MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ತಾಯಿಯಾಗಿ ಶಕುಂತಲಾ ಮಾಡಿದ್ದು ಸರಿಯೇ? ಯಾರ ಬಳಿಯಲ್ಲಿದೆ ಜೈದೇವ್ ಕೇಳಿದ ಪ್ರಶ್ನೆಗೆ ಉತ್ತರ?

ತಾಯಿಯಾಗಿ ಶಕುಂತಲಾ ಮಾಡಿದ್ದು ಸರಿಯೇ? ಯಾರ ಬಳಿಯಲ್ಲಿದೆ ಜೈದೇವ್ ಕೇಳಿದ ಪ್ರಶ್ನೆಗೆ ಉತ್ತರ?

ಜೈಲುಪಾಲಾದ ಮಗ ಜೈದೇವ್‌ಗೆ ಸಹಾಯ ಮಾಡಲು ತಾಯಿ ಶಕುಂತಲಾ ನಿರಾಕರಿಸುತ್ತಾಳೆ. ಆದರೆ, ಸೋದರಮಾವ ಲಕ್ಷ್ಮೀಕಾಂತ್ ಜಾಮೀನು ಕೊಡಿಸಿ, ಬದಲಾಗುವಂತೆ ಬುದ್ಧಿ ಹೇಳಿದರೂ, ಜೈದೇವ್ ತನ್ನ ದ್ವೇಷದ ಹಾದಿಯನ್ನೇ ಮುಂದುವರಿಸುವುದಾಗಿ ಹೇಳುತ್ತಾನೆ.

2 Min read
Author : Mahmad Rafik
Published : May 10 2026, 08:12 PM IST
Share this Photo Gallery
  • FB
  • TW
  • Linkdin
  • Whatsapp
15
ಮಗನ ಸಹಾಯಕ್ಕೆ ಹೋಗಲಿಲ್ಲ ಯಾಕೆ ಶಕುಂತಲಾ?
Image Credit : Zee Kannada FB

ಮಗನ ಸಹಾಯಕ್ಕೆ ಹೋಗಲಿಲ್ಲ ಯಾಕೆ ಶಕುಂತಲಾ?

ಜಗತ್ತಿನಲ್ಲಿ ಯಾರೇ ಕೈಬಿಟ್ರೂ ಮಕ್ಕಳ ಸಹಾಯಕ್ಕೆ ತಾಯಿ ಬರುತ್ತಾಳೆ ಎಂಬ ಮಾತಿದೆ. ಆದ್ರೆ ಈ ಮಾತು ಜೈದೇವ್ ವಿಷಯದಲ್ಲಿ ಸುಳ್ಳು ಆಗಿದೆ. ಈ ಹಿಂದೆ ಜೈದೇವ್ ಮಾಡಿದ ಪಾಪ ಕೆಲಸಗಳಿಗೆ ತಕ್ಕ ಶಿಕ್ಷೆ ಆಗ್ತಿದೆ ಎಂಬುವುದು ಸೀರಿಯಲ್ ವೀಕ್ಷಕರು ಮತ್ತು ಶಕುಂತಲಾಳ ಅಭಿಪ್ರಾಯವಾಗಿದೆ.

Add Asianetnews Kannada as a Preferred SourcegooglePreferred
25
ಅಳಿಮಯ್ಯನ ಸಹಾಯಕ್ಕೆ ಬಂದ ಸೋದರಮಾವ
Image Credit : Zee Kannada FB

ಅಳಿಮಯ್ಯನ ಸಹಾಯಕ್ಕೆ ಬಂದ ಸೋದರಮಾವ

ಜೈದೇವ್ ಜೈಲುಪಾಲಾಗಿರೋ ವಿಷಯವನ್ನು ಸೋದರ ಲಕ್ಷ್ಮೀಕಾಂತ್ ಜೊತೆ ಶಕುಂತಲಾ ಹಂಚಿಕೊಂಡಿದ್ದಾಳೆ. ಈ ವಿಷಯ ಕೇಳುತ್ತಿದ್ದಂತೆ ಯಾಕೆ ಜೈದೇವ್ ಸಹಾಯಕ್ಕೆ ಹೋಗಲಿಲ್ಲ ಎಂದು ಲಕ್ಷ್ಮೀಕಾಂತ್ ಪ್ರಶ್ನೆ ಮಾಡಿದ್ದಾಳೆ. ಈಗಾಗಲೇ ಜೈದೇವ್ ಕಷ್ಟದ ಸ್ಥಿತಿಯಲ್ಲಿದ್ದು, ಜೈಲಿನಿಂದ ಹೊರಗೆ ಕರೆದುಕೊಂಡು ಬರಬೇಕಾಗಿತ್ತು ಎಂದು ಸಲಹೆ ನೀಡುತ್ತಾನೆ.

Related Articles

Related image1
ಬ್ಲಡಿ ಮದರ್ ಸೆಂಟಿಮೆಂಟ್ ಕ್ಲೋಸ್ ಮಾಡಿದ್ದ ಜೈದೇವ್‌ಗೆ ಆಘಾತ; ಕೆಡಿ ನೋಡಿ ಪೊಲೀಸರೇ ಕಂಗಾಲು
Related image2
ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್‌ಗೆ ಅಭಿಮಾನಿಗಳಿಂದ ಬಹುಪರಾಕ್
35
ಜೈದೇವ್‌ಗೆ ಸಿಕ್ತು ಜಾಮೀನು
Image Credit : Zee Kannada FB

ಜೈದೇವ್‌ಗೆ ಸಿಕ್ತು ಜಾಮೀನು

ಆತನ ಸಹಾಯಕ್ಕೆ ಹೋದ್ರೆ ಅದು ನಮ್ಮ ವೀಕ್‌ನೆಸ್ ಎಂದು ಜೈದೇವ್ ತಿಳಿಯುತ್ತಾನೆ. ಮಾಡಿದ ಕರ್ಮಕ್ಕೆ ರಿಟರ್ನ್ ಸಿಗುತ್ತಿದೆ. ಅವನು ನಮ್ಮ ಮಾತನ್ನು ಎಲ್ಲಿ ಕೇಳುತ್ತಾನೆ. ಅವನಿಗೆ ಭಯ ಏನು ಅನ್ನೋದು ಗೊತ್ತಾಗಬೇಕು. ಹಾಗಾಗಿ ನಾನೇ ನಾಲ್ಕು ಏಟು ನೀಡುವಂತೆ ಹೇಳಿದ್ದೇನೆ ಎಂದು ಶಕುಂತಲಾ ಹೇಳಿದ್ದನ್ನು ಕೇಳಿ ಲಕ್ಷ್ಮೀಕಾಂತ್ ಶಾಕ್ ಆಗಿದ್ದಾನೆ. ತಂಗಿ ಮಾತು ಕೇಳಿದ ಕೂಡಲೇ ಲಕ್ಷ್ಮೀಕಾಂತ್ ಅಳಿಯ ಜೈದೇವ್‌ಗೆ ಜಾಮೀನು ಕೊಡಿಸಿದ್ದಾನೆ.

45
ಬದಲಾಗುವಂತೆ ತಿಳಿ ಹೇಳಿದ ಶಕುನಿ ಮಾವ
Image Credit : Zee Kannada FB

ಬದಲಾಗುವಂತೆ ತಿಳಿ ಹೇಳಿದ ಶಕುನಿ ಮಾವ

ಆರಂಭದಲ್ಲಿ ಜಾಮೀನು ಸ್ವೀಕರಿಸಲು ಒಪ್ಪದಿದ್ರೂ ನಂತರ ಜೈಲಿನಿಂದ ಹೊರಗೆ ಬರುತ್ತಾನೆ. ಬದಲಾವಣೆ ಜಗದ ನಿಯಮ. ನಾನು ಮತ್ತು ನಿಮ್ಮ ಅಮ್ಮಾ ಸಹ ಬದಲಾದ್ಳು. ಈಗ ನೀನು ಬದಲಾದ್ರೆ ಮಾತ್ರ ನಮ್ಮೊಂದಿಗಿರಲು ಸಾಧ್ಯವಾಗುತ್ತದೆ ಎಂದು ಜೈದೇವ್‌ಗೆ ಮಾವ ಲಕ್ಷ್ಮೀಕಾಂತ್ ಸಲಹೆ ನೀಡುತ್ತಾನೆ. ಆಗ ಜೈದೇವ್ ಹೇಳುವ ಒಂದೊಂದು ಮಾತು ಆತನಲ್ಲಿನ ದ್ವೇಷ ಎಷ್ಟಿದೆ ಎಂಬುದನ್ನು ಹೇಳುತ್ತಿತ್ತು.

ಇದನ್ನೂ ಓದಿ: ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್

55
ಜೈದೇವ್‌ನನ್ನು ಆ ರೀತಿ ಬೆಳೆಸಿದ್ದು ಯಾರು?
Image Credit : Zee Kannada FB

ಜೈದೇವ್‌ನನ್ನು ಆ ರೀತಿ ಬೆಳೆಸಿದ್ದು ಯಾರು?

ದ್ವೇಷ ಇಟ್ಕೊಂಡು ನಾನು ಹುಟ್ಟಿದ್ದಾ? ಇಲ್ಲ, ನನ್ನನ್ನು ಆ ರೀತಿ ಬೆಳೆಸಿದ್ದು ನೀವೆಲ್ಲಾ. ಈ ಜೈದೇವ್ ಗುರಿ ತಲುಪವರೆಗೂ ನಿಲ್ಲೋವನು ಅಲ್ಲ. ನನ್ನ ಗುರಿಗೆ ನೀನು, ಆ ಗೌತಮ್ ದಿವಾನ್ ಅಥವಾ ಅಮ್ಮಾ ಸಹ ಬಂದ್ರೂ ನಾನು ಸುಮ್ಮನೇ ಬಿಡುವನಲ್ಲ. ಯಾರನ್ನೂ ಸುಮ್ಮನೇ ಬಿಡೋದಿಲ್ಲ ಎಂದು ಹೇಳಿ ಜೈದೇವ್ ಅಲ್ಲಿಂದ ಹೊರಡುತ್ತಾನೆ. ಯಾವ ಮಕ್ಕಳು ಸಹ ಜನ್ಮದಿಂದ ಕೆಟ್ಟವರಾಗಿರಲ್ಲ. ಆದ್ರೆ ಜೈದೇವ್‌ನನ್ನು ಬೆಳೆಸಿದ್ದು, ತಾಯಿ ಶಕುಂತಲಾ ಅಲ್ಲವಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಿರ್ದೇಶಕರೇ ಒಳ್ಳೆಯೋರ‍್ಯಾರು? ಕೆಟ್ಟವರ‍್ಯಾರು? ಗೊಂದಲದಲ್ಲಿ ಅಮೃತಧಾರೆ ವೀಕ್ಷಕರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
9.25 ಕೋಟಿ ರೂ ವಂಚನೆ ಕೇಸ್ ನಡುವೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಬಿಗ್ ಬಾಸ್ ಮಾಜಿ ಸ್ಪರ್ಧಿ?
Recommended image2
ನಿರ್ದೇಶಕರೇ ಒಳ್ಳೆಯೋರ‍್ಯಾರು? ಕೆಟ್ಟವರ‍್ಯಾರು? ಗೊಂದಲದಲ್ಲಿ ಅಮೃತಧಾರೆ ವೀಕ್ಷಕರು
Recommended image3
ಏನಿಲ್ಲ, ಏನಿಲ್ಲ ಎನ್ನುತ್ತಲೇ ಹೀಗೆಲ್ಲಾ ಮಾಡಿದ Bigg Boss ಶಶಿರ್​ ಶಾಸ್ತ್ರಿ- ಐಶ್ವರ್ಯ ಸಿಂಧೋಗಿ: ಫೋಟೋಸ್​ ಇಲ್ಲಿವೆ
Related Stories
Recommended image1
ಬ್ಲಡಿ ಮದರ್ ಸೆಂಟಿಮೆಂಟ್ ಕ್ಲೋಸ್ ಮಾಡಿದ್ದ ಜೈದೇವ್‌ಗೆ ಆಘಾತ; ಕೆಡಿ ನೋಡಿ ಪೊಲೀಸರೇ ಕಂಗಾಲು
Recommended image2
ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್‌ಗೆ ಅಭಿಮಾನಿಗಳಿಂದ ಬಹುಪರಾಕ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved