- Home
- Entertainment
- TV Talk
- BBK 12: ನಾನು ಆಚೆನೂ ಅಲ್ಲ, ಈಚೆನೂ ಅಲ್ಲ ಎನ್ನುತ್ತ ಅಸಲಿ ವಯಸ್ಸು ತಿಳಿಸಿದ ಕಾವ್ಯಾ ಶೈವ! ಗಿಲ್ಲಿ ಹೇಳಿದ್ದೇನು?
BBK 12: ನಾನು ಆಚೆನೂ ಅಲ್ಲ, ಈಚೆನೂ ಅಲ್ಲ ಎನ್ನುತ್ತ ಅಸಲಿ ವಯಸ್ಸು ತಿಳಿಸಿದ ಕಾವ್ಯಾ ಶೈವ! ಗಿಲ್ಲಿ ಹೇಳಿದ್ದೇನು?
ಬಿಗ್‌ಬಾಸ್ ಸೀಸನ್ 12ರ ಮನೆಯಲ್ಲಿ ಜೆನ್ ಜಿ ಯಾರು ಎಂಬ ಬಗ್ಗೆ ಸ್ಪರ್ಧಿಗಳಾದ ಕಾವ್ಯಾ ಶೈವ, ರಘು, ಮತ್ತು ಗಿಲ್ಲಿ ನಟ ನಡುವೆ ಚರ್ಚೆ ನಡೆದಿದೆ. ಈ ಚರ್ಚೆಯ ಸಮಯದಲ್ಲಿ, ಕಾವ್ಯಾ ಶೈವ ತಮ್ಮ ನಿಜವಾದ ವಯಸ್ಸನ್ನು ಬಹಿರಂಗಪಡಿಸಿದ್ದಾರೆ. ಗಿಲ್ಲಿ ನಟನ ವಯಸ್ಸೆಷ್ಟು?

ಬಿಗ್ಬಾಸ್ನಲ್ಲಿ ಜೆನ್ ಜಿ ಚರ್ಚೆ
ಸದ್ಯ ಜೆನ್ ಜಿ (Zen Z ) ಚರ್ಚೆ ಇಡೀ ವಿಶ್ವಾದ್ಯಂತ ಜೋರಾಗಿದೆ. ನೇಪಾಳದಲ್ಲಿ ಇವರು ಪ್ರತಿಭಟನೆ ಮಾಡಿದಾಗಿನಿಂದಲೂ ಭಾರಿ ಚರ್ಚೆ ಆಗುತ್ತಲೇ ಇದೆ. ಇದೀಗ ಇರಾನ್ನಲ್ಲಿಯೂ ಇವರದ್ದೇ ಕಾರುಬಾರು. ಇದು ಹೊರಗಿನ ಚರ್ಚೆಯಾದರೆ, ಇನ್ನು ಬಿಗ್‌ಬಾಸ್ ಮನೆಯಲ್ಲಿಯೂ ಇದೇ ವಿಷಯದ ಬಗ್ಗೆ ಚರ್ಚೆ ಶುರುವಾಗಿದೆ.
ಎಲ್ಲರೂ ಹೇಳಿದ್ರು ವಯಸ್ಸು
ಬಿಗ್‌ಬಾಸ್ 12 (Bigg Boss 12) ಕಾವ್ಯಾ ಶೈವ, ರಘು, ಅಶ್ವಿನಿ ಗೌಡ, ಗಿಲ್ಲಿ ನಟ ಎಲ್ಲರೂ Zen Z ಬಗ್ಗೆ ಚರ್ಚೆ ಶುರು ಮಾಡಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಯಾರು ಜಿನ್ ಜಿಗಳು ಎನ್ನುವ ಚರ್ಚೆ ಇದಾಗಿದೆ.
ಜೆನ್ ಜಿ ಯಾರು?
2000ನೇ ಇಸ್ವಿ ಮೇಲೆ ಹುಟ್ಟಿದವರು ಆಗಿದ್ರೆ ಅವರು ರಕ್ಷಿತಾ ಒಬ್ಬರೇ ಎಂದು ರಘು ಹೇಳಿದ್ದಾರೆ. ಆಗ ಗಿಲ್ಲಿ ನಟ ಅಲ್ಲ 1997-98ರ ಆಸುಪಾಸು ಹುಟ್ಟಿದವರು ಎಂದು ಹೇಳಿದ್ದಾರೆ. (ಅಸಲಿಗೆ 1997 ಮತ್ತು 2012ರ ಮಧ್ಯೆ ಹುಟ್ಟಿದವರನ್ನು ಜೆನ್ ಜಿ ಗಳು ಎಂದು ಕರೆಯಲಾಗುತ್ತದೆ).
ಕಾವ್ಯಾ ಶೈವ ವಯಸ್ಸು
ಕೊನೆಗೆ ಎಲ್ಲರೂ ತಾವು ಯಾವ ಇಸವಿ ಎಂದು ಹೇಳತೊಡಗಿದಾಗ, ಕಾವ್ಯಾ ಶೈವ ಅಸಲಿ ವಯಸ್ಸು ರಿವೀಲ್ ಆಗಿದೆ. ಅಸಲಿಗೆ ಕಾವ್ಯಾ ಶೈವ (Bigg Boss Kavya Shaiva Age) ಅವರು ತಾವು 1999ರಲ್ಲಿ ಹುಟ್ಟಿರೋದು ಎಂದಿದ್ದಾರೆ. ನಾನು ಆಚೆನೂ ಅಲ್ಲ, ಈಚೆನೂ ಅಲ್ಲ ಎನ್ನುತ್ತಾ ಇಸ್ವಿಯನ್ನು ರಿವೀಲ್ ಮಾಡಿದ್ದಾರೆ. ಅಂದರೆ ಅವರಿಗೆ ಈಗ 26 ವರ್ಷ ವಯಸ್ಸು.
ಗಿಲ್ಲಿ ನಟ ಹುಟ್ಟಿದ್ದು ಯಾವಾಗ?
ಆಗ ಗಿಲ್ಲಿ ನಟ ಹಾಗಿದ್ರೆ ನೀವು ಕೂಡ ಜೆನ್ ಜೀಗೆ ಬರುತ್ತೀರಿ ಎಂದಿದ್ದಾರೆ. ಅಂದಹಾಗೆ ಗೂಗಲ್ ದಾಖಲೆ ಪ್ರಕಾರ ಗಿಲ್ಲಿ ನಟ ಅವರು ಹುಟ್ಟಿದ್ದು, 1996ರಂದು ಅವರಿಗೆ ಈಗ 29 ವರ್ಷ ವಯಸ್ಸು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

