- Home
- Entertainment
- TV Talk
- Karna Serial: ಕುತಂತ್ರಿಗಳ ಅಟ್ಟಹಾಸಕ್ಕೆ ಜಯ; ನಿಧಿ ಬಾಳಿಗೆ ಕೊನೆಗೂ ಕೊಳ್ಳಿ ಇಟ್ಟ ಸಂಜಯ್! ಛೇ...!
Karna Serial: ಕುತಂತ್ರಿಗಳ ಅಟ್ಟಹಾಸಕ್ಕೆ ಜಯ; ನಿಧಿ ಬಾಳಿಗೆ ಕೊನೆಗೂ ಕೊಳ್ಳಿ ಇಟ್ಟ ಸಂಜಯ್! ಛೇ...!
ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಬಾಳು ಬಗೆಹರಿಯೋ ಹಾಗೆ ಕಾಣ್ತಿಲ್ಲ. ಇನ್ನೊಂದು ಕಡೆ ನಿಧಿಗೂ ಕಷ್ಟ ತಪ್ಪುತ್ತಿಲ್ಲ. ಹೌದು, ಒಂದಾದ ಮೇಲೆ ಒಂದರಂತೆ ಸಮಸ್ಯೆಗಳು ಬರುತ್ತವೇ ಇವೆ. ಈಗ ನಿಧಿ ಬಾಳಿಗೆ ಕೊಳ್ಳಿ ಇಡೋಕೆ ಸಂಜಯ್ ರೆಡಿಯಾಗಿದ್ದಾನೆ.

ಸಂಜಯ್ ಬುದ್ಧಿ ಕಲಿಯಲೇ ಇಲ್ಲ
ನಿಧಿ ಮೇಲೆ ಹಲ್ಲೆ ಮಾಡಿ, ಕಿಸ್ ಕೊಡಲು ರೆಡಿಯಾಗಿದ್ದ ಸಂಜಯ್‌ಗೆ ಕರ್ಣ, ಬಿಸಿ ಬಿಸಿ ಕಜ್ಜಾಯವನ್ನು ಕೊಟ್ಟಿದ್ದನು. ಅದಾದ ಬಳಿಕ ವೇ*ಶ್ಯಾವಾಟಿಕೆ ಜಾಲದಲ್ಲಿ ನಿಧಿಯನ್ನು ಸಿಲುಕಿಸಲು ಯತ್ನಿಸಿದ್ದ ಸಂಜಯ್‌ಗೆ ಕರ್ಣ ಬುದ್ಧಿ ಕಲಿಸಿದ್ದನು. ಆದರೆ ಸಂಜಯ್ ಬುದ್ಧಿ ಕಲಿತಿಲ್ಲ.
ಬದಲಾದ ಕರ್ಣ
ಕರ್ಣ ಹಾಗೂ ನಿತ್ಯಾಳ ಸುಳ್ಳಿನ ಮದುವೆಯನ್ನು ಎಲ್ಲರ ಮುಂದೆ ಬಯಲು ಮಾಡಬೇಕು ಎಂದು ರಮೇಶ್ ಅಂದುಕೊಳ್ಳುತ್ತಿದ್ದಾನೆ. ಆದರೆ ರಮೇಶ್ ಹಣೆಬರಹ ತಿಳಿದಿರುವ ಕರ್ಣ, ಅದಕ್ಕೆ ತಕ್ಕಂತೆ ಉತ್ತರ ಕೊಡುತ್ತಿದ್ದಾನೆ. ಕರ್ಣ ಈ ರೀತಿ ಬದಲಾಗಿರೋದು ಅನೇಕರಿಗೆ ಇಷ್ಟ ಆಗಿದೆ.
ಪರೀಕ್ಷೆ ತಲೆಬಿಸಿಯಲ್ಲಿ ನಿಧಿ
ಈಗ ನಿಧಿ ಪರೀಕ್ಷೆ ತಲೆಬಿಸಿಯಲ್ಲಿದ್ದಾಳೆ, ಫಲಿತಾಂಶ ಹೇಗೆ ಬರುವುದು ಎಂಬ ಯೋಚನೆ ಮಾಡುತ್ತಿದ್ದಾಳೆ. ಆದರೆ ಸಂಜಯ್ ಮಾತ್ರ ಇದಕ್ಕೆ ಎಳ್ಳು ನೀರು ಬಿಡಲು ರೆಡಿಯಾಗಿದ್ದಾನೆ. ಬಂಗಾರದ ಆಭರಣಗಳನ್ನು ಒಬ್ಬರಿಗೆ ಕೊಟ್ಟು, ಅದನ್ನು ಮಾರುವಂತೆ ಹೇಳಿದ್ದಾನೆ. ಇದರ ಹಿಂದೆ ಕುತಂತ್ರ ಇದೆ.
ನಿಧಿ ಕನಸು ಕಮರಿಹೋಗುತ್ತಾ?
ಬಹುಶಃ ಆ ಹಣದಿಂದ ನಿಧಿ ಪರೀಕ್ಷೆ ಫಲಿತಾಂಶವನ್ನು ಬದಲಾಯಿಸಬೇಕು ಎಂದು ಅವನು ಅಂದುಕೊಂಡಿರಬಹುದು. ಇದರಿಂದ ನಿಧಿಯ ಮೆಡಿಕಲ್ ಕನಸು ಹಾಳಾಗುವುದು. ಒಟ್ಟಿನಲ್ಲಿ ಮೆಡಿಕಲ್ ಓದಿ, ಡಾಕ್ಟರ್ ಆಗಬೇಕು ಎಂದುಕೊಂಡಿದ್ದ ನಿಧಿ ಕನಸು ಹಾಳಾಗಬೇಕು ಎಂದು ಸಂಜಯ್ ಬಯಸುತ್ತಿದ್ದಾನೆ.
ಸಂಜಯ್ ಪ್ಲ್ಯಾನ್ ಏನು?
ಮೆಡಿಕಲ್ ಸೀಟ್ ಸಿಗೋದು ಕಷ್ಟ, ಅದರಲ್ಲಿಯೂ ಫೇಲ್ ಆದರೆ ಇನ್ನೂ ಕಷ್ಟ. ಇದನ್ನೇ ಸಂಜಯ್ ಅಸ್ತ್ರ ಮಾಡಿಕೊಂಡಿದ್ದಾನೆ. ಒಟ್ಟಿನಲ್ಲಿ ಕರ್ಣ-ನಿಧಿ ಮೇಲಿನ ಸಿಟ್ಟಿಗೆ ನಿತ್ಯಾಳನ್ನು ಬಲಿ ಕೊಟ್ಟಿದ್ದಾನೆ. ಹೀಗಾಗಿ ನಿಧಿ-ಕರ್ಣ ಮದುವೆ ಆಗೋದು ಡೌಟ್ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

