Business Idea For Women: ಕಡಿಮೆ ಬಜೆಟ್‌ನಲ್ಲಿ ಮನೆಯಿಂದಲೇ ಆರಂಭಿಸಿ ಈ 3 ಉದ್ಯೋಗ
Work from home for ladies: ಮನೆಯ ಜವಾಬ್ದಾರಿಗಳ ನಡುವೆಯೇ ಸ್ವಂತ ಉದ್ಯೋಗ ಮಾಡುವ ಕನಸು ಇದೆಯೇ? ಹಾಗಿದ್ದರೆ ಅತಿ ಕಡಿಮೆ ಬಂಡವಾಳದಲ್ಲಿ, ಮನೆಯ ಒಂದು ಮೂಲೆಯಲ್ಲೇ ಕುಳಿತು ಆರಂಭಿಸಬಹುದಾದ 3 ಟ್ರೆಂಡಿ ಬಿಸಿನೆಸ್ ಐಡಿಯಾ ಇಲ್ಲಿವೆ. ಸೃಜನಶೀಲತೆ ಜೊತೆಗೆ ಆರ್ಥಿಕ ಸ್ವಾವಲಂಬನೆಗೆ ಈ ಲೇಖನ ಓದಿ.
ಟ್ರೆಂಡಿ ಬಿಸಿನೆಸ್ ಐಡಿಯಾಗಳು
ಟ್ರೆಂಡಿ ಬಿಸಿನೆಸ್ ಐಡಿಯಾಗಳು
ನೀವು ಮಹಿಳೆಯಾಗಿದ್ದು, ಮನೆಯಿಂದಲೇ ಯಾವುದಾದರೂ ಉದ್ಯೋಗ ಆರಂಭಿಸಬೇಕು ಎಂದು ಯೋಚಿಸುತ್ತಿದ್ದರೆ, ಕಡಿಮೆ ಹೂಡಿಕೆಯ ಉದ್ಯೋಗಗಳನ್ನು ಆರಿಸಿಕೊಳ್ಳಬಹುದು. ರೆಸಿನ್ ಆರ್ಟ್ (Resin Art), ಮ್ಯಾಕ್ರೇಮ್ ಯಾರ್ನ್ ಕ್ರಾಫ್ಟ್ (Macrame Yarn Craft) ಮತ್ತು ಹ್ಯಾಂಡ್‌ಮೇಡ್ ಜ್ಯುವೆಲ್ಲರಿ (Handmade Jewellery) ಉದ್ಯೋಗಗಳು ಇದಕ್ಕೆ ಅತ್ಯುತ್ತಮ ಉದಾಹರಣೆಗಳಾಗಿವೆ. ಮಹಿಳೆಯರು ಸಾಮಾನ್ಯವಾಗಿ ತಮ್ಮ ಬಿಡುವಿನ ವೇಳೆಯಲ್ಲಿ ಇಂತಹ ಕಲಾಕೃತಿಗಳನ್ನು ಮಾಡುತ್ತಿರುತ್ತಾರೆ. ನಿಮ್ಮಲ್ಲಿ ಇಂತಹ ಪ್ರತಿಭೆಯಿದ್ದರೆ, ಅದನ್ನು ಬ್ಯುಸಿನೆಸ್ ಆಗಿ ಬದಲಾಯಿಸಬಹುದು. ಮನೆಗೆಲಸದ ಜೊತೆಗೆ ಹಣವನ್ನೂ ಸಂಪಾದಿಸಬಲ್ಲ ಟ್ರೆಂಡಿ ಬಿಸಿನೆಸ್ ಐಡಿಯಾಗಳು ಇಲ್ಲಿವೆ.
ಮಹಿಳೆಯರಿಗಾಗಿ 3 ಅತ್ಯುತ್ತಮ ಬಿಸಿನೆಸ್ ಐಡಿಯಾಗಳು
ರೆಸಿನ್ ಆರ್ಟ್ ಬಿಸಿನೆಸ್ (Resin Art Business)
ನಿಮಗೆ ರೆಸಿನ್ ಆರ್ಟ್ ತಿಳಿದಿದ್ದರೆ ನಿಮ್ಮ ಕಲೆಗೆ ಉತ್ತಮ ಆದಾಯ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಜನರು ಕೈಯಿಂದ ತಯಾರಿಸಿದ (Handmade) ವಸ್ತುಗಳನ್ನು ಖರೀದಿಸಲು ಹೆಚ್ಚು ಇಷ್ಟಪಡುತ್ತಿದ್ದಾರೆ. ರೆಸಿನ್ ಬಳಸಿ ನೀವು ಕೀ ಚೈನ್, ಕೋಸ್ಟರ್‌ಗಳು, ಆಭರಣಗಳು, ಶೋಪೀಸ್‌ಗಳು, ನೇಮ್ ಪ್ಲೇಟ್‌ಗಳು ಮತ್ತು ಗೋಡೆ ಗಡಿಯಾರಗಳನ್ನು ತಯಾರಿಸಬಹುದು. ಅದರಲ್ಲೂ ರೆಸಿನ್ ವಾಲ್ ಕ್ಲಾಕ್ ಮತ್ತು ಕಸ್ಟಮೈಸ್ಡ್ ನೇಮ್ ಪ್ಲೇಟ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.
ಮ್ಯಾಕ್ರೇಮ್ ಯಾರ್ನ್ ಕ್ರಾಫ್ಟ್ (Macrame Yarn Craft)
ಮ್ಯಾಕ್ರೇಮ್ ಯಾರ್ನ್ ಕ್ರಾಫ್ಟ್ (Macrame Yarn Craft)
ಈ ಉದ್ಯೋಗಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳು ಅಗ್ಗದ ದರದಲ್ಲಿ ಸಿಗುತ್ತವೆ. ಆದರೆ ಇವುಗಳಿಂದ ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು. ಮ್ಯಾಕ್ರೇಮ್ ದಾರ ಬಳಸಿ ಹ್ಯಾಂಡ್‌ಬ್ಯಾಗ್, ವಾಲ್ ಹ್ಯಾಂಗಿಂಗ್ ಪೀಸ್, ಮಿರರ್ ಪೀಸ್ ಮತ್ತು ಪ್ಲಾಂಟ್ ಹೋಲ್ಡರ್‌ನಂತಹ ವಿಭಿನ್ನ ವಸ್ತುಗಳನ್ನು ತಯಾರಿಸಬಹುದು. ಇವುಗಳನ್ನು ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೀಶೋ ಅಂತಹ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಮಾರಾಟ ಮಾಡಬಹುದು. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮದೇ ಪೇಜ್ ಕ್ರಿಯೇಟ್ ಮಾಡಿ ಪ್ರಚಾರ ಮಾಡುವ ಮೂಲಕ ನೇರವಾಗಿ ಗ್ರಾಹಕರನ್ನು ತಲುಪಬಹುದು.
ಹ್ಯಾಂಡ್‌ಮೇಡ್ ಜ್ಯುವೆಲ್ಲರಿ (Handmade Jewellery)
ಹ್ಯಾಂಡ್‌ಮೇಡ್ ಜ್ಯುವೆಲ್ಲರಿ (Handmade Jewellery)
ಆಭರಣಗಳ ಟ್ರೆಂಡ್ ಯಾವಾಗಲೂ ಬದಲಾಗುತ್ತಿರುತ್ತದೆ. ಚಿನ್ನ ಮತ್ತು ಬೆಳ್ಳಿಯ ಬೆಲೆ ಏರುತ್ತಿರುವುದರಿಂದ ಜನರು ಇಂದು ಆಕರ್ಷಕವಾದ ಕೃತಕ ಮತ್ತು ಹ್ಯಾಂಡ್‌ಮೇಡ್ ಆಭರಣಗಳತ್ತ ಒಲವು ತೋರುತ್ತಿದ್ದಾರೆ. ಮಣಿಗಳು, ದಾರ ಮತ್ತು ಕ್ಲೇ ಬಳಸಿ ಕಸ್ಟಮೈಸ್ಡ್ ಆಭರಣಗಳನ್ನು ತಯಾರಿಸುವ ಮೂಲಕ ನೀವು ಉತ್ತಮವಾಗಿ ಸಂಪಾದಿಸಬಹುದು. ಮಹಿಳೆಯರು ಹೆಚ್ಚಾಗಿ ತಮ್ಮ ಉಡುಪಿಗೆ ಮ್ಯಾಚ್ ಆಗುವ ಆಭರಣಗಳನ್ನು ಇಷ್ಟಪಡುವುದರಿಂದ ಇದಕ್ಕೆ ಹೆಚ್ಚಿನ ಸ್ಕೋಪ್ ಇದೆ.
ಇತರ ಆಯ್ಕೆಗಳು
ಇತರ ಆಯ್ಕೆಗಳು
ಇವುಗಳಲ್ಲದೆ ನೀವು ಚಾಕೊಲೇಟ್ ಮೇಕಿಂಗ್, ಕೇಕ್ ಬೇಕಿಂಗ್ ಮತ್ತು ಕ್ಯಾಂಡಲ್ ಮೇಕಿಂಗ್‌ನಂತಹ ಉದ್ಯೋಗಗಳನ್ನು ಕೂಡ ಮನೆಯಿಂದಲೇ ಆರಂಭಿಸಬಹುದು. ನಿಮ್ಮ ಪ್ರತಿಭೆಯನ್ನು ವ್ಯವಹಾರವಾಗಿ ಬದಲಾಯಿಸಿ ಇಂದೇ ಆದಾಯ ಗಳಿಸಲು ಪ್ರಾರಂಭಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

