ಫಲ್ಗುಣಿ ನಾಯರ್, ಕಿರಣ್ ಮಜುಂದಾರ್ ಶಾಗಿಂತ ಬೃಹತ್ ಉದ್ಯಮ, ಭಾರತದ ಶ್ರೀಮಂತ ಮಹಿಳೆ ಈ ಬಿಲಿಯನೇರ್!
ಉದ್ಯಮ ಕಟ್ಟಿ ಸಕ್ಸಸ್ ಆದವರು ಕೇವಲ ಪುರುಷರು ಮಾತ್ರವಲ್ಲ ಮಹಿಳೆಯರೂ ಇದ್ದಾರೆ. ಅದರಲ್ಲೂ ಯಶಸ್ವೀ ಉದ್ಯಮಿಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಫಲ್ಗುಣಿ ನಾಯರ್, ಕಿರಣ್ ಮಜುಂದಾರ್ ಕಣ್ಮುಂದೆ ಬರುತ್ತಾರೆ. ಆದರೆ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಯಾರು ಗೊತ್ತಾ? ಇಲ್ಲಿದೆ ಮಾಹಿತಿ.

ಎಪ್ರಿಲ್ 2023ರಲ್ಲಿ, ಫೋರ್ಬ್ಸ್ ತನ್ನ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಲೀನಾ ತಿವಾರಿ ಕೂಡ ಭಾರತದ ಐದು ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಲೀನಾ ತಿವಾರಿ ಹೊರತುಪಡಿಸಿ, ಇತರ ನಾಲ್ವರು ಮಹಿಳೆಯರು ಸಾವಿತ್ರಿ ಜಿಂದಾಲ್, ರೋಹಿಕಾ ಸೈರಸ್ ಮಿಸ್ತ್ರಿ, ರೇಖಾ ಜುಂಜುನ್ವಾಲಾ ಮತ್ತು ವಿನೋದ್ ರಾಯ್ ಗುಪ್ತಾ.
ಫೋರ್ಬ್ಸ್ ಪಟ್ಟಿಯ ಪ್ರಕಾರ, ಲೀನಾ ತಿವಾರಿ ಭಾರತದ ಐದನೇ ಶ್ರೀಮಂತ ಮಹಿಳೆ. ಲೀನಾ ತಿವಾರಿ ಅವರು USV ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಕಂಪನಿಯನ್ನು 1961ರಲ್ಲಿ ಆಕೆಯ ತಂದೆ ವಿಠಲ್ ಗಾಂಧಿ ಸ್ಥಾಪಿಸಿದರು. ಲೀನಾ ತಿವಾರಿ ಮಾಧ್ಯಮದ ಮುಂದೆ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ ಅವರು ಜನಮನದಿಂದ ದೂರ ಉಳಿಯಲು ಬಯಸುತ್ತಾರೆ.
ಲೀನಾ ತಿವಾರಿ ಅವರು ಖಾಸಗಿ ಒಡೆತನದ ಕಂಪನಿ USV ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಆಕೆಯ ನಿವ್ವಳ ಮೌಲ್ಯ ಸುಮಾರು USD 3.5 ಶತಕೋಟಿ (ಸುಮಾರು 30,000 ಕೋಟಿ ರೂ.). ಲೀನಾ ತಿವಾರಿ ಬಯೋಕಾನ್‌ನ ಕಿರಣ್ ಮಜುಂದಾರ್-ಶಾ, ನೈಕಾ ಅವರ ಫಲ್ಗುಣಿ ನಾಯರ್ ಮತ್ತು ಜೋಹೋ ಕಾರ್ಪ್‌ನ ರಾಧಾ ವೆಂಬು ಅವರಿಗಿಂತ ಶ್ರೀಮಂತರು.
ಲೀನಾ ತಿವಾರಿ ಅವರ ಫಾರ್ಮಾ ಕಂಪನಿಯು ಹೃದಯ ಮತ್ತು ಮಧುಮೇಹ ಔಷಧಗಳ ಕ್ಷೇತ್ರದಲ್ಲಿ ಭಾರತದ ಅಗ್ರ ಐದು ಕಂಪನಿಗಳಲ್ಲಿ ಒಂದಾಗಿದೆ. ಇದು ಸಕ್ರಿಯ ಔಷಧೀಯ ಪದಾರ್ಥಗಳು (APIಗಳು), ಚುಚ್ಚುಮದ್ದು ಮತ್ತು ಬಯೋಸಿಮಿಲರ್ ಔಷಧಿಗಳನ್ನು ಸಹ ತಯಾರಿಸುತ್ತದೆ. ಗ್ಲೈಕೋಮೆಂಟ್ ಎಂಬ ಕಂಪನಿಯ ಮಧುಮೇಹ ವಿರೋಧಿ ಸೂತ್ರೀಕರಣವು ದೇಶೀಯ ಉದ್ಯಮದಲ್ಲಿ ಅಗ್ರ 3ರಲ್ಲಿದೆ.
ಲೀನಾ ತಿವಾರಿ ಹೆಚ್ಚಾಗಿ ಮುಂಬೈನಲ್ಲಿ ಸಾಮಾಜಿಕ ಸರ್ಕ್ಯೂಟ್ ಮತ್ತು ಪಾರ್ಟಿಗಳಿಂದ ದೂರವಿರುತ್ತಾರೆ. ಆದರೆ ಅವರು ಸಮಾಜಸೇವೆಯನ್ನು ಹೆಚ್ಚು ಮಾಡುತ್ತಾರೆ. ಟ್ರಾವೆಲಿಂಗ್ ಮತ್ತು ಬುಕ್ಸ್ ಓದುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಬಿಕಾಂ ಮತ್ತು ಯುಎಸ್‌ನ ಬೋಸ್ಟನ್ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದ್ದಾರೆ. ಲೀನಾ ತಿವಾರಿ ಹುಟ್ಟಿದ್ದು ಮುಂಬೈನಲ್ಲಿ.
ಲೀನಾ ತಿವಾರಿ USVಯ MD ಆಗಿರುವ ಪ್ರಶಾಂತ್ ತಿವಾರಿ ಅವರನ್ನು ವಿವಾಹವಾಗಿದ್ದಾರೆ. ಪ್ರಶಾಂತ್ ಅವರು ಲೀನಾ ತಿವಾರಿ ಅವರೊಂದಿಗೆ ಕಂಪನಿಯನ್ನು ನಡೆಸುತ್ತಿದ್ದಾರೆ. ಪ್ರಶಾಂತ್ ತಿವಾರಿ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಯುಎಸ್‌ನ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ದಂಪತಿಗೆ ಕ್ರಮವಾಗಿ ಅನಿಶಾ ಮತ್ತು ವಿಲಾಸ್ ಎಂಬ ಮಗಳು ಮತ್ತು ಮಗ ಇದ್ದಾರೆ.