- Home
- Life
- Women
- ಇನ್ಫೋಸಿಸ್ ಆರಂಭಿಸೋಕೆ ದುಡ್ಡು ಕೊಟ್ಟಿದ್ದೇ ಸುಧಾಮೂರ್ತಿ, ಆದ್ರೂ ನಾರಾಯಣ ಮೂರ್ತಿ ಕಂಪೆನಿಯೊಳಗೆ ಬಿಡ್ತಿರ್ಲಿಲ್ಲ ಯಾಕೆ?
ಇನ್ಫೋಸಿಸ್ ಆರಂಭಿಸೋಕೆ ದುಡ್ಡು ಕೊಟ್ಟಿದ್ದೇ ಸುಧಾಮೂರ್ತಿ, ಆದ್ರೂ ನಾರಾಯಣ ಮೂರ್ತಿ ಕಂಪೆನಿಯೊಳಗೆ ಬಿಡ್ತಿರ್ಲಿಲ್ಲ ಯಾಕೆ?
ಇನ್ಫೋಸಿಸ್ ಪ್ರಸ್ತುತ ಭಾರತದ ಅತ್ಯಂತ ದಿಗ್ಗಜ ಕಂಪೆನಿಗಳಲ್ಲಿ ಒಂದು. ನಾರಾಯಣ ಮೂರ್ತಿ, ತಮ್ಮ ಪತ್ನಿ ಸುಧಾ ಮೂರ್ತಿ ಅವರಿಂದ ಸಾಲ ಪಡೆದು ಈ ಕಂಪೆನಿ ಆರಂಭಿಸಿದ್ದರು. ಆದ್ರೆ ಈ ಸಂಸ್ಥೆಯೊಳಗೆ ಸ್ವತಃ ಸುಧಾಮೂರ್ತಿಯವರಿಗೆ ನಿರ್ಧಾರ ತೆಗೆದುಕೊಳ್ಳೋ ಹಕ್ಕಿಲ್ಲ ಯಾಕೆ?

ಇನ್ಫೋಸಿಸ್ ಪ್ರಸ್ತುತ ಭಾರತದ ಅತ್ಯಂತ ದಿಗ್ಗಜ ಕಂಪೆನಿಗಳಲ್ಲಿ ಒಂದು. ದಿನಕ್ಕೆ ಕೋಟ್ಯಾಂತರ ರೂ. ವ್ಯವಹಾರ ನಡೆಸೋ ಕಂಪೆನಿ. ಆದರೆ ಎಲ್ಲಾ ಸಕ್ಸಸ್‌ಫುಲ್ ಉದ್ಯಮಿಗಳಂತೆ ನಾರಾಯಣಮೂರ್ತಿ ತಮ್ಮ ಕಂಪೆನಿಯಲ್ಲಿ ಪತ್ನಿ ಸುಧಾಮೂರ್ತಿ ನಿರ್ಧಾರ ತೆಗೆದುಕೊಳ್ಳೋಕೆ ಬಿಡೋದಿಲ್ಲ ಯಾಕೆ?
ನಾರಾಯಣ ಮೂರ್ತಿ ತಮ್ಮ ಪತ್ನಿ ಸುಧಾ ಮೂರ್ತಿ ಅವರಿಂದ ಆರಂಭಿಕ 10,000 ರೂ. ಸಾಲ ಪಡೆದ ನಂತರ 1981ರಲ್ಲಿ ಇನ್ಫೋಸಿಸ್‌ನ್ನು ಸಹ-ಸ್ಥಾಪಿಸಿದರು. ಆದರೆ ಅವರು ಯಾವತ್ತೂ ತಮ್ಮ ಪತ್ನಿ ಅಥವಾ ಮಗನನ್ನು ಕಂಪೆನಿಯ ವ್ಯವಹಾರದ ಭಾಗವಾಗಿಸಲ್ಲಿಲ್ಲ.
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ತಮ್ಮ ಕುಟುಂಬವನ್ನು ಕಂಪನಿಯಿಂದ ಹೊರಗಿಡುವ ನಿರ್ಧಾರ ಮಾಡಿದ್ದರು. ನಾರಾಯಣ ಮೂರ್ತಿ ತಮ್ಮ ಇತರ ಸಹ-ಸಂಸ್ಥಾಪಕರಿಗಿಂತ ಹೆಚ್ಚು ಅರ್ಹರು ಎಂದು ನಂಬಿದ್ದರೂ ಸಹ ತಮ್ಮ ಹೆಂಡತಿಯನ್ನು ಇನ್ಫೋಸಿಸ್‌ಗೆ ಸೇರಲು ಎಂದಿಗೂ ಅನುಮತಿಸಲಿಲ್ಲ.
'ಉತ್ತಮ ಕಾರ್ಪೊರೇಟ್ ಆಡಳಿತ ಎಂದರೆ ಕುಟುಂಬವನ್ನು ವ್ಯವಹಾರದೊಳಗೆ ತರದೇ ಇರುವುದು. ಹೆಂಡ್ತಿ, ಮಕ್ಕಳನ್ನು ಉದ್ಯಮದೊಳಗೆ ತರುವುದು ಸರಿಯಲ್ಲವೆಂದು ಎಂದು ನಾನು ಭಾವಿಸಿದ್ದೆ' ಎಂದು ನಾರಾಯಣ ಮೂರ್ತಿ ಹೇಳಿದ್ದರು.
ಆದರೆ ಫಿಲಾಸಪಿ ಪ್ರೊಫೆಸರ್ ಒಬ್ಬರು ಇದನ್ನು ತಪ್ಪೆಂದು ವಾದಿಸಿದರು. 'ಸಂಬಂಧಗಳ ಹೊರತಾಗಿ ಒಬ್ಬ ವ್ಯಕ್ತಿ ಆ ಹುದ್ದೆಗೆ ಅರ್ಹ ಎಂದು ತಿಳಿದುಬಂದರೆ ಉಳಿದ ವಿಷಯಗಳನ್ನು ಪರಿಗಣಿಸಬಾರದು' ಎಂದು ಫಿಲಾಸಫಿ ಪ್ರೊಫೆಸರ್ ತಿಳಿಸಿದ್ದಾಗಿ ನಾರಾಯಣ ಮೂರ್ತಿ ಹೇಳಿದರು.
'ಆ ದಿನಗಳಲ್ಲಿ ನಾನು ಮಾಡುತ್ತಿದ್ದುದ್ದು ತಪ್ಪು ಎಂದು ನನಗೆ ಅರಿವಾಗಿದೆ. ಕೆಲವು ರೀತಿಯಲ್ಲಿ, ಆ ದಿನಗಳ ಪರಿಸರದಿಂದ ನಾನು ಬಹಳಷ್ಟು ಪ್ರಭಾವಿತನಾಗಿದ್ದೆ' ಎಂದು ನಾರಾಯಣ ಮೂರ್ತಿ ಸ್ಪಷ್ಟಪಡಿಸಿದರು.
ನಾರಾಯಣ ಮೂರ್ತಿ ಅವರು 1981ರಿಂದ 2002ರ ವರೆಗೆ 21 ವರ್ಷಗಳ ಕಾಲ ಇನ್ಫೋಸಿಸ್ ಸಿಇಒ ಆಗಿ ಸೇವೆ ಸಲ್ಲಿಸಿದರು. 2002ರಿಂದ 2006ರ ವರೆಗೆ ಮಂಡಳಿಯ ಅಧ್ಯಕ್ಷರಾಗಿದ್ದರು. ಆಗಸ್ಟ್ 2011 ರಲ್ಲಿ ನಿವೃತ್ತಿ ಹೊಂದಿದರು.
ಜೂನ್ 2013 ರಲ್ಲಿ, ನಾರಾಯಣ ಮೂರ್ತಿ ಅವರನ್ನು ಮಂಡಳಿಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಸಮಯದಲ್ಲಿ ಅವರ ಮಗ ರೋಹನ್ ಅವರ ಕಾರ್ಯನಿರ್ವಾಹಕ ಸಹಾಯಕರಾಗಿ ಕೆಲಸ ಮಾಡಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.