MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ನಟಿಯರ ಕೈಮೇಲೆ ಉಗಿಯೋದ್ಯಾಕೆ ನಟ ಆಮೀರ್​ ಖಾನ್​? ಕೊನೆಗೂ ಸತ್ಯ ಒಪ್ಪಿಕೊಂಡ ನಟ ಹೇಳಿದ್ದೇನು

ನಟಿಯರ ಕೈಮೇಲೆ ಉಗಿಯೋದ್ಯಾಕೆ ನಟ ಆಮೀರ್​ ಖಾನ್​? ಕೊನೆಗೂ ಸತ್ಯ ಒಪ್ಪಿಕೊಂಡ ನಟ ಹೇಳಿದ್ದೇನು

ಬಾಲಿವುಡ್ ನಟ ಆಮೀರ್ ಖಾನ್‌ಗೆ ನಟಿಯರ ಕೈಗೆ ಉಗುಳುವ ವಿಚಿತ್ರ ಚಟವಿದೆ. ತಾವು ಯಾರ ಕೈ ಮೇಲೆ ಉಗುಳುತ್ತಾರೋ ಅವರು ನಂಬರ್ 1 ನಟಿಯಾಗುತ್ತಾರೆ ಎಂಬುದು ಅವರ ನಂಬಿಕೆಯಾಗಿದೆ. ಈ ಹಿಂದೆ ಮಾಧುರಿ ದೀಕ್ಷಿತ್ ಮತ್ತು ಜೂಹಿ ಚಾವ್ಲಾ ಅವರ ಕೈ ಮೇಲೂ ಉಗುಳಿದ್ದರಿಂದ ಅವರು ಕೋಪಗೊಂಡ ಘಟನೆಗಳಿವೆ. 

2 Min read
Author : Suchethana D
Published : Apr 03 2026, 06:56 PM IST
Share this Photo Gallery
  • FB
  • TW
  • Linkdin
  • Whatsapp
16
ಬಾಲಿವುಡ್‌ನ ಮಿಸ್ಟರ್​ ಪರ್ಫೆಕ್ಷನಿಸ್ಟ್​
Image Credit : instagram

ಬಾಲಿವುಡ್‌ನ ಮಿಸ್ಟರ್​ ಪರ್ಫೆಕ್ಷನಿಸ್ಟ್​

ಬಾಲಿವುಡ್‌ನ ಮಿಸ್ಟರ್​ ಪರ್ಫೆಕ್ಷನಿಸ್ಟ್​ ಎಂದೇ ಫೇಮಸ್​ ಆಗಿರೋ ನಟ, ನಿರ್ಮಾಪಕ ಮತ್ತು ನಿರ್ದೇಶಕ ಎಂದರೆ ಆಮೀರ್​ ಖಾನ್​. ಲಗಾನ್, 3 ಇಡಿಯಟ್ಸ್, ದಂಗಲ್ ಮತ್ತು ಪಿಕೆ ನಂತಹ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿದ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ ನಟ. ಈಚೆಗಷ್ಟೇ 61ನೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ನಟನ ಹಳೆಯ ವಿಡಿಯೋ ಒಂದು ಇದೀಗ ಭಾರಿ ಸದ್ದು ಮಾಡುತ್ತಿದೆ.

26
ಫರ್ಹಾ ಖಾನ್​ ಪ್ರಶ್ನೆ
Image Credit : ANI

ಫರ್ಹಾ ಖಾನ್​ ಪ್ರಶ್ನೆ

ನಿರ್ಮಾಪಕ ಫರ್ಹಾ ಖಾನ್​ ಅವರು ಈ ವಿಷಯವನ್ನು ಒಂದು ವೇದಿಕೆಯಲ್ಲಿ ಪ್ರಶ್ನಿಸಿದ್ದರು. ನೀವು ನಟಿಯರ ಕೈಗೆ ಉಗುಳುವುದು ಏಕೆ ಎಂದು ಕೇಳಿದ್ದರು. ಆಗ, ನಟ ತಮ್ಮ ಉಗುಳುವ ವಿಷಯ ಹೇಳಿದ್ದಾರೆ. ಆಮೀರ್​ ಖಾನ್​ಗೆ ನಟಿಯರ ಕೈಗೆ ಉಗುಳುವ ಚಟ ಇದೆಯಂತೆ. ಇದರ ಬಗ್ಗೆ ಅವರು ಮಾತನಾಡಿದ್ದಾರೆ.

Related Articles

Related image1
Amruthadhaare ಜೈದೇವ್​- ಹಳೆ ಮಲ್ಲಿ ರಿಯಲ್​ ಮದ್ವೆ ಯಾವಾಗ, ಹೇಗೆ, ಎಲ್ಲಿ? ಜೋಡಿ ಹೇಳಿದ್ದೇನು
Related image2
ಕಸಬ್​ ಒಬ್ಬ ಜಂಟಲ್​ಮನ್, ಪಾಕ್​ ತುಂಬಾ ಒಳ್ಳೆ ದೇಶ​ ಎಂದ ಶಾರುಖ್: ಬಾಲಿವುಡ್​ ಬಾದ್​ಶಾಹ್​ನ ವಿಡಿಯೋ ನೋಡಿ
36
ನಂಬರ್​ 1 ನಟಿಯರು
Image Credit : instagram

ನಂಬರ್​ 1 ನಟಿಯರು

ನಾನು ಯಾವ ಯಾವ ನಟಿಯರ ಕೈಮೇಲೆ ಉಗುಳುತ್ತೇನೋ ಅವರೆಲ್ಲರೂ ನಂಬರ್ 1 ನಟಿಯರಾಗುತ್ತಾರೆ ಎಂದಿದ್ದಾರೆ ಆಮೀರ್​ ಖಾನ್​. ಸಹ ನಟರ ಕೈಮೇಲೆ ಏಕೆ ಉಗುಳುವುದಿಲ್ಲ ಎನ್ನುವ ಪ್ರಶ್ನೆ ಎದುರಾದಾಗ, ಇಲ್ಲ ಇಲ್ಲ ನಾನು ಹೀರೋಯಿನ್ಸ್​ ಕೈ ಮೇಲೆ ಮಾತ್ರ ಉಗುಳುವುದು. ನಾನು ಉಗುಳಿದವರೆಲ್ಲರೂ ನಂಬರ್​ 1 ಆಗಿದ್ದಾರೆ ಎಂದಿದ್ದಾರೆ ನಟ. ಅಷ್ಟಕ್ಕೂ, ಇವರಿಂದ ಕೈ ಮೇಲೆ ಉಗುಳಿಸಿಕೊಂಡಿರುವ ನಟಿಯರ ಪೈಕಿ ಮಾಧುರಿ ದೀಕ್ಷಿತ್​, ಜೂಹಿ ಚಾವ್ಲಾದಂಥ ಖ್ಯಾತ ನಟಿಯರೂ ಸೇರಿದ್ದಾರಂತೆ!

46
ಮಾಧುರಿ ದೀಕ್ಷಿತ್ ಕೋಪ
Image Credit : instagram

ಮಾಧುರಿ ದೀಕ್ಷಿತ್ ಕೋಪ

ಈ ಹಿಂದೆ ಮಾಧುರಿ ದೀಕ್ಷಿತ್​ ಅವರು ಆಮೀರ್​ ಖಾನ್​ ತಮ್ಮ ಕೈಮೇಲೆ ಉಗುಳಿದ ಘಟನೆಯನ್ನು ನೆನಪಿಸಿಕೊಂಡಿದ್ದರು. ತಮಗೆ ಹಸ್ತ ನೋಡಿ ಜಾತಕ ಹೇಳುವುದು ಬರುತ್ತದೆ ಎಂದು ಹೇಳಿದ್ದ ಆಮೀರ್​ ಖಾನ್​, ಹಸ್ತ ತೋರಿಸುವಂತೆ ನಟಿಯರಿಗೆ ಹೇಳುತ್ತಾರಂತೆ. ಅದೇ ರೀತಿ ಮಾಧುರಿ ದೀಕ್ಷಿತ್​ಗೂ ಹೇಳಿದ್ದರು. ಇದನ್ನು ನಿಜ ಎಂದು ನಂಬಿದ್ದ ನಟಿ ಕೈ ತೋರಿಸಿದಾಗ, ಆಮೀರ್​ ಖಾನ್​ ಉಗುಳಿ ಹೋದಾಗ ಮಾಧುರಿ ಶಾಕ್​ ಆದರಂತೆ. ಇದು 1990 ರ ದಿಲ್ ಚಿತ್ರದ ಸೆಟ್‌ನಲ್ಲಿ ಸಂಭವಿಸಿದ ಘಟನೆ. ಆಗ ನನಗೆ ತುಂಬಾ ಕೋಪ ಬಂದಿತ್ತು ಎಂದು ನಟಿ ಈ ಸಂದರ್ಶನದಲ್ಲಿ ನಗುತ್ತಲೇ ಹೇಳಿದ್ದರು.

56
ಮಾತು ಬಿಟ್ಟಿದ್ದ ಜೂಹಿ ಚಾವ್ಲಾ
Image Credit : instagram

ಮಾತು ಬಿಟ್ಟಿದ್ದ ಜೂಹಿ ಚಾವ್ಲಾ

ಈ ಹಿಂದೆ ಜೂಹಿ ಚಾವ್ಲಾ ಅವರಿಗೂ ಹೀಗೆ ಉಗುಳಿದ್ದರಂತೆ. ಇದೇ ಕಾರಣಕ್ಕೆ ನಟಿ ಆರು ವರ್ಷ ಆಮೀರ್​ ಖಾನ್​ ಜೊತೆ ಮಾತು ಬಿಟ್ಟಿದ್ದರು! ಮಾತ್ರವಲ್ಲದೇ, 2016 ರಲ್ಲಿ, Jio MAMI ಮುಂಬೈ ಫಿಲ್ಮ್ ಫೆಸ್ಟಿವಲ್‌ನಲ್ಲಿ 1992 ರ ಚಲನಚಿತ್ರ ಜೋ ಜೀತಾ ವೋಹಿ ಸಿಕಂದರ್‌ಗಾಗಿ ಪುನರ್ಮಿಲನದ ಪ್ಯಾನೆಲ್‌ನಲ್ಲಿ, ನಿರ್ದೇಶಕಿ ಫರಾ ಖಾನ್ ಕೈಗೂ ಉಗುಳಿ ವಿವಾದ ಸೃಷ್ಟಿಸಿದ್ದರು ಎಂದು ಫರಾ ಅವರೇ ಹೇಳಿದ್ದರು.

66
ಪೂಜಾ ಬೇಡಿ ಅಮ್ಮ
Image Credit : Actress Pooja Bedi Instagram

ಪೂಜಾ ಬೇಡಿ ಅಮ್ಮ

ಆದರೆ ಆಮೀರ್​ ಕೈಗೆ ಉಗುಳಿದರೆ ಅವರು ನಂಬರ್​ 1 ನಟಿಯರಾಗುತ್ತಾರೆ ಎಂದು ಹೇಳಿದ್ದರಿಂದ ನಟಿ ಪೂಜಾ ಬೇಡಿ, ನಾನು ನನ್ನ ಮಗಳು ಆಲಿಯಾಳನ್ನು ನಿಮ್ಮ ಬಳಿ ಕಳಿಸುತ್ತೇನೆ. ಅವಳ ಕೈಗೂ ಉಗುಳಿ ಎಂದಿದ್ದರಂತೆ. ಹಲವು ನಟಿಯರು ಇದರಿಂದ ತುಂಬಾ ಕೋಪಗೊಂಡಿದ್ದರು ಎಂಬ ವಿಷಯವನ್ನೂ ಹೇಳಿದ್ದಾರೆ. 1997 ರ ಚಲನಚಿತ್ರ ಇಷ್ಕ್‌ನ ಸೆಟ್‌ಗಳಲ್ಲಿ, ಅಮೀರ್ ಖಾನ್ ಅನೇಕ ಸಿಬ್ಬಂದಿ ಮುಂದೆ ಜೂಹಿ ಚಾವ್ಲಾ ಕೈಗೆ ಉಗುಳಿ ಓಡಿಹೋದಾಗ, ಜೂಹಿ ಚಾವ್ಲಾ ಆ ಚಿತ್ರದ ಶೂಟಿಂಗ್​ಗೇ ಹಾಜರು ಆಗದೇ ಆರು ವರ್ಷ ಆಮೀರ್​ ಜೊತೆ ಮಾತನ್ನೇ ಬಿಟ್ಟ ಬಗ್ಗೆಯೂ ನಟ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ಆಮಿರ್ ಖಾನ್
ಮಾಧುರಿ ದೀಕ್ಷಿತ್
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ವೈದ್ಯಕೀಯ ತಂಡಕ್ಕೆ ಹೃದಯಪೂರ್ವಕ ಧನ್ಯವಾದ: 2ನೇ ಮಗನ ಫೋಟೋ ಹಂಚಿಕೊಂಡ ಸೋನಂ ಕಪೂರ್!
Recommended image2
Allu Arjun: 'ನನ್ನ ಬದುಕಿನ ಪ್ರೀತಿ ನೀನೇ': ಮಗನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ಐಕಾನ್ ಸ್ಟಾರ್!
Recommended image3
ಶ್ರೀದೇವಿ ನೋ ಎಂದ 'ಅಣ್ಣಯ್ಯ' ರಿಮೇಕ್ ಸಿನಿಮಾ ಹೇಗೆ ಬ್ಲಾಕ್‌ಬಸ್ಟರ್ ಆಯಿತು? ಅನಿಲ್ ಕಪೂರ್ ಗರಂ ಆಗಿದ್ದೇಕೆ?
Related Stories
Recommended image1
Amruthadhaare ಜೈದೇವ್​- ಹಳೆ ಮಲ್ಲಿ ರಿಯಲ್​ ಮದ್ವೆ ಯಾವಾಗ, ಹೇಗೆ, ಎಲ್ಲಿ? ಜೋಡಿ ಹೇಳಿದ್ದೇನು
Recommended image2
ಕಸಬ್​ ಒಬ್ಬ ಜಂಟಲ್​ಮನ್, ಪಾಕ್​ ತುಂಬಾ ಒಳ್ಳೆ ದೇಶ​ ಎಂದ ಶಾರುಖ್: ಬಾಲಿವುಡ್​ ಬಾದ್​ಶಾಹ್​ನ ವಿಡಿಯೋ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved