ಸುನಿ-ಮಲ್ಲಿ ಮಧುಚಂದ್ರದಲ್ಲಿ ಮೃತ್ಯುಪಾಶ: ಜೈದೇವ್ ಸೀರಿಯಲ್ ನಿರ್ದೇಶಕರ ಸಂಬಂಧಿನಾ?
ಗೌತಮ್ ಮತ್ತು ಭೂಮಿಕಾ ಅವರು ಜೈದೇವ್‌ನ ಸಂಚನ್ನು ವಿಫಲಗೊಳಿಸಿ ಮಲ್ಲಿ ಮತ್ತು ಸುನೀಲ್ ಮದುವೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಜೈದೇವ್ ನಿರ್ದೇಶಕರ ಸಂಬಂಧಿ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಮೃತಧಾರೆ ಸೀರಿಯಲ್
ಜೈದೇವ್ ಮೋಸಕ್ಕೆ ಟಕ್ಕರ್ ಕೊಟ್ಟ ಗೌತಮ್ ಮತ್ತು ಭೂಮಿಕಾ ಜೊತೆಯಾಗಿ ನಿಂತು ಮಲ್ಲಿ-ಸುನೀಲ್ ಮದುವೆ ಮಾಡಿಸಿದ್ದಾರೆ. ಮದುವೆ ಬಳಿಕ ಮಲ್ಲಿ ಮತ್ತು ಸುನೀಲ್‌ಗೆ ಹನಿಮೂನ್‌ಗೆ ತೆರಳಿದ್ದು, ಜೊತೆಯಾಗಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ಇತ್ತ ನವಜೋಡಿ ಜೊತೆಯಲ್ಲಿ ಭೂಮಿಕಾ-ಗೌತಮ್ ತೆರಳಿದ್ದು, ತಮ್ಮ ಹಳೆದ ಮಧುರ ದಿನಗಳನ್ನು ಮೆಲಕು ಹಾಕುತ್ತಿದ್ದಾರೆ.
ಇಬ್ಬರ ಜೀವಕ್ಕೆ ಅಪಾಯ
ಸಾಲು ಸಾಲು ಸೋಲುಗಳಿಂದ ಪೆಟ್ಟು ತಿಂದ ಹಾವಿನಂತಾಗಿರುವ ಜೈದೇವ್ ತನ್ನ ನೀಚತನವನ್ನ ಮುಂದುವರಿಸಿದ್ದಾನೆ. ಹನಿಮೂನ್‌ಗೆ ತೆರಳಿರುವ ಸುನೀಲ್‌ನನ್ನು ಕೊಲ್ಲಲು ಹಂತಕರಿಗೆ ಸುಪಾರಿ ನೀಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಶಕುನಿ ಮಾಮಾ ಬಂದು ಗೌತಮ್ ಗೆಳೆಯ ಆನಂದ್‌ನನ್ನು ಎಚ್ಚರಿಸಿದ್ದಾನೆ. ಮಲ್ಲಿ-ಸುನೀಲ್ ಮದುವೆ ಸುಖಾಂತ್ಯ ಕಂಡಿದೆ ಅನ್ನೋಷ್ಟರಲ್ಲಿ ಇಬ್ಬರ ಜೀವಕ್ಕೆ ಅಪಾಯ ಬಂದಿದೆ.
ಗೌತಮ್ - ಭೂಮಿಕಾ ಮೆಲಕು
ಗೌತಮ್ ಮತ್ತು ಭೂಮಿಕಾ ಹನಿಮೂನ್‌ಗಾಗಿ ಚಿಕ್ಕಮಗಳೂರಿಗೆ ಬಂದಿದ್ದರು. ಈ ವೇಳೆ ಭೂಮಿಕಾಳ ಕೊಲೆ ಯತ್ನ ನಡೆದಿತ್ತು. ಸಾವಿನ ಹೊಸ್ತಿಲಿನಲ್ಲಿದ್ದ ಭೂಮಿಕಾಳನ್ನು ಗೌತಮ್ ಕಾಪಾಡಿಕೊಂಡಿದ್ದನು. ಈ ಒಂದು ಘಟನೆ ಇಬ್ಬರ ನಡುವೆ ಪ್ರೀತಿಯ ಹೂ ಅರಳಿತ್ತು. ಈ ಎಲ್ಲಾ ವಿಷಯಗಳನ್ನು ಭೂಮಿಕಾ ಮತ್ತು ಗೌತಮ್ ಜೊತೆಯಾಗಿ ಕುಳಿತು ನೆನಪು ಮಾಡಿಕೊಳ್ಳುತ್ತಿರೋದನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ.
UPSC ಪಾಸ್ ಅಗಿರುವ ಮಲ್ಲಿ
ಈ ಎಲ್ಲಾ ಬೆಳವಣಿಗೆ ನಡುವೆ ಮಲ್ಲಿ ಯುಪಿಎಸ್‌ಸಿ ಪರೀಕ್ಷೆ ಕ್ಲೀಯರ್ ಮಾಡಿರೋದು ಜೈದೇವ್‌ನನ್ನು ಮತ್ತಷ್ಟು ಕೆರಳಿಸಿದೆ. ಮಲ್ಲಿ ಪರೀಕ್ಷೆ ಬರೆಯದಂತೆ ಜೈದೇವ್ ಹಲವು ಪ್ರಯತ್ನ ಮಾಡಿದ್ದನು. ಮಲ್ಲಿ ಕೈಗಳಿಗೆ ಬೆಂಕಿ ಹಚ್ಚಲು ಮುಂದಾಗಿದ್ದ ಜೈದೇವ್ ಪ್ರಯತ್ನವನ್ನು ಗೌತಮ್ ಫೇಲ್ ಮಾಡಿದ್ದನು. ಕೊನೆಗೆ ಮಲ್ಲಿ ಪರೀಕ್ಷೆ ಬರೆದಿದ್ದಳು. ಮದುವೆ ದಿನವೇ ಮಲ್ಲಿಯ ರಿಸಲ್ಟ್ ಬಂದಿತ್ತು. ಮುಂದೆ ಮಲ್ಲಿ ಐಪಿಎಸ್ ಅಧಿಕಾರಿ ಆಗ್ತಾಳೆ ಎಂದು ಜೈದೇವ್‌ಗೆ ಭೂಮಿಕಾ ಟಾಂಗ್ ಕೊಟ್ಟಿದ್ದಾಳೆ.
ಇದನ್ನೂ ಓದಿ: 'ಆಂಟಿ ಲವರ್' ಎಂದೇ ಫೇಮಸ್ ಆಗಿರೋ Amruthadhaare ಸುನಿಗೆ ಹೊಸ ಜೋಡಿ! ಯಾರೀಕೆ?
ಜೈದೇವ್ ನೀಚತನ
ಬಾಲ ಸುಟ್ಟ ಬೆಕ್ಕಿನಂತಾಗಿರುವ ಜೈದೇವ್ ಮಲ್ಲಿಯನ್ನು ಬಿಟ್ಟು ಇದೀಗ ಸುನೀಲ್‌ನನ್ನು ಟಾರ್ಗೆಟ್ ಮಾಡಿದ್ದಾನೆ. ಸುನೀಲ್ ಜೀವಕ್ಕೆ ಅಪಾಯವಿರುವ ವಿಷಯ ತಿಳಿದಿರುವ ಆನಂದ್ ಮುಂದೆ ಏನು ಮಾಡ್ತಾನೆ? ಗೌತಮ್-ಭೂಮಿಕಾಗೆ ಈ ವಿಷಯ ಹೇಳ್ತಾನಾ? ಜೈದೇವ್ ನೀಚತನಕ್ಕೆ ಗೌತಮ್-ಭೂಮಿಕಾ ಫುಲ್ ಸ್ಟಾಪ್ ಹಾಕ್ತಾರಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇದನ್ನೂ ಓದಿ: ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ: ಫ್ಯಾನ್ಸ್ಗೆ Amrthadhaare ಸಿಂಪಲ್ ಸುನಿ ಬಿಗ್ ಆಫರ್
ಮುಗಿಯದ ಜೈದೇವ್ ಪಾತ್ರ
ಸೀರಿಯಲ್‌ನಲ್ಲಿ ಜೈದೇವ್ ಪಾತ್ರ ಮಾತ್ರ ಮುಂದುವರಿಯುತ್ತಿರೋದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವೂ ಮುಗೀತು ಅನ್ನೋಷ್ಟರಲ್ಲಿ ಜೈದೇವ್ ಪಾತ್ರ ಮತ್ತೆ ಆಕ್ರಮಣಕಾರಿಯಾಗಿ ಮುಂದುವರಿಯುತ್ತದೆ. ಇದನ್ನು ಗಮನಿಸಿದ ವೀಕ್ಷಕರು, ಜೈದೇವ್ ಬಹುಶಃ ಸೀರಿಯಲ್ ನಿರ್ದೇಶಕ ಸಂಬಂಧಿ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

