ಗರ್ಭಾವಸ್ಥೆಯಲ್ಲಿ ಪಬ್ಲಿಕ್ ಟಾಯ್ಲೆಟ್ ಬಳಕೆ ತುಂಬಾನೆ ಡೇಂಜರ್ !
ಗರ್ಭಾವಸ್ಥೆಯಲ್ಲಿ, ಸಣ್ಣ ವಿಷಯದ ಬಗ್ಗೆ ಸಹ ತುಂಬಾನೆ ಕಾಳಜಿ ವಹಿಸಬೇಕಾಗುತ್ತದೆ, ಇಲ್ಲದಿದ್ದರೆ ತಾಯಿ ಅಥವಾ ಮಗುವಿಗೆ ಸಮಸ್ಯೆಗಳು ಉಂಟಾಗಬಹುದು. ಗರ್ಭಾವಸ್ಥೆಯಲ್ಲಿ ನೀವು ಮನೆಯಿಂದ ಹೊರಬಂದಾಗ ಸಾರ್ವಜನಿಕ ಶೌಚಾಲಯಗಳನ್ನು ಬಳಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ಗರ್ಭಿಣಿ ಮಹಿಳೆಯೂ ಇಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದಿರಬೇಕು.
ಭಾರತದಲ್ಲಿ ಸಾರ್ವಜನಿಕ ಶೌಚಾಲಯಗಳ (publci toilet) ಸ್ಥಿತಿ ತುಂಬಾ ಕೆಟ್ಟದಾಗಿದೆ. ನೀವು ಮನೆಯಿಂದ ಹೊರಬಂದಾಗ, ಅದನ್ನು ಬಳಸಲೇ ಬೇಕಾದಂತಹ ಸ್ಥಿತಿ ಕೆಲವೊಮ್ಮೆ ಉದ್ಭವವಾಗುತ್ತೆ. ಆದರೆ ಅವುಗಳು ಬಳಕೆ ಮಾಡಲಾರದಂತಹ ಸ್ಥಿತಿಯಲ್ಲಿರುತ್ತೆ. ಈ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಆದರೆ ಅವುಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಬಳಕೆ ಮಾಡುವವರಿಗೆ ಸಮಸ್ಯೆ ಉಂಟಾಗಬಹುದು.
ಗರ್ಭಾವಸ್ಥೆಯಲ್ಲಿ, ಮನೆಯಿಂದ ಹೊರಬಂದಾಗ ನೀವು ಸಾರ್ವಜನಿಕ ಶೌಚಾಲಯವನ್ನು ಬಳಸಬೇಕಾಗಬಹುದು. ಸಾರ್ವಜನಿಕ ಶೌಚಾಲಯಗಳು ಅಷ್ಟು ಸ್ವಚ್ಛವಾಗಿಲ್ಲ ಮತ್ತು ಅನೇಕ ರೀತಿಯ ಸೋಂಕುಗಳಿಗೆ ಕಾರಣವಾಗಬಹುದು. ನೀವು ಗರ್ಭಿಣಿಯಾಗಿದ್ದರೆ ಮತ್ತು ಈ ಸಮಯದಲ್ಲಿ ಸಾರ್ವಜನಿಕ ಶೌಚಾಲಯವನ್ನು ಬಳಸುವುದು ನಿಮಗೆ ಸುರಕ್ಷಿತವೇ ಅಥವಾ ನೀವು ಹೊರಗೆ ಹೋಗುವಾಗ ಗರ್ಭಾವಸ್ಥೆಯಲ್ಲಿ (pregnancy) ಅವುಗಳನ್ನು ಬಳಸಬೇಕೇ ಎಂದು ಯೋಚಿಸುತ್ತಿದ್ದರೆ, ಈ ಲೇಖನವು ನಿಮಗೆ ಸಹಾಯ ಮಾಡುತ್ತೆ.
ನೀವು ಏನು ಮಾಡಬಹುದು?
ಗರ್ಭಾವಸ್ಥೆಯಲ್ಲಿ ಹೊರಗೆ ಹೋಗುವಾಗ ನೀವು ಭಾರತೀಯ ಶೌಚಾಲಯವನ್ನು ಬಳಸಬೇಕು. ಇಂಡಿಯನ್ ಕಮೋಡ್ ದೇಹದ ಯಾವುದೇ ಭಾಗಕ್ಕೆ ಸಂಪರ್ಕವಾಗದ ಕಾರಣ ಇವು ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತವೆ. ಆದರೆ ವೆಸ್ಟರ್ನ್ ಕಮೋಡ್ ಮೇಲೆ ಕುಳಿತುಕೊಳ್ಳುವುದರಿಂದ ನಿಮಗೆ ಸೋಂಕು ಉಂಟಾಗಬಹುದು. ಡಿಸ್ಪೋಸಬಲ್ ಟಾಯ್ಲೆಟ್ ಸೀಟ್ ಕವರ್ ಗಳು (disposable toilet seat cover) ಆನ್ ಲೈನ್ ನಲ್ಲಿ ಅಥವಾ ಕೆಮಿಸ್ಟ್ ಸ್ಟೋರ್ ಗಳಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ನೀವು ಅವುಗಳನ್ನು ಸಹ ಬಳಸಬಹುದು.
ಟಾಯ್ಲೆಟ್ ಪೇಪರ್ ಸಹ ಕೆಲಸ ಮಾಡುತ್ತದೆ
ನಿಮ್ಮ ಬಳಿ ಡಿಸ್ಪೋಸಬಲ್ ಸೀಟ್ ಕವರ್ ಇಲ್ಲದಿದ್ದರೆ, ಟಾಯ್ಲೆಟ್ ಸೀಟ್ ಕವರ್ ಮಾಡಲು ಟಾಯ್ಲೆಟ್ ಪೇಪರ್ (toilet paper) ಸಹ ಬಳಸಬಹುದು. ನೀವು ಟಾಯ್ಲೆಟ್ ಸೀಟ್ ಸ್ಯಾನಿಟೈಸರ್ ಸ್ಪ್ರೇ ಬಾಟಲಿ ಸಹ ಕ್ಯಾರಿ ಮಾಡಬಹುದು, ಇದು ಸೀಟನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿಕೊಡುತ್ತದೆ.
ವೆಸ್ಟರ್ನ್ ಕಮೋಡ್ ಸುರಕ್ಷತೆವೇ?
ನೀವು ಪಾಶ್ಚಿಮಾತ್ಯ ಶೌಚಾಲಯವನ್ನು (western toilet) ಬಳಸುತ್ತಿದ್ದರೆ, ಅದನ್ನು ಬಳಸಿದ ನಂತರ ನಿಮ್ಮ ಖಾಸಗಿ ಭಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ. ಟಾಯ್ಲೆಟ್ ಸೀಟ್ ನೊಂದಿಗೆ ಸಾಧ್ಯವಾದಷ್ಟು ಕಡಿಮೆ ಸಂಪರ್ಕ ಹೊಂದಲು ಪ್ರಯತ್ನಿಸಿ, ಇಲ್ಲವಾದರೆ, ಬೇಗನೆ ಸೋಂಕು ಉಂಟಾಗುವ ಸಾಧ್ಯತೆ ಇದೆ.
ರಕ್ಷಿಸುವುದು ಹೇಗೆ?
ಟಾಯ್ಲೆಟ್ ಸೀಟನ್ನು (toilet seat) ಮುಟ್ಟದಿರಲು ಪ್ರಯತ್ನಿಸಿ. ವಾಶ್ ಬೇಸಿನ್ ಸುತ್ತಮುತ್ತಲಿನ ಪ್ರದೇಶ, ಶೌಚಾಲಯದ ಸ್ಥಳ ಮತ್ತು ಸಾರ್ವಜನಿಕ ಶೌಚಾಲಯದ ಇತರ ಯಾವುದೇ ಮೇಲ್ಮೈ ಸೋಂಕಿನ ಮೂಲವಾಗಿರಬಹುದು. ಟಾಯ್ಲೆಟ್ ಸೀಟನ್ನು ಎತ್ತುವಾಗ ಪೇಪರ್ ನ್ಯಾಪ್ಕಿನ್ ಗಳು ಅಥವಾ ಟಿಶ್ಯೂ ಪೇಪರ್ ಬಳಸಿ, ಬಾತ್ ರೂಮ್ ಬಾಗಿಲನ್ನು ತೆರೆದಾಗ ಮತ್ತು ಮುಚ್ಚಿದ ನಂತರ ನಿಮ್ಮ ಕೈಗಳನ್ನು ಸಾಬೂನಿನ ಬದಲು ಲಿಕ್ವಿಡ್ ಸೀಪ್ ನಿಂದ ತೊಳೆಯಿರಿ.
ಮನೆಗೆ ಬಂದ ಕೂಡಲೇ ಸ್ವಚ್ಛಗೊಳಿಸಿ
ಟಿಶ್ಯೂಗಳು, ವೆಟ್ ವೈಪ್ ಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್ (hand sanitizer) ನಿಮ್ಮೊಂದಿಗೆ ಇರಿಸಿಕೊಳ್ಳಿ. ಪ್ರತಿ ಸಾರ್ವಜನಿಕ ಶೌಚಾಲಯದಲ್ಲಿ ಹ್ಯಾಂಡ್ ಡ್ರೈಯರ್ ಗಳು ಮತ್ತು ಟಿಶ್ಯೂಗಳು ಲಭ್ಯವಿರುವುದಿಲ್ಲ. ಕೆಲವರಿಗೆ ನೀರಿನ ಕೊರತೆಯೂ ಇರಬಹುದು. ವಾಶ್ ರೂಮ್ ಗೆ ಹೋದ ನಂತರ, ನಿಮ್ಮ ಅಂಗೈಗಳಿಗೆ ಸ್ಯಾನಿಟೈಸರ್ ಹಚ್ಚಿ ಮತ್ತು ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
ನಿಮ್ಮ ಉಗುರುಗಳು ಮತ್ತು ನಿಮ್ಮ ಕೈಗಳ ಹಿಂಭಾಗವನ್ನು ಕ್ಲೀನ್ ಮಾಡಲು ಮರೆಯಬೇಡಿ. ನೀವು ಮನೆಗೆ ಬಂದ ಕೂಡಲೇ ನಿಮ್ಮನ್ನು ನೀವು ಮೊದಲಿಗೆ ಸ್ವಚ್ಛಗೊಳಿಸಿಕೊಳ್ಳಿ. ನೀವು ಮನೆಗೆ ಮರಳಿದ ತಕ್ಷಣ ಉಗುರುಬೆಚ್ಚಗಿನ ನೀರಿನಿಂದ ನಿಮ್ಮ ಕೈಗಳು ಮತ್ತು ಖಾಸಗಿ ಭಾಗಗಳನ್ನು ಚೆನ್ನಾಗಿ ತೊಳೆಯಿರಿ. ಇಲ್ಲವಾದರೆ ಸ್ನಾನ ಮಾಡಿಕೊಂಡರೂ ಸಹ ಉತ್ತಮ.
ನೀವು ರಸ್ತೆಯ ಮೂಲಕ ಪ್ರಯಾಣಿಸುವಾಗ ಮತ್ತು ನೀವು ದೀರ್ಘ ಪ್ರಯಾಣವನ್ನು ಹೊಂದಿರುವಾಗ, ನಿಮ್ಮ ಫೋನ್ ನಲ್ಲಿ ಮ್ಯಾಪ್ಸ್ ಅಪ್ಲಿಕೇಶನ್ ನಲ್ಲಿ ಸಾರ್ವಜನಿಕ ಶೌಚಾಲಯ ಹುಡುಕಿ. ಸಾಧ್ಯವಾದರೆ, ಹೋಟೆಲ್, ರೆಸ್ಟೋರೆಂಟ್ ಅಥವಾ ಪೆಟ್ರೋಲ್ ಪಂಪ್ ಗಳಲ್ಲಿ ಟಾಯ್ಲೆಟ್ ಬಳಸೋದು ಉತ್ತಮ. ಯಾಕೆಂದರೆ ಅಂತಹ ಸ್ಥಳಗಳಲ್ಲಿ ಶೌಚಾಲಯಗಳನ್ನು ಸಾಮಾನ್ಯವಾಗಿ ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತದೆ.