ದೇವೇಗೌಡ್ರ ಆಶೀರ್ವಾದ ಪಡೆದ ಜೋಶ್ನಲ್ಲಿ Bigg Boss ಜಾಹ್ನವಿ: ನಗರಸಭೆ, ಜನರಿಗೆ ಫುಲ್ ಕ್ಲಾಸ್
ಬಿಗ್ ಬಾಸ್ ಖ್ಯಾತಿಯ ನಟಿ ಮತ್ತು ನಿರೂಪಕಿ ಜಾಹ್ನವಿ, ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಬೆಂಗಳೂರು ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವ ಅವರು, ಭೂಪಸಂದ್ರ ವಾರ್ಡ್‌ನ ಸಮಸ್ಯೆ ಬಗ್ಗೆ ಗಮನ ಸೆಳೆಯುತ್ತಿದ್ದಾರೆ.

ಬಿಗ್ಬಾಸ್ ಜಾಹ್ನವಿ ಈಗ ರಾಜಕಾರಣಿ
ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ (Bigg Boss Jhanvi) ಅವರು ಬಿಗ್ಬಾಸ್ 12ಕ್ಕೆ ಹೋಗಿ ಬಂದ ಮೇಲೆ ಬಿಗ್ಬಾಸ್ ಜಾಹ್ನವಿಯಾಗಿದ್ದಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್ಗಳೂ ಬರುತ್ತಿವೆ.
ಜೆಡಿಎಸ್ ಸೇರ್ಪಡೆ
ನಟಿ, ನಿರೂಪಕಿಯಾಗಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದ ಜಾಹ್ನವಿ ಇದೀಗ ರಾಜಕಾರಣಿಯಾಗಿದ್ದಾರೆ. ಈಚೆಗಷ್ಟೇ ಅವರು ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ. ಎಚ್ಜಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಟಿ ಪಕ್ಷವನ್ನು ಸೇರಿದರು.
ಚುನಾವಣೆಗೆ ಸ್ಪರ್ಧೆ
ಇದೀಗ ಅವರಿಗೆ ದೊಡ್ಡ ಹುದ್ದೆ ಏರುವ ಆಸೆನಾ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಜಾಹ್ನವಿ ಅವರು, ಸದ್ಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ನಡೆಯುತ್ತಿದೆ. ಆಗಸ್ಟ್ 31ರ ಒಳಗೆ ಮಾಡುವಂತೆ ಸುಪ್ರೀಂಕೋರ್ಟ್ ಕೂಡ ಹೇಳಿದೆ. ನಾನು ಪವರ್ ಆಕಾಂಕ್ಷಿ ಅಲ್ಲ ಅಂತ ಖಂಡಿತ ಹೇಳುವುದಿಲ್ಲ ಎನ್ನುತ್ತಲೇ ಇದರಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಜಾಹ್ನವಿ.
ದೇವೇಗೌಡರ ಆಶೀರ್ವಾದ
ಇದರ ಬೆನ್ನಲ್ಲೇ ಮೊನ್ನೆಯಷ್ಟೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಆಶೀರ್ವಾದ ಪಡೆದು ಬಂದಿದ್ದಾರೆ ನಟಿ. ಇದರ ಬೆನ್ನಲ್ಲೇ ಇದೀಗ ಫುಲ್ ಆ್ಯಕ್ಟೀವ್ ಆಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲ ರೀತಿಯ ರೆಡಿ ಮಾಡಿಕೊಳ್ಳುತ್ತಿದ್ದಾರೆ.
ಕಸ ಎಸೆಯುವ ಚಾಳಿ
ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ , ಭೂಪಸಂದ್ರ ವಾರ್ಡ್ ರಸ್ತೆಗಳ ದುಸ್ಥಿತಿ ಹಾಗೂ ಕಸದ ಗೋಪುರದ ಬಗ್ಗೆ ನಟಿ ಗಮನ ಸೆಳೆದಿದ್ದಾರೆ. ಅಷ್ಟಕ್ಕೂ ಎಲ್ಲೆಂದರಲ್ಲಿ ಕಸ ಎಸೆಯುವುದು ಹಲವರಿಗೆ ಕೆಟ್ಟ ಚಾಳಿ ಆಗಿಬಿಟ್ಟಿದೆ. ಮನೆ ಬಾಗಿಲಿಗೆ ಕಸದ ಗಾಡಿ ಬಂದರೂ, ತಾವು ಇಷ್ಟಪಟ್ಟಲ್ಲಿ ಕಸ ಎಸೆಯುವುದೇ ಅವರಿಗೆ ವಿಕೃತ ಖುಷಿ ನೀಡುತ್ತದೆ. ಈ ಬಗ್ಗೆ ಜಾಹ್ನವಿ ಜನರ ಗಮನ ಸೆಳೆದಿದ್ದಾರೆ.
ರಸ್ತೆ ದುಃಸ್ಥಿತಿ
ಇದೇ ವೇಳೆ ಈ ವಾರ್ಡ್‌ನ ರಸ್ತೆಯ ದುಃಸ್ಥಿತಿಯ ಬಗ್ಗೆ ಸರ್ಕಾರದ ಗಮನವನ್ನೂ ಸೆಳೆದಿದ್ದಾರೆ ಜಾಹ್ನವಿ. ಇಲ್ಲಿ ಓಡಾಡುವ ವಾಹನ ಸವಾರರಿಗೆ ಎಷ್ಟು ಕಷ್ಟವಾಗುತ್ತಿದೆ ಎನ್ನುವುದನ್ನು ಹೇಳಿದ್ದಾರೆ. ನಟಿಯ ಕಾರ್ಯಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

