- Home
- Entertainment
- TV Talk
- ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್
ಅಮೃತಧಾರೆ ಧಾರಾವಾಹಿಯಲ್ಲಿ, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಜೈದೇವ್, ದಿಯಾಳ ದೂರಿನಿಂದ ಜೈಲು ಸೇರಿದ್ದಾನೆ. ಮತ್ತೊಂದೆಡೆ, ಗೌತಮ್ ತನ್ನ ಕುಟುಂಬವನ್ನು ಒಂದುಗೂಡಿಸಿದ್ದು, ಭೂಮಿಕಾ ದಿವಾನ್ ಮನೆಗೆ ಸೊಸೆಯಾಗಿ ಗೃಹಪ್ರವೇಶ ಮಾಡಿದ್ದಾಳೆ.

ಅಮೃತಧಾರೆ ಸೀರಿಯಲ್
ಅಮೃತಧಾರೆ ಸೀರಿಯಲ್‌ನಲ್ಲಿ ಆರಂಭದ ಸಂಚಿಕೆಯಿಂದಲೂ ಜೈದೇವ್ ಪಾತ್ರವನ್ನು ಸಿಕ್ಕಾಪಟ್ಟೆ ರಾಯಲ್ ಆಗಿ ತೋರಿಸಲಾಗಿತ್ತು. ಇದೀಗ ಎಲ್ಲವನ್ನು ಕಳೆದುಕೊಂಡ ಜೈದೇವ್, ಬರೀಗಾಲಿನಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾನೆ. ಜೀವನದುದ್ದಕ್ಕೂ ಜೈದೇವ್, ನಂಬಿದ್ದು ದಿಯಾ ಬೇಬಿಯನ್ನು ಮಾತ್ರ. ಇದೀಗ ಆಕೆಯೇ ಕೈಕೊಟ್ಟಿದ್ದಾಳೆ.
ಒಂದೊತ್ತಿನ ಊಟಕ್ಕೂ ಪರದಾಟ
ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಜೈದೇವ್, ದಿಯಾ ಮನೆ ಮುಂದೆಯೇ ಸುತ್ತಾಡುತ್ತಿದ್ದಾನೆ. ಜೈದೇವ್‌ನಿಂದ ಬೇಸತ್ತಿರೋ ದಿಯಾ ಬೇಬಿ ಒಂದು ಹೆಜ್ಜೆ ಮುಂದೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ದಿಯಾ ದೂರಿನಂತೆ ಪೊಲೀಸರು ಜೈದೇವ್‌ನನ್ನು ಬಂಧಿಸಿದ್ದಾರೆ.
ಜೈಲು ಸೇರಿದ ಕೆಡಿ
ತನ್ನ ಜೀವನದಲ್ಲಿ ಇಷ್ಟೆಲ್ಲಾ ನಡೀತಾ ಇದ್ರೂ ಜೈದೇವ್‌ನ ಸ್ವ್ಯಾಗ್ ಮಾತ್ರ ಕಡಿಮೆಯಾಗ್ತಿಲ್ಲ. ಮುಂದಿನ ಸಂಚಿಕೆಯಲ್ಲಿ ಜೈಲು ಸೇರಿರುವ ಜೈದೇವ್‌ನನ್ನು ನೋಡಬಹುದು. ಈಗಾಗಲೇ ಕಳ್ಳನೊಬ್ಬ ಜೈದೇವ್ ಬಳಿಯಲ್ಲಿದ್ದ ವಾಚ್, ಉಂಗುರು ಕದ್ದುಕೊಂಡು ಹೋಗಿದ್ದಾನೆ. ಬಿಡಿಗಾಸು ಇಲ್ಲದೇ ತಿರುಕನಾಗಿರುವ ಜೈದೇವ್, ಕತ್ತಲಕೋಣೆಯಲ್ಲಿ ಚಡ್ಡಿ ಮೇಲೆ ಮಲಗಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಮಲಗಿದ್ದಾನೆ.
ದಿವಾನ್ ಕುಟುಂಬ
ಮತ್ತೊಂದೆಡೆ ಗೌತಮ್ ತನ್ನ ಎಲ್ಲಾ ಕುಟುಂಬಸ್ಥರೊಂದಿಗೆ ತಂದೆ ಕಟ್ಟಿಸಿದ ದಿವಾನ್ ಅರಮನೆಗೆ ಬಂದಿದ್ದಾನೆ. ಆರಂಭದಲ್ಲಿ ಪಾರ್ಥ್ ಮತ್ತು ಮಹಿಮಾ ಹಿಂದೇಟು ಹಾಕಿದ್ದರು. ಆದ್ರೆ ಗೌತಮ್‌ನ ತಿಳುವಳಿಕೆ ಮಾತಿನಿಂದ ಪಾರ್ಥ್ ಮತ್ತೆ ಮನೆಗೆ ಬರಲು ಒಪ್ಪಿದ್ದಾನೆ. ಶಕುಂತಲಾ ಸಹ ಬದಲಾಗಿದ್ದು, ಗೌತಮ್‌ನನ್ನು ಹಾಡಿ ಹೊಗಳಿದ್ದಾಳೆ.
ಭೂಮಿಕಾ ಗ್ರ್ಯಾಂಡ್ ಎಂಟ್ರಿ
ದಿವಾನ್ ಮನೆಗೆ ಸೊಸೆ ಭೂಮಿಕಾಳನ್ನು ಶಕುಂತಲಾಳೇ ಆರತಿ ಬೆಳಗಿ ಸ್ವಾಗತಿಸಿದ್ದಾಳೆ. ನಂತರ ಅಕ್ಕಿ ಸೇರು ಒದ್ದು, ಭೂಮಿಕಾ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾಳೆ. ಅಮೃತಧಾರೆ ಸೀರಿಯಲ್‌ನ ಬಹುತೇಕ ಎಲ್ಲಾ ನೆಗೆಟಿವ್ ಪಾತ್ರಗಳು ಅಂತ್ಯವಾಗ್ತಿರೋದರಿಂದ, ಧಾರಾವಾಹಿ ಕೊನೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

