ಫ್ರಿಜ್ ಇದ್ರು, ಇಲ್ಲದೆ ಇದ್ರೂ ಹೂಗಳನ್ನು ಈ ರೀತಿಯಿಟ್ಟರೆ ಒಂದು ತಿಂಗಳಾದ್ರು ಬಾಡಲ್ಲ
How To Preserve Flowers: ಹೂ ತಂದು ಕೆಲವೇ ಸಮಯಕ್ಕೆ ಅದು ಬಾಡಿ ಹೋಗುತ್ತದೆ ಅಥವಾ ಜಿಗುಟು ಜಿಗುಟಾಗುತ್ತದೆ. ಆದ್ದರಿಂದ ಇಂದು ಇಲ್ಲಿ ಫ್ರಿಜ್ ಇದ್ರು, ಇಲ್ಲದಿದ್ರೂ ಒಂದು ತಿಂಗಳಾದ್ರೂ ಹೂವು ಕೆಡದಂತೆ ಇರಲು ಏನು ಮಾಡಬೇಕೆಂದು ನೋಡೋಣ..

ಹೂವು ಹಾಳಾಗದಂತೆ ಇರಲು
ಕೆಲವೊಮ್ಮೆ ಹೂಗಳು ನಮಗೆ ಕಡಿಮೆ ಬೆಲೆಗೆ ಸಿಗುತ್ತವೆ. ಅಂತಹ ಸಮಯದಲ್ಲಿ ನಾವು ಸ್ವಲ್ಪ ಹೆಚ್ಚು ಹೂ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ಫ್ರಿಜ್ ಇದ್ರೆ ಓಕೆ. ಆದರೆ ಫ್ರಿಜ್ ಇಲ್ಲದವರು ಏನು ಮಾಡಬೇಕು. ಮತ್ತೆ ಕೆಲವರಿಗೆ ಫ್ರಿಜ್ ಇದ್ದರೂ ಅದನ್ನು ಹೇಗೆ ಸಂಗ್ರಹಿಸಿಡಬೇಕೆಂದು ತಿಳಿಯದೆ ಇರುವುದರಿಂದ ಹೂ ತಂದು ಕೆಲವೇ ಸಮಯಕ್ಕೆ ಅದು ಬಾಡಿ ಹೋಗುತ್ತದೆ ಅಥವಾ ಜಿಗುಟು ಜಿಗುಟಾಗುತ್ತದೆ. ಆದ್ದರಿಂದ ಇಂದು ಇಲ್ಲಿ ಫ್ರಿಜ್ ಇದ್ರು, ಇಲ್ಲದಿದ್ರೂ ಒಂದು ತಿಂಗಳಾದ್ರೂ ಹೂವು ಹಾಳಾಗದಂತೆ ಇರಲು ಏನು ಮಾಡಬೇಕೆಂದು ನೋಡೋಣ..
ಫ್ರಿಜ್‌ನಲ್ಲಿ ಹೂವು ಸಂಗ್ರಹಿಸುವ ವಿಧಾನ
ಟಿಶ್ಯೂ ಪೇಪರ್, ನ್ಯೂಸ್ ಪೇಪರ್‌ನಲ್ಲಿ ಎತ್ತಿಡಿ
ನೀವು ಯಾವುದೇ ರೀತಿ ಹೂವು ಖರೀದಿ ಮಾಡಿದ್ದರೂ ಮೊದಲಿಗೆ ಟಿಶ್ಯೂ ಪೇಪರ್‌ನಲ್ಲಿ ನೀಟಾಗಿ ಸುತ್ತಿಡಿ. ಆ ನಂತರ ಟಿಶ್ಯೂ ಪೇಪರ್‌ನಲ್ಲಿಟ್ಟ ಹೂವನ್ನು ನ್ಯೂಸ್ ಪೇಪರ್‌ನಲ್ಲಿ ಬುತ್ತಿ ಕಟ್ಟುವ ಹಾಗೆ ಕಟ್ಟಿ ಒಂದು ಪಾತ್ರೆಯೊಳಗೆ ಹಾಕಿಡಿ. ಆದರೆ ನೆನಪಿಡಿ ಸ್ವಲ್ಪವಾದರೂ ಗಾಳಿಯಾಡುವ ರೀತಿ ಇರಲಿ. ಈ ರೀತಿ ಹೂವು ಸಂಗ್ರಹಿಸಿದ್ದೇ ಆದಲ್ಲಿ ಅದು 15 ರಿಂದ 20 ದಿನದ ತನಕ ಹಾಳಾಗದೆ ಫ್ರೆಶ್ ಆಗಿರುತ್ತದೆ.
ಪ್ಲಾಸ್ಟಿಕ್ ಡಬ್ಬಿಯೊಳಗೂ ಇಡ್ಬೋದು
ಸಾಮಾನ್ಯವಾಗಿ ದೇವರಿಗೆ, ಹೊಸ್ತಿಲಿಗೆ ಮುಡಿಸಲು ಕೆಲವರು ಸೇವಂತಿಗೆ, ಗುಲಾಬಿ ಹೂಗಳನ್ನು ಖರೀದಿಸುತ್ತಾರೆ. ಇದನ್ನು ನೀವು ಎತ್ತಿಡುವಾಗ ಒಂದು ಪ್ಲಾಸ್ಟಿಕ್ ಡಬ್ಬಿ ತೆಗೆದುಕೊಳ್ಳಿ. ಡಬ್ಬಿಯ ಮೇಲೆ, ಕೆಳಗೆ ಸುತ್ತಲೂ ನ್ಯೂಸ್ ಪೇಪರ್ ಹಾಕಿ. ತಂದಿರುವಂತಹ ಹೂವಿನಲ್ಲಿ ಯಾವುದೇ ರೀತಿಯ ತೇವಾಂಶ ಇಲ್ಲದ ಹಾಗೆ ಒಣಗಿಸಿ. ನಂತರ ಎತ್ತಿಡಿ. ಹೂ ಒಂದು ತಿಂಗಳಾದ್ರೂ ಬಾಡುವುದಿಲ್ಲ.
ಚಿಕ್ಕ ಪ್ಲಾಸ್ಟಿಕ್ ಬಾಕ್ಸ್ ಬಳಕೆ
ಅನೇಕರು ಮುಡಿಯಲು ಕಟ್ಟಿದ ಹೂ ಖರೀದಿ ಮಾಡ್ತಾರೆ. ಆ ನಂತರ ಅದನ್ನು ಎತ್ತಿಡುವುದು ಹೇಗೆ ಎಂದು ಸಮಸ್ಯೆ ಎದುರಿಸುತ್ತಾರೆ. ಕಟ್ಟಿದ ಹೂ ಸಂಗ್ರಹಿಸುವಾಗಲೂ ಮೊದಲಿಗೆ ಚಿಕ್ಕ ಪ್ಲಾಸ್ಟಿಕ್ ಬಾಕ್ಸ್ ಒಳಗಡೆ ಟಿಶ್ಯೂ ಪೇಪರ್ ಹಾಕಿ. ಆನಂತರ ಫ್ರಿಜ್‌ನಲ್ಲಿ ಇಡುವುದರಿಂದ ಒಂದು ತಿಂಗಳವರೆಗೆ ಇಡಬಹುದು.
ಫ್ರಿಜ್ ಇಲ್ಲದೆ ಇರುವವರು
ಬಟ್ಟೆ ಬ್ಯಾಗ್
ಇನ್ನು ಫ್ರಿಜ್ ಇಲ್ಲದೆ ಇರುವವರು ನೀವು ಯಾವುದೇ ದಿನಸಿ ಸಾಮಾನುಗಳನ್ನು ಕೊಂಡರೆ ಇತ್ತೀಚಿಗೆ ಬಟ್ಟೆ ಬ್ಯಾಗ್ ಗಳನ್ನು ಕೊಟ್ಟೇ ಕೊಡುತ್ತಾರೆ. ಆ ಬಟ್ಟೆ ಬ್ಯಾಗ್ ಅನ್ನು ಮೊದಲು ಸ್ವಲ್ಪ ತೇವ ಮಾಡಿಕೊಳ್ಳಿ. ಅದರ ಒಳಗಡೆ ಹೂವಿಟ್ಟು, ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿಡಬೇಕು.
ಸ್ವಲ್ಪ ನೀರನ್ನು ಚಿಮುಕಿಸಿ ಪಾತ್ರೆಯಲ್ಲಿಡಿ
ಇನ್ನೊಂದು ವಿಧಾನವಿದೆ. ಈ ವಿಧಾನದಲ್ಲಿ ಹೂವನ್ನು ತೆಗೆದುಕೊಂಡ ನಂತರ ಅದರ ಮೇಲೆ ಸ್ವಲ್ಪ ನೀರನ್ನು ಚಿಮುಕಿಸಿ. ಆ ನಂತರ ಪಾತ್ರೆಯಲ್ಲಿ ಇಡುವುದರಿಂದ ಎಂಟರಿಂದ ಹತ್ತು ದಿನಗಳ ಕಾಲ ಫ್ರೆಶ್ ಆಗಿರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

