Asianet Suvarna News Asianet Suvarna News

Women Health: ಬಾಣಂತಿಯರಿಗೆ ಹೇರುವ ಈ ನಿಯಮದಲ್ಲಿ ಎಷ್ಟು ಸತ್ಯವಿದೆ?

ಹೆರಿಗೆಯಾದ್ಮೇಲೆ ಒಬ್ಬೊಬ್ಬರು ಒಂದೊಂದು ಸಲಹೆ ನೀಡ್ತಾರೆ. ಹೊಸ ಅನುಭವದ ಜೊತೆ ಒಂದಿಷ್ಟು ನಿಯಮಗಳು ಮಹಿಳೆಯನ್ನು ಗೊಂದಲಕ್ಕೀಡು ಮಾಡುತ್ತದೆ. ಆದ್ರೆ ಹೆರಿಗೆ ನಂತ್ರ ಹೇಳುವ ಎಲ್ಲ ನಿಯಮಗಳಲ್ಲೂ ಸತ್ಯವಿಲ್ಲ. ಅದನ್ನು ಪಾಲಿಸಬೇಕಾಗಿಲ್ಲ. 
 

Postpartum Care Myths Busted
Author
First Published Nov 5, 2022, 11:48 AM IST

ತಾಯಿಯಾಗುವುದು ಮಹಿಳೆಯ ಸೌಭಾಗ್ಯ ಎನ್ನಲಾಗುತ್ತದೆ. ಇದು ಮಹಿಳೆಗೆ ಮರು ಹುಟ್ಟು. ತಾಯಿಯಾಗುವ ಅನುಭವವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಅದೊಂದು ಅದ್ಭತ, ಸುಂದರ ಭಾವನೆಯಾಗಿದೆ. ಪ್ರತಿಯೊಂದು ಹೆಣ್ಣು ಕೂಡ ತಾಯಿಯಾಗುವ ಮಹದಾಸೆ ಹೊಂದಿರುತ್ತಾಳೆ. ಮಗು ಗರ್ಭದಲ್ಲಿ ಬೆಳೆಯುತ್ತಿದೆ ಎಂಬ ವಿಷ್ಯ ಗೊತ್ತಾದಾಗ ಆಕೆಯ ಸಂತೋಷಕ್ಕೆ ಪಾರವೇ ಇರೋದಿಲ್ಲ. ಗರ್ಭಾವಸ್ಥೆಯಲ್ಲಿ ತನ್ನ ಆರೋಗ್ಯದ ಜೊತೆ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಹೆರಿಗೆ ನಂತ್ರ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. 

ಹೆರಿಗೆ (Childbirth) ನಂತ್ರ ಮಹಿಳೆ ದೇಹದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗಿರುತ್ತದೆ. ಒಂದು ಕಡೆ ಮಗುವಿನ ಆರೈಕೆ ಮಾಡ್ಬೇಕು. ಮತ್ತೊಂದು ಕಡೆ ತನ್ನ ಆರೋಗ್ಯವನ್ನು ನೋಡಿಕೊಳ್ಳಬೇಕು. ಹೆರಿಗೆ ನಂತ್ರ ಮಹಿಳೆಯರು ಹೇಗಿರಬೇಕು ಎನ್ನುವ ಬಗ್ಗೆ ನಮ್ಮಲ್ಲಿ ಅನೇಕ ನಂಬಿಕೆಯಿದೆ. ಹಿಂದಿನ ಕಾಲದಲ್ಲಿ ಅದನ್ನು ಅತಿ ಕಠಿಣವಾಗಿ ಪಾಲನೆ ಮಾಡ್ತಿದ್ದರು. ಬಾಣಂತಿ ಯಾವುದೇ ಕಾರಣಕ್ಕೂ ಮೂರು ತಿಂಗಳವರೆಗೆ ಮನೆಯಿಂದ ಹೊರಗೆ ಬರುವಂತಿರಲಿಲ್ಲ. ಹಾಗೆಯೇ ಕೆಲವೊಂದು ಅಲಿಖಿತ ನಿಯಮಗಳನ್ನು ಹೇರಲಾಗ್ತಾಯಿತ್ತು. ಈಗ್ಲೂ ಕೆಲವು ಕಡೆ ತಿನ್ನುವುದರಿಂದ ಹಿಡಿದು ಸ್ನಾನದವರೆಗೆ ಅನೇಕ ನಿಯಮಗಳನ್ನು ಪಾಲಿಸಬೇಕು. ಇವುಗಳಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ಮೊದಲನೇ ಸುಳ್ಳು (Myth) - ಪ್ರತಿ ಬಾಣಂತಿಯನ್ನು ಕಾಡುತ್ತೆ ಖಿನ್ನತೆ  : ಹೆರಿಗೆಯ ನಂತರ ಹೆಚ್ಚಿನ ಮಹಿಳೆಯರು ಬೇಬಿ ಬ್ಲೂಸ್ (Baby Blues) ಅಥವಾ ಖಿನ್ನತೆ (Depression) ಯನ್ನು ಎದುರಿಸಬೇಕಾಗಬಹುದು ಎಂಬುದು ನಿಜ. ಆದರೆ ಇದು ಪ್ರತಿ ಮಹಿಳೆಗೆ ಕಾಡುತ್ತದೆ ಎಂದಲ್ಲ. ಕೆಲವರು ಬೇಬಿ ಬ್ಲೂಸ್ ಅನ್ನು ಖಿನ್ನತೆ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಈ ಎರಡು ಸಂಪೂರ್ಣವಾಗಿ ವಿಭಿನ್ನವಾಗಿವೆ. ಬೇಬಿ ಬ್ಲೂಸ್ ಕೆಲವೇ ದಿನಗಳಲ್ಲಿ ಹೋಗುತ್ತದೆ. ಆದ್ರೆ ಬಾಣಂತಿ ಸನ್ನಿ ಅಂದ್ರೆ ಖಿನ್ನತೆಗೆ  ಚಿಕಿತ್ದೆ ಅಗತ್ಯವಿರಬಹುದು.

ಎರಡನೇಯ ಸುಳ್ಳು-  ಹೆಚ್ಚು ಹಾಲು ಸೇವನೆ ಮಾಡಿದ್ರೆ ಸ್ತನಪಾನ ಸುಲಭ : ಬಾಣಂತಿ ಹಾಲು ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದು ನಿಜ. ಹಾಲಿನಲ್ಲಿ ಕೊಬ್ಬು ಮತ್ತು ಪ್ರೋಟೀನ್ ಸಿಗುತ್ತದೆ. ದಿನಕ್ಕೆ ಎರಡು ಬಾರಿ ಸುಮಾರು 150 ಮಿಲಿ ಹಾಲು ತೆಗೆದುಕೊಂಡರೆ ಸಾಕು. ಹೆಚ್ಚಿನ ಹಾಲು ಸೇವನೆ ಮಾಡಿದ್ರೆ ಎದೆ ಹಾಲು ಹೆಚ್ಚಾಗುತ್ತದೆ ಎಂಬುದು ಸುಳ್ಳು. ಹಾಲಿನ ಜೊತೆ ಉತ್ತಮ ಆಹಾರ ಸೇವನೆ ಮಾಡುವುದು ಮುಖ್ಯವಾಗುತ್ತದೆ.

ಆರೋಗ್ಯಕರ ಮಗು ಬೇಕಾ? ಹಾಗಾದ್ರೆ ತಪ್ಪದೇ ಇವುಗಳನ್ನ ಟ್ರೈ ಮಾಡಿ

ಮೂರನೇ ಸುಳ್ಳು – ಅನಾರೋಗ್ಯದಿಂದ ಬಳಲುವ ಬಾಣಂತಿ ಮಗುವಿಗೆ ಸ್ತನಪಾನ ಮಾಡಬಾರದು :  ಇದು ಕೂಡ ಸಂಪೂರ್ಣ ಸತ್ಯವಲ್ಲ. ಕೆಲ ರೋಗಗಳಲ್ಲಿ ಮಾತ್ರ ವೈದ್ಯರು ಎದೆ ಹಾಲು ನೀಡದಂತೆ ತಾಯಿಗೆ ಸಲಹೆ ನೀಡ್ತಾರೆ. ಸೋಂಕು ಹರಡದ ಸಮಯದಲ್ಲಿ ಆರಾಮವಾಗಿ ಸ್ತನಪಾನ ಮಾಡಬಹುದು. 

ಅಯ್ಯೋ, ನಾನೇ ಹೇಳಿದ್ರೂ ಗಂಡ ಇಗ್ನೋರ್ ಮಾಡ್ತಾನೆ ಅಂತ ಬೇಜಾರು ಮಾಡಿ ಕೊಳ್ಳಬೇಡಿ, ಹೀಗ್ ಮಾಡಿ

ನಾಲ್ಕನೇಯ ಸುಳ್ಳು - ಹೆರಿಗೆಯ ನಂತರ ಹೆಚ್ಚು ನೀರು ಸೇವನೆ ಯೋಗ್ಯವಲ್ಲ : ಹಿಂದಿನ ಕಾಲದಲ್ಲಿ ಹೆರಿಗೆ ನಂತ್ರ ಬಾಣಂತಿಗೆ ನೀರನ್ನು ನೀಡ್ತಿರಲಿಲ್ಲ. ಇದ್ರಿಂದ ಆಕೆಗೆ ಶೀತವಾಗುತ್ತದೆ ಎಂಬ ಭಯವನ್ನು ಹೊಂದಿದ್ದರು. ಜೊತೆಗೆ ಆಕೆ ಹೊಟ್ಟೆ ಊದಿಕೊಳ್ಳುತ್ತದೆ ಎನ್ನುತ್ತಿದ್ದರು. ಕೋಣೆಯಲ್ಲಿ ಸ್ವಲ್ಪ ನೀರನ್ನಿಟ್ಟು, ಅದನ್ನು ಮಾತ್ರ ಸೇವನೆ ಮಾಡಲು ಹೇಳ್ತಿದ್ದರು. ಆದ್ರೆ ಹೆರಿಗೆ ನಂತ್ರ ನೀರು ಸೇವನೆ ಮಾಡುವುದು ಮುಖ್ಯ ಎಂಬ ಅಂಶವನ್ನು ಈಗಿನ ಮಹಿಳೆಯರು ಅರಿತಿದ್ದಾರೆ. ನೀರು ದೇಹಕ್ಕೆ ಬಹಳ ಮುಖ್ಯ. ಬಾಣಂತಿ ನೀರು ಸೇವನೆ ಮಾಡಿದ್ರೆ ಆಕೆ ದೇಹ ಹೈಡ್ರೀಕರಣಗೊಳ್ಳುತ್ತದೆ. ಇದ್ರಿಂದ ದೇಹ  ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಕಡಿಮೆ ನೀರು ಸೇವನೆ ಮಾಡಿದ್ರೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡಬಹುದು. 
 

Follow Us:
Download App:
  • android
  • ios