MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Viral News
  • 80ರ ದಶಕದ ಫೋಟೋ ಕ್ರೇಜ್: ಕೊಹ್ಲಿ, ಅನುಶ್ರೀ ರೆಟ್ರೋ ಸ್ಟೈಲ್ ಲುಕ್ ವೈರಲ್! ನೀವೂ ಹೀಗೆ ಟ್ರೈ ಮಾಡಿ

80ರ ದಶಕದ ಫೋಟೋ ಕ್ರೇಜ್: ಕೊಹ್ಲಿ, ಅನುಶ್ರೀ ರೆಟ್ರೋ ಸ್ಟೈಲ್ ಲುಕ್ ವೈರಲ್! ನೀವೂ ಹೀಗೆ ಟ್ರೈ ಮಾಡಿ

Instagram ನಲ್ಲಿ 1980ರ ದಶಕದ AI ಫೋಟೋ ಟ್ರೆಂಡ್ ವೈರಲ್ ಆಗಿದೆ. ಬಳಕೆದಾರರು ChatGPT ಬಳಸಿ ತಮ್ಮ ಫೋಟೋಗಳನ್ನು ರೆಟ್ರೋ ಶೈಲಿಗೆ ಪರಿವರ್ತಿಸುತ್ತಿದ್ದು, ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಈ ಲೇಖನದಲ್ಲಿ, ChatGPT ಬಳಸಿ ನೀವೂ ಹೇಗೆ 80ರ ದಶಕದ ಫೋಟೋಗಳನ್ನು ರಚಿಸಬಹುದು.

2 Min read
Author : Gowthami K
Published : Sep 09 2026, 11:21 AM IST
Share this Photo Gallery
  • FB
  • TW
  • Linkdin
  • Whatsapp
17
Instagram ನಲ್ಲಿ ವೈರಲ್ ಆಗುತ್ತಿರುವ '80s AI ಫೋಟೋ ಟ್ರೆಂಡ್
Image Credit : Asianet News

Instagram ನಲ್ಲಿ ವೈರಲ್ ಆಗುತ್ತಿರುವ '80s AI ಫೋಟೋ ಟ್ರೆಂಡ್

1980ರ ದಶಕದ ರೆಟ್ರೋ ಶೈಲಿ ಈಗ Instagram ನಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಇದಕ್ಕೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವೂ ಸಾಥ್ ನೀಡಿದೆ. ಬಳಕೆದಾರರು ತಮ್ಮ ಇತ್ತೀಚಿನ ಫೋಟೋಗಳಿಗೆ ಕೇವಲ ಸಾಮಾನ್ಯ 'ವಿಂಟೇಜ್ ಫಿಲ್ಟರ್' ಬಳಸುವ ಬದಲು, ChatGPT ಸಹಾಯದಿಂದ 80ರ ದಶಕದ ಕಲ್ಪನಾತ್ಮಕ ಭಾವಚಿತ್ರಗಳನ್ನು (Portraits) ಸೃಷ್ಟಿಸುತ್ತಿದ್ದಾರೆ. Instagram Stories ನಲ್ಲಿರುವ "Add Yours" ಸ್ಟಿಕ್ಕರ್ ಮೂಲಕ ಈ ಟ್ರೆಂಡ್ ವೇಗವಾಗಿ ಹರಡುತ್ತಿದ್ದು, ಬಳಕೆದಾರರು ತಮ್ಮ ಪ್ರಾಂಪ್ಟ್‌ಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಅನುಶ್ರೀ, ಕೊಹ್ಲಿ ಸೇರಿ ಹಲವರು ರೆಟ್ರೋದಲ್ಲಿ ಮಿಂಚಿಂಗ್
Image Credit : Asianet News

ಅನುಶ್ರೀ, ಕೊಹ್ಲಿ ಸೇರಿ ಹಲವರು ರೆಟ್ರೋದಲ್ಲಿ ಮಿಂಚಿಂಗ್

ಜನಸಾಮಾನ್ಯರಿಂದ ಹಿಡಿದು ನಿರೂಪಕಿ ಅನುಶ್ರೀ, ಗಾಯಕ ಗಣೇಶ್ ಕಾರಂತ್, ವಿರಾಟ್ ಕೊಹ್ಲಿ ಸೇರಿ ಹಲವು ಕ್ರಿಕೆಟ್‌ ಸ್ಟಾರ್‌ಗಳ ಫೋಟೋಗಳು ವೈರಲ್ ಆಗುತ್ತಿದೆ.

ಅನುಶ್ರೀ ಅವರು ಪುನೀತ್ ರಾಜ್‌ಕುಮಾರ್ ಅವರ ಜೊತೆಗಿನ ಫೋಟೋ ಹಂಚಿಕೊಂಡು " ಅಂದಿಗೂ ನಾನು ಅಪ್ಪು ಸರ್ ಅಭಿಮಾನಿಯಾಗಿ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಒಂದೊಂದು ಫೋಟೋಗೂ ಸುಂದರ ಅಡಿಬರಹ ನೀಡಿದ್ದಾರೆ. ಕಾರಿನಲ್ಲಿ ಹೋಗಿರುವೆ ಎಂಟಿಆರ್ ದೋಸೆಗಾಗಿ ಮತ್ತೊಂದು ಫೋಟೋ, ಟಿಕೆಟ್‌ಗಾಗಿ ಟಾಕಿಸ್ ಆಚೆ ಕಾದಿರುವೆ ಎಂದು ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ.

Related Articles

Related image1
ರೆಟ್ರೋ ಸ್ಟೈಲ್‌ಗೆ ಹೊಸ ಹವಾ.. ಹೈ ಬೂಟ್‌ನಲ್ಲಿ ಸುಂದರಿಯರ ಕ್ಯಾಟ್‌ವಾಕ್‌
Related image2
ರೆಟ್ರೋ ಲುಕ್‌, ಆಧುನಿಕ ಸ್ಟೈಲ್‌, ಹೊಸ ಫ್ಯಾಷನ್‌.. ಬಾಲಿವುಡ್ ಹುಡುಗಿಯರ 'ಮಿಯು ಮಿಯು' ಡ್ರೆಸ್ ಟ್ರೆಂಡ್
37
ವಿಂಟೇಜ್ ಫಿಲ್ಟರ್‌ಗಿಂತ ಇದು ಹೇಗೆ ಭಿನ್ನ?
Image Credit : Asianet News

ವಿಂಟೇಜ್ ಫಿಲ್ಟರ್‌ಗಿಂತ ಇದು ಹೇಗೆ ಭಿನ್ನ?

ಸಾಮಾನ್ಯ ಫಿಲ್ಟರ್‌ಗಳು ಫೋಟೋದ ಬಣ್ಣವನ್ನು ಮಾತ್ರ ಬದಲಾಯಿಸುತ್ತವೆ. ಆದರೆ, ChatGPT ಯಲ್ಲಿ ನಿಮ್ಮ ಫೋಟೋ ಅಪ್‌ಲೋಡ್ ಮಾಡಿದಾಗ ಅದು ಬಟ್ಟೆ, ಕೇಶವಿನ್ಯಾಸ, ಹಿನ್ನೆಲೆ, ಬೆಳಕು ಹಾಗೂ ಛಾಯಾಗ್ರಹಣದ ವಿನ್ಯಾಸವನ್ನೇ 1980ರ ದಶಕದ ಶೈಲಿಗೆ ಸಂಪೂರ್ಣವಾಗಿ ಪುನರ್ನಿರ್ಮಿಸುತ್ತದೆ. ಮಹಿಳೆಯರಿಗೆ ವರ್ಣರಂಜಿತ ಸೀರೆಗಳು, ದೊಡ್ಡ ಸುರುಳಿ ಕೂದಲು (Curly Hair) ಹಾಗೂ ವಿಂಟೇಜ್ ಆಭರಣಗಳು; ಪುನಃ ಪುರುಷರಿಗೆ ಆ ಕಾಲದ ವಿಶಿಷ್ಟ ಶರ್ಟ್‌ಗಳು, ಹೈ-ವೇಸ್ಟ್ ಪ್ಯಾಂಟ್‌ಗಳು, ಮೀಸೆ ಹಾಗೂ ಅಂದವಾಗಿ ಬಾಚಿದ ಕೇಶವಿನ್ಯಾಸ ಸಿಗುತ್ತದೆ. ಹಳೆಯ ಬಾಲಿವುಡ್ ಸಿನಿಮಾ ಸ್ಟಿಲ್, ಸ್ಟುಡಿಯೋ ಪೋರ್ಟ್ರೇಟ್, ಫ್ಯಾಷನ್ ಮ್ಯಾಗಜೀನ್ ಕವರ್ ಅಥವಾ ಕುಟುಂಬದ ಹಳೆಯ ಫೋಟೋ ಆಲ್ಬಮ್‌ನ ರೂಪದಲ್ಲಿ ಫೋಟೋಗಳನ್ನು ಮರುಸೃಷ್ಟಿಸಬಹುದು.

47
ChatGPT ಯಲ್ಲಿ 1980ರ ದಶಕದ ಫೋಟೋ ರಚಿಸುವುದು ಹೇಗೆ?
Image Credit : Asianet News

ChatGPT ಯಲ್ಲಿ 1980ರ ದಶಕದ ಫೋಟೋ ರಚಿಸುವುದು ಹೇಗೆ?

  • ನಿಮ್ಮ ಮುಖ ಸ್ಪಷ್ಟವಾಗಿ ಕಾಣಿಸುವ ಫೋಟೋವನ್ನು (Selfie ಅಥವಾ Portrait) ChatGPT ಗೆ ಅಪ್‌ಲೋಡ್ ಮಾಡಿ.
  • 1980ರ ದಶಕದ ಶೈಲಿಗೆ ಮರುಸೃಷ್ಟಿಸಲು (Recreate) ಕೋರಿ ಪ್ರಾಂಪ್ಟ್ ನೀಡಿ.
  • ನಿಮಗಾಗುವ ಬಟ್ಟೆ, ಕೇಶವಿನ್ಯಾಸ, ಹಿನ್ನೆಲೆ, ಫಿಲ್ಮ್ ಗ್ರೇನ್ (Film Grain) ಮತ್ತು ಬೆಳಕಿನ ವಿವರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ.
  • ಮೊದಲ ಯತ್ನದಲ್ಲಿ ಪರಿಪೂರ್ಣವಾಗಿ ಬಾರದಿದ್ದರೆ, ಅದೇ ಚಾಟ್‌ನಲ್ಲಿ ಚಿತ್ರವನ್ನು ಮತ್ತಷ್ಟು ಪರಿಷ್ಕರಿಸಲು (Refine) ಸೂಚನೆ ನೀಡಿ.
  • ತಯಾರಾದ ಚಿತ್ರವನ್ನು Instagram Stories ಗೆ ಅಪ್‌ಲೋಡ್ ಮಾಡಿ, "Add Yours" ಸ್ಟಿಕ್ಕರ್ ಬಳಸಿ ಸ್ನೇಹಿತರಿಗೂ ಆಹ್ವಾನ ನೀಡಿ.
57
ನೀವು ಬಳಸಬಹುದಾದ ಕೆಲವು ChatGPT ಪ್ರಾಂಪ್ಟ್ ಉದಾಹರಣೆಗಳು
Image Credit : Asianet News

ನೀವು ಬಳಸಬಹುದಾದ ಕೆಲವು ChatGPT ಪ್ರಾಂಪ್ಟ್ ಉದಾಹರಣೆಗಳು

1980ರ ದಶಕದ ಭಾರತೀಯ ಮದುವೆಯ ಶೈಲಿ:

"ಈ ಫೋಟೋವನ್ನು 1980ರ ದಶಕದ ಭಾರತೀಯ ವಿವಾಹದ ಸನ್ನಿವೇಶದಲ್ಲಿ ಮರುಸೃಷ್ಟಿಸು. ಮುಖದ ಗುರುತನ್ನು ಹಾಗೆಯೇ ಇರಿಸು. ಆ ಕಾಲದ ಮದುವೆಯ ಉಡುಪು, ಆಭರಣ, ಕೇಶವಿನ್ಯಾಸ ಮತ್ತು ಮೃದುವಾದ ಅನಾಲಾಗ್ ಫಿಲ್ಮ್ (Analog Film) ಗ್ರೇನ್ ಬಣ್ಣಗಳನ್ನು ಬಳಸು."

ರೆಟ್ರೋ ಬೀದಿ ಛಾಯಾಗ್ರಹಣ (Retro Street Look):

“ಈ ಫೋಟೋವನ್ನು 1987ರ ಭಾರತದ ಬೀದಿಯಲ್ಲಿ ತೆಗೆದಂತೆ ಬದಲಾಯಿಸು. ನನ್ನ ಮುಖದ ಗುರುತು ಬದಲಾಗದಿರಲಿ. ಹಿನ್ನೆಲೆಯಲ್ಲಿ 80ರ ದಶಕದ ವಾಹನಗಳು, ಬೋರ್ಡ್‌ಗಳು, ಹಗಲಿನ ನೈಸರ್ಗಿಕ ಬೆಳಕು ಮತ್ತು ಹಳೆಯ ಫೋಟೋ ಮುದ್ರಣದ ವಿನ್ಯಾಸವಿರಲಿ.”

67
ಕುಟುಂಬದ ಹಳೆಯ ಆಲ್ಬಮ್ ಶೈಲಿ:
Image Credit : Asianet News

ಕುಟುಂಬದ ಹಳೆಯ ಆಲ್ಬಮ್ ಶೈಲಿ:

ಇದನ್ನು 1980ರ ದಶಕದ ಮಧ್ಯಭಾಗದ ಭಾರತೀಯ ಕುಟುಂಬ ಆಲ್ಬಮ್ ಫೋಟೋದಂತೆ ಬದಲಾಯಿಸು. ನೈಸರ್ಗಿಕ ಮುಖಭಾವ, ಸರಳ ಒಳಾಂಗಣ ಸೆಟ್ಟಿಂಗ್, ಮೃದುವಾದ ಬೆಳಕು ಮತ್ತು ಹಳೆಯ ಕ್ಯಾಮೆರಾ ಫಿನಿಶಿಂಗ್ ನೀಡು. ಆಧುನಿಕ ಡಿಜಿಟಲ್ ಲುಕ್ ಇರಬಾರದು."

77
ಗಮನಿಸಬೇಕಾದ ಪ್ರಮುಖ ಸಂಗತಿಗಳು
Image Credit : Asianet News

ಗಮನಿಸಬೇಕಾದ ಪ್ರಮುಖ ಸಂಗತಿಗಳು

AI ದೋಷಗಳು: AI ಕೆಲವೊಮ್ಮೆ ಬೆರಳುಗಳು, ಆಭರಣಗಳ ಶೈಲಿ, ಬಟ್ಟೆಯ ವಿನ್ಯಾಸ ಅಥವಾ ಮುಖದ ಸೂಕ್ಷ್ಮ ವಿವರಗಳಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಬಹುದು.

ಐತಿಹಾಸಿಕ ನಿಖರತೆಯಲ್ಲ: ಇವು ಸೃಜನಶೀಲ ಕಲ್ಪನೆಗಳೇ ಹೊರತು 100% ಐತಿಹಾಸಿಕವಾಗಿ ನಿಖರವಾದ ದಾಖಲೆಗಳಲ್ಲ.

ಗೌಪ್ಯತೆ ಮತ್ತು ಭದ್ರತೆ: ಖಾಸಗಿ ದಾಖಲೆಗಳು ಅಥವಾ ಇತರರ ಒಪ್ಪಿಗೆಯಿಲ್ಲದ ಫೋಟೋಗಳನ್ನು AI ಗೆ ಅಪ್‌ಲೋಡ್ ಮಾಡುವುದನ್ನು ತಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಇನ್‌ಸ್ಟಾಗ್ರಾಂ
ವೈರಲ್ ಸುದ್ದಿ
ಚಾಟ್‌ಜಿಪಿಟಿ
ಕೃತಕ ಬುದ್ಧಿಮತ್ತೆ

Latest Videos
Recommended Stories
Recommended image1
ಪ್ರತಿಷ್ಠಿತ ಕಂಪನಿ ಯಜಮಾನನ ದೊಡ್ಡ ಮನಸ್ಸು; ತನ್ನ ಉದ್ಯೋಗಿಗಳಿಗೆ 20 ಕೋಟಿ ರೂ ಮೌಲ್ಯದ ಷೇರು ಗಿಫ್ಟ್
Recommended image2
ಕೋರಿಯನ್ ಮದ್ವೆಯಲ್ಲಿ ಭಾರತೀಯ ಯುವತಿಗೆ ಊಟ ನೀಡದೇ ನಿಲ್ಲಿಸಿದ್ದರು; ಕಾರಣ ಕ್ಯೂಟ್ ಆಗಿದೆ
Recommended image3
ಹುಡುಗಿಯರಿರುವ ಪಿಜಿ ಕೋಣೆಯೊಳಗೆ ಮಾಲೀಕನ ಕಣ್ಣು, ಲಿವಿಂಗ್ ರೂಂ ಗೆ ಸಿಸಿಟಿವಿ ಅಳವಡಿಸಿ ಸಭ್ಯ ಬಟ್ಟೆ ಧರಿಸಲು ತಾಕೀತು!
Related Stories
Recommended image1
ರೆಟ್ರೋ ಸ್ಟೈಲ್‌ಗೆ ಹೊಸ ಹವಾ.. ಹೈ ಬೂಟ್‌ನಲ್ಲಿ ಸುಂದರಿಯರ ಕ್ಯಾಟ್‌ವಾಕ್‌
Recommended image2
ರೆಟ್ರೋ ಲುಕ್‌, ಆಧುನಿಕ ಸ್ಟೈಲ್‌, ಹೊಸ ಫ್ಯಾಷನ್‌.. ಬಾಲಿವುಡ್ ಹುಡುಗಿಯರ 'ಮಿಯು ಮಿಯು' ಡ್ರೆಸ್ ಟ್ರೆಂಡ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved