ದೀಪಿಕಾ ಪಡುಕೋಣೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ 820000 ಕೋಟಿ ಸಂಸ್ಥೆಯ ಒಡತಿ ಇಶಾ ಅಂಬಾನಿ!
ಬಿಲಿಯನೇರ್ ಮುಕೇಶ್ ಅಂಬಾನಿಯ ಮಗಳಾದ ಇಶಾ ಅಂಬಾನಿ ರಿಲಯನ್ಸ್ ರಿಟೇಲ್‌ನ ಬೆಳವಣಿಗೆಗೆ ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಉಪಯೋಗಿಸುತ್ತಿದ್ದಾರೆ. ಇತ್ತೀಚಿಗೆ ದೀಪಿಕಾ ಪಡುಕೋಣೆ ಜೊತೆ ಕೋಟಿ ಕೋಟಿ ರೂಪಾಯಿಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. 1983000 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳದೊಂದಿಗೆ ಭಾರತದ ಹೆಸರಾಂತ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ರಿಲಯನ್ಸ್ ರಿಟೇಲ್, ರಿಲಯನ್ಸ್ ಇಂಡಸ್ಟ್ರೀಸ್‌ನ ಅತ್ಯುತ್ತಮ ಕಾರ್ಯನಿರ್ವಹಣೆಯ ಅಂಗಸಂಸ್ಥೆಗಳಲ್ಲಿ ಒಂದಾಗಿದೆ.
ಮುಕೇಶ್ ಅಂಬಾನಿ ಕಂಪೆನಿಯ ಆಡಳಿತವನ್ನು ಆಗಸ್ಟ್ 2022ರಲ್ಲಿ ಪುತ್ರಿ ಇಶಾ ಅಂಬಾನಿಗೆ ಹಸ್ತಾಂತರಿಸಿದರು. ಅಂದಿನಿಂದ, ಇಶಾ ಅಂಬಾನಿ ರಿಲಯನ್ಸ್ ರಿಟೇಲ್‌ನ ಬೆಳವಣಿಗೆ ಮತ್ತು ವಿಸ್ತರಣೆಗೆ ಗಮನಾರ್ಹವಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರಸ್ತುತ 820000 ಕೋಟಿ ರೂ. ಮೌಲ್ಯದ, ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಹಲವಾರು ಪ್ರಮುಖ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ.
ಇತ್ತೀಚಿಗೆ ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್‌ನ ತಿರಾ,ದೀಪಿಕಾ ಪಡುಕೋಣೆಯ ಸ್ವಯಂ-ಆರೈಕೆ ಬ್ರಾಂಡ್ 82° Eನಿಂದ ಉತ್ಪನ್ನಗಳನ್ನು ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಈ ಕ್ರಮದೊಂದಿಗೆ, ದೀಪಿಕಾ ಪಡುಕೋಣೆ ಅವರ ಬ್ರ್ಯಾಂಡ್ ವಿವಿಧ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಈ ಒಪ್ಪಂದವು ಪ್ರತಿಯೊಬ್ಬ ಭಾರತೀಯರಿಗೂ ಸುಲಭವಾಗಿ ಪ್ರೀಮಿಯಂ ತ್ವಚೆ ಉತ್ಪನ್ನಗಳನ್ನು ಒದಗಿಸಲು ಅವಕಾಶ ನೀಡುತ್ತದೆ. ಅಂಬಾನಿ ಗ್ರೂಪ್‌ನ್ನು ಬ್ಯೂಟಿ ಪ್ರಾಡಕ್ಟ್ ತಿರಾವನ್ನು ಇಶಾ ಅಂಬಾನಿ ನಿರ್ವಹಿಸುತ್ತಿದ್ದಾರೆ. ಮುಕೇಶ್ ಅಂಬಾನಿಯ ಆಪ್ತ ಸಹಾಯಕರ ಮಗಳಾದ ಭಕ್ತಿ ಮೋದಿ ಇತರ ಸಹ ಸ್ಥಾಪಕರು.
ಇಶಾ ಅಂಬಾನಿಯವರ ತಿರಾ ಬ್ರ್ಯಾಂಡ್ Nykaa, Tata Cliq Palette, Myntra ಮತ್ತು ಇತರ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಬ್ರ್ಯಾಂಡ್ ಉತ್ಪನ್ನಗಳ ಬಿಡುಗಡೆಯ ಸಮಯದಲ್ಲಿ ಅದರ ಪ್ರಚಾರಕ್ಕಾಗಿ, ಕರೀನಾ ಕಪೂರ್, ಕಿಯಾರಾ ಅಡ್ವಾಣಿ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರನ್ನು ಅದರ ಬ್ರಾಂಡ್ ಅಂಬಾಸಿಡರ್‌ಗಳಾಗಿ ನೇಮಿಸಿಕೊಂಡಿದ್ದರು.
ಇಶಾ ಅಂಬಾನಿ ಮೊತ್ತ ಮೊದಲ ಬಾರಿಗೆ ದೀಪಿಕಾ ಪಡುಕೋಣೆಯ ಬ್ರ್ಯಾಂಡ್ ಜೊತೆ ಕೈಜೋಡಿಸಿದ್ದಾರೆ. ದೀಪಿಕಾ, ಬಾಲಿವುಡ್‌ನಲ್ಲಿ ಹೆಸರಾಂತ ನಟಿ. ಈಗಾಗ್ಲೇ ಹಲವು ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಎನಿಸಿಕೊಂಡಿದ್ದಾರೆ. ಓಂ ಶಾಂತಿ ಓಂ, ಹೇ ಜವಾನಿ ಹೇ ದಿವಾನಿ, ಬಾಜಿರಾವ್ ಮಸ್ತಾನಿ, ಪದ್ಮಾವತ್, ಪಠಾಣ್ ಮೊದಲಾದ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.