ನೀತಾ ಅಂಬಾನಿ ಮಾತ್ರ ರೂಪವಂತೆ ಅಲ್ಲ; ತಂಗಿನೂ ಸಖತ್ ಬ್ಯೂಟಿ, ಸೂಪರ್ ಮಾಡೆಲ್!
ಕೋಟಿ ಕೋಟಿ ಆಸ್ತಿಯ ಒಡತಿ, ಫ್ಯಾಷನ್ ಐಕಾನ್ ನೀತಾ ಅಂಬಾನಿ. ತಮ್ಮ ಕಾಸ್ಟ್ಲೀ ಉಡುಪು, ಆಸೆಸರೀಸ್‌ಗಳಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಹಾಗೆಯೇ ನೀತಾ ಅಂಬಾನಿ ತಂಗಿ ಕೂಡಾ ಸಖತ್ ಬ್ಯೂಟಿಫುಲ್ ಆಗಿದ್ದಾರೆ ಅನ್ನೋದು ನಿಮ್ಗೊತ್ತಾ?
ಅಂಬಾನಿ ಕುಟುಂಬದ ಸದಸ್ಯರು ಮನೆಯಿಂದ ಹೊರಬಂದರೆ ಸಾಕು ಅವರ ಕಾಸ್ಟ್ಲೀ ದಿರಿಸು, ಆಸೆಸ್ಸರೀಸ್, ಬ್ಯಾಗ್ ಎಲ್ಲರ ಗಮನ ಸೆಳೆಯುತ್ತದೆ. ಅದರಲ್ಲೂ ಫ್ಯಾಷನ್ ಐಕಾನ್ ನೀತಾ ಅಂಬಾನಿ, ಯಾವಾಗಲೂ ತಮ್ಮ ಅತ್ಯಾಕರ್ಷಕ ಉಡುಪು ಹಾಗೂ ಜ್ಯುವೆಲ್ಸ್‌ಗಳಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಕೋಟಿ ಕೋಟಿ ಆಸ್ತಿಯ ಒಡತಿಯಾಗುವ ಮುನ್ನ ನೀತಾ ಅಂಬಾನಿ ಮಧ್ಯಮ ವರ್ಗದ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು.
ನೀತಾ ಅಂಬಾನಿಯವರ ವಯಸ್ಸು 59 ಆದರೂ ಅವರು ಕೆಲವು ಕಾರ್ಯಕ್ರಮಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸುತ್ತಾರೆ. ಹಾಗೆಯೇ ಅವರ ತಂಗಿ ಕೂಡಾ ಸಖತ್ ಬ್ಯೂಟಿಫುಲ್ ಆಗಿದ್ದಾರೆ. ಹೌದು, ನೀತಾ ಅಂಬಾನಿ ತಂಗಿ ಮಮತಾ ದಲಾಲ್ ಸಹ ತುಂಬಾ ಸುಂದರವಾಗಿದ್ದಾರೆ. ಮನೀಶ್ ಮಲ್ಹೋತ್ರಾ ಡಿಸೈನರ್ ಬಟ್ಟೆಯ ಬ್ರ್ಯಾಂಡ್ ಪ್ರಾಯೋಜಕತ್ವದಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ.
ನೀತಾ ಅಂಬಾನಿ ಅವರ ತಂಗಿ ಮಮತಾ ದಲಾಲ್ ಬಹಳಷ್ಟು ಜನರಿಗೆ ಪರಿಚಯವಿಲ್ಲ. ಮಮತಾ ದಲಾಲ್ ಗುಜರಾತಿ ಕುಟುಂಬದಲ್ಲಿ ಜನಿಸಿದರು. ನೀತಾ ಅಂಬಾನಿಗಿಂತ ಮಮತಾ ನಾಲ್ಕು ವರ್ಷ ಚಿಕ್ಕವರು. ವೃತ್ತಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ನೀತಾ ಅಂಬಾನಿ ಹಾಗೂ ಮಮತಾ ವೃತ್ತಿಯಲ್ಲಿ ಇಬ್ಬರೂ ಶಿಕ್ಷಕರು. ನೀತಾಗೂ ಮಕ್ಕಳಿಗೆ ಪಾಠ ಹೇಳಿ ಕೊಡುವ ಆಸಕ್ತಿ ಹಾಗೂ ಅನುಭವ ಇದೆ. ಮದುವೆಗೂ ಮುನ್ನ ಅವರು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದವರು. ಮದುವೆಯಾದ ಬಳಿಕವೂ ಕೆಲ ವರ್ಷ ಅವರು ಈ ವೃತ್ತಿಯನ್ನು ಮುಂದುವರೆಸಿದ್ದರು.
ಎಸ್‌ಆರ್‌ಕೆ, ಸಚಿನ್ ತೆಂಡೂಲ್ಕರ್ ಅವರ ಮಕ್ಕಳಿಗೆ ಮಮತಾ ದಲಾಲ್ ಟೀಚರ್ ಆಗಿದ್ದರು. ಅವರು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮ್ಯಾನೇಜ್‌ಮೆಂಟ್ ತಂಡದ ಸದಸ್ಯರಾಗಿದ್ದಾರೆ. ಶಾಲೆಯ ಚೇರ್ಮನ್ ಖುದ್ದು ಅವರ ಅಕ್ಕ ನೀತಾ ಅಂಬಾನಿಯೇ ಆಗಿದ್ದಾರೆ.
ಖುಷಿ ಕಪೂರ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್, ಸುಹಾನಾ ಖಾನ್ ಹೀಗೆ ಹಲವಾರು ಸ್ಟಾರ್ ಮಕ್ಕಳು ಧೀರೂಭಾಯಿ ಅಂಬಾನಿ ಸ್ಕೂಲ್‌ನಲ್ಲಿ ಓದಿದ್ದಾರೆ. ಒಮ್ಮೆ ಸಂದರ್ಶನವೊಂದರಲ್ಲಿ ಮಮತಾ ದಲಾಲ್, ಸಚಿನ್ ತೆಂಡೂಲ್ಕರ್ ಮತ್ತು ಎಸ್‌ಆರ್‌ಕೆ ಅವರ ಮಕ್ಕಳಿಗೆ ಬೋಧನೆ ಮಾಡಿದ್ದೇನೆ ಎಂದು ಬಹಿರಂಗಪಡಿಸಿದರು.
ಮಮತಾ ಮೀಡಿಯಾದಿಂದ ಹೊರಗುಳಿಯಲು ಆದ್ಯತೆ ನೀಡುತ್ತಾರೆ. ಆದರೆ ಅವರು ತಮ್ಮ ಸಹೋದರಿ ನೀತಾ ಅಂಬಾನಿಯೊಂದಿಗೆ ಅಪರೂಪವಾಗಿ ಕಾಣಿಸಿಕೊಳ್ಳುತ್ತಾರೆ. ಮಮತಾ ದಯಾಲ್ ಸಾಮಾನ್ಯವಾಗಿ ಲೈಮ್‌ಲೈಟ್‌ನಿಂದ ದೂರವಿರುತ್ತಾರೆ. ಆದರೆ ಆಕಾಶ್ ಅಂಬಾನಿ ಮದುವೆ ಬಳಿಕ ಅವರ ಕೆಲ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದವು. ಇವುಗಳಲ್ಲಿ ಅವರು ಅತ್ಯಂತ ಸುಂದರವಾಗಿ ಕಾಣಿಸಿಕೊಂಡಿದ್ದರು.