- Home
- Entertainment
- TV Talk
- BBK 12: ರಕ್ಷಿತಾ ಶೆಟ್ಟಿ ಮನೆಯಿಂದ ಔಟ್! ಎಲ್ಲರೂ ಮಲಗಿದ್ದಾಗ ರಾತ್ರೋರಾತ್ರಿ ಶಾಕ್ ಕೊಟ್ಟ ಮಂಗಳೂರು ಪುಟ್ಟಿ!
BBK 12: ರಕ್ಷಿತಾ ಶೆಟ್ಟಿ ಮನೆಯಿಂದ ಔಟ್! ಎಲ್ಲರೂ ಮಲಗಿದ್ದಾಗ ರಾತ್ರೋರಾತ್ರಿ ಶಾಕ್ ಕೊಟ್ಟ ಮಂಗಳೂರು ಪುಟ್ಟಿ!
ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ, ತಾನು ಮಿಡ್ವೀಕ್ ಎಲಿಮಿನೇಟ್ ಆಗಿರುವುದಾಗಿ ಹೇಳಿ ಮನೆಮಂದಿಗೆ ಪ್ರಾಂಕ್ ಮಾಡಿದ್ದಾರೆ. ತನ್ನ ಅನುಪಸ್ಥಿತಿಯಲ್ಲಿ ಇತರರ ಪ್ರತಿಕ್ರಿಯೆ ನೋಡಲು ಅವರು ಕಪ್ಬೋರ್ಡ್ನಲ್ಲಿ ಅಡಗಿ ಕುಳಿತಿದ್ದು, ಈ ಪ್ರೊಮೋ ಕುತೂಹಲ ಮೂಡಿಸಿದೆ.

ರಕ್ಷಿತಾ ಶೆಟ್ಟಿ ಹವಾ
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ (Bigg Boss 12 Rakshita Shetty) ಅಭಿಮಾನಿಗಳು ಈಕೆಯೇ ವಿನ್ ಆಗುವುದು ಎಂದು ಕಾಯುತ್ತಿದ್ದಾರೆ. ಗಿಲ್ಲಿ ನಟ, ಅಶ್ವಿನಿ ಗೌಡ ಅಭಿಮಾನಿಗಳು ಕೂಡ ರಕ್ಷಿತಾ ಶೆಟ್ಟಿ ರನ್ನರ್ಸ್ ಅಪ್ ಆದರೂ ಆಗೇ ಆಗುತ್ತಾರೆ ಎನ್ನುತ್ತಿದ್ದಾರೆ.
ರಕ್ಷಿತಾ ಶೆಟ್ಟಿ ಶಾಕ್
ಇದರ ನಡುವೆಯೇ, ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ ಮನೆಮಂದಿಗೆ ಮಿಡ್ನೈಟ್ನಲ್ಲಿ ಶಾಕ್ ಕೊಟ್ಟಿದ್ದಾರೆ. ಮಿಡ್ವೀಕ್ ಎಲಿಮಿನೇಷನ್ ಆಗಿ ಮನೆಯಿಂದ ಹೊರಕ್ಕೆ ಹೋಗುತ್ತಿರುವುದಾಗಿ ರಕ್ಷಿತಾ ಶೆಟ್ಟಿ ಹೇಳಿದ್ದು, ಇದರ ಪ್ರೊಮೋ ಅನ್ನು ವಾಹಿನಿ ಶೇರ್ ಮಾಡಿಕೊಂಡಿದೆ.
ಗಾಬರಿ ಬೇಡ
ಹಾಗೆಂದು ಗಾಬರಿ ಏನೂ ಆಗಬೇಕೆಂದೇನಿಲ್ಲ. ರಕ್ಷಿತಾ ಶೆಟ್ಟಿ ಮನೆಮಂದಿಗೆ ಪ್ರಾಂಕ್ ಮಾಡುವ ಯೋಚನೆ ಮಾಡಿದ್ದಾರೆ. ಬಿಗ್ಬಾಸ್ನ ಕ್ಯಾಮೆರಾ ಮುಂದೆ ಬಂದು, ನಾನು ಮಿಡ್ವೀಕ್ ಎಲಿಮಿನೇಟ್ ಆಗಿ ಮನೆಯಿಂದ ಹೊರಕ್ಕೆ ಹೋಗುವಂತೆ ನಾಟಕ ಮಾಡುತ್ತೇನೆ. ನಾಳೆ ಬೆಳಿಗ್ಗೆ ಎಲ್ಲರೂ ಎದ್ದಾಗ ಹೇಗೆ ರೆಸ್ಪಾನ್ಸ್ ಮಾಡುತ್ತಾರೆ ಎಂದು ನೋಡುತ್ತೇನೆ ಎಂದಿದ್ದಾರೆ.
ಬಿಗ್‌ಬಾಸ್ ಅವಕಾಶ
ಅದೇ ರೀತಿ, ಬಿಗ್‌ಬಾಸ್ ರಕ್ಷಿತಾಗೆ ಅವಕಾಶ ಮಾಡಿಕೊಟ್ಟಿದೆ. ರಕ್ಷಿತಾ, ಅಲ್ಲಿಯೇ ಇರುವ ಕಪ್ಬೋರ್ಡ್ ಒಳಗೆ ಹೋಗಿ ಅಡಗಿ ಕುಳಿತುಕೊಂಡಿದ್ದಾರೆ. ಥ್ಯಾಂಕ್ಸ್ ಬಿಗ್‌ಬಾಸ್ ಎನ್ನುವ ಮೂಲಕ ತಾವು ಮನೆಯಿಂದ ಹೊರಕ್ಕೆ ಒಂದು ವೇಳೆ ಹೋದರೆ, ಯಾರು ಹೇಗೆ ಮಾತನಾಡಿಕೊಳ್ತಾರೆ ಎನ್ನುವ ಬಗ್ಗೆ ಅವರಿಗೆ ಕುತೂಹಲವಿದೆ.
ಪಾರ್ಟ್-2
ಇಷ್ಟು ಪ್ರೊಮೋ ರಿಲೀಸ್ ಮಾಡಿರುವ ಬಿಗ್‌ಬಾಸ್, ಪಾರ್ಟ್-2 ಮುಂದುವರೆಯಲಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ರಕ್ಷಿತಾ ಶೆಟ್ಟಿ ಟಾಪ್ 3ರಲ್ಲಿ ಇರುವುದು ನಿಜ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

