MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಸೋಫಾ ಹಳೆಯದಾಗಿ ಕಾಣುತ್ತಿದೆಯೇ, ದುರ್ವಾಸನೆ ಬರುತ್ತಿದೆಯೇ? ಅಡುಗೆ ಸೋಡಾ ಬಳಸಿ ಹೀಗೆ ಕ್ಲೀನ್ ಮಾಡಿ

ಸೋಫಾ ಹಳೆಯದಾಗಿ ಕಾಣುತ್ತಿದೆಯೇ, ದುರ್ವಾಸನೆ ಬರುತ್ತಿದೆಯೇ? ಅಡುಗೆ ಸೋಡಾ ಬಳಸಿ ಹೀಗೆ ಕ್ಲೀನ್ ಮಾಡಿ

Home cleaning hacks Kannada: ನಿಮ್ಮ ಮನೆಯ ಸೋಫಾ ಹಳೆಯದಾಗಿ ಕಾಣುತ್ತಿದೆಯೇ ಅಥವಾ ದುರ್ವಾಸನೆ ಬರುತ್ತಿದೆಯೇ? ಅಡುಗೆ ಸೋಡಾ ಬಳಸಿ ನೈಸರ್ಗಿಕವಾಗಿ ಸೋಫಾವನ್ನು ಸ್ವಚ್ಛಗೊಳಿಸುವುದು ಹೇಗೆ ಮತ್ತು ಹಠಮಾರಿ ಕಲೆಗಳನ್ನು ತೆಗೆದುಹಾಕುವುದು ಹೇಗೆ ಎಂಬ ಸುಲಭ ವಿಧಾನಗಳನ್ನು ಈ ಲೇಖನದಲ್ಲಿ ನೋಡೋಣ..

2 Min read
Author : Ashwini HR
Published : May 30 2026, 01:17 PM IST
Share this Photo Gallery
  • FB
  • TW
  • Linkdin
  • Whatsapp
18
ನಿಮ್ಮ ಸೋಫಾವನ್ನು ಸ್ವಚ್ಛಗೊಳಿಸುವುದು ಹೇಗೆ?
Image Credit : pinterest

ನಿಮ್ಮ ಸೋಫಾವನ್ನು ಸ್ವಚ್ಛಗೊಳಿಸುವುದು ಹೇಗೆ?

ನಿಮ್ಮ ಸೋಫಾವನ್ನು ಸ್ವಚ್ಛಗೊಳಿಸುವುದು ಹೇಗೆ?
ನಿಮ್ಮ ಮನೆಯ ಲಿವಿಂಗ್ ರೂಮ್ (ಹಜಾರ) ಹೆಚ್ಚು ಬಳಕೆಯಾಗುವ ಸ್ಥಳವಾಗಿದ್ದರೆ, ಅಲ್ಲಿರುವ ಸೋಫಾ ಕೂಡ ಅತಿ ಹೆಚ್ಚು ಬಳಕೆಯಾಗಿರುತ್ತದೆ ಮತ್ತು ಅದು ಕೆಟ್ಟ ವಾಸನೆ ಹೊರಸೂಸುತ್ತದೆ. ಮಧ್ಯಾಹ್ನದ ನಿದ್ರೆ, ಫ್ಯಾಮಿಲಿ ಮೂವಿ ನೈಟ್ಸ್, ಎಣ್ಣೆ ಜಿಡ್ಡಿನ ಕೈಗಳು ಮತ್ತು ಸಾಕುಪ್ರಾಣಿಗಳಿಂದಾಗಿ ಸೋಫಾದ ಮೇಲೆ ದುರ್ವಾಸನೆ, ಕಲೆಗಳು ಮತ್ತು ಕೂದಲು ಅಂಟಿಕೊಳ್ಳಲು ಕಾರಣವಾಗುತ್ತವೆ. ಆದ್ದರಿಂದ ನಿಮ್ಮ ಸೋಫಾ ಕಾಲಕಾಲಕ್ಕೆ ಕ್ಲೀನ್ ಮಾಡುವುದು ಅತ್ಯಗತ್ಯವಾಗಿರುತ್ತದೆ. ಹಾಗಾದರೆ ಅಡುಗೆ ಸೋಡಾ ಬಳಸಿ ನಿಮ್ಮ ಸೋಫಾವನ್ನು ಸ್ವಚ್ಛಗೊಳಿಸುವುದು ಹೇಗೆಂದು ನೋಡೋಣ ಬನ್ನಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಎಷ್ಟು ಬಾರಿ ಸ್ವಚ್ಛಗೊಳಿಸಬೇಕು?
Image Credit : pinterest

ಎಷ್ಟು ಬಾರಿ ಸ್ವಚ್ಛಗೊಳಿಸಬೇಕು?

ಎಷ್ಟು ಬಾರಿ ಸ್ವಚ್ಛಗೊಳಿಸಬೇಕು?
ನಿಮ್ಮ ಸೋಫಾವನ್ನು ಎಷ್ಟು ಬಾರಿ ಸ್ವಚ್ಛಗೊಳಿಸಬೇಕು ಎಂಬುದು ಅದರ ಬಟ್ಟೆಯ (Fabric) ಮಾದರಿಯನ್ನು ಅವಲಂಬಿಸಿರುತ್ತದೆ. ಬಟ್ಟೆಯ ಸೋಫಾ ಆಗಿದ್ದರೆ, ನಿಮ್ಮ ವಾರದ ಸ್ವಚ್ಛತೆಯ ಪಟ್ಟಿಗೆ ಇದನ್ನು ಸೇರಿಸಿ. ನಿಯಮಿತವಾಗಿ ವ್ಯಾಕ್ಯೂಮ್ ಮಾಡುವುದರಿಂದ ಸಾಕುಪ್ರಾಣಿಗಳ ಕೂದಲು ಮತ್ತು ಧೂಳು ಬಟ್ಟೆಯೊಳಗೆ ಸೇರಿಕೊಳ್ಳುವುದನ್ನು ತಡೆಯಬಹುದು. ಕಲೆಗಳಾದ ತಕ್ಷಣವೇ ಸ್ವಚ್ಛಗೊಳಿಸಿ ಮತ್ತು ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಆಳವಾಗಿ ಸ್ವಚ್ಛ (Deep-clean) ಮಾಡಿ. ಚರ್ಮದ (Leather) ಸೋಫಾಗಳಿಗೆ ಕಡಿಮೆ ಸ್ವಚ್ಛತೆ ಸಾಕು, ಆದರೆ ಅವು ಒಣಗಿ ಬಿರುಕು ಬಿಡದಂತೆ ನಿಯಮಿತವಾಗಿ ಕಂಡೀಷನ್ ಮಾಡಬೇಕಾಗುತ್ತದೆ.

Related Articles

Related image1
ಅರ್ಧ ಸೀಳಿಟ್ಟ ನಿಂಬೆಹಣ್ಣು ಒಂದು ವಾರ ಕಳೆದ್ರೂ ಹಾಳಾಗಬಾರದೆಂದರೆ ಜಸ್ಟ್‌ ಹೀಗೆ ಮಾಡಿ
Related image2
ಏನಿದು 90-90 ರೂಲ್? ಈ ಸಿಂಪಲ್ ಟ್ರಿಕ್ ಬಳಸಿದರೆ ನಿಮ್ಮ ಮನೆ ಯಾವತ್ತೂ ಗಲೀಜಾಗಲ್ಲ!
38
ಪ್ರಾರಂಭಿಸುವ ಮೊದಲು ಗಮನಿಸಬೇಕಾದ ಅಂಶಗಳು
Image Credit : instagram

ಪ್ರಾರಂಭಿಸುವ ಮೊದಲು ಗಮನಿಸಬೇಕಾದ ಅಂಶಗಳು

ಪ್ರಾರಂಭಿಸುವ ಮೊದಲು ಗಮನಿಸಬೇಕಾದ ಅಂಶಗಳು
ಸೋಫಾ ಸ್ವಚ್ಛಗೊಳಿಸುವ ಮೊದಲು ಅದರ ಮೇಲಿರುವ 'ಕೇರ್ ಟ್ಯಾಗ್' (Care Tag) ಅಥವಾ ತಯಾರಕರ ಮಾರ್ಗಸೂಚಿಯನ್ನು ಪರಿಶೀಲಿಸಿ. ಅದರಲ್ಲಿರುವ ಕೋಡ್‌ಗಳು ಹೀಗಿವೆ:
W: ನೀರು ಅಥವಾ ನೀರು ಆಧಾರಿತ ದ್ರಾವಣಗಳಿಂದ ಸ್ವಚ್ಛಗೊಳಿಸಬಹುದು.
S: ಡ್ರೈ-ಕ್ಲೀನಿಂಗ್ ಅಥವಾ ನೀರಿಲ್ಲದ ದ್ರಾವಕಗಳಿಂದ ಮಾತ್ರ ಸ್ವಚ್ಛಗೊಳಿಸಿ. ನೀರು ಬಳಸಬೇಡಿ.
WS: ನೀರು ಆಧಾರಿತ ಅಥವಾ ಸಾಲ್ವೆಂಟ್ ಆಧಾರಿತ ಕ್ಲೀನರ್‌ಗಳನ್ನು ಬಳಸಬಹುದು.
X: ವ್ಯಾಕ್ಯೂಮ್ ಮಾಡಬಹುದು, ಆದರೆ ಹೆಚ್ಚಿನ ಸ್ವಚ್ಛತೆಗೆ ವೃತ್ತಿಪರರನ್ನು (Professionals) ಕರೆಸಬೇಕು.
ಯಾವುದೇ ಉತ್ಪನ್ನವನ್ನು ಬಳಸುವ ಮೊದಲು, ಸೋಫಾದ ಕಾಣಿಸದ ಒಂದು ಸಣ್ಣ ಭಾಗದಲ್ಲಿ ಪರೀಕ್ಷಿಸಿ ನೋಡಿ. 

48
ಸೋಫಾ ಸ್ವಚ್ಛಗೊಳಿಸಲು ಬೇಕಾದ ಸಾಮಗ್ರಿಗಳು
Image Credit : instagram

ಸೋಫಾ ಸ್ವಚ್ಛಗೊಳಿಸಲು ಬೇಕಾದ ಸಾಮಗ್ರಿಗಳು

ಸೋಫಾ ಸ್ವಚ್ಛಗೊಳಿಸಲು ಬೇಕಾದ ಸಾಮಗ್ರಿಗಳು
ಅಡುಗೆ ಸೋಡಾ (Baking soda)
ಬ್ರಷ್ ಅಟ್ಯಾಚ್‌ಮೆಂಟ್ ಇರುವ ವ್ಯಾಕ್ಯೂಮ್ ಕ್ಲೀನರ್
ಒಣ ಬ್ರಷ್ ಅಥವಾ ಸ್ವಚ್ಛವಾದ ಬಟ್ಟೆ
ಉಗುರುಬೆಚ್ಚಗಿನ ನೀರು
ಪಾತ್ರೆ ತೊಳೆಯುವ ಸೋಪ್ (Dish soap)
ಮೈಕ್ರೋಫೈಬರ್ ಬಟ್ಟೆ
ವುಡ್ ಪಾಲಿಷ್ (ಅಗತ್ಯವಿದ್ದರೆ)

58
ಅಡುಗೆ ಸೋಡಾದಿಂದ ಸ್ವಚ್ಛಗೊಳಿಸುವ ವಿಧಾನ
Image Credit : instagram

ಅಡುಗೆ ಸೋಡಾದಿಂದ ಸ್ವಚ್ಛಗೊಳಿಸುವ ವಿಧಾನ

ಅಡುಗೆ ಸೋಡಾದಿಂದ ಸ್ವಚ್ಛಗೊಳಿಸುವ ವಿಧಾನ
*ಮೊದಲು, ವ್ಯಾಕ್ಯೂಮ್ ಕ್ಲೀನರ್ ಬಳಸಿ ಸೋಫಾದ ಮೇಲಿರುವ ಧೂಳು, ಕೂದಲು ಮತ್ತು ಕಸವನ್ನು ತೆಗೆಯಿರಿ. ಕುಶನ್‌ಗಳನ್ನು ಎತ್ತಿ ಎಲ್ಲಾ ಬದಿಗಳನ್ನು ಸ್ವಚ್ಛಗೊಳಿಸಿ.
*ಒಣ ಬ್ರಷ್ ಅಥವಾ ಬಟ್ಟೆಯಿಂದ ಸೋಫಾದ ಮೇಲಿರುವ ಒಣಗಿದ ಕಲೆಗಳನ್ನು ಮೆಲ್ಲಗೆ ಉಜ್ಜಿ ತೆಗೆಯಿರಿ. ಬಟ್ಟೆಯ ನಾರುಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ.
*ಈಗ ಸೋಫಾದ ಕುಶನ್‌ಗಳು ಮತ್ತು ಹಿಂಭಾಗದ ಮೇಲೆ ಅಡುಗೆ ಸೋಡಾವನ್ನು ಸಮನಾಗಿ ಚಿಮುಕಿಸಿ. ದುರ್ವಾಸನೆ ಮತ್ತು ತೇವಾಂಶವನ್ನು ಹೀರಿಕೊಳ್ಳಲು ಇದನ್ನು 15 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮತ್ತೆ ವ್ಯಾಕ್ಯೂಮ್ ಕ್ಲೀನರ್ ಬಳಸಿ ಸೋಫಾದ ಮೇಲಿರುವ ಅಡುಗೆ ಸೋಡಾವನ್ನು ಸಂಪೂರ್ಣವಾಗಿ ತೆಗೆಯಿರಿ.
*ಸೋಫಾದ ಮರದ ಕೈಪಿಡಿ ಅಥವಾ ಕಾಲುಗಳನ್ನು ಸೋಪ್ ನೀರಿನಲ್ಲಿ ಅದ್ದಿದ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ, ನಂತರ ಒಣ ಬಟ್ಟೆಯಿಂದ ಒಣಗಿಸಿ. ಬೇಕಿದ್ದರೆ ವುಡ್ ಪಾಲಿಷ್ ಬಳಸಿ. 

68
ಸೋಫಾ ದೀರ್ಘಕಾಲ ಸ್ವಚ್ಛವಾಗಿರಲು ಸಲಹೆಗಳು
Image Credit : Flipkart.com

ಸೋಫಾ ದೀರ್ಘಕಾಲ ಸ್ವಚ್ಛವಾಗಿರಲು ಸಲಹೆಗಳು

ಸೋಫಾ ದೀರ್ಘಕಾಲ ಸ್ವಚ್ಛವಾಗಿರಲು ಸಲಹೆಗಳು
*ನಿಯಮಿತವಾಗಿ ವ್ಯಾಕ್ಯೂಮ್ ಮಾಡಿ.
*ಕುಶನ್‌ಗಳನ್ನು ಆಗಾಗ ಅದಲುಬದಲು ಮಾಡಿ (Rotate), ಇದರಿಂದ ಅವು ಎಲ್ಲಾ ಕಡೆ ಸಮನಾಗಿ ಬಳಕೆಯಾಗುತ್ತವೆ.
*ಸೋಫಾದ ಮೇಲೆ ಕುಳಿತು ಆಹಾರ ಸೇವಿಸುವುದನ್ನು ತಪ್ಪಿಸಿ.
*ಮನೆಯಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳಿದ್ದರೆ ಸೋಫಾ ಕವರ್‌ಗಳನ್ನು ಬಳಸಿ.

78
ಕಲೆಗಳನ್ನು ತೆಗೆದುಹಾಕುವುದು ಹೇಗೆ?
Image Credit : Flipkart.com

ಕಲೆಗಳನ್ನು ತೆಗೆದುಹಾಕುವುದು ಹೇಗೆ?

ಕಲೆಗಳನ್ನು ತೆಗೆದುಹಾಕುವುದು ಹೇಗೆ?
*ನಿಮ್ಮ ಸೋಫಾ 'W' ಕೋಡ್ ಹೊಂದಿದ್ದರೆ, 1 ಕಪ್ ಉಗುರುಬೆಚ್ಚಗಿನ ನೀರು, 1 ಚಮಚ ವಿನೆಗರ್ ಮತ್ತು 1 ಟೀಚಮಚ ಡಿಶ್ ಸೋಪ್ ಸೇರಿಸಿ ಸ್ಪ್ರೇ ಬಾಟಲ್‌ನಲ್ಲಿ ಮಿಶ್ರಣ ಮಾಡಿ. ಅದಕ್ಕೆ 1 ಟೀಚಮಚ ಅಡುಗೆ ಸೋಡಾ ಸೇರಿಸಿ. ಆ ದ್ರಾವಣವನ್ನು ಬಟ್ಟೆಯ ಮೇಲೆ ಚಿಮುಕಿಸಿ ಕಲೆ ಇರುವ ಜಾಗದಲ್ಲಿ ಮೆಲ್ಲಗೆ ಒತ್ತಿ ಒರೆಸಿ.
*ಲೆದರ್ (Leather) ಸೋಫಾದಲ್ಲಿ ಎಣ್ಣೆಯ ಕಲೆಗಳಿದ್ದರೆ, ಅಡುಗೆ ಸೋಡಾವನ್ನು ಚಿಮುಕಿಸಿ ಕೆಲವು ಗಂಟೆಗಳ ಕಾಲ ಬಿಟ್ಟು ನಂತರ ಒದ್ದೆ ಬಟ್ಟೆಯಿಂದ ಒರೆಸಿ.

88
ಪ್ರೊಫೆಶನಲಿಸ್ಟ್‌ ಅನ್ನು ಯಾವಾಗ ಕರೆಯಬೇಕು?
Image Credit : Instagram

ಪ್ರೊಫೆಶನಲಿಸ್ಟ್‌ ಅನ್ನು ಯಾವಾಗ ಕರೆಯಬೇಕು?

ಪ್ರೊಫೆಶನಲಿಸ್ಟ್‌ ಅನ್ನು ಯಾವಾಗ ಕರೆಯಬೇಕು?
ಕಲೆಗಳು ಅಥವಾ ದುರ್ವಾಸನೆ ಹೋಗದಿದ್ದರೆ ಅಥವಾ ನಿಮ್ಮ ಸೋಫಾ ರೇಷ್ಮೆ (Silk) ಅಥವಾ ಸುಯೆಡ್ (Suede) ನಂತಹ ನಾಜೂಕಿನ ಬಟ್ಟೆಯಿಂದ ಕೂಡಿದ್ದರೆ ವೃತ್ತಿಪರ ಕ್ಲೀನರ್‌ಗಳನ್ನು ಕರೆಯುವುದು ಉತ್ತಮ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ

Latest Videos
Recommended Stories
Recommended image1
True Story: ವಡಾಪಾವ್ ತಿಂದು 'ವಾರೆವ್ಹಾ; ಅಂದಿದೀರಾ? ಆದ್ರೆ ಈ ತರಕಾರಿ ತವರೂರು ಯಾವುದು? ಇದು ಆಲೂಗಡ್ಡೆ ಕಥೆ!
Recommended image2
Business Idea For Women: ಕಡಿಮೆ ಬಜೆಟ್‌ನಲ್ಲಿ ಮನೆಯಿಂದಲೇ ಆರಂಭಿಸಿ ಈ 3 ಉದ್ಯೋಗ
Recommended image3
ಅರ್ಧ ಸೀಳಿಟ್ಟ ನಿಂಬೆಹಣ್ಣು ಒಂದು ವಾರ ಕಳೆದ್ರೂ ಹಾಳಾಗಬಾರದೆಂದರೆ ಜಸ್ಟ್‌ ಹೀಗೆ ಮಾಡಿ
Related Stories
Recommended image1
ಅರ್ಧ ಸೀಳಿಟ್ಟ ನಿಂಬೆಹಣ್ಣು ಒಂದು ವಾರ ಕಳೆದ್ರೂ ಹಾಳಾಗಬಾರದೆಂದರೆ ಜಸ್ಟ್‌ ಹೀಗೆ ಮಾಡಿ
Recommended image2
ಏನಿದು 90-90 ರೂಲ್? ಈ ಸಿಂಪಲ್ ಟ್ರಿಕ್ ಬಳಸಿದರೆ ನಿಮ್ಮ ಮನೆ ಯಾವತ್ತೂ ಗಲೀಜಾಗಲ್ಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved