ಬಿಲಿಯನೇರ್ ಮುಕೇಶ್ ಅಂಬಾನಿ ಮದ್ವೆಯಾಗೋ ಮೊದ್ಲು ನೀತಾ ಅಂಬಾನಿ ಸ್ಯಾಲರಿ ಎಷ್ಟಿತ್ತು ಗೊತ್ತಾ?
ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿ ಏನು ಕೆಲಸ ಮಾಡ್ತಿದ್ರು? ಹಳೆಯ ಕೆಲಸದಲ್ಲಿ ಅಂಬಾನಿ ಸೊಸೆಗೆ ದೊರಕುತ್ತಿದ್ದ ಸಂಬಳ ಎಷ್ಟು. ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ.
ಬಿಲಿಯನೇರ್ ಮುಕೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಅವರು ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧ ಸಮಾಜ ಸೇವಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಹಲವು ಚಾರಿಟಿ, ಟ್ರಸ್ಟ್‌ಗಳನ್ನು ಹೊಂದಿದ್ದಾರೆ. ಆದರೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿ ಅವರ ಜೀವನ ಹೇಗಿತ್ತು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ.
ಮುಕೇಶ್ ಅಂಬಾನಿ 1985ರಲ್ಲಿ ನೀತಾ ಅಂಬಾನಿಯನ್ನು ವಿವಾಹವಾದರು ಮತ್ತು ಇಬ್ಬರಿಗೆ ಮೂವರು ಮಕ್ಕಳಿದ್ದಾರೆ. ಅವಳಿಗಳಾದ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ, ಮತ್ತು ಕಿರಿಯ ಮಗ ಅನಂತ್ ಅಂಬಾನಿ. ಇಡೀ ಕುಟುಂಬವು ಅದ್ದೂರಿ ಜೀವನವನ್ನು ನಡೆಸುತ್ತಿದೆ. ಆದರೆ, ನೀತಾ ಅಂಬಾನಿ ಅವರ ಮದುವೆ ಮೊದಲಿನ ಜೀವನವು ಇವತ್ತಿನ ದಿನಗಳಂತೆ ಐಷಾರಾಮಿಯಾಗಿರಲಿಲ್ಲ.
ಮುಕೇಶ್ ಅಂಬಾನಿ ಅವರನ್ನು ಮದುವೆಯಾಗುವ ಮೊದಲು, ನೀತಾ ದಲಾಲ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದರು. ನೀತಾ ದಲಾಲ್ ತಂದೆ ರವೀಂದ್ರಭಾಯಿ, ಕುಮಾರ್ ಮಂಗಲಂ ಬಿರ್ಲಾ ಅವರ ನೇತೃತ್ವದ ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಹಿರಿಯ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು.
ನೀತಾ ಅಂಬಾನಿ ತಮ್ಮ 6ನೇ ವಯಸ್ಸಿನಲ್ಲಿ ಭರತನಾಟ್ಯ ನೃತ್ಯಗಾರ್ತಿಯಾಗಿ ತರಬೇತಿಯನ್ನು ಪ್ರಾರಂಭಿಸಿದರು. 20ನೇ ವಯಸ್ಸಿನವರೆಗೆ ನೃತ್ಯದ ಬಗ್ಗೆ ತಮ್ಮ ಉತ್ಸಾಹವನ್ನು ಮುಂದುವರೆಸಿದರು. ಶೀಘ್ರದಲ್ಲೇ ಅವರು ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಸಣ್ಣ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಜೀವನವನ್ನು ಸಂಪಾದಿಸಲು ಪ್ರಾರಂಭಿಸಿದರು.
ಮುಕೇಶ್ ಅಂಬಾನಿಯನ್ನು ಮದುವೆಯಾಗುವ ಮೊದಲು, ನೀತಾ ಅಂಬಾನಿ ಮುಂಬೈನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ತರಬೇತಿ ಪಡೆದ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ಒಂದು ನೃತ್ಯ ಪ್ರದರ್ಶನದ ಸಮಯದಲ್ಲಿ ಮುಕೇಶ್ ಅಂಬಾನಿ ತಂದೆ ಧೀರೂಭಾಯಿ ಅಂಬಾನಿ ನೀತಾ ದಲಾಲ್‌ನ್ನು ನೋಡಿದರು.
ಮುಕೇಶ್ ಅಂಬಾನಿಯನ್ನು ಮದುವೆಯಾಗಲು ಪ್ರಸ್ತಾಪ ಬಂದಾಗ ತನ್ನ ಮದುವೆಯ ನಂತರವೂ ಕೆಲಸ ಮಾಡುವುದನ್ನು ಯಾರೂ ತಡೆಯಾರದು ಎಂಬ ಷರತ್ತನ್ನೊಡ್ಡಿ ನೀತಾ ಮದುವೆಯಾದವರು. ಮದುವೆಯ ನಂತರವೂ ಸೇಂಟ್ ಫ್ಲವರ್ ನರ್ಸರಿ ಎಂಬ ಸಂಸ್ಥೆಯಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾಗಿ ನೀತಾ ಅಂಬಾನಿ ಹೇಳಿದರು.
ಸಿಮಿ ಗರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ, ನೀತಾ ಅಂಬಾನಿ ತಮ್ಮ ಸಂಭಾವನೆಯನ್ನೂ ಬಹಿರಂಗಪಡಿಸಿದ್ದಾರೆ. ಕೋಟ್ಯಾಧಿಪತಿಗಳ ಕುಟುಂಬದಲ್ಲಿ ವಿವಾಹವಾಗಿದ್ದರೂ ತನ್ನ ವೃತ್ತಿಪರ ಕೌಶಲ್ಯವನ್ನು ಉಳಿಸಿಕೊಂಡು ಆ ಸಮಯದಲ್ಲಿ ತಿಂಗಳಿಗೆ 800 ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಿದ್ದೆ ಎಂದು ನೀತಾ ಅಂಬಾನಿ ಬಹಿರಂಗಪಡಿಸಿದ್ದರು.