MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women
  • ಡಿಯರ್ ಲೇಡೀಸ್… ನಿಮ್ಮ ದೇಹದ ಕುರಿತಾದ ಈ ವಿಷ್ಯಗಳ ಬಗ್ಗೆ ಚಿಂತೆ ಮಾಡೋದನ್ನು ನಿಲ್ಲಿಸಿ!

ಡಿಯರ್ ಲೇಡೀಸ್… ನಿಮ್ಮ ದೇಹದ ಕುರಿತಾದ ಈ ವಿಷ್ಯಗಳ ಬಗ್ಗೆ ಚಿಂತೆ ಮಾಡೋದನ್ನು ನಿಲ್ಲಿಸಿ!

ಅನೇಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೂ, ಮಹಿಳೆಯರು ಇಂದಿಗೂ ಸಹ ತಮ್ಮ ಅನೇಕ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅವರು ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ. ಅಂತರರಾಷ್ಟ್ರೀಯ ಮಹಿಳಾ ದಿನದಂದು, ಯಾವ ವಿಷಯಗಳ ಬಗ್ಗೆ ಮಹಿಳೆಯರು ಯೋಚನೆ ಮಾಡಬಾರದು ನೋಡೋಣ.  

3 Min read
Suvarna News
Published : Mar 08 2024, 03:42 PM IST| Updated : Mar 08 2024, 03:52 PM IST
Share this Photo Gallery
  • FB
  • TW
  • Linkdin
  • Whatsapp
112

ಮಹಿಳೆಯಾಗಿರುವುದು ಎಂದರೆ ಕೀಳಾಗಿ ಕಾಣುವುದು, ನಿಮ್ಮ ದೈಹಿಕ ನೋಟದ (Physical Look) ಬಗ್ಗೆ ನಾಚಿಕೆಪಡುವುದು ಎಂದರ್ಥವಲ್ಲ. ಮಹಿಳೆಯಾಗಿರುವುದು ಎಂದರೆ ಪ್ರತಿಯೊಂದೂ ಸನ್ನಿವೇಶ ಅಥವಾ ದೈಹಿಕ ಪರಿಸ್ಥಿತಿಯಲ್ಲಿ ಆತ್ಮವಿಶ್ವಾಸದಿಂದಿರುವುದು (Confident) ಎಂದರ್ಥ. ಮಹಿಳೆಯಾಗಿರುವುದು ಎಂದರೆ ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುವುದು, ಒಂಟಿಯಾಗಿರುವುದು, ಎಲ್ಲವನ್ನು ಧೈರ್ಯದಿಂದ ಎದುರಿಸೋದು ಒಳಗೊಂಡಿದೆ. 

212

ಹೆಚ್ಚಿನ ಸಂದರ್ಭಗಳಲ್ಲಿ, ಮಹಿಳೆಯರು ತಮ್ಮ ದೈಹಿಕ ಲುಕ್ ಬಗ್ಗೆ ಬಹಳ ಯೋಚನೆ ಮಾಡ್ತಾರೆ, ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತಾರೆ. ಮಹಿಳಾ ದಿನವನ್ನು (womens day) ನಿಜವಾದ ಅರ್ಥದಲ್ಲಿ ಆಚರಿಸುವುದು ಎಂದರೆ ನಿಮ್ಮನ್ನು ನೀವು ಒಪ್ಪಿಕೊಂಡು ಮುಂದೆ ಸಾಗುವುದು ಎಂದು ತಜ್ಞರು ಹೇಳುತ್ತಾರೆ. ಮೊದಲನೆಯದಾಗಿ, ಮಹಿಳೆಯರು ತಮ್ಮ ಬಗೆಗಿನ ಯಾವ ವಿಷಯಗಳ ಬಗ್ಗೆ ಹೆಚ್ಚು ಚಿಂತಿಸಬಾರದು ನೋಡೋಣ. 

312

ಮಹಿಳೆಯರೇ ದೇಹದಲ್ಲಿನ ಈ ಬದಲಾವಣೆ ಸಾಮಾನ್ಯ, ಅದಕ್ಕಾಗಿ ನಾಚಿಗೆ ಬೇಡ… 

ಸೊಂಟ ಅಗಲವಾಗಿರುವ ಬಗ್ಗೆ 
ಹೆಚ್ಚಿನ ಮಹಿಳೆಯರು ತಮ್ಮ ಅಗಲವಾದ ಸೊಂಟದ ಬಗ್ಗೆ ಚಿಂತಿತರಾಗಿದ್ದಾರೆ. ಅಗಲ ಸೊಂಟವು (Waist Size)ತಮ್ಮ ದೇಹಕ್ಕೆ ಸರಿಯಾದ ಆಕಾರ ನೀಡೋದಿಲ್ಲ ಎಂದು ಅವರು ಭಾವಿಸುತ್ತಾರೆ. ಭೌತಿಕ ದೃಷ್ಟಿಕೋನದಿಂದ ನೋಡಿದರೆ, ಗಂಡು ಮತ್ತು ಹೆಣ್ಣಿನ ಸೊಂಟದ ಮೂಳೆ ಎಲ್ಲಾ ಆಯಾಮಗಳಲ್ಲಿ ಭಿನ್ನವಾಗಿರುತ್ತದೆ. ಮಹಿಳೆಯ ಸೊಂಟವು ಅಗಲವಾಗಿದೆ ಮತ್ತು ಮುಂಭಾಗದಿಂದ ಹಿಂಭಾಗಕ್ಕೆ ಹೆಚ್ಚು ಅಗಲ ಇರೋದಿಲ್ಲ. 

412

ಮಹಿಳೆಯರ ಸೊಂಟದ ರಚನೆ ಪುರುಷರಿಗಿಂತ ಭಿನ್ನ. ಮಹಿಳೆಯರಲ್ಲಿ ಅಗಲವಾದ ಸೊಂಟವು ಹಲವು ಪ್ರಯೋಜನಗಳನ್ನು ನೀಡುತ್ತದೆ. ಅಗಲವಾದ ಸೊಂಟವು ಹೆರಿಗೆಯ ಸಮಯದಲ್ಲಿ ಮಗುವಿಗೆ ಹೆಚ್ಚಿನ ಸ್ಥಳವನ್ನು ಒದಗಿಸುತ್ತದೆ. ಇದು ಡೆಲಿವರಿ ಪ್ರಕ್ರಿಯೆಯನ್ನು ಸ್ವಲ್ಪ ಸುಲಭಗೊಳಿಸುತ್ತದೆ. ಹಾಗಾಗಿ ಅಗಲ ಸೊಂಟದ ಬಗ್ಗೆ ನಾಚಿಕೆ ಬೇಡ. 

512

ಸ್ತನ ಜೋತು ಬೀಳುವುದು
ವಯಸ್ಸಾದಂತೆ ಮಹಿಳೆಯ ದೇಹದಲ್ಲಿ ಸಂಭವಿಸುವ ಅನೇಕ ನೈಸರ್ಗಿಕ ಬದಲಾವಣೆಗಳಲ್ಲಿ ಸ್ತನಗಳು ಕುಗ್ಗುವುದು (saggy breast)ಕೂಡ ಒಂದು. ಮಹಿಳೆಯರ ಸ್ತನಗಳು ಕೊಬ್ಬು ಮತ್ತು ಅಸ್ಥಿರಜ್ಜುಗಳಿಂದ ಮಾಡಲ್ಪಟ್ಟಿವೆ. ಸ್ನಾಯುಗಳಲ್ಲಿ ಅಂಗಾಂಶದ ಕೊರತೆ ಇದ್ದರೆ, ಸ್ತನಗಳು ಜೋತು ಬೀಳುತ್ತದೆ. ಯಾವುದೇ ರೀತಿಯ ವ್ಯಾಯಾಮವು ಕೂಡ ಸ್ತನಗಳ ಸಡಿಲತೆಯನ್ನು ಸರಿ ಮಾಡೋದಿಲ್ಲ. 

612

ಪ್ಲಾಸ್ಟಿಕ್ ಸರ್ಜರಿ (Plastic Surgery) ಇಲ್ಲದೆ ಸ್ತನ ಅಂಗಾಂಶ ಬೆಳೆಯಲು ಸಾಧ್ಯವಿಲ್ಲ. ಸ್ತನಗಳು ಕುಗ್ಗುವುದು ಅಥವಾ ಸ್ತನಗಳು ಜೋತು ಬೀಳುವುದು ದೈಹಿಕ ಅಂಗವೈಕಲ್ಯವಲ್ಲ ಅನ್ನೋದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನೀವು ಯಾರು ಎಂಬುದರ ಬಗ್ಗೆ ಹೆಮ್ಮೆ ಪಡಿರಿ. ನಿಯಮಿತವಾಗಿ ಎದೆಯ ಸ್ನಾಯುಗಳಿಗೆ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವಿಸುವ ಮೂಲಕ ಆರೋಗ್ಯದಿಂದಿರಿ. 
 

712

ಕಣ್ಣಿನ ಡಾರ್ಕ್ ಸರ್ಕಲ್ 
ಕೆಲವು ಮಹಿಳೆಯರ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್ (Dark circle)ಇರುತ್ತವೆ. ಇವು ವಿಟಮಿನ್ ಬಿ 12 ಕೊರತೆಯಿಂದ ಉಂಟಾಗಬಹುದು. ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯು ಕಣ್ಣುಗಳ ಕೆಳಗೆ ಕಪ್ಪು ಕಲೆಗಳಿಗೆ ಕಾರಣವಾಗಬಹುದು. ಎಸ್ಜಿಮಾ, ಯಾವುದೇ ರೀತಿಯ ಚರ್ಮದ ಅಲರ್ಜಿ, ಆಯಾಸ, ಆನುವಂಶಿಕತೆ, ಕಣ್ಣುಗಳ ಉಜ್ಜುವಿಕೆಯಿಂದ ಸಹ ಹೀಗೆ ಆಗಬಹುದು. 
 

812

ವಯಸ್ಸಾದಂತೆ ಚರ್ಮದ ಬದಲಾವಣೆಗಳು (skin changes) ಕಣ್ಣುಗಳ ಕೆಳಗೆ ಕಪ್ಪು ಕಲೆಗಳಿಗೆ ಕಾರಣವಾಗಬಹುದು ಎಂಬುದು ನಿಜ. ಈ ಬದಲಾವಣೆಗಳು ಬಂದರೆ, ಅವುಗಳನ್ನು ಸಂತೋಷದಿಂದ ಸ್ವೀಕರಿಸಬೇಕು. ಅದು ಬಿಟ್ಟು ದೇಹದ ನ್ಯೂನತೆ ಬಗ್ಗೆ ಚಿಂತಿಸೋದರಿಂದ ಪ್ರಯೋಜನವಿಲ್ಲ.
 

912

ಮರೆಯುವಿಕೆ ಹೆಚ್ಚಾಗಿದ್ದು ಹೇಗೆ? 
ಹೆಚ್ಚುತ್ತಿರುವ ವಯಸ್ಸಿನಲ್ಲಿ ಅತಿಯಾದ ಕೆಲಸದ ಹೊರೆ ಮತ್ತು ಮರೆಗುಳಿತನವೂ ಮಹಿಳೆಯರನ್ನು ಕಾಡುತ್ತದೆ. ಇದು ಒತ್ತಡ, ಖಿನ್ನತೆ, ನಿದ್ರೆಯ ಕೊರತೆ ಅಥವಾ ಥೈರಾಯ್ಡ್ ಸಮಸ್ಯೆಗಳಿಂದ ಉಂಟಾಗಬಹುದು. ಕೆಲವು ಔಷಧಿಗಳ ಅಡ್ಡಪರಿಣಾಮಗಳು (side effect of medicine), ಅನಾರೋಗ್ಯಕರ ಆಹಾರ, ಅಥವಾ ಸಾಕಷ್ಟು ದೇಹದ ದ್ರವಗಳನ್ನು ಹೊಂದಿಲ್ಲದಿರುವುದು ಸಹ ಇದಕ್ಕೆ ಕಾರಣವಾಗಬಹುದು.

1012

ದೈನಂದಿನ ಸಣ್ಣ ವಿಷಯಗಳನ್ನು ಮರೆಯುವುದು ರೋಗವಲ್ಲ, ಅಥವಾ ಅಜಾಗರೂಕತೆಯೂ ಅಲ್ಲ. ಅದಕ್ಕಾಗಿ ನಿಮ್ಮನ್ನು ನೀವು ಧೂಷಿಸಬೇಡಿ. ಕಾರ್ಯಗಳು, ನೇಮಕಾತಿಗಳು ಮತ್ತು ಇತರ ಘಟನೆಗಳನ್ನು ನೋಟ್ ಬುಕ್, ಕ್ಯಾಲೆಂಡರ್ (Calender) ಅಥವಾ ಎಲೆಕ್ಟ್ರಾನಿಕ್ ಪ್ಲ್ಯಾನರ್ (Electronic Planner) ನಲ್ಲಿ ಬರೆಯುವ ಮೂಲಕ ನೆನಪಿಟ್ಟುಕೊಳ್ಳಲು ಪ್ರಯತ್ನಿಸುವುದು ಉತ್ತಮ. ಜ್ಞಾಪಕ ಶಕ್ತಿಯನ್ನು (memory power) ಬಲಪಡಿಸಲು ಯೋಗ-ಧ್ಯಾನ ಮಾಡಿ.
 

1112

ನನಗೆ ವಯಸ್ಸಾಗುತ್ತಿದೆಯೇ?
ಐದನೇ ಮತ್ತು ಪ್ರಮುಖ ವಿಷಯವೆಂದರೆ ವಯಸ್ಸು ಹೆಚ್ಚಾಗುವ ಬಗ್ಗೆ ಚಿಂತಿಸುವುದು.  ಸಾಮಾನ್ಯವಾಗಿ ಮಹಿಳೆಯರು ತಮ್ಮ ವಯಸ್ಸನ್ನು ಕಡಿಮೆ ಮಾಡುವ ಬಗ್ಗೆ ಅಥವಾ ವಯಸ್ಸು ಹೆಚ್ಚಾಗುವುದರ ಬಗ್ಗೆ ಚಿಂತಿತರಾಗುತ್ತಾರೆ.  ಇದು ಅವರ ಮಾನಸಿಕ ಆರೋಗ್ಯದ (mental health) ಮೇಲೆ ನೇರ ಪರಿಣಾಮ ಬೀರುತ್ತದೆ. ಮಹಿಳೆಯರು ಯಾವಾಗಲೂ ವರ್ತಮಾನದಲ್ಲಿ ಬದುಕಬೇಕು. ವಯಸ್ಸಾದ ಬಗ್ಗೆ ಯೋಚಿಸಬೇಡಿ ಆದರೆ ಅದನ್ನು ಸಂಭ್ರಮಿಸಿ. ನಿಮ್ಮ ವಯಸ್ಸನ್ನು ಒಪ್ಪಿಕೊಳ್ಳಿ,  ಈ ಬಗ್ಗೆ ಭಯಪಡುವ ಅಥವಾ ನಾಚಿಕೆಪಡುವ ಅಗತ್ಯವಿಲ್ಲ.

1212

ಮಹಿಳೆಯರು ತಮ್ಮನ್ನು ತಾವು ಸೆಲೆಬ್ರೇಟ್ ಮಾಡಲು ಅನೇಕ ದಿನಗಳಿವೆ, ವಿಷಯಗಳಿವೆ. ಮಹಿಳೆಯರೆಂದರೆ  ಸೃಷ್ಟಿಕರ್ತರು. ಅವರು ಪುರುಷರಿಗಿಂತ ಹೆಚ್ಚು ದೀರ್ಘಾಯುಷ್ಯವನ್ನು (long live) ಹೊಂದಿರುತ್ತಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಬಟ್ಟೆ ಆಯ್ಕೆಗಳನ್ನು ಹೊಂದಿದ್ದಾರೆ. ಮಹಿಳೆಯರು ಉತ್ತಮ ವಾಗ್ಮಿಗಳು. ಆದ್ದರಿಂದ ಚಿಂತಿಸುವ ಬದಲು, ನೀವು ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಮಹಿಳೆಯರು
ಆರೋಗ್ಯ

Latest Videos
Recommended Stories
Recommended image1
52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
Recommended image2
ಕಟಿಹಾರ್ ಜಂಕ್ಷನ್‌ನಲ್ಲಿ ಮಹಿಳೆಯ ಭಯಾನಕ ಅನುಭವ: 30-40 ಪುರುಷರು ನುಗ್ಗಲು ಯತ್ನ, ಶೌಚಾಲಯದಲ್ಲಿ ಸಿಲುಕಿದ ಮಹಿಳೆ!
Recommended image3
ಈಕೆಯ ಮನೆ ಮುಖೇಶ್‌ ಅಂಬಾನಿ ಮನೆಗಿಂತ 62 ಪಟ್ಟು ದೊಡ್ಡದು! ಆದ್ರೂ ಬಸ್‌ನಲ್ಲಿ ಓಡಾಟ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved