ಇನ್ಮೇಲೆ ಹಾಲಿನ ಪ್ಯಾಕೆಟ್ ಎಸೆಯಬೇಡಿ.. ಹಲ್ಲಿ, ಜಿರಲೆ, ಇಲಿಯನ್ನು ಪರ್ಮನೆಂಟಾಗಿ ಓಡಿಸಲು ಹೀಗೆ ಬಳಸಿ
Milk packet hack: ನೀವು ಹಾಲನ್ನು ಮಾತ್ರ ತೆಗೆದಿಟ್ಟುಕೊಂಡು ಪ್ಯಾಕೆಟ್ ಎಸೆಯುತ್ತಿದ್ದರೆ ಇನ್ಮೇಲೆ ಹಾಗೆ ಮಾಡಬೇಡಿ. ಏಕೆಂದರೆ ಅದು ಕೂಡ ಉಪಯೋಗಕ್ಕೆ ಬರುತ್ತೆ. ಹೌದು. ಮನೇಲಿ ಹಾಲಿನ ಪ್ಯಾಕೆಟ್ ಇದ್ರೆ ಸುಲಭವಾಗಿ ಹಲ್ಲಿಗಳು, ಜಿರಲೆಗಳು ಮತ್ತು ಇಲಿಗಳನ್ನ ಓಡಿಸಬಹುದು.

ಶಾಶ್ವತ ಪರಿಹಾರ
ನಿಮ್ಮ ಮನೆಯಲ್ಲಿ ಇಲಿ, ಹಲ್ಲಿ ಮತ್ತು ಜಿರಲೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಏನೇ ಮನೆ ಮದ್ದು ಮಾಡಿದ್ರೂ, ಕೆಮಿಕಲ್ (ಇವು ಆರೋಗ್ಯಕ್ಕೆ ಒಳ್ಳೆಯದಲ್ಲ) ಉಪಯೋಗಿಸಿದ್ರೂ ಅವುಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರವಾಗಿದ್ದರೆ ಇವುಗಳನ್ನು ನಿಯಂತ್ರಿಸಲು ಶಾಶ್ವತ ಪರಿಹಾರವೊಂದಿದೆ.
ಎರಡು ಉಪಯುಕ್ತ ಸಲಹೆ
ಈ ಮೊದಲೇ ಹೇಳಿದ ಹಾಗೆ ನಿಮ್ಮ ಮನೆಯಲ್ಲಿ ಹಾಲಿನ ಪ್ಯಾಕೆಟ್ ಇದ್ದರೆ ಸಾಕು. ನಿಮ್ಮ ಅಡುಗೆಮನೆ ಅಥವಾ ಇಡೀ ಮನೆಯನ್ನು ಕಲುಷಿತಗೊಳಿಸುವ ಇಂತಹ ಕೀಟಗಳನ್ನು ಸುಲಭವಾಗಿ ಓಡಿಸಬಹುದು. ಈ ಬಗ್ಗೆ ಎರಡು ಉಪಯುಕ್ತ ಸಲಹೆಗಳನ್ನು ಅಮ್ಮು ಶಿಖೈಲ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಇವರು ಹೇಳಿದ ರೀತಿಯಲ್ಲಿ ಹಾಲಿನ ಪ್ಯಾಕೆಟ್ ಉಪಯೋಗಿಸುವುದರಿಂದ ಕೀಟಗಳು ಅಥವಾ ಇಲಿಗಳು ಪ್ಲಾಸ್ಟಿಕ್ ಕವರ್ ಸೇವಿಸಿ ಸಾಯುತ್ತವೆ.
ಬೇಕಾಗಿರುವ ಪದಾರ್ಥಗಳು
ಚಿಕ್ಕದಾಗಿ ಕಟ್ ಮಾಡಿಟ್ಟುಕೊಂಡ ಹಾಲಿನ ಪ್ಯಾಕೆಟ್
ಅಡುಗೆ ಸೋಡಾ
ಪ್ಯಾರಸಿಟಮಾಲ್ ಟ್ಯಾಬ್ಲೆಟ್
ಕಡಲೆ ಹಿಟ್ಟು ಅಥವಾ ಇತರ ಹಿಟ್ಟು
ಸ್ವಲ್ಪ ಬೆಲ್ಲ
ಅಡುಗೆ ಎಣ್ಣೆ
ಇದನ್ನು ತಯಾರಿಸುವುದು ಹೇಗೆ?
ಒಂದು ಬಟ್ಟಲಿನಲ್ಲಿ ಚಿಕ್ಕ ಚೂರುಗಳಾಗಿ ಕಟ್ ಮಾಡಿದ ಹಾಲಿನ ಕವರ್ ಎತ್ತಿಟ್ಟುಕೊಳ್ಳಿ. ಇದಕ್ಕೆ ಅರ್ಧ ಚಮಚ ಅಡುಗೆ ಸೋಡಾ ಮತ್ತು ಪುಡಿಮಾಡಿದ ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀವು ಈ ಮಿಶ್ರಣವನ್ನು ಬೇಡವಾದ ಸಣ್ಣ ಮುಚ್ಚಳದಲ್ಲಿ ಅಥವಾ ತಟ್ಟೆಯಲ್ಲಿ ಹಾಕಿ. ನಂತರ ಹಲ್ಲಿಗಳು ಮತ್ತು ಜಿರಲೆಗಳು ಹೆಚ್ಚು ಚಲಿಸುವ ಸ್ಥಳಗಳಲ್ಲಿ (ಗ್ಯಾಸ್ ಸ್ಟವ್ ಕೆಳಗೆ, ವಾಷಿಂಗ್ ಮಷಿನ್ ಬಳಿ, ದಿನಸಿ ಡಬ್ಬಿಯ ಬಳಿ) ಇಡಬಹುದು. ಹಲ್ಲಿಗಳು ಮತ್ತು ಜಿರಳೆಗಳು ಇದನ್ನು ಸ್ವಲ್ಪ ತಿಂದರೂ ಸಾಯುತ್ತವೆ ಎಂದು ಹೇಳಲಾಗುತ್ತದೆ.
ಎರಡನೇ ವಿಧಾನ
ಇನ್ನೊಂದು ವಿಧಾನವೂ ಇದೆ. ಈ ವಿಧಾನದಲ್ಲಿ ಕಡಲೆ ಹಿಟ್ಟು ಮತ್ತು ಬೆಲ್ಲದ ಪುಡಿ ಸೇರಿಸಿ ಮಿಶ್ರಣ ಮಾಡಿ. ನೀರು ಸೇರಿಸಬೇಡಿ. ಬದಲಿಗೆ ಅಡುಗೆ ಎಣ್ಣೆಯನ್ನು ಸೇರಿಸಿ. ನಂತರ ಉಂಡೆ ಕಟ್ಟಿ. ಇದು ಸ್ವಲ್ಪ ದಪ್ಪವಾಗುವವರೆಗೆ ಬೆರೆಸಿಕೊಳ್ಳಿ. ಈ ಎಣ್ಣೆಯ ವಾಸನೆಯು ಇಲಿಗಳನ್ನು ಆಕರ್ಷಿಸುತ್ತದೆ. ಆ ನಂತರ ಉಂಡೆಯ ಮಧ್ಯದಲ್ಲಿ ಸಣ್ಣ ರಂಧ್ರ ಮಾಡಿ. ಇದರಲ್ಲಿ ಹಾಲಿನ ಪ್ಯಾಕೆಟ್ ತುಂಡುಗಳನ್ನು ಹಾಕಿ. ಮತ್ತೆ ಉಂಡೆಯನ್ನು ಮುಚ್ಚಿ. ಈ ಉಂಡೆಗಳನ್ನು ಇಲಿಗಳು ಓಡಾಡುವ ಸ್ಥಳಗಳಲ್ಲಿ ಇರಿಸಿ. ಅವುಗಳು ಇದನ್ನು ತಿಂದರೆ ಆ ದಿನ ಇಲಿಗಳು ಸಾಯುತ್ತವೆ ಅಥವಾ ಮನೆಯಿಂದ ಓಡಿಹೋಗುತ್ತವೆ.

