ಅಯ್ಯೋ ಹಲ್ಲಿ ಅಂತ ನೀವು ಓಡಿ ಹೋಗುವ ಬದಲು ಹಲ್ಲಿಗಳನ್ನೇ ಓಡಿಸಿ: ಇಲ್ಲಿದೆ ಪರಿಣಾಮಕಾರಿ ಮನೆ ಮದ್ದು
ಮನೆಯಲ್ಲಿ ಹಲ್ಲಿಗಳ ಕಾಟದಿಂದ ಬೇಸತ್ತಿದ್ದರೆ, ರಾಸಾಯನಿಕಗಳ ಬದಲು ಕರ್ಪೂರ ಮತ್ತು ಆಂಟಿಸೆಪ್ಟಿಕ್ ದ್ರಾವಣ ಬಳಸಿ ಸುಲಭವಾಗಿ ಹಲ್ಲಿ ನಿವಾರಕ ದ್ರಾವಣವನ್ನು ತಯಾರಿಸಬಹುದು. ಈ ಸುರಕ್ಷಿತ ಮತ್ತು ಪರಿಣಾಮಕಾರಿ ಮನೆಮದ್ದು ಹಲ್ಲಿಗಳನ್ನು ಮನೆಯಿಂದ ದೂರವಿಡಲು ಸಹಾಯ ಮಾಡುತ್ತದೆ.

ಹಲ್ಲಿಗಳ ನೋಡಿ ನೀವು ಓಡಬೇಡಿ
ಹಲ್ಲಿಗಳೆಂದರೆ ಅನೇಕರು ಹೆದರುತ್ತಾರೆ. ಮನೆಯಲ್ಲಿ ಹಠಾತ್ ಆಗಿ ಕಾಣಿಸುವ ಇವುಗಳು ಎಲ್ಲಿ ಮೈಮೇಲೆ ಬೀಳುತ್ತವೋ ಅಥವಾ ಆಹಾರ ಪದಾರ್ಥಗಳ ಮೇಲೆ ಬೀಳುತ್ತವೋ ಎಂದು ಅನೇಕರು ಭಯಗೊಳ್ಳುತ್ತಾರೆ. ಅವುಗಳ ಮಲವೂ ಕೂಡ ಮನೆಯ ಗೋಡೆ ಹಾಗೂ ನೆಲದ ಅಂದಗೆಡಿಸುತ್ತವೆ.
ಹಲ್ಲಿಗಳ ಹೀಗೆ ಸುಲಭವಾಗಿ ಓಡಿಸಿ
ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಓಡಾಡುವುದು ಸಾಮಾನ್ಯವಾದ ದೃಶ್ಯವಾಗಿದ್ದರು ಅವುಗಳ ಭಯದಿಂದ ಅನೇಕರು ಅವು ಕಾಣಿಸಿಕೊಂಡರೆ ಮನೆಯೊಳಗೆ ಹೋಗುವುದಕ್ಕೆ ಹೆದರುತ್ತಾರೆ. ಹಲ್ಲಿಗಳು ವಿಷಕಾರಿಯಾಗಿದ್ದರು ಮನುಷ್ಯರಿಗೆ ಹಾವಿನಂತೆ ಕಚ್ಚಿ ಹಾನಿ ಮಾಡುವುದಿಲ್ಲ, ಆದ್ದರಿಂದ ಆಹಾರ ಪದಾರ್ಥ ಮೇಲೆ ಅವು ಬಿದ್ದರೆ ಎಂಬುದೇ ಅನೇಕರಿಗೆ ಭಯ
ನೈಸರ್ಗಿಕ ಮನೆಮದ್ದು
ಹಲ್ಲಿಗಳನ್ನು ಓಡಿಸಲು ರಾಸಾಯನಿಕ ವಸ್ತುಗಳನ್ನು ಬಳಸಬಹುದಾದರೂ, ಇವು ಮಕ್ಕಳು ಮತ್ತು ವಯೋವೃದ್ಧರಿಗೆ ಅಪಾಯಕಾರಿಯಾಗಬಹುದು. ಹೀಗಿರುವಾಗ ಕಂಟೆಂಟ್ ಕ್ರಿಯೇಟರ್ ಶಿಪ್ರಾ ಎಂಬುವವರು ಹಲ್ಲಿಗಳ ಓಡಿಸುವ ಬಗ್ಗೆ ಸುಲಭ ಹಾಗೂ ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಪರಿಹಾರವೊಂದನ್ನು ಸೂಚಿಸಿದ್ದಾರೆ.
ಹಲ್ಲಿ ನಿವಾರಕ ದ್ರಾವಣದ ತಯಾರಿಕೆ
ಸುಮಾರು ನಾಲ್ಕು ಕರ್ಪೂರದ ತುಂಡುಗಳನ್ನು ಪುಡಿ ಮಾಡಿ ಪುಡಿಯನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಸ್ವಲ್ಪ ಆಂಟಿಸೆಪ್ಟಿಕ್ ದ್ರಾವಣ (ಡೆಟಾಲ್) ಸೇರಿಸಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಪರಿಣಾಮಕಾರಿ ಹೇಗೆ?
ಕರ್ಪೂರ ಪುಡಿ: ಕರ್ಪೂರದಲ್ಲಿರುವ ಬಲವಾದ ವಾಸನೆಯು ಹಲ್ಲಿಗಳನ್ನು ಮತ್ತು ಇತರ ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ.
ಆಂಟಿಸೆಪ್ಟಿಕ್ ದ್ರಾವಣ: ಇದು ಕಟುವಾದ ವಾಸನೆಯನ್ನು ಹೆಚ್ಚಿಸಿ, ಸೋಂಕುನಿವಾರಕ ಗುಣವನ್ನು ನೀಡುತ್ತದೆ.
ನೀರು: ಮಿಶ್ರಣವನ್ನು ದುರ್ಬಲಗೊಳಿಸಿ, ಸ್ಪ್ರೇ ಮಾಡಲು ಸುಲಭವಾಗುತ್ತದೆ ಮತ್ತು ಗೋಡೆಗಳಿಗೆ ಹಾನಿಯಾಗದಂತೆ ಮಾಡುತ್ತದೆ.
ಇದನ್ನೂ ಓದಿ:
ಪ್ರಾಣಿ ಸತ್ತಂತೆ ವಾಸನೆ ಬರ್ತಿದೆ ಎಂದು ಹುಡುಕಿದಾಗ ಪೀಸ್ ಪೀಸ್ ಆಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮನೆ ಮಗನ ಶವ
ದ್ರಾವಣವನ್ನು ಗೋಡೆಗಳು ಮತ್ತು ಚಾವಣಿಗಳಿಗೆ ನೇರವಾಗಿ ಸಿಂಪಡಿಸಿ
ದ್ರಾವಣವನ್ನು ಗೋಡೆಗಳು ಮತ್ತು ಚಾವಣಿಗಳಿಗೆ ನೇರವಾಗಿ ಸಿಂಪಡಿಸಿ ಹಲ್ಲಿಗಳು ಹೆಚ್ಚು ಕಂಡುಬರುವ ಸ್ಥಳಗಳ ಮೇಲೆ ಆಗಾಗ್ಗೆ ಸಿಂಪಡಿಸಿ ಶಿಪ್ರಾ ರೈ ಅವರ ಈ ಸರಳ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ ಮನೆಯನ್ನು ಹಲ್ಲಿಗಳಿಂದ ಮುಕ್ತವಾಗಿಸಬಹುದು. ಈ ಪ್ರಾಕೃತಿಕ ಪರಿಹಾರವು ಹಲ್ಲಿಗಳು ಆ ಪ್ರದೇಶಗಳಲ್ಲಿ ಓಡಾಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.
ಇದನ್ನೂ ಓದಿ: ದಾಳಿಗೊಳಗಾದ ಯುದ್ಧನೌಕೆ ಭಾರತದ ಅತಿಥಿಯಾಗಿತ್ತು ಎಂದ ಇರಾನ್: ಭಾರತ ಹೇಳಿದ್ದೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

