MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನಿರ್ದೇಶಕರೇ ಒಳ್ಳೆಯೋರ‍್ಯಾರು? ಕೆಟ್ಟವರ‍್ಯಾರು? ಗೊಂದಲದಲ್ಲಿ ಅಮೃತಧಾರೆ ವೀಕ್ಷಕರು

ನಿರ್ದೇಶಕರೇ ಒಳ್ಳೆಯೋರ‍್ಯಾರು? ಕೆಟ್ಟವರ‍್ಯಾರು? ಗೊಂದಲದಲ್ಲಿ ಅಮೃತಧಾರೆ ವೀಕ್ಷಕರು

ಅಮೃತಧಾರೆ ಧಾರಾವಾಹಿಯಲ್ಲಿ, ಜೈಲು ಸೇರಿರುವ ಜೈದೇವ್‌ಗೆ ಜಾಮೀನು ಕೊಡಿಸಲು ಅವನ ಹಳೆ ಶತ್ರು ಶಕುನಿಮಾಮ ಲಕ್ಷ್ಮೀಕಾಂತ್ ಬಂದಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯು, ಇದರ ಹಿಂದೆ ಶಕುಂತಲಾ ಅಥವಾ ಗೌತಮ್ ಇರಬಹುದೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದ್ದು, ಕಥೆಯು ಕುತೂಹಲಕಾರಿ ತಿರುವು ಪಡೆದಿದೆ.

1 Min read
Author : Mahmad Rafik
Published : May 10 2026, 12:31 PM IST
Share this Photo Gallery
  • FB
  • TW
  • Linkdin
  • Whatsapp
15
ನಿರ್ದೇಶಕರೇ ಯಾರು ಒಳ್ಳೆಯವರು?
Image Credit : Zee Kannada

ನಿರ್ದೇಶಕರೇ ಯಾರು ಒಳ್ಳೆಯವರು?

ಅಮೃತಧಾರೆ ಧಾರಾವಾಹಿಯ ಬದಲಾಗುತ್ತಿರುವ ಕಥೆಯಿಂದಾಗಿ ವೀಕ್ಷಕರು ಸಣ್ಣದಾಗಿ ಗೊಂದಲಕ್ಕೊಳಗಾದಂತೆ ಕಾಣಿಸುತ್ತಿದೆ. ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ಶಕುಂತಲಾ, ಶಕುನಿಮಾಮಾ ಲಕ್ಷ್ಮೀಕಾಂತ್ ಒಳ್ಳೆಯವರಾಗಿದ್ದಾರೆ. ಆದ್ರೆ ಮೀಸೆ ಮಣ್ಣಾದ್ರೂ ಜೈದೇವ್‌ನ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ.

Add Asianetnews Kannada as a Preferred SourcegooglePreferred
25
ಜೈದೇವ್ ಸಹಾಯಕ್ಕೆ ಬಂದ ಶಕುನಿ ಮಾಮಾ ಲಕ್ಷ್ಮೀಕಾಂತ್!
Image Credit : Zee Kannada

ಜೈದೇವ್ ಸಹಾಯಕ್ಕೆ ಬಂದ ಶಕುನಿ ಮಾಮಾ ಲಕ್ಷ್ಮೀಕಾಂತ್!

ದಿಯಾ ಬೇಬಿ ನೀಡಿದ ದೂರಿನಿಂದ ಜೈಲು ಸೇರಿರುವ ಜೈದೇವ್‌ಗೆ ಜಾಮೀನು ನೀಡಲು ಶಕುನಿಮಾಮ ಲಕ್ಷ್ಮೀಕಾಂತ್ ಆಗಮಿಸಿದ್ದಾನೆ. ಆರಂಭದಲ್ಲಿ ಲಕ್ಷ್ಮೀಕಾಂತ್‌ ಸಹಾಯ ತಿರಸ್ಕರಿಸಿದ್ರೂ ಅನಿವಾರ್ಯವಾಗಿ ಜೈದೇವ್ ಒಪ್ಪಿಕೊಳ್ಳುವಂತಾಗಿದೆ. ಜಾಮೀನು ಒಪ್ಪದಿದ್ರೆ ಮತ್ತೆ ಅದೇ ಕತ್ತಲಕೋಣೆ ಮತ್ತು ಪೊಲೀಸರ ಲಾಠಿ ಏಟು ನೆನಪಿಸಿಕೊಂಡು ಜೈದೇವ್ ಸುಮ್ಮನಾಗಿದ್ದಾನೆ.

Related Articles

Related image1
ಬ್ಲಡಿ ಮದರ್ ಸೆಂಟಿಮೆಂಟ್ ಕ್ಲೋಸ್ ಮಾಡಿದ್ದ ಜೈದೇವ್‌ಗೆ ಆಘಾತ; ಕೆಡಿ ನೋಡಿ ಪೊಲೀಸರೇ ಕಂಗಾಲು
Related image2
ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
35
ಲಕ್ಷ್ಮೀಕಾಂತ್ ಬಂದಿದ್ದು ಯಾಕೆ?
Image Credit : Zee Kannada

ಲಕ್ಷ್ಮೀಕಾಂತ್ ಬಂದಿದ್ದು ಯಾಕೆ?

ಜೈದೇವ್ ಜೈಲು ಸೇರಿರುವ ವಿಷಯ ಶಕುಂತಲಾಗೆ ತಿಳಿದಿತ್ತು. ಪೊಲೀಸರು ಕಾಲ್ ಮಾಡಿ ವಿಷಯ ತಿಳಿಸಿದ್ರೂ ಜೈದೇವ್ ಯಾರು ಎಂದು ಗೊತ್ತಿಲ್ಲ ಎಂದು ಹೇಳಿದ್ದಳು. ಈಗ ಸೋದರ ಲಕ್ಷ್ಮೀಕಾಂತ್ ಮೂಲಕ ಕೆಡಿ ಮಗನಿಗೆ ಶಕುಂತಲಾ ಜಾಮೀನು ಕೊಡಿಸಿದಳಾ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಮತ್ತೊಂದು ಕಡೆ ಲಕ್ಷ್ಮೀಕಾಂತ್ ಮೂಲಕ ಗೌತಮ್ ಜಾಮೀನು ಕೊಡಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

45
ಮಾವನ ಕೊಲ್ಲಲು ಮುಂದಾಗಿದ್ದ ಜೈದೇವ್!
Image Credit : Zee Kannada

ಮಾವನ ಕೊಲ್ಲಲು ಮುಂದಾಗಿದ್ದ ಜೈದೇವ್!

ಹಳೆ ಪ್ರಕರಣದಲ್ಲಿ ಜೈಲು ಸೇರಿದ್ದ ಲಕ್ಷ್ಮೀಕಾಂತ್‌ನನ್ನು ಗೌತಮ್ ಹೊರಗಡೆ ಕರೆದುಕೊಂಡು ಬಂದಿದ್ದನು. ಈ ಘಟನೆ ಬಳಿಕ ಗೌತಮ್‌ಗೆ ಲಕ್ಷ್ಮೀಕಾಂತ್ ಪ್ರಾಮಾಣಿಕನಾಗಿದ್ದನು. ಜೈದೇವ್ ಮಾಡ್ತಿದ್ದ ಪ್ಲಾನ್‌ಗಳೆಲ್ಲವನ್ನು ಆನಂದ್ ಮತ್ತು ಗೌತಮ್‌ಗೆ ತಿಳಿಸುತ್ತಿದ್ದನು. ಈ ವಿಷಯ ತಿಳಿಯುತ್ತಿದ್ದಂತೆ ಲಕ್ಷ್ಮೀಕಾಂತ್ ಪ್ರಾಣ ತೆಗೆಯಲು ಮುಂದಾಗಿದ್ದನು. ಇದೀಗ ಲಕ್ಷ್ಮೀಕಾಂತ್‌ನಿಂದ ಜೈದೇವ್ ಜೈಲಿನಿಂದ ಹೊರಗೆ ಬರುವಂತಾಗಿದೆ.

ಇದನ್ನೂ ಓದಿ: ಎಲ್ಲಾ ಓಕೆ, ಆದ್ರೂ ವೀಕ್ಷಕರು ಮಾತ್ರ ನಂಬ್ತಿಲ್ಲ; ಅಮೃತಧಾರೆ ಬಗ್ಗೆ ಹೀಗೊಂದು ಅನುಮಾನ

55
ಶಕುಂತಲಾ ಮೇಲೆಯೂ ವೀಕ್ಷಕರಿಗೆ ಅನುಮಾನ
Image Credit : Zee Kannada

ಶಕುಂತಲಾ ಮೇಲೆಯೂ ವೀಕ್ಷಕರಿಗೆ ಅನುಮಾನ

ಬದಲಾಗಿರುವ ಶಕುಂತಲಾಳನ್ನು ವೀಕ್ಷಕರು ಮಾತ್ರ ನಂಬುತ್ತಿಲ್ಲ. ಭೂಮಿಕಾಳನ್ನು ಮನೆ ತುಂಬಿಸಿಕೊಂಡಿರುವ ಶಕುಂತಲಾ, ತನ್ನ ಹಿಂದಿನ ವರ್ತನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಳು. ಇಬ್ಬರು ಗಂಡು ಮಕ್ಕಳಲ್ಲಿ ಜೈದೇವ್ ಬೀದಿ ಪಾಲಾದ್ರೆ, ಮತ್ತೋರ್ವ ಮಗ ಪಾರ್ಥನಿಗೆ ಮಕ್ಕಳಾಗಿಲ್ಲ ಎಂಬ ಚಿಂತೆ ಶಕುಂತಲಾಳನ್ನು ಕಾಡುತ್ತಿದೆ. ಒಂದು ವೇಳೆ ಜೈದೇವ್ ಬಂದು ಕ್ಷಮೆ ಕೇಳಿದ್ರೆ ಶಕುಂತಲಾ, ಭೂಮಿಕಾ, ಗೌತಮ್ ಏನ್ ಮಾಡ್ತಾರೆ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ .

ಇದನ್ನೂ ಓದಿ: ಕೊನೆಗೂ ಬೀದಿಪಾಲಾದ ಅಮೃತಧಾರೆಯ ಕೆಡಿ; ಆದ್ರೂ ಜೈದೇವ್‌ಗೆ ಅಭಿಮಾನಿಗಳಿಂದ ಬಹುಪರಾಕ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಏನಿಲ್ಲ, ಏನಿಲ್ಲ ಎನ್ನುತ್ತಲೇ ಹೀಗೆಲ್ಲಾ ಮಾಡಿದ Bigg Boss ಶಶಿರ್​ ಶಾಸ್ತ್ರಿ- ಐಶ್ವರ್ಯ ಸಿಂಧೋಗಿ: ಫೋಟೋಸ್​ ಇಲ್ಲಿವೆ
Recommended image2
Mother's Dayಗೆ ಕರ್ಣ ಸೀರಿಯಲ್​ ಕಿರಣ್ ರಾಜ್​ರಿಂದ ಅಮ್ಮನಿಗೆ ಭರ್ಜರಿ ಗಿಫ್ಟ್​- ವಿಡಿಯೋ ಶೇರ್​
Recommended image3
Amruthadhaare: ಅಖಿಲಾಂಡೇಶ್ವರಿ ಹುಡುಕುವ ಮಗಳೇ ಗೌತಮ್​ಗೆ ಕಂಟಕ ಆಗ್ತಾಳಾ? ಜೈದೇವ್​ ಮಾಸ್ಟರ್​ ಪ್ಲ್ಯಾನ್​ ಏನು
Related Stories
Recommended image1
ಬ್ಲಡಿ ಮದರ್ ಸೆಂಟಿಮೆಂಟ್ ಕ್ಲೋಸ್ ಮಾಡಿದ್ದ ಜೈದೇವ್‌ಗೆ ಆಘಾತ; ಕೆಡಿ ನೋಡಿ ಪೊಲೀಸರೇ ಕಂಗಾಲು
Recommended image2
ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved