎಂದು ಕರೆಯುತ್ತದೆ. ಈ ಝೋನ್ 51 ಎಂದು ಕರೆಯಲ್ಪಡುವುದು ಮಿಲಿಟರಿ ಕಾರಣಕ್ಕಲ್ಲ.ಬದಲಾಗಿ ಅಲ್ಲಿ ನಡೆಯುತ್ತಿರುವ ವಿಚಿತ್ರ ಹಾಗೂ ವಿವರಿಸಲಾಗದ ಘಟನೆಗಳ ಕಾರಣಕ್ಕೆ ಇಲ್ಲಿ ಜಿಪಿಎಸ್ ಸಿಗ್ನಲ್‌ಗಳು ಇದ್ದಕ್ಕಿದ್ದಂತೆ ಕಾಣದಾಗುತ್ತದೆ. ರೇಡಿಯೋ ತರಂಗಾಂತರಗಳು ಇಲ್ಲಿ ಸಂಪರ್ಕಕ್ಕೆ ಸಿಲುಕುವುದಿಲ್ಲ. ಹಾಗೂ ವಾಹನಗಳು ಇಲ್ಲಿ ಯಾವುದೇ ತಾಂತ್ರಿಕ ಕಾರಣಗಳಿಲ್ಲದೇ ಸ್ಥಗಿತಗೊಳ್ಳುತ್ತವೆ. ಜೊತೆಗೆ ಭಯಾನಕ ಮರಳು ಬಿರುಗಾಳಿ ಎಲ್ಲಿಂದಲೂ ಬೀಸಿ ಬರುತ್ತವೆ. ಹಾಗೆಯೇ ಇಲ್ಲಿ ನಡೆಯುವ ಘಟನೆಗಳನ್ನು ಇಲ್ಲಿ ಸೈನಿಕರು ಇನ್ನು ಅದ್ಭುತವಾಗಿ ವಿವರಿಸುತ್ತಾರೆ. ತಾವು ಏನೋ ವಿಚಿತ್ರವಾದ ಪ್ರಾಚೀನ ವಸ್ತುವನ್ನು ನೋಡುತ್ತಿರುವಂತಹ ಅನುಭವದ ಜೊತೆ ಇಲ್ಲಿನ ನಿಶ್ಯಬ್ಧತೆಯ ಜೊತೆಗೂ ಸದ್ದೊಂದು ಕೇಳಿಸುತ್ತದೆ ಎಂದು ಅವರು ಹೇಳುತ್ತಾರೆ.
ಒಂದು ಸಂದರ್ಭದಲ್ಲಿ ಈ ಹಿಂಗ್ಲಾಜ ಮಾತಾ ದೇಗುಲದ ಗಡಿಗೆ ಸಮೀಪ ಪಾಕಿಸ್ತಾನದ ಕಣ್ಗಾವಲು ಪಡೆ ಆಕ್ರಮಣ ಮಾಡಿತ್ತು. ಆದರೆ ಈ ವೇಳೆ ಎಲ್ಲಾ ಲೈಟ್‌ಗಳು ಇದ್ದಕ್ಕಿದ್ದಂತೆ ಆಫ್ ಆಗಿದ್ದವು. ಹಾಗೆಯೇ ಹಠಾತ್ ಆಗಿ ಬಿರುಗಾಳಿಯೊಂದು ಆ ಪ್ರದೇಶವನ್ನು ಆವರಿಸಿತು. ಹಾಗೆಯೇ ಒಬ್ಬ ಸೈನಿಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ಹಾಗೂ ಆತ ತಾನು ಎಂದಿಗೂ ಜೀವಮಾನದಲ್ಲಿ ಕಲಿಯದ ಸಂಸ್ಕೃತ ಭಾಷೆಯಲ್ಲಿ ಏನನ್ನೋ ಪಠಿಸುತ್ತಿದ್ದ. ಈ ಘಟನೆಯ ನಂತರ ಈ ಪ್ರದೇಶದಲ್ಲಿ ಸೈನಿಕರು ಅಗತ್ಯದ ಹೊರತುಪಡಿಸಿ ಓಡಾಡುವುದಿಲ್ಲ, ಹಾಗೂ ಇಲ್ಲಿ ಯಾವುದೇ ಕಾರ್ಯಾಚರಣೆಗಳನ್ನು ನಡೆಸುವುದಿಲ್ಲ, ಹಾಗೂ ಅಗತ್ಯವಿಲ್ಲದ ಹೊರತು ಆ ಪ್ರದೇಶವನ್ನು ತಪ್ಪಿಸಿ ಎಂದು ಸೇನೆಗೆ ಸೂಚಿಸಲಾಯ್ತು.
ಹಾಗೆಯೇ ಇನ್ನೊಂದು ಪ್ರಕರಣದಲ್ಲಿ ಸೇನೆಯ ಅಧಿಕಾರಿಯೊಬ್ಬರು ಆ ಪ್ರದೇಶವನ್ನು ಬ್ರೀಪಿಂಗ್ ಮಾಡುವ ವೇಳೆ ಅಪಹಾಸ್ಯ ಮಾಡಿದರು. ಆತ ಕೆಲ ದಿನಗಳಲ್ಲಿ ವೈದ್ಯರು ಗುರುತು ಮಾಡಲಾಗದಂತಹ ಕಾಯಿಲೆಯಿಂದ ಅಸ್ವಸ್ಥರಾಗಿ ಮೃತಪಟ್ಟರು. ಈ ಘಟನೆಯಿಂದ ಅಲ್ಲಿನ ಸ್ಥಳೀಯರಿಗೆ ಅಚ್ಚರಿ ಆಗಲಿಲ್ಲ, ಅವರು ದೇವಿಯನ್ನು ಅವಮಾನಿಸಬೇಡಿ ಎಂದು ಮಾತ್ರ ಸೈನಿಕರಿಗೆ ಹೇಳಿದರು. ಅಂದಿನಿಂದ ಆ ಪ್ರದೇಶದಲ್ಲಿ ಮಿಲಿಟರಿ ನೆಲೆಗಳು ಕೂಡ ಈ ದೇಗುಲವನ್ನು ಗೌರವಿಸುತ್ತವೆ. ಅಲ್ಲದೇ ಇಲ್ಲಿ ತಮ್ಮ ಪರವಾಗಿ ಪ್ರಾರ್ಥನೆ ಮಾಡುವಂತೆ ಹಿಂದೂ ಪುರೋಹಿತರಿಗೆ ಸೂಚಿಸುತ್ತಾರೆ.
ಪ್ರತಿವರ್ಷ ಸಾವಿರಾರು ಭಕ್ತರು ಈ ಹಿಂಗ್ಲಾಜ್ ಮಾತಾ ದೇಗುಲಕ್ಕೆ ಆಗಮಿಸುತ್ತಾರೆ. ಆದರೆ ಇಲ್ಲಿ ಬಾಹ್ಯ ಭದ್ರತೆಯನ್ನಷ್ಟೇ ಒದಗಿಸಲಾಗುತ್ತದೆ. ಆದರೆ ದೇಗುಲದ ವ್ಯಾಪ್ತಿಯಲ್ಲಿ ಯಾವುದೇ ಶಸ್ತ್ರಾಸ್ತಗಳಿಗೆ ಅನುಮತಿ ಇಲ್ಲ. ಹಾಗೆಯೇ ಯಾವುದೇ ಅಗೌರವ ತೋರುವಂತಿಲ್ಲ. ಸೇನೆಯ ಹಿರಿಯ ಅಧಿಕಾರಿಗಳು ಕೂಡ ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಹಿಂದೂ ದೇವಾಲಯಗಳು ಬಹುತೇಕ ನಾಶಕ್ಕೊಳಗಾಗಿರುವ ಈ ಪ್ರದೇಶದಲ್ಲಿ ಭಕ್ತಿ ಹಾಗೂ ಭಯದ ಕಾರಣಕ್ಕೆ ಈ ಹಿಂಗ್ಲಾಜಾ ಮಾತ ದೇವಾಲಯ ಹಾಗೆಯೇ ಉಳಿದಿದೆ.
